ಎವರ್‌ಗ್ರೀನ್ ಕಾಮಿಡಿ ಸಿನಿಮಾ 'ಉಲ್ಟಾ ಪಲ್ಟಾ'ಗೆ 25 ವರ್ಷ: ಇಲ್ಲಿವೆ ಇಂಟ್ರೆಸ್ಟಿಂಗ್ ವಿಷಯಗಳು!
ಸ್ಯಾಂಡಲ್‌ವುಡ್‌ನ ಎವರ್‌ಗ್ರೀನ್ ಸಿನಿಮಾಗಳಲ್ಲಿ 'ಉಲ್ಟಾ ಪಲ್ಟಾ' ಸಿನಿಮಾ ವಿಶಿಷ್ಠವಾಗಿ ವಿಶೇಷವಾದ ಸ್ಥಾನದಲ್ಲಿ ನಿಲ್ಲುತ್ತೆ. ಚಿತ್ರರಂಗದ ಇತಿಹಾಸದಲ್ಲಿ ಈ ಸಿನಿಮಾ ಬರೆದ ಚರಿತ್ರೆ ಕೂಡ ಅಷ್ಟೇ ವಿಶೇಷ. ಕಾಮಿಡಿ ಸಿನಿಮಾವೊಂದು ಹಲವು ದಾಖಲೆಗಳನ್ನೂ ಬರೆದು ಸೈ ಎನಿಸಿಕೊಂಡಿತ್ತು.
'ಉಲ್ಟಾ ಪಲ್ಟಾ' ಈ ಸಿನಿಮಾ ಸಿನಿಮಾ ಟೆಕ್ನಿಷಿಯನ್‌ಗಳೇ ಸೇರಿಕೊಂಡು ನಿರ್ಮಿಸಿದ ಸಿನಿಮಾ. ರಮೇಶ್ ಅರವಿಂದ್ ಡಬಲ್ ರೋಲ್‌ನಲ್ಲಿ ನಟಿಸಿದ ಈ ಸಿನಿಮಾ ಬಾಕ್ಸಾಫೀಸ್‌ನಲ್ಲೂ ಸಖತ್ತಾಗಿಯೇ ಸೌಂಡ್ ಮಾಡಿತ್ತು. ಇದೇ ಸಿನಿಮಾ ಇಂದಿಗೆ (ಸೆಪ್ಟೆಂಬರ್ 19) ಬರೋಬ್ಬರಿ 25 ವರ್ಷಗಳನ್ನು ಪೂರೈಸಿದೆ.
ಪತ್ರಕರ್ತರು, ಲೇಖಕರೂ ಆಗಿದ್ದ ಎನ್ ಎಸ್ ಶಂಕರ್ ಈ ಸಿನಿಮಾವನ್ನು ನಿರ್ದೇಶಿಸಿದ್ದರು. ಈ ಸಿನಿಮಾದ ಕಥೆ ಹುಟ್ಟಿದ್ದು, ಸಿನಿಮಾ ನಿರ್ಮಾಣವಾಗಿದ್ದು, ಸಿನಿಮಾ ಯಶಸ್ಸು ಕಂಡಿದ್ದು ಎಲ್ಲವೂ ರೋಚಕವೇ. ಈಗ 25 ವರ್ಷಗಳನ್ನು ಪೂರೈಸಿದ ಈ ಸಂದರ್ಭದಲ್ಲಿ 'ಉಲ್ಟಾ ಪಲ್ಟಾ' ಸಿನಿಮಾದ ಇಂಟ್ರೆಸ್ಟಿಂಗ್ ವಿಷಯಗಳು ಇಲ್ಲಿವೆ.

ಒಂದೇ ವರ್ಷ ಮೂರು ಸಂಭ್ರಮ
'ಉಲ್ಟಾ ಪಲ್ಟಾ' ಸಿನಿಮಾ 1997ರಲ್ಲಿ ನಿರ್ದೇಶಕ ಎನ್‌ಎಸ್ ಶಂಕರ್ ಹುಟ್ಟುಹಬ್ಬ ಮಾರ್ಚ್ 10ರಂದು ಸೆಟ್ಟೇರಿತ್ತು. ಅದೇ ವರ್ಷ, ಅಂದ್ರೆ ಇಂದಿಗೆ (ಸೆಪ್ಟೆಂಬರ್ 19) 25 ವರ್ಷಗಳ ಹಿಂದೆ ಸಿನಿಮಾ ರಿಲೀಸ್ ಕೂಡ ಆಗಿತ್ತು. ಡಿಸೆಂಬರ್ ತಿಂಗಳಲ್ಲಿ ಈ ಸಿನಿಮಾ 100 ದಿನಗಳನ್ನೂ ಪೂರೈಸಿತ್ತು. ಹೀಗಾಗಿ 'ಉಲ್ಟಾ ಪಲ್ಟಾ' ತಂಡಕ್ಕೆ ಒಂದೇ ವರ್ಷದಲ್ಲಿ ಮೂರು ಮೂರು ಸಂಭ್ರಮವನ್ನು ಅನುಭವಿಸುವ ಖುಷಿ ಸಿಕ್ಕಿತ್ತು.

9 ತಂತ್ರಜ್ಞರಿಂದ ಹುಟ್ಟಿದ 'ಉಲ್ಟಾ ಪಲ್ಟಾ'
'ಉಲ್ಟಾ ಪಲ್ಟಾ' ಒಂದು ಪ್ರಯೋಗಾತ್ಮಕ ಸಿನಿಮಾ ಆಗಿತ್ತು. 9 ಮಂದಿ ತಂತ್ರಜ್ಞರು ಸೇರಿ ಈ ಸಿನಿಮಾ ಮಾಡುವುದಕ್ಕೆ ಸಜ್ಜಾಗಿದ್ದರು. ಆದರೆ, ಏಳು ಮಂದಿಯಷ್ಟೇ ನಿರ್ಮಾಪಕರಾಗಿ ಉಳಿದುಕೊಂಡರು. ಸಂಗೀತ ನಿರ್ದೇಶಕ ವಿ. ಮನೋಹರ್, ಛಾಯಾಗ್ರಾಹಕ ಅಶೋಕ್ ಕಶ್ಯಪ್, ಸಂಕಲನಗಾರ ಗುಣ, ಸಹಾಯಕ ವಿಜಯ್ ಪ್ರಸಾದ್, ಸುಬ್ರಹ್ಮಣ್ಯ, ಮೈನಾ ಹಾಗೂ ನಿರ್ದೇಶಕ ಎನ್ ಎಸ್ ಶಂಕರ್ ಕೂಡ ಏಳು ಮಂದಿ ನಿರ್ಮಾಪಕರಲ್ಲಿ ಒಬ್ಬರಾಗಿದ್ದರು.

ಪಿಲಂಕೇಶ್ ಮುಹೂರ್ತಕ್ಕೆ ಗೆಸ್ಟ್
'ಉಲ್ಟಾ ಪಲ್ಟಾ' ಸಿನಿಮಾದ ಮುಹೂರ್ತಕ್ಕೆ ಖ್ಯಾತ ಸಾಹಿತಿ ಪಿ ಲಂಕೇಶ್ ಪ್ರಮುಖ ಅತಿಥಿಯಾಗಿ ಆಗಮಿಸಿದ್ದರು. ಆ ವೇಳೆಗೆ ನಿರ್ದೇಶಕ ಎನ್ ಎಸ್ ಶಂಕರ್ ಲಂಕೇಶ್ ಪತ್ರಿಕೆಯಲ್ಲಿ ಪತ್ರಕರ್ತರಾಗಿ ಕೆಲಸ ಮಾಡುತ್ತಿದ್ದರು. ಸಿನಿಮಾ ನಿರ್ದೇಶಕನಕ್ಕೆ ಇಳಿದಾಗ ಅವರನ್ನು ಅತಿಥಿಯಾಗಿ ಕರೆದುಕೊಂಡು ಬಂದಿದ್ದರು.

ಸಿನಿಮಾ ಮುಗಿಯೋ ಬಗ್ಗೆ ನಂಬಿಕೆ ಇರಲಿಲ್ಲ
ರಮೇಶ್ ಅರವಿಂದ್ ಈ ಸಿನಿಮಾದಲ್ಲಿ ಡಬಲ್ ರೋಲ್‌ನಲ್ಲಿ ಕಾಣಿಸಿಕೊಂಡಿದ್ದರು. ಆದರೆ ರಮೇಶ್ ಅರವಿಂದ್‌ಗೆ ಈ ಸಿನಿಮಾ ಮುಗಿಯುತ್ತೆ ಅನ್ನೋ ನಂಬಿಕೆನೇ ಇರಲಿಲ್ಲವಂತೆ. ಸಿನಿಮಾ ಆರಂಭದಲ್ಲಿಯೇ ವಿಘ್ನಗಳು ಎದುರಾಗಿದ್ದವು. ಇವರ ಗುಂಪು ಒಡೆದು ಹೋಗಿತ್ತು. ಪ್ರತಿಯೊಬ್ಬರಲ್ಲಿಯೂ ಭಿನ್ನಾಭಿಪ್ರಾಯ ಮೂಡಿತ್ತು. ಆದರೂ ಹೇಗೆ ಸಂಭಾಳಿಸಿಕೊಂಡು ಈ ಸಿನಿಮಾವನ್ನು ಮಾಡಿ ಮುಗಿಸಿದ್ದರು. ಸಿನಿಮಾ ತೆರೆಕಂಡ ಬಳಿಕ ದೊಡ್ಡ ಇತಿಹಾಸವೇ ಸೃಷ್ಟಿಯಾಗಿತ್ತು.

ಎರಡು ಭಾಷೆಗಳಿಗೆ ರಿಮೇಕ್
'ಉಲ್ಟಾ ಪಲ್ಟಾ' ನಿರೀಕ್ಷೆಗೂ ಮೀರಿ ಯಶಸ್ವಿಯಾಗಿತ್ತು. ಬಿಡುಗಡೆಯಾಗದ ಹಲವು ಚಿತ್ರಮಂದಿಗಳಲ್ಲಿ ಸಿನಿಮಾ 100 ದಿನಗಳನ್ನು ಪೂರೈಸಿತ್ತು. ಇದು ಶೇಕ್‌ಸ್ಪೀಯರ್ ಬರೆದ 'ದಿ ಕಾಮಿಡಿ ಆಫ್ ಎರರ್' ಅನ್ನು ಆಧರಿಸಿತ್ತು. ಕನ್ನಡದಲ್ಲಿ ಸಿನಿಮಾ ಯಶಸ್ವಿಯಾದ ಬೆನ್ನಲ್ಲೇ ಇದೇ ಹೆಸರಿನಲ್ಲೇ ತೆಲುಗಿಗೆ ರಿಮೇಕ್ ಆಯ್ತು. 'ಅಂಬುಟ್ಟು ಇಂಬುಟ್ಟು ಎಂಬುಟ್ಟು' ಅನ್ನೋ ಹೆಸರಿನಲ್ಲಿ ತಮಿಳಿಗೆ ರಿಮೇಕ್ ಆಗಿತ್ತು.


Click it and Unblock the Notifications











