ರಮ್ಯಾ ಜೊತೆ ನಟಿಸಿದ ಬೆಂಗಳೂರಿನ ಹೀರೋ 22 ಫ್ಲಾಪ್ ಕೊಟ್ಟು ಸಿನಿಮಾನೇ ಬಿಟ್ಟ; ಜೂಸ್ ಮಾರಿ ₹82 ಕೋಟಿ ದುಡಿದ!

ಈ ಹೀರೋ ಸಿನಿಮಾರಂಗಕ್ಕೆ ಎಂಟ್ರಿ ಕೊಟ್ಟಾಗಲೇ ಅದೆಷ್ಟೋ ಹುಡುಗಿಯರ ಹೃದಯ ಕದ್ದಾಗಿತ್ತು. ಈ ಹ್ಯಾಂಡ್‌ಸಮ್ ಹೀರೋ ಚಿತ್ರರಂಗದಲ್ಲಿ ದೊಡ್ಡ ಹೆಸರು ಮಾಡುತ್ತಾನೆ ಅಂತ ದಿಗ್ಗಜರು ಭವಿಷ್ಯ ನುಡಿದಿದ್ದರು. ಒಮ್ಮೆ ಈ ನಟನ ಸಿನಿಮಾ ನೋಡಿ ಶಾರುಖ್‌ ಖಾನ್ ಮೆಚ್ಚುಗೆ ಸೂಚಿದ್ದರು. ಇಷ್ಟೊಂದು ಭರವಸೆ ಮೂಡಿಸಿದ ನಟ ಬರೋಬ್ಬರಿ 22 ಪ್ಲಾಪ್ ಸಿನಿಮಾಗಳನ್ನು ಕೊಟ್ಟು ಚಿತ್ರರಂಗದಿಂದ ದೂರ ಉಳಿದುಬಿಟ್ಟ.

ಈ ನಟನ ವೃತ್ತಿ ಬದುಕಿನಲ್ಲಿ ಸರಿಯಾಗಿ ಸೂಪರ್ ಹಿಟ್ ಅಂತ ಸಿಕ್ಕಿದ್ದು ಒಂದೇ ಸಿನಿಮಾ. ಅದು ಬಾಲಿವುಡ್‌ ಸಿನಿಮಾ 'ರಾಝ್'. ಹೌದು, ಈ ಸಿನಿಮಾದ ನಾಯಕ ಡಿನೋ ಮೋರಿಯಾ. ಮಾಡಲಿಂಗ್ ಮಾಡಿಕೊಂಡಿದ್ದ ಈ ನಟ ಬೆಂಗಳೂರಿನ ಹುಡುಗನನ್ನು 1999ರಲ್ಲಿ ಬಾಲಿವುಡ್‌ ಕೈ ಬೀಸಿ ಕರೀತು. ಯುವಕರಿಗಾಗಿಯೇ ಮಾಡಿದ ಸಿನಿಮಾ 'ಪ್ಯಾರ್ ಮೇ ಕಭಿ ಕಭಿ' ಅಷ್ಟಾಗಿ ಸದ್ದು ಮಾಡದೇ ಹೋದರೂ ಸಿನಿಮಾ ಪ್ರೇಮಿಗಳಿಗೆ ಇಷ್ಟ ಆಗಿದ್ದರು.

Ramya a co-actor who gave 22 flop movies became successful after launching a juice brand

ಇಲ್ಲಿಂದ ಬಾಲಿವುಡ್‌ನಲ್ಲಿ ಡಿನೋ ಮೋರಿಯಾ ಬಗ್ಗೆ ಚರ್ಚೆಗಳು ಶುರುವಾದವು. ನಿರ್ಮಾಣ ಸಂಸ್ಥೆಗಳು ಈ ನಟನ ಹಿಂದೆ ಬಿದ್ದವು. ಆದರೆ, ಒಂದು ಸೂಪರ್ ಹಿಟ್ ಸಿನಿಮಾದ ಹೊರತಾಗಿ ನಾಯಕ ನಟಿಸಿದ 22 ಸಿನಿಮಾಗಳು ಮಕಾಡೆ ಮಲಗಿದವು. ಸಿನಿಮಾರಂಗದಲ್ಲಿ ಆಫರ್ ಕಡಿಮೆ ಆಯ್ತು. ಲವ್ ಬ್ರೇಕಪ್ ಆಗಿತ್ತು. ಆಗಲೇ ಚಿತ್ರರಂಗದಿಂದ ದೂರ ಉಳಿದ ನಟ ಜ್ಯೂಸ್ ಮಾರುವುದಕ್ಕೆ ನಿರ್ಧರಿಸಿದ್ದರು. ಅದೇ ನಟ ಡಿನೋ ಮೋರಿಯಾ ಕೈ ಹಿಡಿದಿದೆ.

ಬೆಂಗಳೂರನಲ್ಲಿ ಶಿಕ್ಷಣ ಪಡೆದು, ಮಾಡಲ್ ಆಗುವವರೆಗೂ ಇಲ್ಲಿಯೇ ನೆಲೆಸಿದ್ದ ನಟ ಡಿನೋ ಮೋರಿಯಾ. ಈಗ ಮುಂಬೈನಲ್ಲಿ ವಾಸವಿದ್ದಾರೆ. ಬಾಲಿವುಡ್‌ನಲ್ಲಿ ಹೆಚ್ಚಾಗಿ ನಟಿಸಿದ್ದ ನಟ ದಕ್ಷಿಣ ಭಾರತದ ಸಿನಿಮಾಗಳಲ್ಲೂ ನಟಿಸಿದ್ದರು. ತೆಲುಗು ಸಿನಿಮಾಗಳಲ್ಲಿ ಖಳನಾಯಕನಾಗಿ ಕಾಣಿಸಿಕೊಂಡಿದ್ದೂ ಇದೆ. ಹಾಗೇ ಒಂದು ಕನ್ನಡದ ಸಿನಿಮಾದಲ್ಲಿಯೂ ನಟಿಸಿದ್ದರು. ಅದು ಮೋಹಕತಾರೆ ರಮ್ಯಾ ಜೊತೆಗೆ..

Ramya a co-actor who gave 22 flop movies became successful after launching a juice brand

2006ರಲ್ಲಿ ಕನ್ನಡದಲ್ಲಿ ಸೂಪರ್ ಹಿಟ್ ಸಿನಿಮಾ 'ಜೂಲಿ'ಯನ್ನು ರೀಮೇಕ್ ಮಾಡಲಾಗಿತ್ತು. ಹಿರಿಯ ನಟಿ ಲಕ್ಷ್ಮಿ ನಟಿಸಿದ್ದ ಪಾತ್ರದಲ್ಲಿ ಮೋಹಕತಾರೆ ರಮ್ಯಾ ಕಾಣಿಸಿಕೊಂಡಿದ್ದರು. ಈ ಸಿನಿಮಾಗೆ ಡಿನೋ ಮೋರಿಯಾ ನಾಯಕನಾಗಿ ಆಯ್ಕೆಯಾಗಿದ್ದರು. ಆದರೆ, ಈ ಸಿನಿಮಾ ಕೂಡ ಗೆಲ್ಲಲಿಲ್ಲ. ಒರಿಜಿನಲ್ 'ಜೂಲಿ' ಸಿನಿಮಾಗೆ ಹೋಲಿಕೆ ಮಾಡಿ ಟೀಕಿಸಲಾಯಿತು. ಹೀಗಾಗಿ ಕನ್ನಡದಲ್ಲಿ ನಟಿಸಿದ ಏಕೈಕ ಸಿನಿಮಾ ಕೂಡ ಫ್ಲಾಪ್ ಲಿಸ್ಟ್ ಸೇರಿತ್ತು. ಹೀಗಾಗಿ ಸಿನಿಮಾದಿಂದ ದೂರ ಸರಿಯಬೇಕಾಯ್ತು.

2012ರಲ್ಲಿ ಡಿನೋ ಮೋರಿಯಾ ಭಾರತ ಕ್ರಿಕೆಟ್ ತಂಡದ ಕ್ಯಾಪ್ಟನ್ ಕೂಲ್ ಎಂಎಸ್ ಧೋನಿ ಜೊತೆ ಸೇರಿ 'ಕೂಲ್ ಮಾಲ್' ಅನ್ನುವ ಕಂಪನಿಯನ್ನು ಶುರು ಮಾಡಿದ್ದರು. ಅದೇ ವೇಳೆ ಕ್ಲಾಕ್ ವೈಸ್ ಫಿಲ್ಮ್ಸ್ ಅನ್ನುವ ನಿರ್ಮಾಣ ಸಂಸ್ಥೆಯನ್ನು ಶುರು ಮಾಡಿದ್ದರು. ಅದರ ಮೂಲಕ 'ಜಿಸ್ಮ್ 2' ಸಿನಿಮಾವನ್ನು ನಿರ್ಮಾಣ ಮಾಡಿದ್ದರು. ಅದು ಬಾಕ್ಸಾಫೀಸ್‌ನಲ್ಲಿ ತಕ್ಕ ಮಟ್ಟಿಗೆ ಹಿಟ್ ಅಂತ ಸಾಬೀತಾಯ್ತು. ಆ ಬಳಿಕವೇ ತನಗೆ ಆತ್ಮೀಯರಾಗಿದ್ದವರೊಂದಿಗೆ ಸೇರಿಕೊಂಡು 'ಫ್ರೆಶ್ ಪ್ರೆಸ್' ಅನ್ನುವ ಜ್ಯೂಸ್ ಬ್ರ್ಯಾಂಡ್ ಅನ್ನು ಹುಟ್ಟಾಕಿದ್ದರು.

2018ರಲ್ಲಿ ಶುರುವಾಗಿದ 'ಫ್ರೆಶ್ ಪ್ರೆಸ್' ಸುಮಾರು 36 ಮಳಿಗೆಗಳನ್ನು ಓಪನ್ ಮಾಡಿದೆ. ಸದ್ಯ ಭಾರತದ ಹಲವು ರಾಜ್ಯಗಳಲ್ಲಿ ವಿಸ್ತರಿಸುವ ಆಲೋಚನೆ ನಡೆಯುತ್ತಿದೆ ಎಂದು ವರದಿಯಾಗಿದೆ. ಹಾಗೇ ಡಿನೋ ಮೋರಿಯಾ ಇದರಿಂದ ₹82 ಕೋಟಿ ಸಂಪಾದನೆ ಮಾಡಿದ್ದಾರೆಂದು ವರದಿಯಾಗಿದೆ. 2024ರಲ್ಲಿ ಈ ಕಂಪನಿ 6.5 ಕೋಟಿ ರೂ. ಬ್ಯುಸಿನೆಸ್ ಮಾಡಿದ್ದು, 2025ಕ್ಕೆ 15 ಕೋಟಿ ರೂ. ಟಾರ್ಗೆಟ್ ಇಟ್ಟುಕೊಂಡಿದೆ ಎನ್ನಲಾಗಿದೆ. ಅಂದ್ಹಾಗೆ ಕಳೆದ ವರ್ಷ ತೆಲುಗಿನ 'ಏಜೆಂಟ್' ಸಿನಿಮಾ ಮೂಲಕ ಕಮ್‌ಬ್ಯಾಕ್ ಮಾಡಿದ್ದರು. ಆದರೆ ಆ ಸಿನಿಮಾ ಕೂಡ ಗೆಲ್ಲಲಿಲ್ಲ.

More from Filmibeat

English summary
Ramya, a co-actor who gave 22 flop movies, became successful after launching a juice brand;
Read more about: ramya business
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X