'ಹಾಲು ಜೇನು ಭಾಗ 2' ಕಥೆ ಕೇಳಿದ್ದರೇ ಪುನೀತ್ ರಾಜ್‌ಕುಮಾರ್? ಎಷ್ಟೇ ಪ್ರಯತ್ನ ಪಟ್ಟರೂ ಯಾಕಾಗಲಿಲ್ಲ?

ರಾಜ್‌ಕುಮಾರ್ ಸಿನಿಮಾಗಳು ಫಿಲ್ಮ್ ಮೇಕರ್‌ಗಳಿಗೆ ಒಂದು ಕಲಿಕೆಯಿದ್ದಂತೆ. ಅಣ್ಣಾವ್ರ ನಟಿಸಿದ ಸಿನಿಮಾ ಇಂದಿಗೂ ಎವರ್‌ಗ್ರೀನ್ ಆಗಿ ಉಳಿಯುವುದಕ್ಕೆ ಹಲವು ಕಾರಣಗಳಿವೆ. ಕಮರ್ಷಿಯಲ್ ಆಗಿದ್ದರೂ ನೋಡಿದವರ ಮನಸ್ಸು ಪರಿವರ್ತನೆ ಆಗುವಂತೆ ಸಿನಿಮಾಗಳು ಇರುತ್ತಿದ್ದವು. ಅದಕ್ಕೆ ಇಂದಿಗೂ 'ಬಂಗಾರದ ಮನುಷ್ಯ', 'ಹಾಲು ಜೇನು' ಕಸ್ತೂರಿ ನಿವಾಸ'ದಂತಹ ಸಿನಿಮಾಗಳು ಸಿನಿಪ್ರಿಯರ ಮನದಲ್ಲಿ ಉಳಿದಿವೆ.

ಪವರ್‌ಸ್ಟಾರ್ ಪುನೀತ್ ರಾಜ್‌ಕುಮಾರ್ ಹೀಗೆ ತಂದೆಯ ಹಾದಿಯನ್ನೇ ಅನುಸರಿಸಿದ್ದರು. ಅಪ್ಪು ನಟಿಸಿದ ಸಿನಿಮಾಗಳು ಇಂದಿನ ಪೀಳಿಗೆ ಮೆಚ್ಚುವಂತೆಯೂ ಇರುತ್ತಿದ್ದವು. ಅಂತೆಯೇ ಸಮಾಜಕ್ಕೆ ಒಂದು ಸಂದೇಶವನ್ನು ರವಾನೆ ಮಾಡುತ್ತಿದ್ದವು. 'ರಾಜ್‌ಕುಮಾರ' ಸಿನಿಮಾಗೆ ಸಿಕ್ಕಿದ ಯಶಸ್ಸು ಅಪ್ಪು ಮುಂದೆನೇ ಇತ್ತು. ಈ ಕಾರಣಕ್ಕೆ ಸಮಾಜ ಒಪ್ಪುವ ಸಿನಿಮಾಗಳನ್ನೇ ಮಾಡಬೇಕು ಅಂತ ಪ್ರಯತ್ನ ಪಡುತ್ತಿದ್ದರು.

Puneeth Rajkumar wanted to do Haalu Jenu Part 2 but it didn t happen Why

ಈ ಪ್ರಯತ್ನದಲ್ಲಿ ಇರುವಾಗಲೇ ಪುನೀತ್ ರಾಜ್‌ಕುಮಾರ್‌ಗೆ ನಿರೀಕ್ಷೆಯೇ ಮಾಡದಂತಹ ಕಥೆಯೊಂದು ಸಿಕ್ಕಿತ್ತು. ಅಣ್ಣಾವ್ರ ಅಭಿಮಾನಿಯ ರಿಯಲ್ ಲೈಫ್‌ ಸ್ಟೋರಿಯನ್ನು ಅವರು ಇಷ್ಟಪಟ್ಟಿದ್ದರು. ಅಣ್ಣಾವ್ರ ಅಭಿಮಾನಿಯೇ 'ಹಾಲು ಜೇನು ಭಾಗ 2' ಮಾಡಬಹುದು ಎಂದು ಹೇಳಿದ್ದರು. ಸಾಕಷ್ಟು ಬಾರಿ ಪುನೀತ್ ರಾಜ್‌ಕುಮಾರ್ ಆ ಅಭಿಮಾನಿಯನ್ನು ಭೇಟಿ ಮಾಡಬೇಕು ಅಂತಿದ್ದರು. ಆದರೆ, ಸಾಧ್ಯವಾಗಿರಲಿಲ್ಲ. ಇತ್ತ ಅಣ್ಣಾವ್ರ ಆ ಅಭಿಮಾನಿಗೂ ಅವಕಾಶ ಸಿಕ್ಕಿರಲಿಲ್ಲ. ಮುಂದೇನಾಯ್ತು? ತಿಳಿಯಲು ಮುಂದೆ ಓದಿ.

ಅಣ್ಣಾವ್ರ ಅಪ್ಪಟ ಅಭಿಮಾನಿ ರಾಮ್‌ ಕುಮಾರ್. ಇವರು ಒಬ್ಬರನ್ನೊಬ್ಬರು ನೋಡದೇನೆ ಮದುವೆ ಆಗಿದ್ದರು. ಕಿರುತೆರೆಯಲ್ಲಿ ಹಿರಿಯ ನಟಿ ಲಕ್ಷ್ಮಿ ನಡೆಸಿಕೊಡುತ್ತಿದ್ದ 'ಕಥೆಯಲ್ಲ ಜೀವನ' ಕಾರ್ಯಕ್ರಮದಲ್ಲಿ ಈ ಜೋಡಿ ಭಾಗವಹಿಸಿದ್ದರು. ಆಗ ಲಕ್ಷ್ಮಿಯವರು ಪುನೀತ್ ರಾಜ್‌ಕುಮಾರ್‌ಗೆ ಫೋನ್ ಮಾಡಿದ್ದರು. ಹೀಗೆ ಅಣ್ಣಾವ್ರ ಅಭಿಮಾನಿ ಇಬ್ಬರೂ ಮುಖವೇ ನೋಡದೇ ಮದುವೆ ಆಗಿದ್ದಾರೆ. ಬಳಿಕ ಅವರ ಪತ್ನಿ ಅನಾರೋಗ್ಯ ಬಂತು. ಇಂದಿಗೂ ಅವರ ಸೇವೆ ಮಾಡಿಕೊಂಡಿದ್ದಾರೆ ಎಂದು ಹೇಳಿದ್ದರು. ಅದನ್ನು ಕೇಳಿ ಪುನೀತ್ ರಾಜ್‌ಕುಮಾರ್ ಅಚ್ಚರಿ ವ್ಯಕ್ತಪಡಿಸಿದ್ದರು. ಈ ಘಟನೆಯನ್ನು ಹಾಲುಜೇನು ರಾಮ್‌ಕುಮಾರ್ ಅಂತಲೇ ಜನಪ್ರಿಯರಾಗಿರುವ ವ್ಯಕ್ತಿ ಟೋಟಲ್ ಕನ್ನಡ ಯೂಟ್ಯೂಬ್ ಚಾನೆಲ್‌ ಜೊತೆ ಹಂಚಿಕೊಂಡಿದ್ದಾರೆ.

ಆ ಕಾರ್ಯಕ್ರಮದ ವೇಳೆ ಪುನೀತ್ ರಾಜ್‌ಕುಮಾರ್ ಈ ಅಭಿಮಾನಿಯನ್ನು ಮನೆಗೆ ಆಹ್ವಾನಿಸಿದ್ದರು. ಆದರೆ, ಎರಡು ಬಾರಿ ಹೋದಾಗಲೂ ಅಪ್ಪು ಸಿಕ್ಕಿರಲಿಲ್ಲ. ಅಲ್ಲಿಂದ ಆ ಪ್ರಯತ್ನವನ್ನು ಬಿಟ್ಟಿದ್ದರು. ಬಹಳ ದಿನಗಳಾದ ಬಳಿಕ ಸಿಟಿ ಅಂಗಡಿಗೆ ಹೋದಾಗ ಅಲ್ಲಿಗೆ ಒಬ್ಬ ವ್ಯಕ್ತಿ ಬಂದಿದ್ದರು. ಅವರ ಬಳಿಕ ಆ ಸಿಡಿ ಅಂಗಡಿಯ ಮಾಲೀಕ ಇವರೇ ನೋಡಿ ಹಾಲು ಜೇನು ರಾಮ್‌ ಕುಮಾರ್ ಆ ಸಿನಿಮಾದಂತೆಯೇ ಇವರು ಹೆಂಡತಿಯನ್ನು ನೋಡಿಕೊಳ್ಳುತ್ತಾರೆ ಎಂದಿದ್ದರು. ಆ ವ್ಯಕ್ತಿಯ ಬಳಿ ರಾಮ್‌ಕುಮಾರ್ ತನ್ನದೊಂದು ಆಸೆಯನ್ನು ಹೇಳಿಕೊಂಡಿದ್ದರು. ಅದುವೇ 'ಹಾಲು ಜೇನು ಭಾಗ 2'.

Puneeth Rajkumar wanted to do Haalu Jenu Part 2 but it didn t happen Why

"ಆ ವ್ಯಕ್ತಿ ಏನು ನಿಮ್ಮ ಕಥೆ ಎಂದು ಕೇಳಿದ್ದರು. ಅದನ್ನು ಹೇಳಿದೆ. ಆಮೇಲೆ ನನ್ನದೊಂದು ಆಸೆಯಿದೆ. 'ಹಾಲು ಜೇನು ಪಾರ್ಟ್ 2' ಮಾಡಿದರೆ ತುಂಬಾ ಚೆನ್ನಾಗಿರುತ್ತೆ ಎಂದಿದ್ದೆ. ಇಲ್ಲಿ ಒಬ್ಬ ವ್ಯಕ್ತಿ ನಟನಿಂದ ಪ್ರೇರಣೆ ಹೊಂದಿ ಹೇಗೆ ಜೀವನ ರೂಪಿಸಿಕೊಳ್ಳುತ್ತಾನೆ ಅನ್ನೋದೇ ಕಥೆ ಎಂದೆ. ಅದಕ್ಕೆ ತುಂಬಾ ಚೆನ್ನಾಗಿ ನಿಮ್ಮ ನಂಬರ್ ಕೊಡಿ ಅಂದ್ರು. ನೀವ್ಯಾರು ಅಂದೆ? ಅವರ ಮ್ಯಾನೇಜರ್ ಅಂತ ಅಂದ್ಕೊಳ್ಳಿ ಎಂದು ನಿಮ್ಮ ನಂಬರ್ ಕೊಡಿ ಅಂತ ಹೇಳಿದ್ದರು." ಮೊದಲ ಬಾರಿಗೆ ಹಾಲು ಜೇನು ಭಾಗ 2 ಪ್ರಸ್ತಾಪದ ಬಗ್ಗೆ ಹೇಳಿದ್ದರು.

ಇದಾದ ಮೇಲೆ ಬಹಳ ದಿನಗಳ ಬಗ್ಗೆ ಫೋನ್ ಬರಲಿಲ್ಲ. ಹಾಗಾಗಿ ಅದೆಲ್ಲ ಆಗಲ್ಲ ಬಿಡು ಎಂದುಕೊಂಡಿದ್ದರು. ಆಮೇಲೆ ಪುನೀತ್ ಅವರೊಂದಿಗೆ ಮಾತಾಡಿದ್ದೇನೆ. ತುಂಬಾ ಇಷ್ಟ ಪಟ್ಟಿದ್ದಾರೆ ಅಂತ ಕರೆ ಬಂತು. ಕೋಟ್ಯಾಧಿಪತಿ ವೇಳೆ ಪುನೀತ್ ಈ ದಂಪತಿಯ ಮನೆಗೆ ಬರುವುದಕ್ಕೆ ನಿರ್ಧರಿಸಿದ್ದರು. ಅವರನ್ನು ನೋಡಿದಂತೆಯೂ ಆಗುತ್ತೆ. ಹಾಗೇ 'ಹಾಲು ಜೇನು ಭಾಗ 2'ರ ಬಗ್ಗೆನೂ ಮಾತಾಡಿದಂತೆಯೂ ಆಗುತ್ತೆ ಎಂದಿದ್ದರಂತೆ.

ಹಾಲು ಜೇನು ರಾಮ್‌ಕುಮಾರ್ ಕಥೆಯನ್ನು ಬರೆದೂ ಕೊಟ್ಟಿದ್ದರು. ಅದು ಅಪ್ಪುಗೆ ಇಷ್ಟನೂ ಆಗಿದೆ ಎಂದು ಮಧ್ಯವರ್ತಿಯಾಗಿದ್ದವರು ಇವರಿಗೆ ಹೇಳಿದ್ದರು. ಅಪ್ಪುನೇ ನಿಮ್ಮ ಮನೆಗೆ ಬರುತ್ತಾರೆ ಎಂದಿದ್ದರು. ಆದರೆ, ಅಂದು ಬರುವುದಕ್ಕೆ ಆಗಿರಲೇ ಇಲ್ಲ. ಹಾಗೆ ನಡೆದು ಹೋಗಿತ್ತು. ಬಳಿಕ ಎನ್‌ಆರ್ ರಮೇಶ್ ಅವರ ಬಳಿಕ ಅಪ್ಪು ಕೂಡ ಇವರನ್ನು ನೋಡಬೇಕು ಎಂದಿದ್ದರಂತೆ. ಆದರೆ ಅದೂ ಸಾಧ್ಯವಾಗಿರಲಿಲ್ಲ. ಇನ್ನೂ ಇದ್ದಿದ್ದರೆ, ಪುನೀತ್ 'ಹಾಲು ಜೇನು 2' ಮಾಡುತ್ತಿದ್ದರೋ ಏನೋ..?! ಸದ್ಯಕ್ಕಿಗ ಶಿವಣ್ಣ ಆಸಕ್ತಿ ತೋರಿದರೆ ಮಾತ್ರ ಸಾಧ್ಯವಾಗಬಹುದು.

More from Filmibeat

English summary
Puneeth Rajkumar shows interest to Haalu Jenu part 2
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X