14ನೇ ವಯಸ್ಸಿಗೆ ಎಂಟ್ರಿ, 16ಕ್ಕೆ ಸ್ಟಾರ್ ಪಟ್ಟ, 22ನೇ ವಯಸ್ಸಿಗೆ ದುರಂತ ಸಾವು: ರಜನಿಯ ಈ ಫೇವರಿಟ್ ನಟಿ ಯಾರು?

70 ಹಾಗೂ 80ರ ದಶಕ ದಕ್ಷಿಣ ಭಾರತದಲ್ಲಿ ಹೆಚ್ಚು ಪ್ರತಿಭಾವಂತ ನಟಿಯರ ಆಗಮನ ಆಗಿತ್ತು. ಈ ನಟಿಯರು ಒಂದು ಚಿತ್ರರಂಗದಲ್ಲಷ್ಟೇ ಅಲ್ಲ. ದಕ್ಷಿಣ ಭಾರತದ ನಾಲ್ಕು ಪ್ರಮುಖ ಭಾಷೆಗಳಲ್ಲೂ ನಟಿಸುತ್ತಿದ್ದರು. ಹೀಗಾಗಿ ಈ ಕಾಲಘಟ್ಟದಲ್ಲಿ ಚಿತ್ರರಂಗಕ್ಕೆ ಎಂಟ್ರಿ ಕೊಟ್ಟ ಬಹುತೇಕ ನಟಿಯರ ಪರಿಚಯ ಅಂದಿನ ಪೀಳಿಗೆಗೆ ಇತ್ತು.

ಇದೇ ಕಾಲಘಟ್ಟದಲ್ಲಿ ಸೌತ್ ಸಿನಿಮಾರಂಗಕ್ಕೆ ಸುಂದರ ನಟಿಯ ಆಗಮನವಾಗಿತ್ತು. ಅತೀ ಚಿಕ್ಕ ವಯಸ್ಸಿನಲ್ಲಿಯೇ ನಟನೆಗೆ ಇಳಿಸಿದ ಈ ನಟಿ ಸ್ಟಾರ್ ಪಟ್ಟಕ್ಕೆ ಏರುವುದಕ್ಕೆ ಹೆಚ್ಚು ಸಮಯವೇನೂ ಹಿಡಿದಿರಲಿಲ್ಲ. ಈ ನಟಿ ಮುಂದೊಂದು ದಿನ ಲೇಡಿ ಸೂಪರ್‌ಸ್ಟಾರ್ ಆಗಿ ಮೆರೆಯಬಹುದು ಅಂತ ಅಂದಿನ ಸೂಪರ್‌ಸ್ಟಾರ್‌ಗಳೇ ಭವಿಷ್ಯ ನುಡಿದಿದ್ದರು.

Rajinikanth favorite actress tragic death at the age of 22 do you know who is she

ಎಲ್ಲಾಕ್ಕಿಂತ ಹೆಚ್ಚಾಗಿ ಈ ನಟಿ ಸೂಪರ್‌ಸ್ಟಾರ್ ರಜನಿಕಾಂತ್ ಫೇವರಿಟ್ ನಟಿಯಾಗಿದ್ದರು. ವಯಸ್ಸು ಚಿಕ್ಕದಿತ್ತು. ಯಶಸ್ಸು ಸಿಕ್ಕಿತ್ತು. ಸ್ಟಾರ್ ಪಟ್ಟನೂ ಬಂದಿತ್ತು. ಕೇವಲ 14ನೇ ವಯಸ್ಸಿಗೆ ಚಿತ್ರರಂಗಕ್ಕೆ ಎಂಟ್ರಿ ಕೊಟ್ಟಿದ್ದರು. 16ನೇ ವಯಸ್ಸಿನಲ್ಲೇ ಸ್ಟಾರ್ ಪಟ್ಟ ಒಲಿದು ಬಂದಿತ್ತು. 22ನೇ ವಯಸ್ಸಿಗೆ ಈ ಲೋಕವನ್ನೇ ಬಿಟ್ಟು ಹೋಗಿಬಿಟ್ಟರು. ಅಂದ್ಹಾಗೆ, ಈ ನಟಿಯ ಹೆಸರು ಜಯಲಕ್ಷ್ಮಿ ಉರ್ಫ್ ಫಟಾಫಟ್ ಜಯಲಕ್ಷ್ಮಿ.

1958ರಲ್ಲಿ, ಆಂಧ್ರಪ್ರದೇಶದಲ್ಲಿ ಜಯಲಕ್ಷ್ಮಿ ಹುಟ್ಟಿದ್ದರು. 1972ರಲ್ಲಿ ಜಯಲಕ್ಷ್ಮಿಗೆ ತೆಲುಗು ಸಿನಿಮಾಗಳಲ್ಲಿ ನಟಿಸುವ ಅವಕಾಶ ಒದಗಿ ಬಂದಿತ್ತು. ಅಕ್ಕಿನೇನಿ ನಾಗೇಶ್ವರ ರಾವ್ ನಟಿಸಿದ್ದ 'ಇದ್ದರು ಅಮ್ಮಾಯಿಲು' ಅನ್ನುವ ಸಿನಿಮಾಗೆ ಈಕೆಯೇ ನಾಯಕಿ. ಆ ವೇಳೆ ಈ ನಟಿಗೆ ಕೇವಲ 14 ವರ್ಷ. ಎರಡು ವರ್ಷ ಆಗುವುದರೊಳಗೆ ತಮಿಳು ಚಿತ್ರರಂಗಕ್ಕೂ ಕಾಲಿಟ್ಟಿದ್ದರು. ಕೆ ಬಾಲಚಂದರ್ 'ಅವಳ್ ಒರು ತೊಡರ್ ಕಥೈ' ಅನ್ನೋ ಸಿನಿಮಾಗೆ ಕರೆದುಕೊಂಡು ಬಂದಿದ್ದರು.

ಈ ಸಿನಿಮಾ ಜಯಲಕ್ಷ್ಮಿಯನ್ನು ಸ್ಟಾರ್ ಪಟ್ಟಕ್ಕೇರಿಸಿತ್ತು. ಅದರಲ್ಲೂ ಈ ಸಿನಿಮಾದಲ್ಲಿ ಜಯಲಕ್ಷ್ಮಿ ಹೇಳಿದ 'ಫಟಾಫಟ್' ಅನ್ನುವ ಡೈಲಾಗ್ ಸಿಕ್ಕಾಪಟ್ಟೆ ಜನಪ್ರಿಯವಾಗಿತ್ತು. ತಮಿಳುನಾಡು ಹಾಗೂ ಆಂಧ್ರ ಪ್ರದೇಶದಲ್ಲಿ ಎಲ್ಲರ ಬಾಯಲ್ಲೂ ಈ ಡೈಲಾಗ್ ಹರಿದಾಡುವುದಕ್ಕೆ ಶುರುವಾಗಿತ್ತು. ಅಷ್ಟೊತ್ತಿಗಾಗಲೇ ಜಯಲಕ್ಷ್ಮಿ ಜನಪ್ರಿಯ ನಟಿಯಾಗಿ ಹೊರಹೊಮ್ಮಿದ್ದರು.

Rajinikanth favorite actress tragic death at the age of 22 do you know who is she

ರಜನಿಕಾಂತ್, ಕಮಲ್ ಹಾಸನ್, ಕೃಷ್ಣ, ಎನ್‌ಟಿಆರ್, ಚಿರಂಜೀವಿಯಂತಹ ಸ್ಟಾರ್ ನಟರೊಂದಿಗೆ ನಟಿಸಿದ್ದರು. 1980ರಲ್ಲಿ ಫಟಾಫಟ್ ಜಯಲಕ್ಷ್ಮಿ ತಮಿಳು, ತೆಲುಗು, ಮಲಯಾಳಂ ಹಾಗೂ ಕನ್ನಡವೂ ಸೇರಿದಂತೆ ಸುಮಾರು 60ಕ್ಕೂ ಹೆಚ್ಚು ಸಿನಿಮಾಗಳಲ್ಲಿ ಅದಾಗಲೇ ನಟಿಸಿ ಆಗಿತ್ತು. ತನ್ನ ವೃತ್ತಿ ಬದುಕಿನಲ್ಲಿ ಉತ್ತುಂಗದಲ್ಲಿ ಇರುವಾಗಲೇ ಜಯಲಕ್ಷ್ಮಿ ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದರು.

ತಮಿಳುನಾಡಿನ ಆರಾಧ್ಯ ದೈವ ಹಾಗೂ ಜನಪ್ರಿಯ ಮುಖ್ಯಮಂತ್ರಿ ದಿವಂಗತ ಎಂಜಿ ರಾಮಚಂದ್ರನ್ ಅವರ ಸಂಬಂಧಿಯನ್ನು ಮದುವೆಯಾದರು. ಅಲ್ಲಿವರೆಗೂ ಬದುಕಿನಲ್ಲಿ ಯಶಸ್ಸನ್ನು ಕಂಡಿದ್ದ ನಟಿ, ಮದುವೆಯಾದ ಕೆಲವೇ ದಿನಗಳಲ್ಲಿ ವೈಯಕ್ತಿಕ ಬದುಕಿನಲ್ಲಿ ಸೋಲನ್ನು ಕಂಡರು. ವೈವಾಹಿಕ ಜೀವನದಲ್ಲಿ ನೊಂದಿದ್ದರು. 1980, ನವೆಂಬರ್ 21ರಂದು ಆತ್ಮಹತ್ಯೆ ಮಾಡಿಕೊಂಡರು. ಈ ಸುದ್ದಿ ದಕ್ಷಿಣ ಭಾರತೀಯ ಚಿತ್ರರಂಗಕ್ಕೆ ದೊಡ್ಡ ಶಾಕ್ ಕೊಟ್ಟಂತಾಗಿತ್ತು.

ದಿವಂಗತ ನಟಿ ಜಯಲಕ್ಷ್ಮಿ 'ಒಂದು ಹೆಣ್ಣು ಆರು ಕಣ್ಣು' ಅನ್ನುವ ಏಕೈಕ ಕನ್ನಡ ಸಿನಿಮಾದಲ್ಲಿ ನಟಿಸಿದ್ದರು. ಅತೀ ಚಿಕ್ಕ ವಯಸ್ಸಿನಲ್ಲಿ ಯಶಸ್ಸು, ಹೆಸರು ಗಳಿಸಿ ಹೊರಟು ಹೋದರು. 2018ರಲ್ಲಿ ರಜನಿಕಾಂತ್ ಸಂದರ್ಶನವೊಂದರಲ್ಲಿ ನಾವು ಕಡಿಮೆ ಸಿನಿಮಾಗಳಲ್ಲಿ ನಟಿಸಿದ್ದರೂ, ಜಯಲಕ್ಷ್ಮಿ ತನ್ನ ಫೇವರಿಟ್ ನಟಿ ಎಂದು ಹೇಳಿಕೊಂಡಿದ್ದರು.

More from Filmibeat

English summary
Superstar Rajinikanth favorite actress death at the age of 22:
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X