ಬಾಲಿವುಡ್‌ನಲ್ಲಿ ರಿವೆಂಜ್ ಸ್ಟೋರಿಗಳು ಮಾಡಿದ ಕ್ರಾಂತಿ ಹೇಗಿತ್ತು? ಈ ಸಿನಿಮಾಗಳನ್ನು ನೋಡಿದ್ದೀರಾ?
ಬಾಲಿವುಡ್ ಇತಿಹಾಸದಲ್ಲಿ 'ರಿವೆಂಜ್ ಡ್ರಾಮಾ'ಗಳಿಗೆ ಯಾವಾಗಲೂ ವಿಶೇಷ ಸ್ಥಾನವಿದೆ. ಇದು ಪ್ರೇಕ್ಷಕರನ್ನು ಇನ್ನಿಲ್ಲದಂತೆ ಸೆಳೆಯುವ ಅಚ್ಚು ಮೆಚ್ಚಿನ ಜಾನರ್. ಸಿನಿಮಾಗಳಲ್ಲಿ ಪ್ರತೀಕಾರ ಎಂದರೆ ಅದು ಕೇವಲ ರಕ್ತಪಾತ ಮತ್ತು ನೇರ ಹೋರಾಟ ಮಾತ್ರ ಆಗಿತ್ತು. ಆದರೆ, ಅದರ ಜೊತೆಗೆ ಬೇರೊಂದು ಆಯಾಮ ಕೊಟ್ಟ ಸಿನಿಮಾಗಳಿವು.
ಸಮಯ ಕಳೆದಂತೆ ತೆರೆಯ ಮೇಲೆ ರಿವೇಂಜ್ ಸ್ಟೋರಿಗಳು ಹೊಸ ಹೊಸ ರೂಪ ಪಡೆದುಕೊಂಡಿವೆ. ಸಿನಿಮಾ ನಿರ್ದೇಶಕರು ಮತ್ತು ಕಥೆಗಾರರು ಪ್ರೇಕ್ಷಕರ ಅಭಿರುಚಿಗೆ ತಕ್ಕಂತೆ ಬದಲಾವಣೆ ಮಾಡಿದ್ದಾರೆ. ಸೇಡು ತೀರಿಸಿಕೊಳ್ಳುವ ಹಾದಿಯು ಕೇವಲ ದೈಹಿಕ ಶಕ್ತಿ ಮಾತ್ರ ಆಗಿರದೆ ಮನಸ್ಸಿನ ತಂತ್ರಗಾರಿಕೆ ಮತ್ತು ಭಾವನಾತ್ಮಕ ಹೋರಾಟವೂ ಸೇರಿತ್ತು. ಅಮಿತಾಭ್ ಬಚ್ಚನ್ 'ಅಗ್ನಿಪಥ್'ನಿಂದ ಶುರುವಾದ ಈ ಟ್ರೆಂಡ್ ಶಾರುಖ್ ಖಾನ್ 'ಬಾಜಿಗರ್' ಹೀಗೆ ಹಲವು ಸಿನಿಮಾಗಳನ್ನು ಬರುತ್ತಲೇ ಇವೆ.

ಭಾವನಾತ್ಮಕ ಹೋರಾಟದ 'ಅಗ್ನಿಪಥ್'
ಮೆಗಾಸ್ಟಾರ್ ಅಮಿತಾಭ್ ಬಚ್ಚನ್ ನಟಿಸಿದ ಕ್ಲಾಸಿಕ್ ಸಿನಿಮಾ 'ಅಗ್ನಿಪಥ್'. ಬಾಲಿವುಡ್ ಚಿತ್ರರಂಗದಲ್ಲಿ ಈ ಸಿನಿಮಾ ಒಂದು ಮೈಲಿಗಲ್ಲು. ಇದೇ ಸಿನಿಮಾ ರಿಮೇಕ್ ಆಗಿತ್ತು. ಹೃತಿಕ್ ರೋಷನ್ ಹಾಗೂ ಸಂಜಯ್ ದತ್ ಈ ರಿಮೇಕ್‌ನಲ್ಲಿ ನಟಿಸಿದ್ದರು. 'ಅಗ್ನಿಪಥ್' ರಿವೆಂಜ್ ಟ್ರೆಂಡ್‌ಗೆ ಹೊಸ ಸ್ಪರ್ಶ ನೀಡಿತ್ತು. ತಂದೆಯ ಸಾವಿಗೆ ಸೇಡು ತೀರಿಸಿಕೊಳ್ಳುವ ಮಗನ ಕಥೆಯೇ ಈ ಸಿನಿಮಾದ ಜೀವಾಳ. ಈ ಸಿನಿಮಾ ಕೇವಲ ಆಕ್ಷನ್ ಜಾನರ್ ಅಷ್ಟೇ ಅಗಿರಲಿಲ್ಲ. ಬದಲಾಗಿ ಇದರಲ್ಲಿ ಭಾವನಾತ್ಮಕ ಕಥಾಹಂದರವೂ ಇದೆ.
ಹೀರೋಗೆ ಗ್ರೇ ಶೇಡ್ ನೀಡಿದ್ದು 'ಬಾಜಿಗರ್'
ಶಾರುಖ್ ಖಾನ್ ನಟಿಸಿದ 'ಬಾಜಿಗರ್' ಸಿನಿಮಾ ಬಾಲಿವುಡ್‌ನ ಟ್ರೆಂಡ್ ಅನ್ನೇ ಬದಲಿಸಿತ್ತು. ಇಲ್ಲಿ ನಾಯಕನೇ ವಿಲನ್ ಆಗಿ ಬದಲಾಗುವ ಕಥೆ ಸಿನಿಮಾದಲ್ಲಿದೆ. ಸೇಡು ತೀರಿಸಿಕೊಳ್ಳಲು ನಾಯಕನೇ ಕೊಲೆಗಾರನಾಗುವುದು ಪ್ರೇಕ್ಷಕರಿಗೆ ಕಿಕ್ ಕೊಟ್ಟಿತ್ತು. ಸಿನಿಮಾದ ಹೀರೋನಾ ನೆಗೆಟಿವ್ ಶೇಡ್‌ನಲ್ಲಿ ತೋರಿಸಿದ ಸಿನಿಮಾ ಇದಾಗಿತ್ತು.
'ಗಜನಿ'ಯದ್ದು ಮರೆವಿನ ಆಟ
'ಗಜಿನಿ' ಸಿನಿಮಾ ಮೊದಲು ತೆರೆಕಂಡಿದ್ದು ತಮಿಳಿನಲ್ಲಿ. ಇದು 'ಮೆಮೆಂಟೋ' ಅನ್ನೋ ಸಿನಿಮಾದಿಂದ ಪ್ರೇರಣೆ ಪಡೆದು ಮಾಡಿದ ಸಿನಿಮಾ. ಇದೇ ಸಿನಿಮಾವನ್ನು ಆಮಿರ್ ಖಾನ್ ರಿಮೇಕ್ ಮಾಡಿದ್ದರು. ಬಾಲಿವುಡ್‌ಗೆ ಪ್ರೇಕ್ಷಕರಿಗೆ ತಕ್ಕಂತೆ ಸಿನಿಮಾ ಮಾಡಿದ್ದರು. ರಿಮೇಕ್ 'ಗಜನಿ' ಕೂಡ ಗೆದ್ದಿತ್ತು. ನೆನಪಿನ ಶಕ್ತಿಯನ್ನು ಕಳೆದುಕೊಂಡ ನಾಯಕನ ಕಥೆ ಪ್ರೇಕ್ಷಕರಿಗೆ ಕಿಕ್ ಕೊಟ್ಟಿತ್ತು. ಆಮಿರ್ ಖಾನ್ ದೇಹದಾಡ್ಯತೆ, ಅದ್ಭುತ ಆಕ್ಷನ್, ಹೀರೋ ಕೋಪ ಇವೆಲ್ಲವೂ ಹೊಸ ಟೇಸ್ಟ್ ಕೊಟ್ಟಿತ್ತು.

'ಬದ್ಲಾ' ಮತ್ತು 'ಕಹಾನಿ'
ಸೇಡನ್ನು ಚಾಣಾಕ್ಷ್ಯತನದಿಂದಲೂ ತೀರಿಸಿಕೊಳ್ಳಬಹುದು ಅನ್ನೋದನ್ನು ತೋರಿಸಿಕೊಟ್ಟ ಸಿನಿಮಾಗಳಿವೆ. ಅದರಲ್ಲಿ 'ಬದ್ಲಾ' ಹಾಗೂ 'ಕಹಾನಿ' ಎರಡೂ ಸಿನಿಮಾಗಳೂ ಇವೆ. ಅಮಿತಾಭ್ ಬಚ್ಚನ್ ಮತ್ತು ತಾಪ್ಸಿ ಪನ್ನು ನಟಿಸಿದ ಈ ಸಿನಿಮಾ ಇದೊಂದು ಸೈಕಲಾಜಿಕಲ್ ಥ್ರಿಲ್ಲರ್ ರಿವೇಂಜ್ ಸಿನಿಮಾ. ಈ ಸಿನಿಮಾದ ಕಥೆ ಹಾಗೂ ನಿರೂಪಣೆ ಪ್ರೇಕ್ಷಕರನ್ನು ಹಿಡಿದಿಟ್ಟಿತ್ತು.
ಇನ್ನು ವಿದ್ಯಾ ಬಾಲನ್ ನಟಿಸಿದ 'ಕಹಾನಿ' ಕೂಡ ಬೆಸ್ಟ್ ರಿವೇಂಜ್ ಸಿನಿಮಾಗಳಲ್ಲಿ ಒಂದು. ಮಹಿಳಾ ಪ್ರಧಾನ ಸಿನಿಮಾವೊಂದು ಅತ್ಯುತ್ತಮ ರಿವೇಂಜ್ ಸ್ಟೋರಿ ಆಗಬಹುದೆಂಬ ನಿರೀಕ್ಷೆ ಕೂಡ ಇರಲಿಲ್ಲ. ಕ್ಷಣ ಕ್ಷಣಕ್ಕೂ ಟ್ಚಿಸ್ಟ್‌ಗಳನ್ನು ನೀಡುತ್ತಾ ಕಥೆ ಮುಂದುವರೆಯುತ್ತೆ. ಈ ಸಿನಿಮಾ ದೈಹಿಕ ಶಕ್ತಿಗಿಂತ, ತಂತ್ರಗಾರಿಕೆಯನ್ನು ಮುಖ್ಯವಾಗಿಟ್ಟುಕೊಂಡು ಕಥೆಯನ್ನು ಹಣೆಯಲಾಗಿದೆ.
ರಿವೆಂಜ್ ಡ್ರಾಮಾಗಳು ಬಾಲಿವುಡ್‌ನಲ್ಲಿ ಹೊಸ ಹೊಸ ಟ್ರೆಂಡ್ ಅನ್ನು ಹುಟ್ಟಾಕಿತ್ತು. ಭಾವನಾತ್ಮಕ ಕಥೆ, ಕೋಪ-ತಾಪ, ಟ್ವಿಸ್ಟ್‌ಗಳು ಬಾಲಿವುಡ್‌ನಲ್ಲಿ ಗೆಲುವು ತಂದುಕೊಟ್ಟಿತ್ತು. ಅದೇ ಟ್ರೆಂಡ್ ಈಗಲೂ ಮುಂದುವರೆದಿದೆ. ಇವೆಲ್ಲ ಸಿನಿಮಾಗಳು ಇಂದಿನ ಪೀಳಿಗೆಗೆ ಪ್ರೇರಣೆಯಾಗುತ್ತಿದೆ.


Click it and Unblock the Notifications











