"ಚಾನ್ಸ್ ಕೊಡೋಣ ಅಡ್ಜೆಸ್ಟ್ ಮಾಡಿಕೊಳ್ಳೋಕೆ ರೆಡಿಯಿದ್ದೀರ ಅಂತ ಕೇಳ್ತಿದ್ರು"; ಬಾ ಬಾರೋ ರಸಿಕ ಚಿತ್ರದ ನಟಿ

ವಿಜಯ ರಾಘವೇಂದ್ರ ಆರಂಭದಲ್ಲಿ ನಟಿಸಿದ ಕೆಲವು ಸಿನಿಮಾಗಳನ್ನು ಇಂದಿಗೂ ಸಿನಿಪ್ರಿಯರ ಫೇವರಿಟ್. ಅದರಲ್ಲಿ 'ಹಾರ್ಟ್ ಬೀಟ್' ಕೂಡ ಒಂದು. ಈ ಸಿನಿಮಾ ಮೂಲಕ ಸ್ಯಾಂಡಲ್‌ವುಡ್‌ನಲ್ಲಿ ನಾಯಕಿಯಾಗಿ ಮಿಂಚಿದ್ದ ನಟಿ ಆಶಿತಾ ಮಾರಿಯಾ ಕ್ರಾಸ್ತಾ. ಕನ್ನಡದ ಹಲವು ಸಿನಿಮಾಗಳಲ್ಲಿ ನಟಿಸಿ ಮನ ಗೆದ್ದಿದ್ದ ಈ ನಟಿ ನಿಮಗೆ ನೆನಪಿದೆಯೇ?

ನಟಿ ಆಶಿತಾ ಮಾರಿಯಾ ಕ್ರಾಸ್ತಾ ಪುನೀತ್ ರಾಜ್‌ಕುಮಾರ್ ನಟಿಸಿದ್ದ 'ಆಕಾಶ್', ಶಿವರಾಜ್‌ಕುಮಾರ್ ನಟನೆಯ 'ತವರಿನ ಸಿರಿ', 'ಬಾ ಬಾರೋ ರಸಿಕ', 'ಚಾಂದಿನಿ' ಅಂತಹ ಸಿನಿಮಾಗಳಲ್ಲಿ ನಟಿಸಿದ್ದಾರೆ. ಇವರ ವೃತ್ತಿ ಬದುಕು ಯಶಸ್ವಿಯಾಗಿ ನಡೆಯುತ್ತಿರುವಾಗಲೇ ಚಿತ್ರರಂಗದಿಂದ ದೂರವಾಗಿದ್ದರು. 'ರೋಡ್ ರೋಮಿಯೋ' ಆಶಿತಾ ನಟಿಸಿದ ಕೊನೆಯ ಸಿನಿಮಾ ಆಗಿತ್ತು. ಈ ಚಿತ್ರದ ಬಳಿಕ ಮತ್ತೆ ಸಿನಿಮಾ ಮಾಡುವ ಗೋಜಿಗೆ ಹೋಗಲಿಲ್ಲ.

Puneeth Rajkumar Akash film actress Ashitha Maria Crasta says she faced Metoo experience

ಸಿನಿಮಾದಿಂದ ದೂರ ಉಳಿದ ಆಶಿತಾ ಶಿಕ್ಷಣ, ಬ್ಯುಸಿನೆಸ್ ಅಂತ ಬೇರೆ ದಾರಿಯಲ್ಲಿ ಹೊರಟಿದ್ದರು. ಗ್ಯಾಪ್‌ನಲ್ಲಿ ಮದುವೆ, ವಿಚ್ಛೇದನ ಅನ್ನೋ ಕಹಿ ಅನುಭವಗಳು ಆಗಿದ್ದವು. ಆದರೆ, ಆಶಿತಾ ಸಿನಿಮಾದಿಂದ ದಿಢೀರನೇ ದೂರ ಉಳಿದಿದ್ದು ಯಾಕೆ? ಇಷ್ಟೊಂದು ಎಲ್ಲಿದ್ದರು? ಏನು ಮಾಡುತ್ತಿದ್ದರು? ಅನ್ನೋ ಪ್ರಶ್ನೆಗಳಿಗೆ ಮಾತ್ರ ಉತ್ತರ ಸಿಕ್ಕಿರಲಿಲ್ಲ. ಕೆಲವು ವರ್ಷಗಳ ಹಿಂದೆ ನಿರ್ದೇಶಕ ರಘುರಾಮ್ ಅವರ ಯೂಟ್ಯೂಬ್‌ನಲ್ಲಿ ಸಂದರ್ಶನ ನೀಡುವ ಮೂಲಕ ಮತ್ತೆ ಪ್ರತ್ಯಕ್ಷ ಆಗಿದ್ದರು. ಆ ವೇಳೆ ಚಿತ್ರರಂಗದಲ್ಲಿ ತನಗೂ ಮೀಟು ಅನುಭವ ಆಗಿತ್ತು ಎಂದು ಹೇಳಿಕೊಂಡಿದ್ದರು. ಈಗ ಮತ್ತೊಂದು ಸಂದರ್ಶನದಲ್ಲಿ ಅದೇ ಆರೋಪ ಮಾಡಿದ್ದಾರೆ.

ರಘು ರಾಮ್ ಯೂಟ್ಯೂಬ್ ಚಾನೆಲ್‌ನಲ್ಲಿ ತನ್ನ ಸಿನಿಮಾಗಳ ಮೂಲಕ ಜನರು ಗುರುತು ಹಿಡಿಯುವುದಕ್ಕೆ ಶುರು ಮಾಡಿದಾಗ ಕೆಲವು ನಿರ್ದೇಶಕರು ಹಾಗೂ ನಿರ್ಮಾಪಕರು ಕೆಲವು ಡಿಮ್ಯಾಂಡ್‌ಗಳನ್ನು ಮಾಡಿದ್ದರು. ಅವರ ಬಯಕೆಗಳನ್ನು ಈಡೇರಿಸಲಿಲ್ಲ ಅಂತ ಸೆಟ್‌ನಲ್ಲಿ ತೊಂದರೆ ಕೊಟ್ಟರು ಎಂದು ಗಂಭೀರ ಆರೋಪ ಮಾಡಿದ್ದರು. ಈಗ ಮತ್ತೊಂದು ಸಂದರ್ಶನದಲ್ಲಿ ಆ ಅನುಭವನ್ನೇ ಮತ್ತೆ ಹೇಳಿಕೊಂಡಿದ್ದಾರೆ.

Puneeth Rajkumar Akash film actress Ashitha Maria Crasta says she faced Metoo experience

ಇತ್ತೀಚೆಗೆ ರಾಜೇಶ್ ಗೌಡ ಯೂಟ್ಯೂಬ್ ಚಾನೆಲ್‌ಗೆ ಆಶಿಯಾ ಮರಿಯಾ ಕ್ರಾಸ್ತಾ ಸಂದರ್ಶನವನ್ನು ನೀಡಿದ್ದರು. ಅದರಲ್ಲಿ ತಮಗಾದ ಮೀಟೂ ಅನುಭವಗಳನ್ನು ಹಂಚಿಕೊಂಡಿದ್ದಾರೆ. ನಿರ್ದೇಶಕರು ಹಾಗೂ ನಿರ್ಮಾಪಕರು ಅಡ್ಜೆಸ್ಟ್ ಮಾಡಿಕೊಳ್ಳಬೇಕು ಎಂದು ಕೇಳುತ್ತಿದ್ದರು ಎಂದಿದ್ದಾರೆ. "ಡೈರೆಕ್ಟರ್‌ಗಳೇ ಇರಬಹುದು. ನಿರ್ಮಾಪಕರೇ ಇರಬಹುದು. ಆತರ ಕಾಲ್‌ಗಳು ಬರುವುದಕ್ಕೆ ಶುರುವಾಯ್ತು. ಕೊಡೋಣ ಆದರೆ ಈತರ ಇದೆ. ಅಡ್ಜೆಸ್ಟ್ ಮಾಡಿಕೊಳ್ಳೋಕೆ ರೆಡಿಯಿದ್ದೀರ ಅಂತ ಕೇಳ್ತಿದ್ರು" ಎಂದು ರಾಜೇಶ್ ಗೌಡ ಯೂಟ್ಯೂಬ್ ಚಾನೆಲ್‌ನಲ್ಲಿ ಹೇಳಿಕೊಂಡಿದ್ದಾರೆ.

ಇವರ ವೃತ್ತಿ ಬದುಕಿನ ಆರಂಭದಲ್ಲಿ ಒಳ್ಳೊಳ್ಳೆ ಟೀಮ್ ಸಿಕ್ಕಿತ್ತು. ಆದರೆ ನಂತರದ ದಿನಗಳಲ್ಲಿ ಅಂತಹ ಟೀಮ್ ಇವರಿಗೆ ಸಿಗಲಿಲ್ಲ. ಹಾಗೆ ಇವರಿಗೂ ಒಂದೇ ತರಹದ ಪಾತ್ರ ಮಾಡುವುದಕ್ಕೆ ಇಷ್ಟವಿಲ್ಲ. ಇಂಟ್ರೆಸ್ಟಿಂಗ್ ಸ್ಕ್ರಿಪ್ಟ್‌ಗಳಿಗಾಗಿ ಕಾಯುತ್ತಿದ್ದರು. ಆ ಟೈಮ್‌ನಲ್ಲೇ ರಿಯಲ್ ಎಸ್ಟೇಟ್, ಪೊಲಿಟಿಕ್ ಬ್ಯಾಕ್‌ಗ್ರೌಂಡ್‌ನಿಂದ ಬಂದವರು ಚಿತ್ರರಂಗವನ್ನು ಸೇರಿಕೊಳ್ಳುತ್ತಿದ್ದರು. ಆಗ ಇವರಿಗೆ ಬೇರೆ ಬೇರೆ ಡಿಮ್ಯಾಂಡ್‌ಗಳನ್ನು ಬರುವುದಕ್ಕೆ ಶುರುಮಾಡಿದ್ದರು ಎಂದು ಹೇಳಿಕೊಂಡಿದ್ದಾರೆ.

"ಅವರ ಜೊತೆ ಖುಷಿ ಖುಷಿಯಾಗಿ ಇರಬೇಕಿತ್ತು. ತುಂಬಾನೇ ಕ್ಲೋಸ್ ಆಗಿ ಇರಬೇಕಿತ್ತು. ಕೆಲವೊಮ್ಮೆ ನೇರವಾಗಿ ನಿರ್ದೇಶಕರು ಹಾಗೂ ನಿರ್ಮಾಪಕರಿಂದಲೇ ಫೋನ್ ಬರುತ್ತಿದ್ದವು. ನೀವು ಈತರ ಮಾಡಿದರೆ ರೋಲ್‌ ಕೊಡುತ್ತೇವೆ. ನಿಮಗೆ ಈತರ ಅನುಕೂಲ ಆಗುತ್ತೆ ಅನ್ನೋರು. ಎಲ್ಲರಿಗೂ ಚಿತ್ರರಂಗಕ್ಕೆ ಎಂಟ್ರಿ ಕೊಟ್ಟ ಆರಂಭದಲ್ಲಿ ಇಂತಹ ಸಮಸ್ಯೆ ಬರುತ್ತೆ. ಆದರೆ, ನಾನು ಅದಾಗಲೇ ಚಿತ್ರರಂಗದಲ್ಲಿದ್ದೆ. ನನ್ನ ಫೇಸ್ ಎಲ್ಲರಿಗೂ ಗೊತ್ತಿತ್ತು. ಒಳ್ಳೆಯ ಹೆಸರು ಮಾಡುತ್ತಿದ್ದೆ. ಆ ಇವೆಲ್ಲ ಡಿಮ್ಯಾಂಡ್‌ಗಳು ಬರುವುದಕ್ಕೆ ಶುರು ಮಾಡಿತ್ತು" ಎಂದು ಸಂದರ್ಶನದಲ್ಲಿ ಹೇಳಿಕೊಂಡಿದ್ದಾರೆ.

More from Filmibeat

English summary
Puneeth Rajkumar Akash film actress Ashitha Maria Crasta says she faced Metoo experience;
Read more about: actress metoo sandalwood
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X