'ಅಮೆರಿಕಾ ಅಮೆರಿಕಾ'ಗೆ 30 ವರ್ಷ;"ನನ್ನನ್ನೇ ರೂಪಿಸಿದ ಸಿನಿಮಾ" ಎನ್ನುತ್ತಲೇ ಪಾರ್ಟ್ 2 ಸುಳಿವು ಕೊಟ್ಟ ನಾಗತಿಹಳ್ಳಿ ಚಂದ್ರಶೇಖರ್
ಕನ್ನಡ ಚಿತ್ರರಂಗ ಕಂಡ ಎವರ್‌ಗ್ರೀನ್ ಸಿನಿಮಾಗಳ ಸಾಲಿಗೆ ಸೇರಿಸಬಹುದಾದ ಚಿತ್ರ 'ಅಮೆರಿಕಾ ಅಮೆರಿಕಾ'. ನಾಗತಿಹಳ್ಳಿ ಚಂದ್ರಶೇಖರ್ ನಿರ್ದೇಶಿಸಿದ್ದ ಈ ಸಿನಿಮಾ ಸ್ಯಾಂಡಲ್‌ವುಡ್‌ನ ಬೆಸ್ಟ್ ಸಿನಿಮಾಗಳಲ್ಲಿ ಒಂದು. ರಮೇಶ್ ಅರವಿಂದ್, ಹೇಮಾ ಪ್ರಭಾತ್, ಅಕ್ಷಯ್ ಆನಂದ್ ಪ್ರಮುಖ ಪಾತ್ರದಲ್ಲಿ ನಟಿಸಿದ್ದರು. ಈ ಸಿನಿಮಾ ಗಳಿಕೆಯಲ್ಲಷ್ಟೇ ಅಲ್ಲ, ಜನರ ಮೆಚ್ಚುಗೆ ಗಳಿಸುವಲ್ಲಿ ಯಶಸ್ವಿಯಾಗಿತ್ತು.
'ಅಮೆರಿಕಾ ಅಮೆರಿಕಾ' ರಿಲೀಸ್ ಆಗಿ ಇಂದಿಗೆ 30 ವರ್ಷಗಳನ್ನು ಪೂರೈಸಿದೆ. 1997, ಏಪ್ರಿಲ್ 11ರಂದು ಅದ್ಧೂರಿಯಾಗಿ ರಾಜ್ಯಾದ್ಯಂತ ರಿಲೀಸ್ ಆಗಿತ್ತು. ಸಿನಿಮಾದ ಕಥೆ, ಚಿತ್ರಕಥೆ, ಹಾಡುಗಳಿಂದ ಹಿಡಿದು ಪ್ರತಿಯೊಂದು ಪ್ರೇಕ್ಷಕರಿಗೆ ಇಷ್ಟ ಆಗಿತ್ತು. ಅಂದಿನಿಂದ ಇಂದಿನವರೆಗೂ ಸಿನಿಮಾದ ಹಾಡುಗಳು, ಸೀನ್‌ಗಳನ್ನು ಇಷ್ಟ ಪಡುವ ಜನರು ಇದ್ದಾರೆ. ಇನ್ನು "ನೂರು ಜನ್ಮಕೂ.." ಹಾಡನ್ನಂತೂ ಇಂದಿಗೂ ಗುನುಗುತ್ತಲೇ ಇರುತ್ತಾರೆ.

ಈ ಸಿನಿಮಾದ ಶೇ.80ಕ್ಕೂ ಅಧಿಕ ಭಾಗದ ಶೂಟಿಂಗ್ ಅನ್ನು ಅಮೆರಿಕದ ಸ್ಯಾನ್ ಫ್ರಾನ್ಸಿಸ್ಕೋದಲ್ಲಿ ಶೂಟಿಂಗ್ ಮಾಡಿರೋದು ಮತ್ತೊಂದು ವಿಶೇಷ. ಈ ಸಿನಿಮಾದ ಪ್ರಮುಖ ಪಾತ್ರದಲ್ಲಿ ರಮೇಶ್ ಅರವಿಂದ್, ಹೇಮಾ ಪ್ರಭಾಸ್, ಅಕ್ಷಯ್ ಅಕ್ಷಯ್ ಆನಂದ್ ಜೊತೆಗೆ ಎಚ್‌ಜಿ ದತ್ತಾತ್ರೇಯ, ವೈಶಾಲಿ ಕಾಸರವಳ್ಳಿ, ಸಿಆರ್ ಸಿಂಹ, ಶಿವರಾಮ್ ಸೇರಿದಂತೆ ದೊಡ್ಡ ತಾರಾಬಳಗವೇ ಇದೆ. ಈ ಶುಭ ದಿನದಂದು ನಾಗತಿಹಳ್ಳಿ ಚಂದ್ರಶೇಖರ್ ತಮ್ಮ ನೆನೆದುಕೊಂಡು 'ಅಮೆರಿಕಾ ಅಮೆರಿಕಾ' ಪಾರ್ಟ್ 2 ಶ್ರೀಘ್ರದಲ್ಲಿಯೇ ರಿಲೀಸ್ ಆಗುವ ಸುಳಿವು ನೀಡಿದ್ದಾರೆ.
ನಾಗತಿಹಳ್ಳಿ ಚಂದ್ರಶೇಖರ್ ತಮ್ಮ ಇನ್‌ಸ್ಟಾಗ್ರಾಂನಲ್ಲಿ ಖಾತೆಯಲ್ಲಿ 'ಅಮೆರಿಕಾ ಅಮೆರಿಕಾ' ಸಿನಿಮಾ 30 ವರ್ಷಗಳನ್ನು ಪೂರೈಸಿದ ಸಂಭ್ರಮವನ್ನು ಹಂಚಿಕೊಂಡಿದ್ದಾರೆ. ಹಾಗೆ ಸದ್ದಿಲ್ಲದೆ ಮಾಡುತ್ತಿರುವ 'ಅಮೆರಿಕಾ ಅಮೆರಿಕಾ' ಸಿನಿಮಾದ ಪಾರ್ಟ್ 2 ಬಗ್ಗೆನೂ ಸುಳಿವು ನೋಡಿದ್ದಾರೆ. ಕಳೆದ ಕೆಲವು ದಿನಗಳಿಂದ ಈ ಸಿನಿಮಾ ಶೂಟಿಂಗ್ ಮಾಡುತ್ತಿದ್ದಾರೆ. ಆದರೆ, ಸಿನಿಮಾ ಯಾವುದೇ ಗುಟ್ಟನ್ನು ಬಿಟ್ಟುಕೊಟ್ಟಿರಲಿಲ್ಲ. ಈ ಶುಭ ಸಂದರ್ಭದಲ್ಲಿ ಚಿಕ್ಕದೊಂದು ಸುಳಿವು ನೀಡಿದ್ದಾರೆ.
ನಾಗತಿಹಳ್ಳಿ ತಮ್ಮ ಇನ್‌ಸ್ಟಾಗ್ರಾಂ ಖಾತೆಯಲ್ಲಿ 'ಅಮೆರಿಕಾ ಅಮೆರಿಕಾ' ಸಿನಿಮಾ ಬಗ್ಗೆ ಹೀಗೆ ಬರೆದು ಪೋಸ್ಟ್ ಮಾಡಿದ್ದಾರೆ."ನಾನು ರೂಪಿಸಿದ್ದಲ್ಲ; ನನ್ನನ್ನೇ ರೂಪಿಸಿದ ಸಿನಿಮಾ! ಕೋಟಿ ಕೋಟಿ ಕಂಗಳಿಗೆ ಕನಸು ಕೊಟ್ಟ ಸಿನಿಮಾ. ಕೋಟಿ ಕೋಟಿ ಮನಗಳಿಗೆ ಮಮಕಾರವಿತ್ತ ಸಿನಿಮಾ. ಕನ್ನಡ ಜನತೆಗೆ ಕೋಟಿ ಕೋಟಿ ಕೃತಜ್ಞತೆಗಳು. ಬಿಡುಗಡೆಯಾದ ದಿನಾಂಕಃ 11-04-1997" ಎಂದು ನಾಗತಿಹಳ್ಳಿ ಚಂದ್ರಶೇಖರ್ ಬರೆದುಕೊಂಡಿದ್ದಾರೆ.
ಒಂದು ಮೆಗಾ ಹಿಟ್ ಕಂಡ ಸಿನಿಮಾದ ಸೀಕ್ವೆಲ್ ಈಗಿನದ್ದಲ್ಲ. ಹಿಂದಿನಿಂದಲೂ ಸಿನಿಮಾ ಮಂದಿ ಸೀಕ್ವೆಲ್ ಅನ್ನು ಮಾಡಿಕೊಂಡು ಬಂದಿದ್ದಾರೆ. ಅದು ಅದು ಕನ್ನಡ ಚಿತ್ರರಂಗಕ್ಕೂ ಹೊಸದೇನು ಅಲ್ಲ. ಆದರೆ, ನಾಗತಿಹಳ್ಳಿ ಚಂದ್ರಶೇಖರ್ 'ಅಮೆರಿಕಾ ಅಮೆರಿಕಾ' ದಂತಹ ಮೆಗಾ ಹಿಟ್ ಕೊಟ್ಟಿದ್ದರೂ, ಸೀಕ್ವೆಲ್ ಮಾಡುವ ಗೋಜಿಗೆ ಹೋಗಿರಲಿಲ್ಲ. ಸಿನಿಮಾ ರಿಲೀಸ್ ಆಗಿ 30 ವರ್ಷಗಳನ್ನು ಪೂರೈಸಿದ ಬಳಿಕ ಸೀಕ್ವೆಲ್‌ಗೆ ಬಿಡುಗಡೆ ಸಿದ್ಧತೆಗಳನ್ನು ಮಾಡಿಕೊಂಡಿದ್ದಾರೆ.
ಇನ್ನು 'ಅಮೆರಿಕಾ ಅಮೆರಿಕಾ ' 30 ವರ್ಷಗಳ ಬಳಿಕ ಸೀಕ್ವೆಲ್ ಆಗುತ್ತಿರುವುದರಿಂದ ಯುವ ನಟರನ್ನು ಹಾಕಿಕೊಂಡು ನಾಗತಿಹಳ್ಳೀ ಚಂದ್ರಶೇಖರ್ ಸಿನಿಮಾ ಮಾಡುತ್ತಿದ್ದಾರೆ. ಸದ್ಯಕ್ಕೆ ಸಿಕ್ಕಿರೋ ಮಾಹಿತಿ ಪ್ರಕಾರ, 'ಅಮೆರಿಕಾ ಅಮೆರಿಕಾ 2'ನಲ್ಲಿ ಪೃಥ್ವಿ ಅಂಬರ್, ನಿರೂಪ್ ಭಂಡಾರಿ ಹಾಗೂ ಶಾನ್ವಿ ಶ್ರೀವತ್ಸವ್ ಪ್ರಮುಖ ಪಾತ್ರದಲ್ಲಿ ನಟಿಸುತ್ತಿದ್ದಾರೆ. ಈ ಮೂವರು ರಮೇಶ್ ಅರವಿಂದ್, ಅಕ್ಷಯ್ ಆನಂದ್ ಹಾಗೂ ಹೇಮಾ ಪ್ರಭಾತ್ ಅವರ ಜಾಗವನ್ನು ಆವರಿಸಿಕೊಂಡಿದ್ದಾರೆ.


Click it and Unblock the Notifications















