Puneeth Rajkumar: ಅಪ್ಪು ಹುಟ್ಟಿಗೂ 'ಮಯೂರ' ಸಿನಿಮಾದ ಈ ದೃಶ್ಯ ಇರುವ ಕೊಂಡಿ ಏನು ಗೊತ್ತೇ?

ಪವರ್‌ಸ್ಟಾರ್ ಪುನೀತ್ ರಾಜ್‌ಕುಮಾರ್ ಅಗಲಿ ನಾಲ್ಕು ವರ್ಷಗಳಾಗಿವೆ. ಅಲ್ಲಿಂದ ಇಲ್ಲಿವರೆಗೂ ಅಭಿಮಾನಿಗಳು ಅವರ ನೆನಪಿನಲ್ಲಿಯೇ ಮುಂದೆ ಸಾಗುತ್ತಿದ್ದಾರೆ. ಪುನೀತ್ ನಟಿಸಿದ ಸಿನಿಮಾಗಳು ಕಿರುತೆರೆಯಲ್ಲಿ ಪ್ರಸಾರವಾದಾಗ ಖುಷಿ ಪಡುತ್ತಾರೆ. ಹುಟ್ಟುಹಬ್ಬಕ್ಕೆ ಸಿನಿಮಾ ತೆರೆಕಂಡಾಗ ಹೊಸ ಸಿನಿಮಾದಂತೆ ಥಿಯೇಟರ್‌ ಎಂಟ್ರಿಕೊಟ್ಟು ಅಪ್ಪು ಪವರ್‌ ಅನ್ನು ಅನುಭವಿಸುತ್ತಾರೆ.

ಇಂದಿನ ಕಮರ್ಷಿಯಲ್ ಸಿನಿಮಾಗಳ ಹಾವಳಿಯ ನಡುವೆಯೂ ಅಪ್ಪು ಸಂದೇಶವನ್ನು ನೀಡುವುದನ್ನು ಮರೆತಿರಲಿಲ್ಲ. ಪ್ರತಿಯೊಂದು ಸಿನಿಮಾವೂ ಸಮಾಜಕ್ಕೆ ಏನಾದರೂ ಒಂದು ಹೇಳುತ್ತಿತ್ತು. ಇದು ತೆರೆಯ ಮುಂದಷ್ಟೇ ಅಲ್ಲ. ತೆರೆಯ ಹಿಂದೆ ಕೂಡ ಹಾಗೇ ಇದ್ದರು ಅನ್ನೋದು ಮೆಚ್ಚಲೇ ಬೇಕಾದ ವಿಷಯ. ಅದಕ್ಕೆ ಅಪ್ಪು ಚಿಕ್ಕ ಮಕ್ಕಳಿಂದ ಹಿರಿಯ ಜೀವಗಳ ಫೇವರಿಟ್ ಆಗಿದ್ದರು.

Puneeth Rajkumar Born when Rajkumar and Prabhakar Shooting fighting scene for Mayura Movie

ಪುನೀತ್ ರಾಜ್‌ಕುಮಾರ್ ನಿಜಕ್ಕೂ ಕರ್ನಾಟಕದ ರತ್ನ. ಅವರ ಅಗಲಿಕೆ ನೋವಿನಿಂದ ಅಭಿಮಾನಿಗಳು ಹೊರ ಬಾರದೇ ಇದ್ದರೂ, ಅವರನ್ನು ಪ್ರತಿ ಕ್ಷಣವೂ ನೆನಪಿಸಿಕೊಳ್ಳುತ್ತಲೇ ಇರುತ್ತಾರೆ. ಪುನೀತ್ ರಾಜ್‌ಕುಮಾರ್ ಜನಿಸಿದ ಕ್ಷಣದ ಕುರಿತು ಒಂದು ಇಂಟ್ರೆಸ್ಟಿಂಗ್ ಸಂಗತಿಯಿದೆ. ರಾಜ್‌ಕುಮಾರ್ ಹಾಗೂ ಪ್ರಭಾಕರ್ ನಟಿಸಿದ 'ಮಯೂರ' ಸಿನಿಮಾದ ಫೈಟಿಂಗ್ ಸೀನ್‌ಗೊಂದು ಕೊಂಡಿಯಿದೆ. ಅದೇನು ಅನ್ನೋದು ಗೊತ್ತೇ?

ಅಪ್ಪು ಹುಟ್ಟಿದ ಸಮಯ, ಸ್ಥಳ

ಪುನೀತ್ ರಾಜ್‌ಕುಮಾರ್ ಹುಟ್ಟಿದ ದಿನ ಹಾಗೂ ವರ್ಷ ಪ್ರತಿಯೊಬ್ಬ ಅಭಿಮಾನಿಗೂ ಹೊತ್ತು. ಮಾರ್ಚ್ 17, 1975ರಂದು ಪುನೀತ್ ರಾಜ್‌ಕುಮಾರ್ ಬರ್ತ್‌ಡೇ ಇದು ಎಲ್ಲರಿಗೂ ಗೊತ್ತು. ಆದರೆ, ಅವರು ಹುಟ್ಟಿದ ಸಮಯ, ಆಸ್ಪತ್ರೆಯ ಹೆಸರು ಹಾಗೂ ಹೆರಿಗೆ ಮಾಡಿಸಿದ ವೈದ್ಯರ ಹೆಸರು ಗೊತ್ತಿರಲಿಕ್ಕಿಲ್ಲ. ವೀಕೆಂಡ್ ವಿತ್ ರಮೇಶ್ ಕಾರ್ಯಕ್ರಮ ನೋಡಿದವರಿಗಷ್ಟೇ ನೆನಪಿರಬಹುದು. ಚೆನ್ನೈನ ಕಲ್ಯಾಣಿ ಆಸ್ಪತ್ರೆಯಲ್ಲಿ ಅಪ್ಪು ಸಂಜೆ 6.07 ಗಂಟೆಗೆ ಜನಿಸಿದರು. ಪಾರ್ವತಮ್ಮ ರಾಜ್‌ಕುಮಾರ್ ಅವರಿಗೆ ಹೆರಿಗೆ ಮಾಡಿಸಿದ್ದ ವೈದ್ಯೆ ಡಾ.ಗ್ರೇಸಿ ಮೆಡ್‌ಫರ್ಡ್.

ಪುನೀತ್ ಹುಟ್ಟಿಗೂ ಮಯೂರಗೂ ಏನು ಲಿಂಕ್?

ಮಯೂರ ಶೂಟಿಂಗ್ ಚೆನ್ನೈನ ನ್ಯೂಟನ್ ಎನ್ನುವ ನಡೆಯುತ್ತಿತ್ತು. ಅಲ್ಲಿ ಅಣ್ಣಾವ್ರು ಹಾಗೂ ಟೈಗರ್ ಪ್ರಭಾಕರ್ ಅವರ ನಡುವಿನ ಗುದ್ದಾಟದ ದೃಶ್ಯವನ್ನು ಚಿತ್ರೀಕರಣ ಮಾಡಲಾಗುತ್ತಿತ್ತು. ಇದೇ ವೇಳೆ ಚೆನ್ನೈನ ಆಸ್ಪತ್ರೆಯಲ್ಲಿ ಪುನೀತ್‌ಗೆ ಪಾರ್ವತಮ್ಮ ರಾಜ್‌ಕುಮಾರ್ ಜನ್ಮ ನೀಡಿದ್ದರು. ಈ ವಿಷಯವನ್ನು ಸ್ವತ: ಪುನೀತ್ ರಾಜ್‌ಕುಮಾರ್ ಅವರು ವೀಕೆಂಡ್ ವಿತ್ ರಮೇಶ್ ಕಾರ್ಯಕ್ರಮದಲ್ಲಿ ರಮೇಶ್ ಅರವಿಂದ್ ಅವರ ಮುಂದೆ ಹೇಳಿಕೊಂಡಿದ್ದರು.

Puneeth Rajkumar Born when Rajkumar and Prabhakar Shooting fighting scene for Mayura Movie

ಅಪ್ಪು ಮೊದಲು ಎತ್ತಿಕೊಂಡಿದ್ದು ಇವರೇ

ಪುನೀತ್ ರಾಜ್‌ಕುಮಾರ್ ಜನಿಸಿದ ಕೂಡಲೇ ಮೊದಲ ಎತ್ತಿಕೊಂಡವರು ವೈದ್ಯೆ ಡಾ.ಗ್ರೇಸಿ ಮೆಡ್‌ಫರ್ಡ್. ಆದರೆ, ಎಲ್ಲರಿಗಿಂತ ಮೊದಲ ನೋಡಿದ್ದು ನಿರ್ದೇಶಕ ಭಗವಾನ್. ಅಂದು ಅಣ್ಣಾವ್ರು ಶೂಟಿಂಗ್‌ನಲ್ಲಿ ಬ್ಯುಸಿಯಿದ್ದರು. ಆ ವೇಳೆ ಪಾರ್ವತಮ್ಮ ಅವರಿಗೆ ಹೆರಿಗೆ ನೋವು ಕಾಣಿಸಿಕೊಂಡಿತ್ತು. ಆಗ ನಿರ್ದೇಶಕ ಭಗವಾನ್ ಹಾಗೂ ಅವರ ಪತ್ನಿ ಇಬ್ಬರೂ ಪಾರ್ವತಮ್ಮ ಅವರನ್ನು ಹೆರಿಗೆ ಆಸ್ಪತ್ರೆಗೆ ಸೇರಿಸಿದ್ದರು. ಅಪ್ಪು ಜನಿಸಿದ ಕೂಡಲೇ ವೈದ್ಯರು ಮಗುವನ್ನು ಮೊದಲು ತೋರಿಸಿದ್ದು ಭಗವಾನ್ ಅವರಿಗೇ.

ಪಾರ್ವತಮ್ಮ ಹೇಳಿದ್ದಿದ್ದೇನು?

ಪಾರ್ವತಮ್ಮ ರಾಜ್‌ಕುಮಾರ್ ಕೂಡ ವೀಕೆಂಡ್ ವಿತ್ ರಮೇಶ್ ಕಾರ್ಯಕ್ರಮದಲ್ಲಿ ಮಾತಾಡಿದ್ದರು. ಅವರಿಗೆ ಹೆರಿಗೆ ನೋವು ಕಾಣಿಸಿಕೊಂಡಿದ್ದಾಗ, ಗಂಡು ಮಗು ಹುಟ್ಟ ಬಹುದಾ? ಅನ್ನೋ ಫಿಲಿಂಗ್ ಹುಟ್ಟಿಕೊಂಡಿತ್ತು. ಅವರು ಅಂದುಕೊಂಡಂತೆ ಪಾರ್ವತಮ್ಮ ರಾಜ್‌ಕುಮಾರ್ ಅವರಿಗೆ ಗಂಡು ಮಗುವೇ ಹುಟ್ಟಿತ್ತು. ಅಪ್ಪು ಜನನದ ಹಿಂದೆ ಇಂತಹದ್ದೊಂದು ಕಹಾನಿಯೇ ಇದೆ.

More from Filmibeat

English summary
Puneeth Rajkumar Born when Rajkumar and Prabhakar Shooting fighting scene for Mayura Movie.
Read more about: puneeth rajkumar actor mayura
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X