Rekha Live In Relationship: ಮಹಿಳಾ ಮ್ಯಾನೇಜರ್ ಜೊತೆ ರೇಖಾ ಸಂಬಂಧ.. 7 ತಿಂಗಳಲ್ಲಿ ಗಂಡನಿಗೆ ಆಘಾತ!
ಬಾಲಿವುಡ್‌ನ ಎಂದೂ ಮಾಸದ ಬ್ಯೂಟಿ ರೇಖಾ. ಭಾರತೀಯ ಚಿತ್ರರಂಗದ ಈ ಜೀವಂತ ದಂತಕಥೆ ಬದುಕಿನ ಒಂದು ಪುಟವೂ ರೋಚಕ. ಸುಮಾರು 5 ದಶಕಗಳ ತನ್ನ ಸಿನಿಮಾ ಜರ್ನಿಯಲ್ಲಿ ಮಿಲಿಯನ್‌ಗಟ್ಟಲೆ ಅಭಿಮಾನಿಗಳನ್ನು ಸಂಪಾದಿಸಿದ ಈ ನಟಿಯೀಕೆ. ಈ ಬ್ಯೂಟಿಯ ಬಗ್ಗೆ ಗೊತ್ತಿರದ ಸಂಗತಿಗಳನ್ನು ಲೇಖಕ ಯಾಸೀರ್ ಉಸ್ಮಾನ್ ಬಯೋಗ್ರಫಿ ಹೊರತಂದಿದ್ದರು.
'ರೇಖಾ: ದಿ ಅನ್fಟೋಲ್ಡ್ ಸ್ಟೋರಿ' ಎವರ್‌ಗ್ರೀನ್ ಬ್ಯೂಟಿಯ ಬಗ್ಗೆ ನೂರೆಂಟು ಕಥೆಗಳನ್ನು ಬಿಚ್ಚಿಟ್ಟಿದೆ. ಒಂದೊಂದು ಕಥೆಯೂ ಅಚ್ಚರಿ ಹಾಗೂ ರೋಚಕ ಅಂತ ಅನಿಸದೇ ಇರುವುದಿಲ್ಲ. ಇಂತಹದ್ದೊಂದು ಘಟನೆ ಈಗ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ.

ರೇಖಾ ತನ್ನ ಬಹುಕಾಲದ ಮಹಿಳಾ ಮ್ಯಾನೇಜರ್ ಜೊತೆ ಲಿವ್ ಇನ್ ರಿಲೇಷನ್‌ಶಿಪ್‌ನಲ್ಲಿ ಇದ್ದರು ಅನ್ನೋದನ್ನು ಇದೇ ಬಯೋಗ್ರಫಿಯಲ್ಲಿ ಬರೆಯಲಾಗಿದೆ. ಈ ಬಗ್ಗೆ ವರದಿಗಳು ಪ್ರಕಟವಾಗುತ್ತಿದ್ದಂತೆ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ.
ಮಹಿಳಾ ಮ್ಯಾನೇಜರ್ ಜೊತೆನೇ ರೇಖಾಗಿತ್ತು ಸಂಬಂಧ
ಲೇಖಕಾ ಯಾಸೀರ್ ಉಸ್ಮಾನ್ ಬರೆದ 'ರೇಖಾ: ದಿ ಅನ್‌ಟೋಲ್ಡ್ ಸ್ಟೋರಿ'ಯಲ್ಲಿ ಗಂಭೀರವಾದ ವಿಷಯವೊಂದನ್ನು ರಿವೀಲ್ ಮಾಡಲಾಗಿದೆ. ಈ ಎವರ್‌ಗ್ರೀನ್ ಬ್ಯೂಟಿ ಪರ್ಜಾನಾ ಅನ್ನೋ ಮಹಿಳೆಯೊಂದಿಗೆ ಲಿವ್ ಇನ್ ರಿಲೇಷನ್‌ಶಿಪ್‌ನಲ್ಲಿ ಇದ್ದರು ಎಂದು ಬರೆಯಲಾಗಿದೆ. ಅಷ್ಟಕ್ಕೂ ಮಹಿಳಾ ಮ್ಯಾನೇಜರ್ ಫರ್ಜಾನಾ ಹಿನ್ನೆಲೆಯೇನು? ರೇಖಾ ಪತಿ ಆತ್ಮಹತ್ಯೆಗೆ ಶರಣಾಗಿದ್ದೇಕೆ? ಅನ್ನೋ ಪ್ರಶ್ನೆಗೂ ಈ ಬಯೋಗ್ರಫಿಯಲ್ಲಿ ಉತ್ತರವಿದೆ.

ಮಹಿಳಾ ಮ್ಯಾನೇಜರ್ ಫರ್ಜಾನಾರನ್ನು ನಟಿ ರೇಖಾ ತುಂಬಾನೇ ಅವಲಂಭಿಸಿದ್ದರು. ರೇಖಾ ದೈನಂದಿನ ಚರಿತ್ರೆ ಮೇಲೆ ಫರ್ಜಾನಾ ಪ್ರಭಾವ ಬೀರಿದ್ದರು. ಹೀಗಾಗಿ ಇಬ್ಬರಲ್ಲೂ ತುಂಬಾನೇ ಅನ್ನೋನ್ಯತೆ ಇತ್ತು ಎಂದು ಇದೇ 'ರೇಖಾ: ದಿ ಅನ್‌ಟೋಲ್ಡ್ ಸ್ಟೋರಿ' ಬಯೋಗ್ರಫಿಯಲ್ಲಿ ಹೇಳಲಾಗಿದೆ.
ರೇಖಾ ಬೆಡ್‌ಗೂ ಹೋಗುತ್ತಿದ್ದ ಏಕೈಕ ವ್ಯಕ್ತಿ
ರೇಖಾ ವೃತ್ತಿ ಬದುಕಿನ ಉತ್ತುಂಗದ ಕಾಲದಲ್ಲಿ ಫರ್ಜಾನಾರನ್ನು ಸ್ಟಾರ್‌ನಂತೆಯೇ ಬಿಂಬಿಸಲಾಗಿತ್ತು. ರೇಖಾ ತನ್ನ ಬೆಡ್ ರೂಮ್ ಓಳಗೆ ಬಿಟ್ಟುಕೊಳ್ಳುತ್ತಿದ್ದ ಏಕೈಕ ವ್ಯಕ್ತಿ ಫರ್ಜಾನಾ ಆಗಿದ್ದರು ಎಂದು ಬಿಂಬಿಸಲಾಗಿತ್ತಿತ್ತು. ರೇಖಾ ಮನೆಯಲ್ಲಿ ವರ್ಷಗಳಿಂದ ಕೆಲಸ ಮಾಡುತ್ತಿದ್ದ ಮನೆ ಕೆಲಸದವರಿಗೂ ಆ ಬೆಡ್ ರೂಮ್ ಒಳಗೆ ಪ್ರವೇಶವಿರಲಿಲ್ಲ ಎಂದು ಹೇಳಲಾಗಿದೆ.
ರೇಖಾ ಬಗ್ಗೆ ಗೊತ್ತಿರದ ಇಂತಹದ್ದೇ ಕೆಲವು ನಿಗೂಢ ಸಂಗತಿಗಳನ್ನು ಬಯೋಗ್ರಫಿಯಲ್ಲಿ ರಿವೀಲ್ ಮಾಡಲಾಗಿದೆ. ಅದರಲ್ಲಿ ಹಿರಿಯ ನಟಿ ರೇಖಾ ವೈಯಕ್ತಿಕ ಬದುಕಿನ ಮೇಲೆ ಫರ್ಜಾನಾ ಬೀರಿದ ಪ್ರಭಾವದ ಬಗ್ಗೆ ಇಂಚಿಂಚಾಗಿ ಬಯೋಗ್ರಫಿಯಲ್ಲಿ ಹೇಳಲಾಗಿದೆ. ಇಷ್ಟೇ ಅಲ್ಲದೆ ರೇಖಾ ಪತಿ ಆತ್ಮಹತ್ಯೆ ಮಾಡಿಕೊಂಡಿದ್ದರ ಬಗ್ಗೆನೂ ರಿವೀಲ್ ಮಾಡಲಾಗಿದೆ.
ಮದುವೆಯಾದ 7 ತಿಂಗಳಲ್ಲೇ ಪತಿ ಆತ್ಮಹತ್ಯೆ
ರೇಖಾ ಬಯೋಗ್ರಫಿಯಲ್ಲಿ ಪತಿ ಆತ್ಮಹತ್ಯೆ ಮಾಡಿಕೊಂಡಿದ್ದರ ಬಗ್ಗೆನೂ ರಿವೀಲ್ ಮಾಡಲಾಗಿದೆ. 1990ರಲ್ಲಿ ರೇಖಾ ದೆಹಲಿ ಮೂಲದ ಉದ್ಯಮಿ ಮಕೇಶ್ ಅಗರ್ವಾಲ್ ಎಂಬುವವರನ್ನು ವಿವಾಹವಾಗಿದ್ದರು. ಆದರೆ, ಇದು ಕೂಡ ಹೆಚ್ಚು ದಿನ ಉಳಿಯಲಿಲ್ಲ. ಮದುವೆಯಾದ 7 ತಿಂಗಳಲ್ಲೇ ಪತಿ ಆತ್ಮಹತ್ಯೆಗೆ ಶರಣಾಗಿದ್ದರು. ಆ ವೇಳೆ ರೇಖಾ ಲಂಡನ್‌ನಲ್ಲಿ ಇದ್ದರು ಎಂದು ಹೇಳಲಾಗಿದೆ.
ಪತಿ ಆತ್ಮಹತ್ಯೆ ಬಳಿಕ ರೇಖಾ ಬಗ್ಗೆ ಬೊಟ್ಟು ಮಾಡಲಾಯಿತು. ಅಲ್ಲದೆ ಫರ್ಜಾನಾ ಹಾಗೂ ರೇಖಾ ಸಂಬಂಧವೇ ಕಾರಣ ಎಂದು ಹೇಳಲಾಗಿತ್ತು. ಆದರೆ, ಮುಕೇಶ್ ಅಗರ್ವಾಲ್ ಸೂಸೈಡ್ ಲೆಟರ್‌ನಲ್ಲಿ ಈ ನಿರ್ಧಾರಕ್ಕೆ ಯಾರನ್ನೂ ಧೂಷಿಸುವುದಿಲ್ಲ. ಅದರಲ್ಲೂ ರೇಖಾ ಕಾರಣವಲ್ಲ ಎಂದು ಬರೆದಿದ್ದರು.


Click it and Unblock the Notifications











