ಪ್ರಿಯಾಂಕಾ ಚೋಪ್ರಾ ಸಿನಿಮಾ ಗಳಿಸಿದ್ದು 1200 ಕೋಟಿ; ಆದರೂ ಬಾಕ್ಸಾಫೀಸ್‌ನಲ್ಲಿ ಸೋತಿದ್ದೇಕೆ?

ಭಾರತದಲ್ಲಿ ಯಾವುದೇ ಸಿನಿಮಾದ ಬಾಕ್ಸಾಫೀಸ್ ಕಲೆಕ್ಷನ್ 1000 ಕೋಟಿ ರೂಪಾಯಿ ದಾಟಿದರೆ, ಆ ಸಿನಿಮಾ ಮೆಗಾ ಬ್ಲಾಕ್‌ಬಸ್ಟರ್ ಲಿಸ್ಟ್ ಸೇರಿದಂತೆ. ಈ ಸಾಲಿನಲ್ಲಿ ಈಗಾಗಲೇ 'ಬಾಹುಬಲಿ', 'ಬಾಹುಬಲಿ 2', 'ಕೆಜಿಎಫ್ 2', 'ಜವಾನ್', 'ಪಠಾಣ್' ಅಂತಹ ಸಿನಿಮಾಗಳು ಸೇರಿಕೊಂಡಿವೆ. ಆದರೆ, ಬಾಲಿವುಡ್‌ ನಟಿ ಪ್ರಿಯಾಂಕಾ ಚೋಪ್ರಾ ನಟಿಸಿದ ಒಂದು ಸಿನಿಮಾ ಕೂಡ 1200 ಕೋಟಿ ರೂಪಾಯಿ ಕಲೆಕ್ಷನ್ ಮಾಡಿತ್ತು. ಅದರೂ ಅದನ್ನು ಪ್ಲಾಪ್ ಲಿಸ್ಟ್‌ಗೆ ಸೇರಿಸಲಾಯ್ತು.

ಪ್ರಿಯಾಂಕಾ ಚೋಪ್ರಾ ಈಗ ಕೇವಲ ಬಾಲಿವುಡ್ ನಟಿಯಷ್ಟೇ ಅಲ್ಲ. ಹಾಲಿವುಡ್ ಸಿನಿಮಾಗಳಲ್ಲಿಯೂ ಮಿಂಚುತ್ತಿದ್ದಾರೆ. ಹೀಗಾಗಿ ಪ್ರಿಯಾಂಕಾ ಚೋಪ್ರಾ ಭಾರತದ ಯಾವುದೇ ಸೂಪರ್‌ಸ್ಟಾರ್‌ಗೂ ಕಮ್ಮಿಯಿಲ್ಲ. ಹಾಲಿವುಡ್‌ನಲ್ಲಿ ಪ್ರಿಯಾಂಕಾ ಚೋಪ್ರಾ ಗಟ್ಟಿಯಾಗಿಯೇ ನಲೆಯೂರಿದ್ದಾರೆ. ದೊಡ್ಡ ಪ್ರಾಜೆಕ್ಟ್‌ಗಳು ಸಿಕ್ಕಿದ ಹೊರತಾಗಿಯೂ ಪಿಗ್ಗಿ ಸಿನಿಮಾಗಳು ಬಾಕ್ಸಾಫೀಸ್‌ನಲ್ಲಿ ಮೋಡಿ ಮಾಡುವಲ್ಲಿ ಸೋತಿರುವುದು ಗಮನಸಬೇಕು.

Priyanka Chopra movie collects Rs 1200 crore still its consider as flop which movie

ಹಾಲಿವುಡ್ ಸಿನಿಮಾಗಳಿಗೆ 1000 ಕೋಟಿ ರೂಪಾಯಿ ಲೆಕ್ಕಕ್ಕೆ ಇಲ್ಲ. ಅದೇ ಕಾರಣಕ್ಕೆ ಪ್ರಿಯಾಂಕಾ ಚೋಪ್ರಾ ನಟಿಸಿದ ಸಿನಿಮಾ ಬಾಕ್ಸಾಫೀಸ್‌ನಲ್ಲಿ 1200 ಕೋಟಿ ರೂಪಾಯಿ ಕಲೆಕ್ಷನ್ ಮಾಡಿದರೂ, ಪ್ಲಾಪ್ ಅಂತ ಸಾಬೀತಾಯಿತು. ಅಷ್ಟಕ್ಕೂ ಆ ಸಿನಿಮಾ ಯಾವುದು? ಆ ಸಿನಿಮಾದ ಕಲೆಕ್ಷನ್ ಹಿಂದಿನ ಕಥೆಯೇನು? ತಿಳಿಯಲು ಮುಂದೆ ಓದಿ.

2021ರಲ್ಲಿ ಪ್ರಿಯಾಂಕಾ ಚೋಪ್ರಾ ನಟಿಸಿದ ಹಾಲಿವುಡ್‌ನ ಜನಪ್ರಿಯ ಸೀರಿಸ್ 'ಮ್ಯಾಟ್ರಿಕ್ 4' ರಿಲೀಸ್ ಆಗಿತ್ತು. ಇದು ವಿಶ್ವದಲ್ಲೇ ಬಹು ನಿರೀಕ್ಷಿತ ಸಿನಿಮಾ ಆಗಿತ್ತು. ಈ ಹಿಂದೆ ಬಂದಿದ್ದ ಮೂರು ಸೀರಿಸ್‌ಗಳಿಗೆ ವಿಶ್ವದಾದ್ಯಂತ ಬಾಕ್ಸಾಫೀಸ್‌ನಲ್ಲಿ ಮಸ್ತ್ ರೆಸ್ಪಾನ್ಸ್ ಸಿಕ್ಕಿತ್ತು. ಹಾಗೇ ನಾಲ್ಕನೇ ಸೀರಿಸ್‌ಗೆ ಕೂಡ ಅದೇ ರೀತಿ ಪ್ರತಿಕ್ರಿಯೆ ಸಿಗುತ್ತೆ ಎಂದು ನಿರೀಕ್ಷೆ ಮಾಡಲಾಗಿತ್ತು. ಆದರೆ, ಕೋವಿಡ್ 19 ಈ ಸಿನಿಮಾಗೆ ಅಂತಹ ವಾತಾವರಣ ಸೃಷ್ಟಿ ಮಾಡಿಕೊಡಲಿಲ್ಲ.

'ಮ್ಯಾಟ್ರಿಕ್ 4' ಸಿನಿಮಾವನ್ನು ಬಾಕ್ಸಾಫೀಸ್‌ನಲ್ಲಿ 1450 ಕೋಟಿ ರೂಪಾಯಿ ವೆಚ್ಚದಲ್ಲಿ ನಿರ್ಮಾಣ ಮಾಡಲಾಗಿತ್ತು. ಗಳಿಸಿದ್ದು ಮಾತ್ರ 1200 ಕೋಟಿ ರೂಪಾಯಿ. ಈ ಸಿನಿಮಾ ಇಂದಿಗೂ ಪ್ರಿಯಾಂಕಾ ಚೋಪ್ರಾ ವೃತ್ತಿ ಬದುಕಿನಲ್ಲಿಯೇ ಅತೀ ಹೆಚ್ಚು ಗಳಿಕೆ ಕಂಡ ಸಿನಿಮಾ ಆಗಿದೆ. ಇಷ್ಟು ದೊಡ್ಡ ಮೊತ್ತವನ್ನು ಕಲೆ ಹಾಕಿದ್ದರೂ, ಸಿನಿಮಾ ಮಾತ್ರ ಫ್ಲಾಪ್ ಲಿಸ್ಟ್‌ಗೆ ಸೇರುವಂತಾಯ್ತು.

Priyanka Chopra movie collects Rs 1200 crore still its consider as flop which movie

'ಮ್ಯಾಟ್ರಿಕ್ಸ್ 4' ರಿಲೀಸ್ ಆಗುತ್ತಿದ್ದಂತೆ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿದ್ದವು. ಸಿನಿಮಾ ನೋಡಿದ ಪ್ರೇಕ್ಷಕರು ನೆಗೆಟಿವ್ ಒಪಿನಿಯನ್ ನೀಡುವುದಕ್ಕೆ ಶುರು ಮಾಡಿದ್ದರು. ಹೀಗಾಗಿ ಸಿನಿಮಾಗೆ ಹಾಕಿದ ಬಂಡವಾಳ ಕೂಡ ಬಂದಿರಲಿಲ್ಲ. ಈ ಕಾರಣಕ್ಕೆ ಪ್ರಿಯಾಂಕಾ ಚೋಪ್ರಾ ಸಿನಿಮಾವನ್ನು ಬಾಕ್ಸಾಫೀಸ್‌ನಲ್ಲಿ ಫ್ಲಾಪ್ ಅಂತ ಪರಿಗಣನೆಗೆ ತೆಗೆದುಕೊಳ್ಳಲಾಯ್ತು.

ಅದೇ ಭಾರತದಲ್ಲಿ 1000 ಕೋಟಿ ಕ್ಲಬ್ ಸೇರಿದ ಸಿನಿಮಾ 'ಬಾಹುಬಲಿ 2', 'ಕೆಜಿಎಫ್ 2', 'ಜವಾನ್', 'ಪಠಾಣ್' ಅಂತಹ ಸಿನಿಮಾಗಳು 1000 ಕೋಟಿ ರೂಪಾಯಿ ಕ್ಲಬ್ ಸೇರಿವೆ. ಭಾರತದಲ್ಲಿ ಮೆಗಾ ಹಿಟ್ ಅಂತ ಸಾಬೀತಾಗಿದೆ. ಆದರೆ, ಪ್ರಿಯಾಂಕಾ ಚೋಪ್ರಾ ಸಿನಿಮಾ 1200 ಕೋಟಿ ರೂಪಾಯಿ ಕಲೆಕ್ಷನ್ ಮಾಡಿದ್ದರೂ ಪ್ಲಾಪ್ ಲಿಸ್ಟ್ ಸೇರಿಸಿದೆ.

More from Filmibeat

English summary
Priyanka Chopra movie beats Jawan, Kalki 2898 AD, Animal still it is consider as flop why?
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X