ಸಲ್ಲು ಜೊತೆ ನಟಿಸುವುದಕ್ಕೂ ಮುನ್ನ ರವೀನಾ 5-6 ಸಿನಿಮಾ ರಿಜೆಕ್ಟ್ ಮಾಡಿದ್ದೇಕೆ? ಅಂಥಾ ಕಾರಣ ಏನಿತ್ತು?

90ರ ದಶಕದ ಆರಂಭದಲ್ಲಿಯೇ ಚಿತ್ರರಂಗಕ್ಕೆ ಎಂಟ್ರಿ ಕೊಟ್ಟ ನಟಿ ರವೀನಾ ಟಂಡನ್. ಇಲ್ಲಿಂದ ಸುಮಾರು 15 ವರ್ಷಗಳ ಕಾಲ ಚಿತ್ರರಂಗದಲ್ಲಿ ಮೆರೆದ ನಟಿಯೀಕೆ. ಸೂಪರ್‌ಸ್ಟಾರ್‌ಗಳ ಹಲವು ಸೂಪರ್‌ ಹಿಟ್ ಸಿನಿಮಾಗಳನ್ನು ನೀಡಿದ್ದಾರೆ. ಇತ್ತೀಚೆಗೆ 'ಕೆಜಿಎಫ್ 2' ಬಳಿಕ ರವೀನಾ ಟಂಡನ್ ಮತ್ತೆ ಸಿನಿಮಾಗಳಲ್ಲಿ ಆಕ್ಟೀವ್ ಆಗಿದ್ದು ಗೊತ್ತೇ ಇದೆ.

ಸುಮಾರು 15 ವರ್ಷಗಳ ಕಾಲ ರವೀನಾ ಟಂಡನ್ ವಿಭಿನ್ನ ಪಾತ್ರಗಳಲ್ಲಿ ಜನರನ್ನು ರಂಜಿಸಿದ್ದಾರೆ. ಪ್ರತಿಯೊಂದು ಪಾತ್ರಕ್ಕೂ ರವೀನಾ ಟಂಡನ್ ಜೀವ ತುಂಬಿ ನಟಿಸಿದ್ದಾರೆ. ಅದಕ್ಕೆ 'ಕೆಜಿಎಫ್ 2' ಸಿನಿಮಾದ ಪಾತ್ರವೇ ಸಾಕ್ಷಿ. ಆದರೆ, ರವೀನಾ ಟಂಡನ್ ಮೊದಲ ಸಿನಿಮಾ ಒಪ್ಪಿಕೊಳ್ಳುವುದಕ್ಕೂ ಮುನ್ನ ಐದಾರು ಪ್ರಾಜೆಕ್ಟ್‌ಗಳನ್ನು ರಿಜೆಕ್ಟ್ ಮಾಡಿದ್ದಾಗಿ ಹೇಳಿಕೊಂಡಿದ್ದಾರೆ.

ರವೀನಾ ಟಂಡನ್ ಸಂದರ್ಶನವೊಂದರಲ್ಲಿ ಐದಾರು ಸಿನಿಮಾಗಳನ್ನು ರಿಜೆಕ್ಟ್ ಮಾಡಿದ ವಿಷಯವನ್ನು ರಿವೀಲ್ ಮಾಡಿದ್ದಾರೆ. ಅಷ್ಟಕ್ಕೂ ರವೀನಾ ಆ ಐದಾರು ಸಿನಿಮಾಗಳನ್ನು ಬಿಟ್ಟಿದ್ದು ಏಕೆ? ಅನ್ನೋದನ್ನು ಹೇಳಿಕೊಂಡಿದ್ದಾರೆ.

bollywood-actress-raveena-tondon-display

'ಕೆಜಿಎಫ್‌ 2'ನಲ್ಲಿ ರಮಿಕಾ ಸೇನ್

ರವೀನಾ ಟಂಡನ್ 2017ರಲ್ಲಿ ಕೊನೆಯದಾಗಿ ನಟಿಸಿದ್ದರು. ಮಧ್ಯದಲ್ಲೊಂದು ಸ್ಪೆಷಲ್ ಸಾಂಗ್‌ನಲ್ಲಿ ಕಾಣಿಸಿಕೊಂಡಿದ್ದು ಬಿಟ್ಟರೆ, ಸುಮಾರು 5 ವರ್ಷಗಳ ಕಾಲ ಸಿನಿಮಾಗಳಲ್ಲಿ ಕಾಣಿಸಿಕೊಂಡಿರಲೇ ಇಲ್ಲ. 2022ರಲ್ಲಿ ರಿಲೀಸ್ ಆದ 'ಕೆಜಿಎಫ್ 2' ಮತ್ತೆ ರವೀನಾ ಟಂಡನ್ ವೃತ್ತಿ ಬದುಕಿಗೆ ಹೊಸ ಬೂಸ್ಟ್ ಕೊಟ್ಟಿತ್ತು. ರಮಿಕಾ ಸೇನ್ ಪಾತ್ರದಲ್ಲಿ ಕಾಣಿಸಿಕೊಂಡಿದ್ದರು. ಉಪೇಂದ್ರ ಸಿನಿಮಾದಲ್ಲಿ ಕನ್ನಡ ಚಿತ್ರರಂಗಕ್ಕೆ ಬಂದಿದ್ದ ನಟಿ 'ಕೆಜಿಎಫ್ 2' ಮೂಲಕ ಮತ್ತೆ ಕನ್ನಡ ಚಿತ್ರರಂಗಕ್ಕೆ ಬಂದಿದ್ದರು. ಇದೇ ನಟಿ ಮೊದಲ ಸಿನಿಮಾ ಆಯ್ಕೆ ಮಾಡಿಕೊಳ್ಳುವ ಮುನ್ನವೇ ಐದು ಸಿನಿಮಾಗಳನ್ನು ರಿಜೆಕ್ಟ್ ಮಾಡಿದ್ದರು.

ರವೀನಾ ಕೈ ಬಿಟ್ಟ 6 ಸಿನಿಮಾಗಳ್ಯಾವುವು?

ಬಾಲಿವುಡ್ ನಟಿ ರವೀನಾ ಟಂಡನ್ ಮೊದಲ ಸಿನಿಮಾ 'ಪತ್ತರ್‌ ಕೆ ಫೂಲ್'. ಈ ಸಿನಿಮಾದಲ್ಲಿ ಸಲ್ಮಾನ್ ಖಾನ್ ಹೀರೊ. ಅದಾಗಲೇ ಬಾಲಿವುಡ್‌ನಲ್ಲಿದ್ದ ನಟಿಯರನ್ನು ಬಿಟ್ಟು ಹೊಸ ಪ್ರತಿಭೆಗಳನ್ನು ಹುಡುಕುತ್ತಿದ್ದರು. ಆಗ ಸಲ್ಮಾನ್ ಖಾನ್‌ಗೆ ಸಿಕ್ಕಿದ್ದೇ ರವೀನಾ ಟಂಡನ್. ಆದರೆ, ಈ ಸಿನಿಮಾಗೂ ಮುನ್ನ ರವೀನಾ 6 ಸಿನಿಮಾಗಳನ್ನು ಕೈ ಬಿಟ್ಟಿದ್ದರು. 'ಜಂಗ್ಲಿ', 'ಹೀರ್ ರಾಂಜಾ', ಲಕ್ಕಿ ಅಲಿ ಸಿನಿಮಾ, ಪಹ್ಲಾಜ್ ನಿಹಲಾನಿ ಸಿನಿಮಾ, 'ಪ್ರೇಮ್ ಖೈದಿ' ಹಾಗೂ 'ಫೂಲ್ ಔರ್ ಕಾಂಟೆ' ಸಿನಿಮಾಗಳನ್ನು ರಿಜೆಕ್ಟ್ ಮಾಡಿದ್ದರು.

6 ಸಿನಿಮಾ ರಿಜೆಕ್ಟ್ ಮಾಡಿದ್ದೇಕೆ?

ಆರು ಸಿನಿಮಾ ರಿಜೆಕ್ಟ್ ಮಾಡಿದ್ದೇಕೆ ಅನ್ನೋದನ್ನು ರವೀನಾ ಟಂಡನ್ ಲಹರೆಗೆ ನೀಡಿದ ಸಂದರ್ಶನದಲ್ಲಿ ಹೇಳಿದ್ದಾರೆ. ರವೀನಾ ಟಂಡನ್‌ಗೆ ಸಿನಿಮಾದಲ್ಲಿ ನಟಿಸಬೇಕು ಅನ್ನೋ ಆಸೆನೇ ಇರಲಿಲ್ಲ. ಹೀಗಾಗಿ ಬಂದ ಆಫರ್‌ಗಳನ್ನೆಲ್ಲ ರಿಜೆಕ್ಟ್ ಮಾಡುತ್ತಿದ್ದರು. ಅಲ್ಲದೆ, ಸಿನಿಮಾದಲ್ಲಿ ನಟಿಸಬಲ್ಲೆ ಅನ್ನೋ ಆತ್ಮವಿಶ್ವಾಸ ಕೂಡ ಇರಲಿಲ್ಲ. ಈ ಕಾರಣಕ್ಕೆ ಸುಮಾರು ಆರು ಸಿನಿಮಾಗಳನ್ನು ರಿಜೆಕ್ಟ್ ಮಾಡಿದ್ದಾಗಿ ಹೇಳಿಕೊಂಡಿದ್ದಾರೆ.

bollywood-actress-raveena-tondon-display

'ಪತ್ತರ್‌ ಕೆ ಫೂಲ್' ಒಪ್ಪಿಕೊಂಡಿದ್ದೇಕೆ?

ರವೀನಾ ಟಂಡನ್ ಜೊತೆ ಮಾಡಲ್ ಆಗಿ ಕೆಲಸ ಮಾಡುತ್ತಿದ್ದ ಬಂಟಿ ವಾಲಿಯಾ ಅದಾಗಲೇ ಸ್ಟಾರ್ ಆಗಿದ್ದ ಸಲ್ಮಾನ್ ಖಾನ್ ಸ್ನೇಹಿತರಾಗಿದ್ದರು. ಸಲ್ಮಾನ್ ಖಾನ್ 'ಪತ್ತರ್ ಕೆ ಪೂಲ್‌' ಸಿನಿಮಾಗೆ ನಾಯಕಿಯನ್ನು ಹುಡುಕುತ್ತಿರೋ ವಿಷಯ ಮುಟ್ಟಿತ್ತು. ಸಲ್ಮಾನ್ ಖಾನ್‌ಗೆ ರವೀನಾ ಟಂಡನ್ ಅನ್ನು ಮೊದಲು ತೋರಿಸಿದ್ದೇ ಈತ. ಆ ಗೆಳೆಯನಿಂದ ಸಲ್ಮಾನ್ ಖಾನ್ ಸಿನಿಮಾದಲ್ಲಿ ನಟಿಸಲು ಒಪ್ಪಿದ್ದರು. ಹೀಗೆ ಚಿತ್ರರಂಗಕ್ಕ ಎಂಟ್ರಿ ಕೊಟ್ಟಿದ್ದಾಗಿ ಹೇಳಿಕೊಂಡಿದ್ದಾರೆ.

More from Filmibeat

English summary
Raveena Tandon rejected five to six films before her debut with Salman Khan this is the reason
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X