"ಅಣ್ಣಾವ್ರು ಬರೀ ಸುಳ್ಳು ಹೇಳಿದ್ದಾರೆ.. ಫೈಟ್ ಇಲ್ಲ..ನಾಲ್ಕೇ ವಾರ" ಎಂದುಕೊಂಡ 'ಹಾಲು ಜೇನು' 35 ವಾರ ಓಡಿದ್ದೇಗೆ?

ಡಾ.ರಾಜ್‌ಕುಮಾರ್ ಕನ್ನಡ ಚಿತ್ರರಂಗಕ್ಕೆ ಕೊಟ್ಟ ಎವರ್‌ಗ್ರೀನ್‌ ಸಿನಿಮಾಗಳು ಒಂದೆರಡಲ್ಲ. ಅವರು ನಟಿಸಿದ ಒಂದೊಂದು ಸಿನಿಮಾದ ಹಿಂದೆ ಸಾವಿರಾರು ಕಥೆಗಳಿವೆ. ಆ ಸಿನಿಮಾದಲ್ಲಿ ಕೆಲಸ ಮಾಡಿದವರು ಪ್ರತಿಯೊಬ್ಬರೂ ಇಂದು ಸಾವಿರ ಕಥೆಗಳನ್ನು ಹೇಳುತ್ತಾರೆ. ಅಣ್ಣಾವ್ರು ನಟಿಸಿದ ಅಂತಹ ಸಿನಿಮಾಗಳಲ್ಲಿ ಒಂದು 'ಹಾಲು ಜೇನು' ಸಿನಿಮಾ ಕೂಡ ಒಂದು. ಇದೂ ಕೂಡ ಸ್ಯಾಂಡಲ್‌ವುಡ್‌ನಲ್ಲಿ ದಾಖಲೆ ಬರೆದ ಸಿನಿಮಾ.

ದಕ್ಷಿಣ ಭಾರತದ ಜನಪ್ರಿಯ ನಿರ್ದೇಶಕ ಸಿಂಗೀತಂ ಶ್ರೀನಿವಾಸ ರಾವ್ 'ಹಾಲು ಜೇನು' ಸಿನಿಮಾವನ್ನು ನಿರ್ದೇಶನ ಮಾಡಿದ್ದರು. ಆದರೆ, ಮೊದಲು ಅವರು ಇದೇ ಸಿನಿಮಾದ ಕಥೆಯನ್ನು ಬರೊಬ್ಬರಿಗೆ ಹೇಳಿದ್ದರು. ಆದರೆ, ಸಿನಿಮಾ ಕಥೆಯನ್ನೆಲ್ಲ ರೆಡಿ ಮಾಡಿಟ್ಟುಕೊಂಡಿದ್ದರು. ಇನ್ನೇನು ಸಿನಿಮಾ ಆರಂಭ ಆಗಬೇಕು ಎನ್ನುವಾಗ ಅದು ಟೇಕಾಫ್ ಆಗಲಿಲ್ಲ. ಹೀಗಾಗಿ ಸಿಂಗೀತಂ ಶ್ರೀನಿವಾಸ ರಾವ್ ಅಣ್ಣಾವ್ರ ಬಳಿ 'ಹಾಲು ಜೇನು' ಕಥೆಯನ್ನು ಹೇಳಿದ್ದರು.

Rajkumar Starrer Haalu Jenu movie directed by Singeetam Srinivasa Rao 35 weeks run in theatre

ಸಿಂಗೀತಂ ಶ್ರೀವಾಸ ರಾವ್ ಅವರಿಗೆ ಅಣ್ಣಾವ್ರು ತಮ್ಮ ಸಹೋದರ ವರದಪ್ಪ ಅವರಿಗೆ ಹೇಳುವಂತೆ ಹೇಳಿ ಕಳುಹಿಸಿದ್ದರು. ವರದಪ್ಪ ಅವರಿಗೆ ಈ ಕಥೆ ಸಿಕ್ಕಾಪಟ್ಟೆ ಇಷ್ಟ ಆಗುತ್ತೆ. ಬೇಡ ಅಂತ ಬಿಟ್ಟಿದ ಕಥೆಯನ್ನು ಆಯ್ಕೆ ಮಾಡಿಕೊಂಡು ಹಾಲು ಜೇನು ಸಿನಿಮಾ ಮಾಡುತ್ತಾರೆ. ಇದು ಕನ್ನಡದ ಚಿತ್ರಮಂದಿರಗಳಲ್ಲಿ 25 ವಾರಕ್ಕೂ ಹೆಚ್ಚು ದಿನ ಪ್ರದರ್ಶನ ಕಂಡು ಹೊಸ ದಾಖಲೆಯನ್ನೇ ಬರೆಯುತ್ತೆ.

ಡಾ.ರಾಜ್‌ಕುಮಾರ್ ಅವರಿಗೂ ಮುನ್ನ ಮೊದಲು ಈ ಸಿನಿಮಾವನ್ನು ಅನಂತ್‌ನಾಗ್ ಅವರು ಮಾಡಬೇಕಿತ್ತು. ಆದರೆ, ಕಾರಣಾಂತರಗಳಿಂದ ಆ ಸಿನಿಮಾ ಸೆಟ್ಟೇರಲಿಲ್ಲ. ಹೀಗಾಗಿ ಈ ಕಥೆ ಅಣ್ಣಾವ್ರ ಕಡೆ ಬಂದಿತ್ತು. ಈ ಸಿಂಪಲ್ ಕಥೆ ವರಪ್ಪ ಹಾಗೂ ಪಾರ್ವತಮ್ಮ ರಾಜ್‌ಕುಮಾರ್ ಅವರಿಗೆ ಸಿಕ್ಕಾಪಟ್ಟೆ ಇಷ್ಟ ಆಗಿತ್ತು. ಹೀಗಾಗಿ ಪಾರ್ವತಮ್ಮ ಅವರೇ ಸಿನಿಮಾವನ್ನು ನಿರ್ಮಾಣ ಮಾಡುವುದಕ್ಕೆ ಮುಂದಾದರು. ಈ ಕಥೆಯನ್ನು 1 ಲಕ್ಷ ರೂಪಾಯಿಗೆ ಖರೀದಿ ಮಾಡಿಬಿಟ್ಟರು.

ಅಣ್ಣಾವ್ರ ನಿರ್ಮಾಣ ಸಂಸ್ಥೆಯಲ್ಲಿ 10 ರಿಂದ 12 ಸಿನಿಮಾಗಳಿಗೆ ಕೆಲಸ ಮಾಡಿದ್ದ ಆದಿತ್ಯ ಚಿಕ್ಕಣ್ಣ 'ಹಾಲು ಜೇನು' ಸಿನಿಮಾ ಬಗ್ಗೆ ಕೆಲವು ಇಂಟ್ರೆಸ್ಟಿಂಗ್ ಕಥೆನ್ನು ಡೈಲಿ ಮಾಧ್ಯಮ ಯೂಟ್ಯೂಬ್ ಚಾನೆಲ್‌ ಜೊತೆ ಹಂಚಿಕೊಂಡಿದ್ದಾರೆ. ಸಿಂಗೀತಂ ಶ್ರೀನಿವಾಸ ರಾವ್ ಬೇರೊಬ್ಬ ನಿರ್ಮಾಪಕರಿಗೆ ಹೇಳಿದ್ದರು. ಆದರೆ, ಸಿನಿಮಾ ಟೇಕಾಪ್‌ ಆಗುವುದರೊಳಗಾಗಿ ನಿಂತು ಹೋಗಿತ್ತು.

Rajkumar Starrer Haalu Jenu movie directed by Singeetam Srinivasa Rao 35 weeks run in theatre

"ಹಾಲು ಜೇನು ಸಿನಿಮಾ ನಿರ್ಮಾಪಕರು ಬೀದರ್‌ನವರು. ಅವರು ಬೇರೆಯವರಿಗೆ ಸಿನಿಮಾ ಮಾಡಬೇಕಿತ್ತು. ಸಿಂಗೀತಂ ಶ್ರೀನಿವಾಸ ಅವರು ಬಂದು ಕತೆ ಹೇಳಿ ಓಕೆ ಆಗಿತ್ತು. ಆ ಸಿನಿಮಾ ನಿಂತು ಹೋಗಿತ್ತು. ಆಗ ಈ ಕತೆಯನ್ನು ಅಣ್ಣಾವ್ರಿಗೆ ಹೇಳಿದರು. ಅವರು ವರದಪ್ಪಣ್ಣನವರಿಗೆ ಹೇಳಿ ಅಂದರು. ಆ ಮೇಲೆ ಕತೆಯನ್ನು ವರದಪ್ಪಣ್ಣ ಅವರಿಗೆ ಹೇಳಿದಾಗ ಈ ಕಥೆಯನ್ನು ಓಕೆ ಮಾಡಿದರು." ಎಂದು ಆದಿತ್ಯ ಚಿಕ್ಕಣ್ಣ ಸಂದರ್ಶನದ ವೇಳೆ ರಿವೀಲ್ ಮಾಡಿದ್ದಾರೆ.

ಹೈಲೈಟ್ಸ್

1982ರಲ್ಲಿ ತೆರೆಕಂಡ ಸಿನಿಮಾ 'ಹಾಲು ಜೇನು'
35 ವಾರ ಚಿತ್ರಮಂದಿರದಲ್ಲಿ ಪ್ರದರ್ಶನ ಕಂಡ ಸಿನಿಮಾ
ನಾಯಕಿ ಮಾಧವಿಗೆ ಹಿರಿಯ ನಟಿ ಸರಿತಾ ಧ್ವನಿ ನೀಡಿದ್ದರು
'ಹಾಲು ಜೇನು' ಸಿನಿಮಾಗೆ ಸಿಂಗೀತಂ ಶ್ರೀನಿವಾಸ ರಾವ್ ನಿರ್ದೇಶಕ

'ಹಾಲು ಜೇನು' ಸಿನಿಮಾ ನೋಡಿ ಆದಿತ್ಯ ಚಿಕ್ಕಣ್ಣಗೆ ಈ ಸಿನಿಮಾ ತುಂಬಾ ದಿನ ಓಡುವುದಿಲ್ಲ ಎಂದು ಎನಿಸಿತ್ತು. ಆಕ್ಷನ್ ಸೀನ್ ಇಲ್ಲ. ಅಣ್ಣಾವ್ರು ಬರೀ ಸುಳ್ಳು ಹೇಳಿದ್ದಾರೆ. ಹಾಡುಗಳು ರಿಚ್ ಆಗಿಲ್ಲ ಎಂದುಕೊಂಡಿದ್ದರು. ಆದರೆ, ಲೆಕ್ಕಾಚಾರವೇ ಬೇರೆಯಾಗಿತ್ತು. "ಹಾಲು ಜೇನು ಸಿನಿಮ ನೋಡಿದ್ವಿ. ನೋಡಿದ್ಮೇಲೆ ಈ ಸಿನಿಮಾವೇನು ಮೂರು ನಾಲ್ಕು ವಾರ ಹೋಗಬಹುದು. ಏನಿದು ಈ ಕಥೆಯಲ್ಲಿ ಅಣ್ಣ ಬರೀ ಸುಳ್ಳು ಹೇಳ್ತಾರೆ. ಫೈಟ್ ಇಲ್ಲ. ಓಹೋ ಎನ್ನುವಂತಹ ರಿಚ್ ಆಗಿರುವ ಸಾಂಗ್‌ಗಳು ಇಲ್ಲ. ಏನಪ್ಪ ಈ ಸಿನಿಮಾ ಹೋಗುತ್ತಾ ಇಲ್ವಾ? ಅಂತ ಡೌಟ್ ಬರುವುದಕ್ಕೆ ಶುರುವಾಯ್ತು. ಆದರೆ, ಆ ಸಿನಿಮಾ 25 ವಾರ ಓಡಿತು. ರೆಕಾರ್ಡ್ ಬ್ರೇಕ್ ಮಾಡಿತು. ಆ ಕಾಲದಲ್ಲಿ 31 ಸೆಂಟರ್‌ಗಳಲ್ಲಿ ಶತದಿನೋತ್ಸವವನ್ನು ಆಚರಿಸಿತು. ಸಣ್ಣ ಸಣ್ಣ ತಾಲೂಕಿನಲ್ಲಿ ಈ ಸಿನಿಮಾ ಸೂಪರ್ ಹಿಟ್ ಆಯ್ತು" ಎನ್ನುತ್ತಾರೆ ಆದಿತ್ಯ ಚಿಕ್ಕಣ್ಣ.

ಈ ಸಿನಿಮಾ ರಿಲೀಸ್ ಆದಾಗ ಚಮತ್ಕಾರ ನಡೆದು ಬಿಡ್ತು. ಮಹಿಳೆಯರಿಗೆ ಈ ಸಿನಿಮಾ ಸಿಕ್ಕಾಪಟ್ಟೆ ಇಷ್ಟ ಆಗಿತ್ತು. ಅಣ್ಣಾವ್ರು ಸಿನಿಮಾದಲ್ಲಿ ಸಂದರ್ಭಕ್ಕೆ ತಕ್ಕಂತೆ ಸುಳ್ಳು ಹೇಳಿದ್ದರೂ, ಮಹಿಳೆಯರಿಗೆ ಇಷ್ಟ ಆಗಿತ್ತು. ಅದರಲ್ಲೂ ಕ್ಲೈಮ್ಯಾಕ್ಸ್‌ನಲ್ಲಿ ಕಣ್ಣೀರು ಹಾಕಿದ್ದರಂತೆ. "ಮಹಿಳೆಯರಂತೂ ಆ ಸಿನಿಮಾ ನೋಡಿ ಬಿಕ್ಕಿ ಬಿಕ್ಕಿ ಅಳುತ್ತಿದ್ದರು. ನಮ್ಮ ಮನೆಯಲ್ಲೊಂದಿದೆ ಮೂದೇವಿ ಗಂಡ. ನೋಡು ನಮ್ಮಪ್ಪ (ರಾಜ್‌ಕುಮಾರ್) ಅವಳಿಗೋಸ್ಕರ ಎಷ್ಟು ಕಷ್ಟ ಬೀಳುತ್ತಾನೆ ಎಂದು ಹೇಳಿಕೊಂಡು ಕ್ಲೈಮ್ಯಾಕ್ಸ್‌ನಲ್ಲಿ ಅಳೋರು. ಹಾಗಾಗಿ ಕಂಟೆಂಟ್ ಮುಖ್ಯ ಆಗುತ್ತೆ. ನಾವು ನೋಡಿದಾಗ, ಕೇಳಿದಾಗ ಇದರಲ್ಲಿ ಏನಿದೆ? ಅಂತ ಹೇಳುತ್ತೇವೆ. ಆದರೆ, ಯಾವುದೋ ಒಂದು ಪಾಯಿಂಟ್ ಆಡಿಯನ್ಸ್‌ಗೆ ಟಚ್ ಆಗುತ್ತೆ. ಅದಕ್ಕೆ ಅಣ್ಣಾವ್ರು ಅಭಿಮಾನಿಗಳೇ ದೇವರು ಅಂದರು. ಅವರಿಗೆ ಇಷ್ಟ ಆಯ್ತು ಅಂದರೆ, ಅದು ಭಗವಂತನಿಗೂ ಇಷ್ಟ ಆಯ್ತು ಅಂತ." ಎಂದು ಆದಿತ್ಯ ಚಿಕ್ಕಣ್ಣ ಹೇಳುತ್ತಾರೆ.

More from Filmibeat

English summary
Rajkumar Starrer Haalu Jenu movie directed by Singeetam Srinivasa Rao 35 weeks run in theatre.
Read more about: rajkumar sandalwood movie
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X