'ಅಪ್ಪು'ಗೆ ಪವರ್‌ಸ್ಟಾರ್ ಬೇಡವೇ ಬೇಡ ಅಂತ ಪಟ್ಟು ಹಿಡಿದು ಕೂತಿದ್ದು ಯಾಕೆ? ಆಮೇಲೆ ಏನಾಯ್ತು?

ಪವರ್‌ಸ್ಟಾರ್ ಪುನೀತ್ ಇದ್ದರೆ ಈ ತಿಂಗಳು 50ನೇ ವರ್ಷದ ಹುಟ್ಟುಹಬ್ಬವನ್ನು ಅದ್ಧೂರಿಯಾಗಿ ಆಚರಿಸಿಕೊಳ್ಳುತ್ತಿದ್ದರು. ಅಭಿಮಾನಿಗಳ ಜೊತೆ ಅಪ್ಪು ಸಂಭ್ರಮ ಅದೇಗೆ ಇರುತ್ತಿತ್ತು ಅಂತ ಊಹೆ ಮಾಡಿಕೊಳ್ಳುವುದಕ್ಕೂ ಆಗಲ್ಲ. ಆದರೆ, ಸಿನಿಮಾ ಪ್ರೇಮಿಗಳಿಗೆ, ಪುನೀತ್ ಅಭಿಮಾನಿಗಳಿಗೆ ಆ ಅದೃಷ್ಟವಿಲ್ಲ. ಆದರೆ, ಅಭಿಮಾನಿಗಳು ಸಂಭ್ರಮಕ್ಕೆ ಕೊರತೆ ಏನೂ ಇಲ್ಲ. ಪುನೀತ್ ನಾಯಕನಾಗಿ ನಟಿಸಿದ ಮೊದಲ ಸಿನಿಮಾ 'ಅಪ್ಪು' ಅದ್ಧೂರಿಯಾಗಿ ರಿ-ರಿಲೀಸ್ ಆಗುತ್ತಿದೆ.

ಕಳದ ವರ್ಷ ಪುನೀತ್ ರಾಜ್‌ಕುಮಾರ್ ಹುಟ್ಟುಹಬ್ಬಕ್ಕೆ 'ಜಾಕಿ' ಸಿನಿಮಾ ರೀ ರಿಲೀಸ್ ಆಗಿತ್ತು. ಅಪ್ಪು ಅಭಿಮಾನಿಗಳು ಥಿಯೇಟರ್‌ನಲ್ಲಿ ಮುಗಿಬಿದ್ದು ಜಾಕಿ ನೋಡಿ ಸಂಭ್ರಮಿಸಿದ್ದರು. ಈಗ ಪುನೀತ್ ಹೀರೋ ಆಗಿ ನಟಿಸಿದ ಚೊಚ್ಚಲ ಸಿನಿಮಾವನ್ನು ಮರುಬಿಡುಗಡೆ ಮಾಡಲಾಗುತ್ತಿದ್ದು, ಈಗಾಗಲೇ ಕ್ರೇಜ್ ಶುರುವಾಗಿದೆ. ಅಪ್ಪುನ ಪವರ್‌ಸ್ಟಾರ್ ಮಾಡಿದ ಈ ಸಿನಿಮಾ ಬಗ್ಗೆ ಸಖತ್ ಇಂಟ್ರೆಸ್ಟಿಂಗ್ ಕಥೆಗಳಲ್ಲಿವೆ.

Puneeth Rajkumar didn t want Powerstar title for his first movie Appu here is the interesting fact

ಪುನೀತ್ ರಾಜ್‌ಕುಮಾರ್ ಜೊತೆ 'ಆಕಾಶ್', 'ಅರಸು' ಅಂತಹ ಸಿನಿಮಾಗಳನ್ನು ನಿರ್ದೇಶಿಸಿರುವ ಮಹೇಶ್ ಬಾಬು ಕೆಲವು ಇಂಟ್ರೆಸ್ಟಿಂಗ್ ವಿಷಯಗಳನ್ನು ಕನ್ನಡ ಪಿಕ್ಚರ್ ಯೂಟ್ಯೂಬ್ ಚಾನೆಲ್‌ನಲ್ಲಿ ರಿವೀಲ್ ಮಾಡಿದ್ದಾರೆ. 'ಅಪ್ಪು'ಗೆ ಪವರ್‌ಸ್ಟಾರ್ ಅಂತ ಟೈಟಲ್ ಹಾಕೋದೇ ಬೇಡ ಅಂತ ಪುನೀತ್ ಪಟ್ಟು ಹಿಡಿದು ಕೂತಿದ್ದರು. ಅವರನ್ನು ಒಪ್ಪಿಸುವುದಕ್ಕೆ ಅದೆಷ್ಟು ಕಷ್ಟ ಪಟ್ಟಿದ್ದರು ಅನ್ನೋದನ್ನು ಮಹೇಶ್ ಬಾಬು ರಿವೀಲ್ ಮಾಡಿದ್ದಾರೆ. ಅದನ್ನು ತಿಳಿಯುವುದಕ್ಕೂ ಮುನ್ನ 'ಅಪ್ಪು' ಸಿನಿಮಾ ಜನರಿಗೆ ಯಾಕಷ್ಟು ಇಷ್ಟ ಆಯ್ತು? ಅನ್ನೋದನ್ನು ರಿವೀಲ್ ಮಾಡಿದ್ದಾರೆ.

"ಪುರಿ ಜಗನ್ನಾಥ್ ಸಿನಿಮಾದಲ್ಲಿ ಹೀರೋನಾ ತುಂಬಾನೇ ಕಮರ್ಷಿಯಲ್ ಆಗಿ ತೋರಿಸುತ್ತಾರೆ. ಹೀರೋ ಆಟಿಟ್ಯೂಡ್‌ ಅನ್ನು ರಫ್‌ ಅಂಡ್ ಟಫ್ ಆಗಿ ತೋರಿಸುತ್ತಾರೆ. ಹೀರೋಗಳಿಗೆ ಅದು ಬೇಕು. ತೆಲುಗಿನಲ್ಲಿ ಹೀರೋಗಳನ್ನು ನೆಗೆಟಿವಿಟಿಯಿಂದಲೇ ಪಾಸಿಟಿವಿಟಿಯನ್ನು ತೋರಿಸುತ್ತಾರೆ. ಈ ಸಿನಿಮಾದಲ್ಲಿ ಹುಡುಗಿನೇ ಬಂದು ಐ ಲವ್ ಯೂ ಅಂತಾಳೆ. ಇಲ್ಲಿ ಡೈಲಾಗ್‌ಗಳೆಲ್ಲ ತುಂಬಾನೇ ಹೊಸದಾಗಿತ್ತು. ಚಿಕ್ಕ ಚಿಕ್ಕ ಡೈಲಾಗ್‌ಗಳು ಇದ್ದವು. ಎಲ್ಲಾ ಕಮರ್ಷಿಯಲ್ ಡೈಲಾಗ್‌ಗಳು" ಎನ್ನುತ್ತಾರೆ ನಿರ್ದೇಶಕ ಮಹೇಶ್ ಬಾಬು.

Puneeth Rajkumar didn t want Powerstar title for his first movie Appu here is the interesting fact

'ಅಪ್ಪು' ಸಿನಿಮಾ ನೋಡಿದ ಮೇಲೆ ಸೂಪರ್‌ಸ್ಟಾರ್ ರಜನಿಕಾಂತ್‌ಗೆ ಸಿಕ್ಕಾಪಟ್ಟೆ ಇಷ್ಟ ಆಗಿತ್ತು. ಅಪ್ಪು ಆಟಿಟ್ಯೂಡ್, ಫೈಟ್, ಡೈಲಾಗ್‌ ನೋಡಿ ಸಿಕ್ಕಾಪಟ್ಟೆ ಖುಷಿ ಪಟ್ಟಿದ್ದರು ಎನ್ನುತ್ತಾರೆ ನಿರ್ದೇಶಕ ಮಹೇಶ್ ಬಾಬು. "ಕಾಲರ್ ಹಿಡ್ಕೊಂಡು ಅಪ್ಪುನಾ ಹೊಡೆದಾಗ, 440 ವೋಟ್ಸ್ ಹಿಡ್ಕೊಂಡಿದ್ದೀಯ ಅಂತ ಹೆಡ್ ಕಿಕ್‌ನಲ್ಲಿ ಒಂದು ಫೈಟ್ ಮಾಡಿದ್ರು. ಆ ಫೈಟ್ ರಜನಿಕಾಂತ್ ಅವರಿಗೆ ತುಂಬಾನೇ ಇಷ್ಟ ಆಯ್ತು. ಶತದಿನೋತ್ಸದಲ್ಲಿ ಆ ಫೈಟ್ ಅನ್ನು ಹಾಡಿ ಹೊಗಳಿದ್ದರು. ಈ ತರ ಫೈಟ್ ಅನ್ನು ತುಂಬಾನೇ ವಿಭಿನ್ನವಾಗಿ ಮಾಡಬೇಕು ಅಂತ ವೇದಿಕೆ ಹೇಳಿದ್ದರು" ಎನ್ನುತ್ತಾರೆ.

'ಅಪ್ಪು' ಸಿನಿಮಾದಲ್ಲಿ ಹೆಡ್ ಫೈಟ್ ಅನ್ನು ಇಡಲಾಗಿತ್ತು. ಇದು ಯಾಕೋ ಸರಿ ಹೋಗಿತ್ತಿಲ್ಲ ಅಂತ ಅಪ್ಪುಗೆ ಅನಿಸಿತ್ತು. ಆಗ "ಮಹೇಶ್ ಇದೇನು ಬರೀ ತಲೆಯಲ್ಲಿ ಹೊಡೀತಿವಿ ಏನೂ ಇಂಪ್ಯಾಕ್ಟ್ ಇರೋದಿಲ್ಲ ಅಂತ ಹೇಳಿದ್ದರು. ಅದಕ್ಕೆ ನಾನು ಸಿನಿಮಾ ನೋಡಿ ಸರ್, ಅದರಲ್ಲಿ ತುಂಬಾನೇ ಇಂಪ್ಯಾಕ್ಟ್ ಇರುತ್ತೆ ಅಂತ ಹೇಳಿದೆ. ಅವರು ಕಿಕ್, ಎಫಕ್ಟ್ ಎಲ್ಲಾ ನೋಡಿ ಸೂಪರ್‌ ಆಗಿದೆ ಮಹೇಶ್ ಅಂದರು. ಅದೆಲ್ಲ ಕ್ರೆಡಿಟ್ ಅನ್ನು ಪುರಿ ಜಗನ್ನಾಥ್ ಸರ್‌ಗೆ ಕೊಡಬೇಕು." ಅಂತ ಆಕ್ಷಣವನ್ನು ನೆನೆಪಿಸಿಕೊಳ್ಳುತ್ತಾರೆ.

ಇನ್ನು ಪುನೀತ್‌ಗೆ ಚೊಚ್ಚಲ ಸಿನಿಮಾ ಅಪ್ಪು ಬಗ್ಗೆ ಸಿಕ್ಕಾಪಟ್ಟೆ ಭಯವಿತ್ತು.. ಅಕ್ಕ ಪಕ್ಕದವರು ಬಿಡಿ ಸರ್ ನೀವು ರಾಜ್‌ಕುಮಾರ್ ಅವರ ಮಗ ಸಿನಿಮಾ ಹಂಡ್ರೆಸ್ ಪರ್ಸೆಂಟ್ ಗೆಲ್ಲುತ್ತೆ ಅಂತ ಹೇಳಿತ್ತಿದ್ದರು. ಆಗ ರಾಜ್‌ಕುಮಾರ್ ರಾಜ್‌ಕುಮಾರೇ. ನಾನು ಅವರ ಮಗ ಅಷ್ಟೇ. ನಾನು ಪುನೀತ್ ಕೇವಲ ಪುನೀತ್ ಅಷ್ಟೇ. ರಾಜ್‌ಕುಮಾರ್‌ಗೆ ಯಾವತ್ತೂ ಹೋಲಿಸಬೇಡಿ ಅಂತ ಹೇಳಿದ್ದರಂತೆ. ಇನ್ನು ಪವರ್‌ಸ್ಟಾರ್ ಅನ್ನೋ ಟೈಟಲ್ ಕೊಟ್ಟಾಗ ಅದನ್ನು ಹಾಕೋದು ಬೇಡ ಅಂತ ಪಟ್ಟು ಹಿಡಿದು ಕೂತಿದ್ದರಂತೆ.

"ಅಪ್ಪು ಸಿನಿಮಾಗೆ ಮೊದಲು ಪವರ್‌ಸ್ಟಾರ್ ಅಂತ ಹಾಕಿಬಿಡೋಣ ಅಂತ ಐಡಿಯಾ ಇತ್ತು. ಮಾತಾಡಬೇಕಾದರೆ ಶಿವಣ್ಣ ಕೂಡ ಅದೇ ಹೇಳಿದರು. ನಾನು ಚೆನ್ನಾಗಿರುತ್ತೆ ಸರ್ ಟೈಟಲ್ ಹಾಕಿಬಿಡೋಣ ಅಂತ ಹೇಳಿದೆ. ಪುನೀತ್ ಅವರು ಹಿಂದೆ ಮುಂದೆ ನೋಡಿದರು. ಮೊದಲ ಸಿನಿಮಾನೇ ಹಾಕಬೇಡಿ ಹಾಗೆಲ್ಲ. ನನಗೆ ಮುಜುಗರ ಆಗುತ್ತೆ ಅಂದರು. ತುಂಬಾ ಒತ್ತಾಯ ಮಾಡಿ ಹಾಕಿಸಿದ್ವಿ. ಪವರ್‌ಸ್ಟಾರ್ ಪುನೀತ್ ರಾಜ್‌ಕುಮಾರ್ ಅಂತ. ಶಿವಣ್ಣ ಅವರೂ ಓಕೆ ಮಾಡಿದರು." ಎಂದು ಮಾಹಿತಿ ನೀಡಿದ್ದಾರೆ.

More from Filmibeat

English summary
Puneeth Rajkumar didn't want Powerstar title for his first movie Appu. Here is the interesting fact;
Read more about: puneeth rajkumar appu powerstar
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X