ಅಮಿತಾಭ್ 'ಕೂಲಿ' ಸಿನಿಮಾ ಬಾಕ್ಸಾಫೀಸ್‌ನಲ್ಲಿ ಗಳಿಸಿದ್ದಿದ್ದೆಷ್ಟು? ಇಂದಿನ ಎಷ್ಟು ಕೋಟಿಗೆ ಸಮ?
ಸೂಪರ್‌ಸ್ಟಾರ್ ರಜನಿಕಾಂತ್ 171ನೇ ಸಿನಿಮಾದ ಟೈಟಲ್ ಅನೌನ್ಸ್ ಆಗಿದೆ. ರಜನಿ ಲುಕ್, ಮ್ಯಾನರಿಸಂ ಹೇಗಿರುತ್ತೆ ಅಂತ ತೋರಿಸುವುದಕ್ಕೆ ಟೀಸರ್ ಕೂಡ ರಿಲೀಸ್ ಮಾಡಲಾಗಿತ್ತು. ಈ ಸಿನಿಮಾದ ಟೈಟಲ್ ಟೀಸರ್ ಅವರ ಅಭಿಮಾನಿಗಳಿಗೆ ಸಿಕ್ಕಾಪಟ್ಟೆ ಥ್ರಿಲ್ ಕೊಟ್ಟಿದೆ. 73 ವರ್ಷದ ರಜನಿಯ ಮಾಸ್ ಅವತಾರ ಸಖತ್ ಕಿಕ್ ಕೊಟ್ಟಿದೆ.
ಇದೇ 'ಕೂಲಿ' ಟೈಟಲ್ 41 ವರ್ಷಗಳ ಹಿಂದೆ ಬಾಲಿವುಡ್ ಬಿಗ್ ಬಿ ಅಮಿತಾಭ್ ಬಚ್ಚನ್‌ರನ್ನು ಸೂಪರ್‌ಸ್ಟಾರ್ ಮಾಡಿತ್ತು. ಈಗ ಮತ್ತೊಬ್ಬ ಲೆಜೆಂಡ್ ರಜನಿಕಾಂತ್ 'ಕೂಲಿ' ಆಗುವುದಕ್ಕೆ ಹೊರಟಿದ್ದಾರೆ. ಲೋಕೇಶ್ ಕನಕರಾಜ್ ಟೈಟಲ್ ಅನೌನ್ಸ್ ಮಾಡುತ್ತಿದ್ದಂತೆ ಅಮಿತಾಭ್ ಬಚ್ಚನ್ ಸಿನಿಮಾದೊಂದಿಗೆ ಹೋಲಿಕೆ ಮಾಡುವುದಕ್ಕೆ ಶುರುವಿಟ್ಟುಕೊಂಡಿದ್ದಾರೆ.

'ಕೂಲಿ' ಬಾಲಿವುಡ್ ಮೆಗಾಸ್ಟಾರ್ ಅಮಿತಾಭ್ ಬಚ್ಚನ್ ವೃತ್ತಿ ಬದುಕಿಗೆ ತಿರುವು ಕೊಟ್ಟ ಸಿನಿಮಾಗಳಲ್ಲಿ ಒಂದು. ಇದೇ ಸಿನಿಮಾದ ಶೂಟಿಂಗ್ ವೇಳೆ ಬಿಗ್ ಬಿಗೆ ಅಪಘಾತಕ್ಕೀಡಾಗಿದ್ದರು. ಅಮಿತಾಭ್ ಬಚ್ಚನ್ ಕ್ಲಿನಿಕಲಿ ಡೆಡ್ ಆಗಿದ್ದಾರೆಂಬ ಸುದ್ದಿನೂ ಹಬ್ಬಿತ್ತು. ಬಿಗ್ ಬಿ ಮತ್ತೆ ಚೇತರಿಸಿಕೊಂಡು ನಟನೆಗೆ ಮರಳಿದ್ದರು. ಅದೇ ಸಿನಿಮಾ ರಿಲೀಸ್ ಆಗಿ ಬಾಕ್ಸಾಫೀಸ್‌ನಲ್ಲಿ ದೊಡ್ಡ ಮಟ್ಟಕ್ಕೆ ಸದ್ದು ಮಾಡಿತ್ತು. ಅಮಿತಾಭ್‌ಗೆ ಹೊಸ ಬದುಕನ್ನು ಕೊಟ್ಟಿತ್ತು.
1983ರಲ್ಲಿ ತೆರೆಕಂಡಿದ್ದ 'ಕೂಲಿ' ಸಿನಿಮಾ ಗಳಿಕೆ ಬಗ್ಗೆ ಈಗಾಗಲೇ ಸಾಕಷ್ಟು ವರದಿಗಳು ಆಗಿವೆ. ಒಂದೊಂದು ವರದಿಯಲ್ಲಿ ಕಲೆಕ್ಷನ್ ಬಗ್ಗೆ ಒಂದೊಂದು ಅಂಕಿ ಅಂಶಗಳು ಇವೆ. ಕೆಲವು ವರದಿಯಲ್ಲಿ 41 ವರ್ಷಗಳ ಹಿಂದೆ 13 ಕೋಟಿ ರೂಪಾಯಿ ಕಲೆಕ್ಷನ್ ಆಗಿದೆ ಎನ್ನಲಾಗಿದೆ. ಅದೇ ಇನ್ನೊಂದು ಕಡೆ 21 ಕೋಟಿ ರೂಪಾಯಿ ಕಲೆಕ್ಷನ್ ಆಗಿದೆ ಎಂದು ಹೇಳಲಾಗಿದೆ. ಕೋಯಿಮೋಯ್ 'ಕೂಲಿ' ಸಿನಿಮಾ 2 ಕೋಟಿ ರೂಪಾಯಿಯಲ್ಲಿ ಈ ಸಿನಿಮಾ ನಿರ್ಮಾಣ ಆಗಿತ್ತು. ಆದರೆ, 3.5 ಕೋಟಿ ರೂಪಾಯಿಗೆ ಥಿಯೇಟ್ರಿಕಲ್ ರೈಟ್ಸ್ ಮಾರಾಟ ಆಗಿತ್ತು ಎಂದು ಹೇಳಿದೆ.
1983ರಲ್ಲಿ ಒಂದು ಡಾಲರ್ ಬೆಲೆ 23.80 ರೂಪಾಯಿ ಇತ್ತು. ಆ ಸಮಯದಲ್ಲಿ ಅಮಿತಾಭ್ ಬಚ್ಚನ್ 'ಕೂಲಿ' ಸಿನಿಮಾ 13 ಕೋಟಿ ರೂಪಾಯಿ ಕಲೆಕ್ಷನ್ ಮಾಡಿತ್ತು. 41 ವರ್ಷಗಳ ಬಳಿಕ ಅದೇ 1 ಡಾಲರ್ ಬೆಲೆ 83 ರೂಪಾಯಿ ಆಗಿದೆ. ಅಂದರೆ 41 ವರ್ಷದಲ್ಲಿ ಹೆಚ್ಚು ಕಡಿಮೆ 59 ರೂಪಾಯಿ ಹೆಚ್ಚಿಗೆ ಆಗಿದೆ. ಈ ಲೆಕ್ಕಾಚಾರದ ಪ್ರಕಾರ, ಇಂದಿಗೆ ಆ 13 ಕೋಟಿ ರೂಪಾಯಿ ಇಂದಿನ ಅಂದಾಜು 767 ಕೋಟಿ ರೂಪಾಯಿಗೆ ಸಮಯವೆಂದು ಹೇಳಬಹುದು. ಒಂದು ವೇಳೆ ಈ ಲೆಕ್ಕಾಚಾರ ಸರಿಯಾಗಿ ಇದ್ದಲ್ಲಿ ರಜನಿ ಮೇಲೆ ಒತ್ತಡ ಹೆಚ್ಚುವುದಂತೂ ಗ್ಯಾರಂಟಿ

ಈಗ ಸೂಪರ್‌ಸ್ಟಾರ್ ರಜನಿಕಾಂತ್ 'ಕೂಲಿ' ಆಗುವುದಕ್ಕೆ ಹೊರಟಿದ್ದಾರೆ. ಲೋಕೇಶ್ ಕನಕರಾಜ್ ಆಕ್ಷನ್ ಕಟ್ ಹೇಳುತ್ತಿದ್ದರಿಂದ ನಿರೀಕ್ಷೆ ಬೆಟ್ಟದಷ್ಟಿದೆ. ಈ ಕಾರಣಕ್ಕೆ ರಜನಿಕಾಂತ್ 'ಕೂಲಿ' ಸಿನಿಮಾ 1000 ಕೋಟಿ ರೂಪಾಯಿ ಕಲೆಕ್ಷನ್ ಮಾಡಲೇಬೇಕು. ಇಲ್ಲವಾದರೆ, ಅಮಿತಾಭ್ ಬಚ್ಚನ್‌ಗೆ ಬದುಕು ಕೊಟ್ಟ 'ಕೂಲಿ' ಸಿನಿಮಾದ ವಿರುದ್ಧ ರಜನಿ ಸಿನಿಮಾ ಸೋತಂತೆ.
ಸೂಪರ್‌ಸ್ಟಾರ್ ರಜನಿಕಾಂತ್ ಹೊಸ ಸಿನಿಮಾ ಅನೌನ್ಸ್ ಆಗುತ್ತಿದ್ದಂತೆ ಅವರು ಪಡೆದ ಸಂಭಾವನೆ ಬಗ್ಗೆ ಚರ್ಚೆಯಾಗುತ್ತೆ. ಈಗ 'ಕೂಲಿ'ಗೆ ಸುಮಾರು 280 ಕೋಟಿ ರೂಪಾಯಿ ಪಡೆದಿದ್ದಾರೆಂದು ಕೋಯ್‌ಮೊಯ್ ವರದಿ ಮಾಡಿದೆ. ಒಟ್ನಲ್ಲಿ ಸಿನಿಪ್ರಿಯರು ಈಗ ಅಮಿತಾಭ್ ಬಚ್ಚನ್ 'ಕೂಲಿ' ಹಾಗೂ ರಜನಿಕಾಂತ್ 'ಕೂಲಿ' ಸಿನಿಮಾವನ್ನು ಹೋಲಿಕೆ ಮಾಡುವುದಕ್ಕೆ ಶುರು ಮಾಡಿದ್ದಾರೆ.


Click it and Unblock the Notifications











