ಭಾರತದ ಟಾಪ್ 10 ಜನಪ್ರಿಯ ನಟರು ಇವರೇ; ಪ್ರಭಾಸ್, ಅಲ್ಲು ಅರ್ಜುನ್, ವಿಜಯ್.. ಲಿಸ್ಟ್‌ನಲ್ಲಿ ಇಲ್ವಾ ಯಶ್?

ಭಾರತದಲ್ಲಿ ಸಿನಿಮಾಗೆ ವಿಶೇಷ ಸ್ಥಾನವಿದೆ. ಸೂಪರ್‌ಸ್ಟಾರ್‌ಗಳ ಸಿನಿಮಾಗಳಿಗಾಗಿ ಅವರ ಅಭಿಮಾನಿಗಳು ಕಾದು ಕೂರುತ್ತಾರೆ. ಅಷ್ಟೇ ಯಾಕೆ ಅವರ ಸಿನಿಮಾಗಳು ರಿಲೀಸ್ ಆಗಲಿ, ಆಗದೇ ಇರಲಿ ಅವರ ಬಗ್ಗೆ ಜಪ ಮಾಡುವಂತಹ ಅಭಿಮಾನಿಗಳೇನು ಕಮ್ಮಿಯಿಲ್ಲ. ಇನ್ನು ಸಿನಿಮಾಗಳು ಥಿಯೇಟರ್‌ಗೆ ಎಂಟ್ರಿ ಕೊಟ್ಟರೆ ಅಷ್ಟೇ ಗತಿ. ಅಲ್ಲಿಯೇ ಹಬ್ಬ ಮಾಡಿ ಬಿಡುತ್ತಾರೆ.

ಭಾರತದ ತಾರೆಯರ ಜನಪ್ರಿಯತೆ ಕುರಿತು ಪ್ರತಿ ತಿಂಗಳು ಸರ್ವೆ ಮಾಡುವ ಸಂಸ್ಥೆಯಿದೆ. ಅದುವೇ ಓರ್ಮ್ಯಾಕ್ಸ್ (ORMAX). ಇದು ಪ್ರತಿ ತಿಂಗಳು ತನ್ನ ಭಾರತದ ಜನಪ್ರಿಯರ ತಾರೆಯರ ಪಟ್ಟಿಯನ್ನು ರಿವೀಲ್ ಮಾಡುತ್ತೆ. ಕಳೆದ ತಿಂಗಳು ಅಂದರೆ, ಡಿಸೆಂಬರ್ 2024ರಲ್ಲಿ ಭಾರತದಲ್ಲಿ ಯಾವ ನಟನಿಗೆ ಹೆಚ್ಚು ಜನಪ್ರಿಯತೆ ಇತ್ತು ಅನ್ನುವ ಪಟ್ಟಿಯನ್ನು ಹೊರಬಿಡಲಾಗಿದೆ.

Prabhas Allu Arjun Vijay Ormax most popular male film stars in India in December 2024

ಓರ್ಮ್ಯಾಕ್ಸ್ ರಿವೀಲ್ ಮಾಡಿರುವ ಟಾಪ್ 10 ಹೀರೋಗಳ ಪಟ್ಟಿ ಹೇಗಿದೆ? ಟಾಪ್‌ ಸ್ಥಾನದಲ್ಲಿ ಇರೋದು ಯಾರು? ಕನ್ನಡದ ನಟರು ಇದ್ದಾರಾ? ಇಲ್ವಾ? ಯಾವ್ಯಾವ ಚಿತ್ರರಂಗದ ಹೀರೋಗಳು ಇದ್ದಾರೆ? ಅನ್ನೋದು ಒಂದು ಸಖತ್ ಇಂಟ್ರೆಸ್ಟಿಂಗ್ ಆಗಿದೆ. ಹಾಗಿದ್ದರೆ, ಆ ಪಟ್ಟಿ ಹೇಗೆ ಅನ್ನೋದನ್ನು ನೋಡೋಣ..

ಓರ್ಮ್ಯಾಕ್ಸ್ ಮೀಡಿಯಾ ಪ್ರತಿ ತಿಂಗಳು ಜನಪ್ರಿಯ ಹೀರೋ ಹಾಗೂ ಹೀರೋಯಿನ್‌ಗಳ ಪಟ್ಟಿಯನ್ನು ರಿವೀಲ್ ಮಾಡುತ್ತೆ. ತನ್ನ ಸಮೀಕ್ಷೆಯನ್ನು ಸೋಶಿಯಲ್ ಮೀಡಿಯಾಗಳಲ್ಲಿ ಹಂಚಿಕೊಳ್ಳುತ್ತೆ. ಅದರಂತೆ ಕಳೆದ ವರ್ಷದ ಕೊನೆಯಲ್ಲಿ ಯಾವ ಹೀರೋ ಟಾಪ್‌ 10 ಪಟ್ಟಿಯಲ್ಲಿ ಇದ್ದಾರೆ ಅನ್ನೋದನ್ನು ಓರ್ಮ್ಯಾಕ್ಸ್ ರಿಲೀಸ್ ಮಾಡಿದ್ದು ತೆಲುಗು, ಹಿಂದಿ ಹಾಗೂ ತಮಿಳು ಭಾಷೆಯ ಹೀರೋಗಳೇ ಹೆಚ್ಚು ಕಾಣಿಸಿಕೊಂಡಿದ್ದಾರೆ.

ಡಿಸೆಂಬರ್ ತಿಂಗಳಲ್ಲಿ ಭಾರತದಾದ್ಯಂತ ಜನಪ್ರಿಯತೆ ಪಡೆದುಕೊಂಡಿದ್ದ ಹೀರೋಗಳ ಟಾಪ್ 10 ಪಟ್ಟಿಯಲ್ಲಿ ತೆಲುಗು ಚಿತ್ರರಂಗದ 5 ಮಂದಿ ಹೀರೋಗಳು ಸ್ಥಾನ ಪಡೆದುಕೊಂಡಿದ್ದಾರೆ. ಅವರಲ್ಲಿ ಟಾಲಿವುಡ್‌ನ ಯಂಗ್ ರೆಬೆಲ್‌ಸ್ಟಾರ್ ಪ್ರಭಾಸ್ ಅನ್ನು ಭಾರತದ ಅತ್ಯಂತ ಜನಪ್ರಿಯ ನಟ ಎಂದು ಘೋಷಿಸಲಾಗಿದೆ. ಇವರೊಂದಿಗೆ ಇನ್ನೂ ನಾಲ್ಕು ಮಂದಿ ಟಾಲಿವುಡ್ ತಾರೆಯರು ಈ ಲಿಸ್ಟ್‌ನಲ್ಲಿ ಇದ್ದಾರೆ.

'ಪುಷ್ಪ 2' ರಿಲೀಸ್ ಆಗಿ ಭರ್ಜರಿ ಯಶಸ್ಸು ಗಳಿಸಿದ್ದರಿಂದ ಅಲ್ಲು ಅರ್ಜುನ್ ಚರ್ಚೆಯಲ್ಲಿದ್ದರು. ಹೀಗಾಗಿ ಅವರು ಎರಡನೇ ಸ್ಥಾನದಲ್ಲಿ ಇದ್ದಾರೆ. ಮೂರನೇ ಸ್ಥಾನದಲ್ಲಿ ತಮಿಳು ನಟ ದಳಪತಿ ವಿಜಯ್ ಇದ್ದರೆ, ನಾಲ್ಕನೇ ಸ್ಥಾನದಲ್ಲಿ ಬಾಲಿವುಡ್‌ ಸೂಪರ್‌ಸ್ಟಾರ್ ಶಾರುಖ್ ಖಾನ್‌ಗೆ ನೀಡಲಾಗಿದೆ. ಹಾಗೇ ಐದನೇ ಸ್ಥಾನದಲ್ಲಿ ಜೂ.ಎನ್‌ಟಿಆರ್‌ಗೆ ಸ್ಥಾನವನ್ನು ನೀಡಲಾಗಿದೆ. ಬಾಲಿವುಡ್‌ನಲ್ಲಿ ಹೃತಿಕ್ ರೋಷನ್ ಜೊತೆ 'ವಾರ್ 2' ಸಿನಿಮಾ ಮಾಡುತ್ತಿದ್ದರಿಂದ ಹೆಚ್ಚು ಸುದ್ದಿಯಲ್ಲಿ ಇದ್ದರು.

ಇನ್ನು ಆರನೇ ಸ್ಥಾನದಲ್ಲಿ ತಮಿಳಿನ ಸ್ಟಾರ್ ನಟ ಅಜಿತ್ ಕುಮಾರ್ ಇದ್ದಾರೆ. ಕಳೆದ ಕೆಲವು ದಿನಗಳಿಂದ ಅವರ ಎರಡು ಸಿನಿಮಾಗಳು 'ವಿಡಾಮುಯಾರ್ಚಿ' ಹಾಗೂ 'ಗುಡ್ ಬ್ಯಾಡ್ ಅಗ್ಲಿ' ಚರ್ಚೆಯಲ್ಲಿವೆ. ಹಾಗೇ ಏಳನೇ ಸ್ಥಾನದಲ್ಲಿ ಮಹೇಶ್ ಬಾಬು ಇದ್ದಾರೆ. ರಾಜಮೌಳಿ ನಿರ್ದೇಶನದ ಸಿನಿಮಾದಲ್ಲಿ ನಟಿಸುತ್ತಿರುವುದರಿಂದ ಅದರ ಬಗ್ಗೆ ಮಾಹಿತಿ ಕಲೆ ಹಾಕುತ್ತಿದ್ದಾರೆ. ಎಂಟನೇ ಸ್ಥಾನವನ್ನು ರಾಮ್‌ ಚರಣ್‌ಗೆ ನೀಡಲಾಗಿದೆ. ಶಂಕರ್ ನಿರ್ದೇಶನದ 'ಗೇಮ್ ಚೇಂಜರ್' ಸಿನಿಮಾದಲ್ಲಿ ರಾಮ್ ಚರಣ್ ನಟಿಸಿದ್ದರು. ಅದು ರಿಲೀಸ್‌ಗೂ ಮುನ್ನ ರಾಮ್‌ ಚರಣ್ ಬಗ್ಗೆ ಜನರು ಹೆಚ್ಚು ಸರ್ಚ್ ಮಾಡಿದ್ದಾರೆ.

ಇವರೊಂದಿಗೆ ಮತ್ತೊಬ್ಬ ಬಾಲಿವುಡ್ ನಟ ಸಲ್ಮಾನ್ ಖಾನ್ 9ನೇ ಸ್ಥಾನದಲ್ಲಿ ಇದ್ದರೆ, ಕಿಲಾಡಿಯೊಂಕಾ ಕಿಲಾಡಿ ಅಕ್ಷಯ್ ಕುಮಾರ್ 10ನೇ ಸ್ಥಾನದಲ್ಲಿ ಇದ್ದಾರೆ. ಸಲ್ಮಾನ್ ಖಾನ್ ಸಿನಿಮಾ 'ಸಿಕಂದರ್' ಟೀಸರ್‌ಗೆ ಅವರ ಫ್ಯಾನ್ಸ್‌ಗೆ ಕಿಕ್ ಕೊಟ್ಟಿದೆ. ಹಾಗೇ ಅಕ್ಷಯ್ ಕುಮಾರ್ ಸಿನಿಮಾ 'ಸ್ಕೈ ಫೋರ್ಸ್' ಇದೇ ತಿಂಗಳು ಗ್ರ್ಯಾಂಡ್ ರಿಲೀಸ್ ಆಗುತ್ತಿದೆ. ಇನ್ನು ಟಾಪ್‌ನಲ್ಲಿರುವ ಪ್ರಭಾಸ್ ಎರಡು ಸಿನಿಮಾಗಳು ಬಿಡುಗಡೆಯಾಗಬಹುದು ಎಂದು ನಿರೀಕ್ಷೆ ಮಾಡಲಾಗಿದೆ. ಇನ್ನು ಡಿಸೆಂಬರ್ ತಿಂಗಳ ಜನಪ್ರಿಯ ನಟರಲ್ಲಿ ಕನ್ನಡದ ಒಬ್ಬನೇ ಒಬ್ಬ ನಟ ಕೂಡ ಇಲ್ಲ.

More from Filmibeat

English summary
Prabhas, Allu Arjun, Vijay Ormax most popular male film stars in India in December 2024;
Read more about: prabhas allu arjun survey
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X