Just In
Don't Miss!
- News
ಲಿಂಗಾಂಬೂದಿಪಾಳ್ಯ ಕೆರೆಗೆ ಹರಿಯಲಿದೆ ಕೆಆರ್ಎಸ್ ನೀರು
- Lifestyle
ಈ 3 ವಸ್ತುಗಳನ್ನು ಹಾಕಿ ಮಾಡಿದ ಜ್ಯೂಸ್ ಕುಡಿದರೆ ಬೊಜ್ಜು ಕರುಗುತ್ತೆ, ಸೌಂದರ್ಯ ಹೆಚ್ಚುತ್ತೆ
- Finance
1986ರಿಂದ 2021 ಸೆನ್ಸೆಕ್ಸ್ ಪ್ರಮುಖ ಮೈಲುಗಲ್ಲುಗಳು: 50,000 ಪಾಯಿಂಟ್ ದಾಖಲೆ ಹಾದಿ
- Sports
ತವರಿಗೆ ಮರಳಿದ ಟೀಮ್ ಇಂಡಿಯಾ: ಮುಂಬೈನಲ್ಲಿ ರಹಾನೆಗೆ ಅದ್ದೂರಿ ಸ್ವಾಗತ
- Automobiles
ಭಾರತದಲ್ಲಿ 3 ಸೀರಿಸ್ ಗ್ರ್ಯಾನ್ ಲಿಮೊಸಿನ್ ಬಿಡುಗಡೆ ಮಾಡಿದ ಬಿಎಂಡಬ್ಲ್ಯು
- Education
BMRCL Recruitment 2021: ಸೀನಿಯರ್ ಅರ್ಬನ್ ಮತ್ತು ಟ್ರಾನ್ಸ್ ಪೋರ್ಟ್ ಪ್ಲಾನರ್ ಹುದ್ದೆಗಳಿಗೆ ಅರ್ಜಿ ಆಹ್ವಾನ
- Technology
ಒನ್ಪ್ಲಸ್ ನಾರ್ಡ್ ಜುಲೈ 15 ರಿಂದ ಅಮೆಜಾನ್ ತಾಣದಲ್ಲಿ ಪ್ರಿ-ಆರ್ಡರ್ಗೆ ಲಭ್ಯವಿದೆ; ಖರೀದಿಸುವಲ್ಲಿ ಮೊದಲಿಗರಾಗಿರಿ!
- Travel
ಭಾರತದಲ್ಲಿ ಜೂನ್ 1 ರಿಂದ ಚಲಿಸಲಿರುವ ರೈಲುಗಳ ಸಂಪೂರ್ಣ ಪಟ್ಟಿ
ವಿಷ್ಣುದಾದಾ ಅಭಿನಯಕ್ಕೆ ಬೆಕ್ಕಸ ಬೆರಗಾಗಿದ್ದರು ಹಿಂದಿಯ ದಿಗ್ಗಜ ನಟರು
ಗಾಡ್ ಫಾದರ್ ಇಲ್ಲದೆ ಚಿತ್ರರಂಗಕ್ಕೆ ಬಂದು ಬೆಳೆದವರು ಸಾಹಸ ಸಿಂಹ ವಿಷ್ಣುವರ್ಧನ್. ಅವರು ನಾಯಕರಾಗಿದ್ದ ಮೊದಲ ಚಿತ್ರ 'ನಾಗರಹಾವು' ಸೃಷ್ಟಿಸಿದ ದಾಖಲೆ ಇತಿಹಾಸದಲ್ಲಿ ಚಿರಸ್ಥಾಯಿ. ನಿರ್ದೇಶಕ ಪುಟ್ಟಣ್ಣ ಕಣಗಾಲ್ ಅವರ ಗರಡಿಯಲ್ಲಿ ವಿಷ್ಣುವರ್ಧನ್ ಅಭಿನಯ ಪಕ್ವವಾಗಿತ್ತು. ಈ ಚಿತ್ರದ ಮೂಲಕ ಕನ್ನಡಿಗರ ಮನಸಿನಲ್ಲಿ ವಿಷ್ಣು ಆಳವಾಗಿ ಇಳಿದಿದ್ದರು. 'ವಂಶವೃಕ್ಷ' ಚಿತ್ರ ಅವರ ಮೊದಲ ಸಿನಿಮಾವಾದರೂ, ಪೋಷಕರ ಪಾತ್ರದಲ್ಲಿ ನಟಿಸಿದ್ದರಿಂದ ಜನರು ಅವರನ್ನು ಗುರುತಿಸಿದ್ದು 'ನಾಗರಹಾವು' ಚಿತ್ರದಿಂದಲೇ.
'ನಾಗರಹಾವು' ಚಿತ್ರದ ಮೂಲಕ ಅಂಬರೀಷ್ ಕೂಡ ಚಿತ್ರರಂಗಕ್ಕೆ ಪರಿಚಯವಾಗಿದ್ದರು. ಈ ಚಿತ್ರ ಕನ್ನಡದಲ್ಲಿ ಮಾತ್ರವಲ್ಲದೆ, ವಿವಿಧ ಭಾಷೆ ಸಿನಿಮಾರಂಗದವರಲ್ಲಿಯೂ ಅಚ್ಚರಿ ಮೂಡಿಸಿತ್ತು. ಚಿತ್ರದ ಕಥೆ, ವಿಷ್ಣುವರ್ಧನ್ ಅಭಿನಯ ಕಂಡು ಮೆಚ್ಚಿದ್ದರು. ಆ ಕಾರಣಕ್ಕಾಗಿಯೇ ಹಿಂದಿ ಚಿತ್ರರಂಗವೂ 'ನಾಗರಹಾವು' ಚಿತ್ರವನ್ನು ತಮ್ಮಲ್ಲಿಯೂ ಮಾಡಬೇಕು ಎಂದು ಆಸೆ ಪಟ್ಟಿದ್ದು. ಅದರಲ್ಲಿಯೂ ಹಿಂದಿ ಚಿತ್ರರಂಗದ ದಿಗ್ಗಜರು ವಿಷ್ಣುವರ್ಧನ್ ನಟನೆ ಕಂಡು ಬೆರಗಾಗಿದ್ದರಂತೆ. ಮುಂದೆ ಓದಿ...
ವಿಷ್ಣು ದಾದಾ ಪಾಲಿನ ವಿಶೇಷ ದಿನ: ಸಾಹಸಸಿಂಹನನ್ನು ಸ್ಮರಿಸಿದ ಕಿಚ್ಚ ಸುದೀಪ್

ಅದ್ಭುತ ನಟ ಎಂದಿದ್ದ ರಾಜ್ ಕಪೂರ್
'ನಾಗರಹಾವು' ಚಿತ್ರವನ್ನು ಕನ್ನಡದಲ್ಲಿಯೇ ನೋಡಿದ್ದ ಹಿಂದಿಯ ಖ್ಯಾತ ನಟ, ನಿರ್ದೇಶಕ ರಾಜ್ ಕಪೂರ್, 'ವಾಜ್ ಎಂತಹ ಅದ್ಭುತ ನಟ' ಎಂದು ಉದ್ಗರಿಸಿದ್ದರಂತೆ. ವಿಷ್ಣುವರ್ಧನ್ ನಟನೆ ನೋಡಿಯೇ ಅವರಲ್ಲಿ ಈ ಚಿತ್ರ ಹಿಂದಿಯಲ್ಲಿಯೂ ಮಾಡಬೇಕು ಎನಿಸಿತ್ತು. ಅದಕ್ಕೆ ಮಗ ರಿಷಿ ಕಪೂರ್ ಅವರನ್ನೇ ಆಯ್ದುಕೊಂಡಿದ್ದರು.

ಅವರಂತೆ ನಟಿಸಬೇಕು
ವಿಷ್ಣುವರ್ಧನ್ ಅಭಿನಯವನ್ನು ಮಗ ರಿಷಿ ಕಪೂರ್‌ಗೆ ತೋರಿಸಿದ್ದ ರಾಜ್ ಕಪೂರ್, 'ನೀನು ಆ ನಟನಂತೆಯೇ ನಟಿಸಬೇಕು' ಎಂದು ಹೇಳಿದ್ದರಂತೆ. ಅಷ್ಟೇ ಅಲ್ಲ, ಈ ಚಿತ್ರಕ್ಕೆ ಪುಟ್ಟಣ್ಣ ಕಣಗಾಲ್ ಅವರೇ ನಿರ್ದೇಶನ ಮಾಡುವುದಾದರೆ ಮಾತ್ರ ಮಗನ ಕಾಲ್ ಶೀಟ್ ಕೊಡುವುದಾಗಿ ತಿಳಿಸಿದ್ದರಂತೆ.
ವಿಶೇಷತೆಗಳಿಂದ ಬೆರಗಾಗಿಸುವ 'ನಾಗರಹಾವು' ಬಗ್ಗೆ ಗೊತ್ತಿಲ್ಲದ ಸಂಗತಿಗಳು!

ಆಂಗ್ರಿ ಮ್ಯಾನ್ ಆಗದ ರಿಷಿ ಕಪೂರ್
'ಜಹ್ರೀಲಾ ಇನ್ಸಾನ್' ಹೆಸರಿನಲ್ಲಿ ಪುಟ್ಟಣ್ಣ ಕಣಗಾಲ್ ಅವರೇ ಹಿಂದಿಗೆ ರೀಮೇಕ್ ಮಾಡಿದರು. ಕನ್ನಡದಲ್ಲಿ ಜಲೀಲ ಪಾತ್ರ ಮಾಡಿದ್ದ ಅಂಬರೀಷ್ ಅವರೇ ಹಿಂದಿಯಲ್ಲಿಯೂ ಆ ಪಾತ್ರ ನಿಭಾಯಿಸಿದ್ದರು. ಆದರೆ ವಿಷ್ಣುವರ್ಧನ್ ಅವರಂತೆ ಆಂಗ್ರಿ ಯಂಗ್ ಮ್ಯಾನ್ ಲುಕ್ ನೀಡಲು ರಿಷಿ ಕಪೂರ್‌ಗೆ ಸಾಧ್ಯವಾಗಿರಲಿಲ್ಲ. ಹಿಂದಿಯ ಪ್ರೇಕ್ಷಕರಿಗೆ ಚಿತ್ರ ರುಚಿಸಲಿಲ್ಲ.

ವಿಷ್ಣು ನಟನೆ ಹೊಗಳಿದ್ದ ಪ್ರಾಣ್
'ನಾಗರಹಾವು' ಚಿತ್ರವನ್ನು ಹಿಂದಿಯ ಮತ್ತೊಬ್ಬ ಖ್ಯಾತ ನಟ ಪ್ರಾಣ್ ಕೂಡ ಮೆಚ್ಚಿಕೊಂಡಿದ್ದರು. ಅದರಲ್ಲಿಯೂ ವಿಷ್ಣುವರ್ಧನ್ ಅಭಿನಯವನ್ನು ಕೊಂಡಾಡಿದ್ದರು. ಚಾಮಯ್ಯ ಮೇಷ್ಟ್ರು ಪಾತ್ರವನ್ನು ಹಿಂದಿಯಲ್ಲಿ ಪ್ರಾಣ್ ನಿರ್ವಹಿಸಿದ್ದರು. ಈ ಚಿತ್ರದ ಚಿತ್ರೀಕರಣ ಕಂಠೀರವ ಸ್ಟುಡಿಯೋದಲ್ಲಿ ನಡೆಯುವಾಗ, 'ಆ ಹುಡುಗ ಎಷ್ಟು ಅದ್ಭುತವಾಗಿ ನಟಿಸಿದ್ದಾನೆ. ಆತನಲ್ಲಿನ ರೋಷ, ಕೆಚ್ಚು ಹಿಂದಿಯ ಚಿತ್ರದಲ್ಲಿ ಕಾಣಿಸುವುದು ನನಗೆ ಅನುಮಾನ' ಎಂದು ಹೇಳಿದ್ದರು.

ಆ ಪಾತ್ರ ಮಾಡಬಾರದಿತ್ತು
ವಿಷ್ಣುವರ್ಧನ್ ಆ ಪಾತ್ರದಲ್ಲಿ ಅಭಿನಯಿಸಿದ್ದಂತೆಯೇ ಅಗತ್ಯವಾಗಿದ್ದ ರೋಷವನ್ನು ತಮ್ಮಿಂದ ತುಂಬಿಸಲು ಸಾಧ್ಯವಾಗಿರಲಿಲ್ಲ ಎಂಬುದನ್ನು ಸ್ವತಃ ರಿಷಿ ಕಪೂರ್ ಒಪ್ಪಿಕೊಂಡಿದ್ದರು. 'ಜಹ್ರೀಲಾ ಇನ್ಸಾನ್' ಚಿತ್ರದಲ್ಲಿ ನಟಿಸಿದ್ದು ನನ್ನ ತಪ್ಪು. ಬಬ್ಲಿ 'ಬಾಬ್ಬಿ'ಯಾಗಿ ನಟಿಸಿದ್ದವನು ಎರಡನೆಯ ಚಿತ್ರದಲ್ಲಿಯೂ ಅಂತಹದೇ ಪಾತ್ರಕ್ಕೆ ಅಂಟಿಕೊಳ್ಳಬೇಕಿತ್ತು. ಅದಕ್ಕೆ ವಿರುದ್ಧದ ಪಾತ್ರಕ್ಕೆ ಹೋಗಬಾರದಿತ್ತು' ಎಂದು ರಿಷಿ ಅಭಿಪ್ರಾಯಪಟ್ಟಿದ್ದರು.

ದಾದಾಗೆ ಸಾಟಿಯಾದ ರಿಷಿ
1973ರ ಕನ್ನಡ ಚಿತ್ರ 'ನಾಗರಹಾವು' ಕಥೆ ಮತ್ತು ಯಶಸ್ಸು ಕಂಡು ಆ ಸಿನಿಮಾ ಮಾಡಿದ್ದೆವು. ಆದರೆ ಆ ಕಾಲಘಟ್ಟದಲ್ಲಿ ಹಿಂದಿ ಪ್ರೇಕ್ಷಕರು ಆ ವಸ್ತುವನ್ನು ಇಷ್ಟಪಡುತ್ತಿರಲಿಲ್ಲ. ಹಾಗಾಗಿ ಆ ಸಿನಿಮಾವನ್ನು ನಾನು ಮಾಡಿದರೆ ಇಮೇಜ್ ಬದಲಾಗುತ್ತದೆ ಎಂದುಕೊಂಡು ತಪ್ಪು ಮಾಡಿದ್ದಾಗಿ ರಿಷಿ ಕಪೂರ್ ಹೇಳಿದ್ದರು. ಹಿಂದಿ ಚಿತ್ರರಂಗದ ಮಹಾನ್ ನಟರಲ್ಲಿ ಒಬ್ಬರೆನಿಸಿರುವ ರಿಷಿ ಕಪೂರ್ ಕೂಡ ವಿಷ್ಣುವರ್ಧನ್ ಅಭಿನಯಕ್ಕೆ ಸರಿಸಾಟಿಯಾಗಿರಲಿಲ್ಲ.

50 ಚಿತ್ರಗಳ ಪಟ್ಟಿಯಲ್ಲಿ ನಾಗರಹಾವು
'ನಾಗರಹಾವು' ಚಿತ್ರರಂಗದ ಅಪೂರ್ವ ಸಿನಿಮಾಗಳಲ್ಲಿ ಒಂದು ಎನ್ನಲು ಹಲವು ಕಾರಣಗಳಿವೆ. 1925ರಿಂದ 2006ರವರೆಗಿನ ಇಡೀ ಭಾರತೀಯ ಸಿನಿಮಾರಂಗದ ಎಲ್ಲ ಯಶಸ್ವಿ ಮತ್ತು ಕ್ಲಾಸಿಕ್ ಸಿನಿಮಾಗಳ ಬಗ್ಗೆ ಅಧ್ಯಯನ ನಡೆಸಿ ಪಟ್ಟಿ ಮಾಡಲಾಗಿದ್ದ 50 ಚಿತ್ರಗಳ 'ಫಿಫ್ಟಿ ಇಂಡಿಯನ್ ಫಿಲ್ಮ್ ಕ್ಲಾಸಿಕ್' ಪಟ್ಟಿಯಲ್ಲಿ ಸ್ಥಾನ ಪಡೆದ ಎರಡೇ ಚಿತ್ರಗಳೆಂದರೆ 'ಸಂಸ್ಕಾರ' ಮತ್ತು 'ನಾಗರಹಾವು'.

ಕೆರೆಹಾವು ಎಂದು ಟೀಕಿಸಿದ್ದ ತರಾಸು
'ನಾಗರಹಾವು' ಚಿತ್ರ ತ.ರಾ.ಸು. ಅವರ ಕಾದಂಬರಿ ಆಧರಿಸಿದ್ದು. ಈ ಸಿನಿಮಾ ನೋಡಿದ್ದ ತರಾಸು 'ಇದು ನಾಗರಹಾವಲ್ಲ, ಕೆರೆಹಾವು' ಎಂದು ಟೀಕಿಸಿದ್ದರಂತೆ. ವಿಷ್ಣುವರ್ಧನ್ ಪಾತ್ರ ಅಷ್ಟೊಂದು ಪ್ರಭಾವಶಾಲಿಯಾಗಿರಲಿಲ್ಲ ಎನ್ನುವುದು ಅವರ ಅನಿಸಿಕೆಯಾಗಿತ್ತು. ಆದರೆ ಈ ಚಿತ್ರವನ್ನು ಪ್ರೇಕ್ಷಕರು ಮೆಚ್ಚಿಕೊಂಡರು.

ಸ್ಲೋ ಮೋಷನ್ ಹಾಡು
ಬಾಲಿವುಡ್‌ನಲ್ಲಿ 'ಜೋ ಜೀತಾ ವಹಿ ಸಿಕಂದರ್' ಚಿತ್ರದ 'ಪೆಹ್ಲಾ ನಶಾ' ಹಾಡನ್ನು ಸ್ಲೋ ಮೋಷನ್‌ನಲ್ಲಿ ಚಿತ್ರೀಕರಿಸಿದ್ದು ಸುದ್ದಿಯಾಗಿತ್ತು. ಆದರೆ ಎರಡು ದಶಕಕ್ಕೂ ಮೊದಲೇ 'ಬಾರೇ ಬಾರೇ' ಹಾಡನ್ನು ಸ್ಲೋ ಮೋಷನ್‌ನಲ್ಲಿ ಚಿತ್ರೀಕರಿಸಲಾಗಿತ್ತು.