ಪ್ರೇಮಿಗಳ ದಿನಕ್ಕೆ 'ಏಕ್ ಲವ್ ಯಾ' ಪರ್ಫೆಕ್ಟ್ ಟ್ರೈಲರ್: ಸಿಂಪಲ್ ಅಲ್ಲ ಡಿಂಪಲ್ ರಚಿತಾ!

ಕೊರೊನಾ ಸೋಂಕಿತರ ಸಂಖ್ಯೆ ಕಡಿಮೆ ಆಗುತ್ತಿದ್ದಂತೆ, ಒಂದೊಂದೇ ಸಿನಿಮಾಗಳು ರಿಲೀಸ್ ಆಗುತ್ತಿವೆ. ಈ ತಿಂಗಳು ರಿಲೀಸ್ ಆಗುತ್ತಿರುವ ಸಿನಿಮಾಗಳಲ್ಲಿ ಜೋಗಿ ಪ್ರೇಮ್ ನಿರ್ದೇಶನದ 'ಏಕ್ ಲವ್ ಯಾ' ಸಿನಿಮಾ ಕೂಡ ಒಂದು. ರಶ್ಮಿಕಾ ಸಹೋದರ ರಾಣಾ ಚಿತ್ರರಂಗಕ್ಕೆ ಎಂಟ್ರಿ ಕೊಡುತ್ತಿರುವ ಸಿನಿಮಾ. ಡಿಂಪಲ್ ಕ್ವೀನ್ ರಚಿತಾ ರಾಮ್ ರಗಡ್ ಲುಕ್ ಕೊಟ್ಟ ಚಿತ್ರ. ಇಷ್ಟೆಲ್ಲಾ ಹೈಲೈಟ್ ಇರುವ ಸಿನಿಮಾ ಫೆಬ್ರವರಿ 24ಕ್ಕೆ ಗ್ರ್ಯಾಂಡ್ ಆಗಿ ರಿಲೀಸ್ ಆಗ್ತಿದೆ. ಆದರೆ, ಅದಕ್ಕೂ ಮುನ್ನ ಟ್ರೈಲರ್ ನೋಡಿ ಅಂತಿದೆ ಚಿತ್ರತಂಡ.

'ಏಕ್ ಲವ್ ಯಾ' ಸಿನಿಮಾ ಇದೂವರೆಗೂ ಹಾಡುಗಳಿಂದಲೇ ಗಮನ ಸೆಳೆದಿತ್ತು. ಚಿಕ್ಕದೊಂದು ಟೀಸರ್ ಸಿನಿಮಾ ಬಗ್ಗೆ ಒಂದಿಷ್ಟು ಕುತೂಹಲ ಹುಟ್ಟಿಸಿದ್ದಂತೂ ಸುಳ್ಳಲ್ಲ. ಆದರೆ, ಟ್ರೈಲರ್ ಯಾಕೆ ರಿಲೀಸ್ ಮಾಡುತ್ತಿಲ್ಲ ಅನ್ನುವ ಗೊಂದಲ ಅಂತೂ ಇದ್ದೇ ಇತ್ತು. ಪ್ರೇಮ್ ಸಹಜವಾಗಿ ಸಿನಿಮಾ ಬಿಡುಗಡೆಗೂ ಮುನ್ನ ಟ್ರೈಲರ್, ಟೀಸರ್‌ನಲ್ಲಿ ಕಥೆ ಏನೂ ಬಿಟ್ಟು ಕೊಡಲ್ಲ. ಜನರಿಗೆ ಒಂದಿಷ್ಟು ಕುತೂಹಲವನ್ನು ಹುಟ್ಟಿಸುತ್ತಾರೆ. ಈ ಬಾರಿ ಪ್ರೇಮ್ ಸ್ಟ್ರಾಟಜಿ ಬದಲಾದಂತಿದೆ. ಸಿನಿಮಾ ರಿಲೀಸ್‌ಗೆ ಎರಡು ವಾರ ಇದೆ ಅನ್ನುವಾಗಲೇ ಈ ಟ್ರೈಲರ್ ರಿಲೀಸ್ ಮಾಡಿದ್ದು, ಅದರ ಹೈಲೈಟ್ ಏನು ಅಂತ ನೋಡೋಣ ಬನ್ನಿ.

 ಚಾಮುಂಡಿ ತಾಯಿ ಆಶೀರ್ವಾದ ಪಡೆದ ಪ್ರೇಮ್ ಟೀಂ

ಚಾಮುಂಡಿ ತಾಯಿ ಆಶೀರ್ವಾದ ಪಡೆದ ಪ್ರೇಮ್ ಟೀಂ

'ಏಕ್ ಲವ್ ಯಾ' ಟ್ರೈಲರ್ ರಿಲೀಸ್ ಮಾಡುವುದಕ್ಕೆ ಪ್ರೇಮ್ ಇಡೀ ತಂಡವನ್ನು ಮೈಸೂರಿಗೆ ಕರೆದುಕೊಂಡು ಹೋಗಿದ್ದಾರೆ. ಟ್ರೈಲರ್ ರಿಲೀಸ್‌ಗೂ ಮುನ್ನಇಡೀ ತಂಡ ಚಾಮುಂಡಿ ತಾಯಿಯ ಆಶೀರ್ವಾದ ಪಡೆದುಕೊಂಡಿದೆ. ಈ ಸಿನಿಮಾ ಫೆಬ್ರವರಿ 24ರಂದು ರಾಜ್ಯಾದ್ಯಂತ ರಿಲೀಸ್ ಆಗುತ್ತಿದ್ದು, ಯಶಸ್ಸಿಗಾಗಿ ನಿರ್ದೇಶಕ ಪ್ರೇಮ್, ನಾಯಕ ರಾಣಾ, ನಟಿ ರೀಷ್ಮಾ ನಾಣಯ್ಯ ಚಾಮುಂಡಿ ತಾಯಿ ಮೊರೆ ಹೋಗಿದ್ದರು ಆ ಬಳಿಕವೇ ಸಿನಿಮಾ ಟ್ರೈಲರ್ ಅನ್ನು ರಿಲೀಸ್ ಮಾಡಲಾಗಿದೆ.

 'ಏಕ್ ಲವ್ ಯಾ' ಹೈಲೈಟ್ ಏನು?

'ಏಕ್ ಲವ್ ಯಾ' ಹೈಲೈಟ್ ಏನು?

ಜೋಗಿ ಪ್ರೇಮ್ ನಿರ್ದೇಶನದ ಈ ಸಿನಿಮಾದ ಹೈಲೈಟ್ ಅಂದರೆ ಡೈಲಾಗ್. ಡಿಂಪಲ್ ಕ್ವೀನ್ ರಚಿತಾ ರಾಮ್ ಖಡಕ್ ಡೈಲಾಗ್‌ನಿಂದಲೇ ಟ್ರೈಲರ್ ಆರಂಭ ಆಗುತ್ತೆ." ಈ ಹುಡುಗರು ಏನ್ ಗೊತ್ತೇನೋ.. ದಿನಕ್ಕೊಂದು ಗಾಡಿ ಟೆಸ್ಟ್ ಡ್ರೈವ್ ನೋಡೋತರ ದಿನಕ್ಕೊಂದು ಹುಡುಗಿ ನೋಡಿ ಓಡಿಸಿ ಬಿಟ್ಟು ಬಿಡುತ್ತಾರೆ." ಇದು ಟ್ರೈಲರ್‌ನ ಮೊದಲ ಡೈಲಾಗ್. ಇದರ ಹಿಂದೆನೇ ಇನ್ನೊಬ್ಬ ಹೀರೋಯಿನ್ ರೀಷ್ಮಾ ನಾಣಯ್ಯರಿಂದ ಮತ್ತೊಂದು ರಗಡ್ ಡೈಲಾಗ್. " ಆಕಸ್ಮಾತ್ ಆ ಹುಡುಗಿ ಲವ್ ಎಕ್ಸೆಪ್ಟ್ ಮಾಡಿಕೊಂಡಿಲ್ಲ ಅಂದ್ರೆ, ಆ ಹುಡುಗಿ ಕ್ಯಾರೆಕ್ಟರ್ ಸರಿಯಿಲ್ಲ. ಬಿ** ಅಂತ ಊರು ತುಂಬಾ ಹೇಳಿಕೊಂಡು ಬರ್ತೀರಾ ಅಲ್ವಾ?" ಇದು ಟ್ರೈಲರ್‌ನ ಎರಡನೇ ಡೈಲಾಗ್. ಕೊನೆಯಲ್ಲಿ ಸುಚೇಂದ್ರ ಪ್ರಸಾದ್ ಅವರ ಹೊಡೆಯೋ ಡೈಲಾಗ್ ನಾಯಕಿನಿಗೆ.

 ರಚಿತಾ ಸಿಗರೇಟ್ ಎಂಟ್ರಿ

ರಚಿತಾ ಸಿಗರೇಟ್ ಎಂಟ್ರಿ

'ಏಕ್ ಲವ್ ಯಾ' ಟ್ರೈಲರ್‌ನ ಮತ್ತೊಂದು ಅಂದರೆ, ಅದು ಡಿಂಪಲ್ ಕ್ವೀನ್ ರಚಿತಾ ರಾಮ್ ಸಿಗರೇಟ್ ಹಿಡಿದಿರುವುದು. ಟೈಲರ್ ಆರಂಭದಿಂದ ಡೈಲಾಗ್ ಬಿಡುವಾಗ ಕೈಯಲ್ಲಿ ಸಿಗರೇಟ್ ಇರುತ್ತೆ. ಟ್ರೈಲರ್ ಕೊನೆಯಲ್ಲಿ ಎಂಟ್ರಿ ಕೊಂಡಿ ಕೊಡುವಾಗಲೂ ಕೈಯಲ್ಲಿ ಸಿಗರೇಟ್ ಇರುತ್ತೆ. ಪಾತ್ರಕ್ಕಾಗಿ ರಚಿತಾ ರಾಮ್ ಸಿಗರೇಟ್ ಹಿಡಿದಿರಬಹುದು. ಇದರೊಂದಿಗೆ ರಚಿತಾ ರಾಮ್ ಬೇರೆ ದೃಶ್ಯಗಳೂ ಟ್ರೈಲರ್‌ನಲ್ಲಿ ಇದ್ದಿದ್ದರೆ ಇನ್ನೂ ಚೆನ್ನಾಗಿರುತ್ತಿತ್ತು.

 ರಾಣಾಗಿಲ್ಲ ಡೈಲಾಗ್

ರಾಣಾಗಿಲ್ಲ ಡೈಲಾಗ್

ನಿರ್ದೇಶಕ ಜೋಗಿ ಪ್ರೇಮ್ ಚಿತ್ರದ ಹೀರೋ ರಾಣಾಗೆ ಒಂದೇ ಒಂದು ಡೈಲಾಗ್ ಕೊಟ್ಟಿಲ್ಲ. ಯಾಕೆ ಅನ್ನುವ ಸೀಕ್ರೆಟ್ ಅನ್ನು ಇನ್ನೂ ಬಿಟ್ಟುಕೊಟ್ಟಿಲ್ಲ. ಆದರೆ, ರಾಣಾ ಆಕ್ಷನ್, ಸಾಂಗ್, ಎಮೋಷನ್ ಎಲ್ಲಾ ದೃಶ್ಯಗಳ ಝಲಕ್ ಅನ್ನೂ ತೋರಿಸಿದ್ದಾರೆ. ಬಹುಶ: ರಾಣಾ ಪಾತ್ರವನ್ನು ಮತ್ತಷ್ಟು ಸೀಕ್ರೆಟ್ ಆಗಿ ಇಡುವ ಐಡಿಯಾ ಇರಬಹುದು. ಚಿತ್ರದ ಪ್ರಮುಖ ಪಾತ್ರಗಳನ್ನು ಕೇವಲ ಒಂದು ನಿಮಿಷ 55 ಸೆಕೆಂಡ್‌ಗಳ ಟ್ರೈಲರ್‌ನಲ್ಲಿ ತೋರಿಸಲಾಗಿದೆ.

ಟ್ರೈಲರ್‌ನಲ್ಲಿ ಎರಡು ಪಾತ್ರ ಅನಾವರಣ

ರಚಿತಾ ರಾಮ್, ರಾಣಾ ಹಾಗೂ ರೀಷ್ಮಾ ನಾಣಯ್ಯ ಜೊತೆ ಮತ್ತೆರಡು ಕ್ಯಾರೆಕ್ಟರ್‌ಗಳು 'ಏಕ್‌ ಲವ್ ಯಾ' ಟ್ರೈಲರ್‌ನಲ್ಲಿ ರಿವೀಲ್ ಆಗಿದೆ. ಹಿರಿಯ ನಟ ಚರಣ್ ರಾಜ್ ಹಾಗೂ ಸುಚೇಂದ್ರ ಪ್ರಸಾದ್ ಪೋಷಕ ಪಾತ್ರಗಳಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಫೆಬ್ರವರಿ 24ಕ್ಕೆ 'ಏಕ್ ಲವ್ ಯಾ' ತೆರೆಗಪ್ಪಳಿಸಲಿದ್ದು, ಅರ್ಜುನ್ ಜನ್ಯಾ ಸಂಗೀತ ಈಗಾಗಲೇ ಹಿಟ್ ಆಗಿದೆ. ರಕ್ಷಿತಾ ಫಿಲ್ಮ್ ಫ್ಯಾಕ್ಟರಿಯಲ್ಲಿ ಈ ಸಿನಿಮಾ ನಿರ್ಮಾಣ ಆಗಿದ್ದು,ಪ್ರೇಮ್ ನಿರ್ದೇಶಿಸಿದ್ದಾರೆ. 'ಏಕ್ಸ್‌ಕ್ಲ್ಯೂಸ್ ಮೀ' ಬಳಿಕ ಮತ್ತೆ ಲವ್ ಸ್ಟೋರಿಗೆ ಕೈ ಹಾಕಿರುವುದರಿಂದ ಸಿನಿಮಾ ಬಗ್ಗೆ ಸಹಜವಾಗಿಯೇ ಕುತೂಹಲ ದುಪ್ಪಟ್ಟಾಗಿದೆ.

More from Filmibeat

English summary
Raana and Rachita Ram Starrer Ek Love Ya Movie Trailer Released. After long time Jogi Prem Directing love story.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X