"15 ನಿಮಿಷ 'ಕೆಜಿಎಫ್ 2' ನೋಡಿ ಉಸಿರುಗಟ್ಟಿತ್ತು.. ಇನ್ನು 15 ನಿಮಿಷ ನೋಡಿ ಸ್ನಾನ ಮಾಡ್ಬೇಕು ಅನಿಸ್ತು"

ಭಾರತೀಯ ಚಿತ್ರರಂಗ ಕಂಡ ವಿವಾದಾತ್ಮಕ ನಿರ್ದೇಶಕ ರಾಮ್ ಗೋಪಾಲ್ ವರ್ಮಾ. ತಮ್ಮ ಸಿನಿಮಾಗಳಿಂದ ಎಷ್ಟು ಸದ್ದು ಮಾಡುತ್ತಿದ್ದಾರೋ. ಹಾಗೇ ತಮ್ಮ ಹೇಳಿಕೆಗಳಿಂದಾನೂ ವಿವಾದವನ್ನು ಸೃಷ್ಟಿಸುತ್ತಾರೆ. ಕೆಲವೊಮ್ಮೆ ಅವರ ಕೊಟ್ಟ ಹೇಳಿಕೆಗಳು ಅವರನ್ನು ಸಂಕಷ್ಟಕ್ಕೆ ಸಿಲುಕಿಸಿದ್ದು ಕೂಡ ಇದೆ. ಆದರೂ, ವಿವಾದಾತ್ಮಕ ಹೇಳಿಕೆಗಳನ್ನು ನೀಡುವುದನ್ನು ಮಾತ್ರ ನಿಲ್ಲಿಸಿಲ್ಲ. ಈಗ ಯಶ್ 'ಕೆಜಿಎಫ್ 2' ಬಗ್ಗೆ ಮತ್ತೆ ಕಾಮೆಂಟ್ ಮಾಡಿದ್ದಾರೆ.

ಭಾರತೀಯ ಚಿತ್ರರಂಗದಲ್ಲಿ ತನ್ನದೇ ವಿಶಿಷ್ಟ ಶೈಲಿಯ ಸಿನಿಮಾಗಳ ಮೂಲಕ ಸದ್ದು ಮಾಡಿದ್ದು ಇದೇ ರಾಮ್‌ ಗೋಪಾಲ್ ವರ್ಮಾ. ಆರ್‌ಜಿವಿ ನಿರ್ದೇಶನದ ಸಿನಿಮಾಗಳನ್ನು ನೋಡುವುದಕ್ಕೊಂದು ಪ್ರತ್ಯೇಕ ಫ್ಯಾನ್ ಬೇಸ್ ಇತ್ತು. ಅವರ ಇದೂವರೆಗೂ ನಿರ್ದೇಶಿಸಿದ ಹಲವು ಸಿನಿಮಾಗಳು ಕೇವಲ ಬಾಕ್ಸಾಫೀಸ್‌ನಲ್ಲಿ ಅಷ್ಟೇ ಅಲ್ಲ. ವಿಮರ್ಶಕರಿಂದಲೂ ಮೆಚ್ಚುಗೆ ಪಡೆದಿವೆ. ಅದಕ್ಕೆ ರಾಮ್‌ ಗೋಪಾಲ್ ವರ್ಮಾ ಸಿನಿಮಾಗಳಲ್ಲಿ ನಟಿಸುವುದಕ್ಕೆ ಹೀರೋ ಹೀರೋಯಿನ್ಸ್ ತುದಿಗಾಲಲ್ಲಿ ನಿಲ್ಲುತ್ತಿದ್ದರು.

Ram Gopal Varma said one producers feeling suffocated after 15 minutes of watching Yash s KGF 2

ಈಗ ಆರ್‌ಜಿವಿ ಸಿನಿಮಾ ಟೇಸ್ಟ್ ಬದಲಾಗಿದೆ. ಅದರಂತೆ ಅವರ ಇಮೇಜ್ ಕೂಡ ಬದಲಾಗಿದೆ. ಈಗ ಈ ನಿರ್ದೇಶಕನನ್ನು ವಿವಾದಾತ್ಮಕ ನಿರ್ದೇಶಕ ಅಂತಲೇ ಗುರುತಿಸುತ್ತಾರೆ. ಇತ್ತೀಚೆಗೆ ಆರ್‌ಜಿವಿ ಪಿಂಕ್‌ವಿಲ್ಲಾಗೆ ಒಂದು ಸಂದರ್ಶನವನ್ನು ನೀಡಿದ್ದರು. ಅದರಲ್ಲಿ ತಮ್ಮ ದಕ್ಷಿಣ ಭಾರತದ ಸಿನಿಮಾಗಳ ಬಗ್ಗೆ, 'ಪುಷ್ಪ 2' ಬಗ್ಗೆ, ಯಶ್ ನಟಿಸಿದ 'ಕೆಜಿಎಫ್ 2' ಬಗ್ಗೆ ಓಪನ್ ಆಗಿ ಮಾತಾಡಿದ್ದಾರೆ. ಅದೇನು ಅಂತ ನೋಡುವುದಾರೇ.

ರಾಮ್ ಗೋಪಾಲ್ ವರ್ಮಾ ಈ ಸಂದರ್ಶನದಲ್ಲಿ ಹಲವು ಸಂಗತಿಗಳ ಬಗ್ಗೆ ತಮ್ಮ ಅಭಿಪ್ರಾಯಗಳನ್ನು ಹಂಚಿಕೊಂಡಿದ್ದಾರೆ. ಅದರಲ್ಲೂ ಅಮಿತಾಭ್ ಬಚ್ಚನ್ ಸಿನಿಮಾಗಳನ್ನ ಓಪನ್ ಆಗಿ ಮಾತಾಡಿದ್ದಾರೆ. "ಅಮಿತಾಭ್ ಬಚ್ಚನ್ ಉತ್ತುಂಗದಲ್ಲಿ ಇದ್ದಾಗ , ನಾನು 70, 80ರ ದಶಕದ ಬಗ್ಗೆ ಮಾತಾಡುತ್ತೇನೆ. ಆಗ ದಕ್ಷಿಣ ಭಾರತದವರು ಹಿಂದಿ ಸಿನಿಮಾಗಳನ್ನು ಕಾಪಿ ಮಾಡುತ್ತಿದ್ದರು. ರಜನಿಕಾಂತ್ ಆಗ ಅಮಿತಾಭ್ ಬಚ್ಚನ್ ಸಿನಿಮಾಗಳನ್ನು ರಿಮೇಕ್ ಮಾಡುತ್ತಿದ್ದರು. ಚಿರಂಜೀವಿ, ಎನ್‌ಟಿ ರಾಮರಾವ್ ಇವರು ಅಮಿತಾಭ್ ಬಚ್ಚನ್ ಸಿನಿಮಾಗಳನ್ನು ರಿಮೇಕ್ ಮಾಡುತ್ತಿದ್ದರು. ಅವರು ಸಿನಿಮಾ ಮಾಡುವ ಕಲೆಯನ್ನು ಹಿಂದಿಯಿಂದಾನೇ ಕಲಿತಿದ್ದಾರೆ" ಎಂದು ಹೇಳಿದ್ದಾರೆ.

Ram Gopal Varma said one producers feeling suffocated after 15 minutes of watching Yash s KGF 2

ಅಮಿತಾಭ್ ಬಚ್ಚನ್ ಸಿನಿಮಾಗಳು ಉತ್ತುಂಗದಲ್ಲಿ ಇರುವಾಗಲೇ ಮ್ಯೂಸಿಕ್ ಕಂಪನಿಗಳು ಸಿನಿಮಾಗೆ ಹಣ ಹೂಡಲು ಬಂದವು. ಆಗ ಹಾಡುಗಳ ಕಡೆಗೆ ಹೆಚ್ಚು ಗಮನ ಕೊಟ್ಟರು. ಆಗ ಆಕ್ಷನ್ ಸಿನಿಮಾಗಳು ಸತ್ತು ಹೋದವು. ಆದರೆ, ದಕ್ಷಿಣ ಭಾರತದ ಸಿನಿಮಾಗಳು ಆಗಲೂ ಬದಲಾಗಲೇ ಇಲ್ಲ. ಮಸಾಲ ಸಿನಿಮಾಗಳನ್ನು ಮಾಡುವುದನ್ನು ಮುಂದುವರೆಸಿದ್ದವು. ಈ ಕಾರಣಕ್ಕೆ ದಕ್ಷಿಣ ಭಾರತದ ಸಿನಿಮಾಗಳಿಗೆ ಮಾಸ್ ಆಡಿಯನ್ಸ್ ಹೆಚ್ಚಾಗಿದ್ದಾರೆ ಎಂದಿದ್ದಾರೆ.

ಇದೇ ಸಂದರ್ಶನದಲ್ಲಿಯೇ 'ಪುಷ್ಪ' ಸಿನಿಮಾ ಜನಪ್ರಿಯ ನಿರ್ಮಾಪಕರೊಬ್ಬರು ಆಡಿದ ಮಾತನ್ನು ನೆನೆಪಿಸಿಕೊಂಡಿದ್ದಾರೆ. "ಪುಷ್ಪ 1 ಬಂದಾಗ ಒಬ್ಬರು ಜನಪ್ರಿಯ ನಿರ್ಮಾಪಕರು ಹೇಳಿದ್ದರು. ಈ ಸಿನಿಮಾ ರಿಲೀಸ್ ಆದಾಗ ಉತ್ತರ ಭಾರತದ ಜನರು ಇವರ ಮುಖಕ್ಕೆ ಉಗಿಯುತ್ತಾರೆ ಎಂದಿದ್ದರು. ಅಲ್ಲು ಅರ್ಜುನ್ ಅನ್ನು ಸಿಕ್ಸ್‌ಪ್ಯಾಕ್ಸ್‌ನಲ್ಲಿ, ಡ್ಯಾನ್ಸ್ ಮಾಡುತ್ತ ನೋಡಲು ಬಯಸುತ್ತಾರೆ. ಆದರೆ, ಇಂತಹ ಪಾತ್ರವನ್ನು ನೋಡಲು ಯಾಕೆ ಬಯಸುತ್ತಾರೆ ಅಂದಿದ್ದರು. ಆದ್ರೀಗ ಪುಷ್ಪ 1 ಮತ್ತು ಪುಷ್ಪ 2 ನೋಡಿದ ಬಳಿಕ ರಾತ್ರಿ ಕನಸು ಕಾಣುತ್ತಿರಬೇಕು." ಎಂದು ಲೇವಡಿ ಮಾಡಿದ್ದಾರೆ.

ಯಶ್ ನಟಿಸಿದ 'ಕೆಜಿಎಫ್ 2' ಸಿನಿಮಾ ನೋಡಿ ಮತ್ತೊಬ್ಬ ನಿರ್ಮಾಪಕ ಮಾಡಿದ ಕಾಮೆಂಟ್‌ಗಳನ್ನು ರಿವೀಲ್ ಮಾಡಿದ್ದಾರೆ. ಆರ್‌ಜಿವಿ ಜೊತೆ ಪೋನ್‌ನಲ್ಲಿ ಮಾತಾಡುತ್ತಿದ್ದ ನಿರ್ಮಾಪಕರೊಬ್ಬರು 'ಕೆಜಿಎಫ್ 2' ನೋಡಿ 15 ನಿಮಿಷ ಉಸಿಗಟ್ಟಿದಂತೆ ಆಯ್ತು ಎಂದಿದ್ದರಂತೆ. "ಒಬ್ಬರು ಜನಪ್ರಿಯ ನಿರ್ದೇಶಕರೊಂದಿಗೆ ನಾನು ಫೋನ್‌ನಲ್ಲಿ ಮಾತಾಡುತ್ತಿದ್ದೆ. ಆಗ ಅವರು ಹೇಳಿದರು. ನಾನು ಕೆಜಿಎಫ್ 2 ನೋಡಲು ಪ್ರಯತ್ನ ಪಟ್ಟೆ. 15 ಆದ್ಮೇಲೆ ನನಗೆ ನೋಡುವುದಕ್ಕೆ ಆಗಲಿಲ್ಲ. ನಾನು ಬಾಲ್ಕನಿಯಲ್ಲಿ ನಿಂತು ಜೋರಾಗಿ ಉಸಿರು ಎಳೆದುಕೊಂಡೆ. ಪ್ರಾಣಯಾಮ ತರಹದ್ದೇನೋ ಮಾಡಿದ್ದಾರೆ. ಅದಾದ್ಮೇಲೆ ಬಂದು ಇನ್ನೊಂದು 15-20 ನಿಮಿಷ ಸಿನಿಮಾ ನೋಡಿದ್ದರು. ಆಗ ಅವರಿಗೆ ಎದ್ದೋಗಿ ಸ್ನಾನ ಮಾಡಬೇಕು ಅಂತ ಅನಿಸಿತ್ತಂತೆ. ಇಂಟರ್‌ವಲ್ ನಂತರ ನೋಡುವುದಕ್ಕೆ ಆಗಲಿಲ್ಲ ಎಂದಿದ್ದರು." ಎಂದು ಇದೇ ಸಂದರ್ಶನದಲ್ಲಿ ಹೇಳಿದ್ದಾರೆ.

'ಕೆಜಿಎಫ್ 2' ಸಿನಿಮಾ ಬಾಕ್ಸಾಫೀಸ್‌ನಲ್ಲಿ ಸಕ್ಸಸ್ ಆಯ್ತು. ಹೀಗಾಗಿ ಸಿನಿಮಾದ ಕಟೆಂಟ್ ಬಗ್ಗೆ ಚರ್ಚೆ ಮಾಡಲು ಸಾಧ್ಯವಿದೆ. ಆದರೆ, ಸಕ್ಸಸ್ ಬಗ್ಗೆ ಚರ್ಚೆ ಮಾಡುವುದಕ್ಕೆ ಸಾಧ್ಯವಿಲ್ಲ ಎಂದು ಪಿಂಕ್ ವಿಲ್ಲಾ ಸಂದರ್ಶನದಲ್ಲಿ ಆರ್‌ಜಿವಿ ಹೇಳಿದ್ದಾರೆ.

More from Filmibeat

English summary
Ram Gopal Varma comments on the unsettling reactions of some producers after only 15 minutes of viewing Yash's KGF 2
Read more about: kgf 2 ram gopal varma yash
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X