ಥಿಯೇಟರ್‌ನಿಂದ ಆದ ಕಲೆಕ್ಷನ್ ತಂದು 'ಸಾಹಸ ಸಿಂಹ' ನಿರ್ಮಿಸಿದ ರೋಚಕ ಕಥೆ: ನಿರ್ದೇಶಕ ಜೋ ಸೈಮನ್ ಏನಂತಾರೆ?
ವಿಷ್ಣುವರ್ಧನ್ ನಟಿಸಿದ ಹಲವು ಆಕ್ಷನ್ ಸಿನಿಮಾಗಳು ಇಂದಿಗೂ ಪ್ರೇಕ್ಷಕರ ಮನಸ್ಸಿನಲ್ಲಿ ಹಾಗೇ ಉಳಿದೆ. ವಿಷ್ಣುದಾದ ಕೇವಲ ಲವ್ ಸ್ಟೋರಿಗಳಲ್ಲಷ್ಟೇ ಅಲ್ಲ. ಆಕ್ಷನ್ ಸಿನಿಮಾಗಳನ್ನು ಮಾಡಬಹುದು ಅನ್ನೋದು ತೋರಿಸಿಕೊಟ್ಟಿದ್ದು ಸಾಕಷ್ಟು ಸಿನಿಮಾಗಳಿವೆ. ಅವುಗಳಲ್ಲಿ 'ಸಾಹಸ ಸಿಂಹ' ಕೂಡ ಒಂದು. ಜೋ ಸೈಮನ್ ನಿರ್ದೇಶಿಸಿದ ಈ ಸಿನಿಮಾ ಥಿಯೇಟರ್‌ಗಳಲ್ಲಿ ಅತೀ ಹೆಚ್ಚು ದಿನಗಳ ಕಾಲ ಸದ್ದು ಮಾಡಿತ್ತು.
ಇದೇ ಸಿನಿಮಾ ವಿಷ್ಣುವರ್ಧನ್‌ಗೆ ಸಾಹಸ ಸಿಂಹ ಅನ್ನುವ ಬಿರುದನ್ನು ಕೊಟ್ಟಿತ್ತು. ಅಭಿಮಾನಿಗಳು ಪ್ರೀತಿಯಿಂದ ಸಾಹಸ ಸಿಂಹ ವಿಷ್ಣುವರ್ಧನ್ ಅಂತ ಕರೆಯುವುದಕ್ಕೆ ಈ ಸಿನಿಮಾವೇ ಕಾರಣ. ಆದರೆ, ಈ ಸಿನಿಮಾ ಮಾಡುವುದು ಅಷ್ಟು ಸುಲಭವಾಗಿರಲಿಲ್ಲ. ಸಾಕಷ್ಟು ಅಡೆ ತಡೆಗಳನ್ನು ಎದುರಿಸಬೇಕಾಯ್ತು. ಬಿಡುಗಡೆಗೂ ಮುನ್ನ ಒಂದು ಸಮಸ್ಯೆಯಾದರೆ, ಬಿಡುಗಡೆ ಬಳಿಕ ಇನ್ನೊಂದು ಸಮಸ್ಯೆ ಎದುರಾಗಿತ್ತು.

'ಸಾಹಸ ಸಿಂಹ' ವಿಷ್ಣುವರ್ಧನ್ ವೃತ್ತಿ ಬದುಕಿನಲ್ಲಿ ಅತೀ ದೊಡ್ಡ ಹಿಟ್ ಕೊಟ್ಟ ಆಕ್ಷನ್ ಸಿನಿಮಾ. ವಿಷ್ಣುವರ್ಧನ್ ಇಮೇಜ್ ಆಕ್ಷನ್ ಸ್ಟಾರ್ ಆಗಿ ಬದಲಾಗಿದ್ದೇ ಈ ಸಿನಿಮಾದಿಂದ. ಆದರೆ. ಮಧ್ಯೆದಲ್ಲಿ ಈ ಸಿನಿಮಾ ಹಣಕಾಸಿನ ಸಮಸ್ಯೆಯಿಂದ ನಿಂತು ಹೋಗಿತ್ತು. ನಿರ್ಮಾಪಕರ ಪ್ರತಿ ದಿನ ತನ್ನ ಚಿತ್ರಮಂದಿರದಲ್ಲಿ ಕಲೆಕ್ಷನ್ ಆದ ಹಣವನ್ನು ತಂದು ಸಿನಿಮಾ ಹಾಕುತ್ತಿದ್ದರು. ಮುಂದೇನಾಯ್ತು ಅನ್ನೋದನ್ನು ಆ ಸಿನಿಮಾ ನಿರ್ದೇಶಕ ಜೋ ಸೈಮನ್ ಅವರೇ ಹೇಳಿದ್ದಾರೆ.
"ನನಗೆ ವಿಷ್ಣುವರ್ಧನ್ ಅವರು ಪರಿಚಯ ಆಗಿದ್ದೇ ರಾಜೇಂದ್ರ ಸಿಂಗ್ ಬಾಬು ಅವರಿಂದ. ನಾನು ಅವರ ತಂದೆಯ ಕಂಪನಿಯಲ್ಲಿ ಕೆಲಸ ಮಾಡುತ್ತಿದೆ. ಇವರ ತಾಯಿ ನನಗೆ ಊಟ ಹಾಕಿ ಸಾಕಿದ್ದಾರೆ. ಇವರೊಂದಿಗೆ ಕೆಲಸ ಮಾಡಿದ ಮೇಲೆ ವಿಷ್ಣುವರ್ಧನ್ ಪರಿಚಯವಾಗಿದ್ದು. ಹಲವಾರು ಸಿನಿಮಾಗಳಲ್ಲಿ ಅಸೋಸಿಯೇಟ್ ಆಗಿ ಕೆಲಸ ಮಾಡುತ್ತಿದ್ದೆ. ಒಂದು ಕಥೆಗೆ ಸ್ಕ್ರಿಪ್ಟ್‌ಗೆ ಬೆಲೆ ಕೊಡುವ ಕಲಾವಿದ ಅಂದರೆ ಅದು ವಿಷ್ಣುವರ್ಧನ್." ಎಂದು ವೇದಿಕೆ ಮೇಲೆ ವಿಷ್ಣುದಾದರನ್ನು ನಿರ್ದೇಶಕ ಜೋ ಸೈಮನ್ ನೆನಪಿಸಿಕೊಂಡಿದ್ದಾರೆ.

ಇದೇ ವೇಳೆಕೆ ಮೇಲೆ ಸ್ಪಷ್ಟವಾಗಿ ಕನ್ನಡ ಮಾತಾಡಬಲ್ಲ ಕಲಾವಿದ ಅಂದರೆ ಅದನ್ನು ವಿಷ್ಣುವರ್ಧನ್. ಸುಂದರವಾದ ಮುಖವುಳ್ಳ ನಿಜವಾದ ನಾಯಕ ನಟ. ಹೆಣ್ಣಿಗೆ ಗೌರವ ಗುಣ ಬಹಳ ಇತ್ತು ಎಂದು ಜೋ ಸೈಮನ್ ವಿಷ್ಣುವರ್ಧನ್ ಅವರ ವ್ಯಕ್ತಿತ್ವ ಹೇಗಿತ್ತು ಅನ್ನೋದನ್ನು ಹೇಳಿದ್ದರೆ. ಹಾಗೇ ಅವರ ಕೆಲಸವನ್ನು ವಿಷ್ಣುವರ್ಧನ್ ಮೊದಲು ಗುರುತಿಸಿದ್ದು ಹೇಗೆ ಅನ್ನೋ ಸ್ವಾರಸ್ಯ ಸಂಗತಿಯನ್ನು ಹೇಳಿದ್ದಾರೆ.
"ಒಂದು ಪ್ರೇಮದ ಕಥೆ ಬಿ ಆರ್ ಲಕ್ಷ್ಮಣ ರಾವ್ ಬರೆದಿದ್ದು ಪ್ರಜಾವಾಣಿ ಪತ್ರಿಕೆಯಲ್ಲಿ ಬಂದಿತ್ತು. ಅದನ್ನು ಮಾಡಿದ ಮೇಲೆ ಎರಡು ವರ್ಷ ಕೆಲಸ ಇರಲಿಲ್ಲ. ಮನೆಯಲ್ಲಿ ಕೂತಿದ್ದೆ. ಆಮೇಲೆ ಒಂದು ಸಿನಿಮಾ ಬಂತು ವಿಜಯ ವಿಕ್ರಮ ಅಂತ. ಅದರಲ್ಲಿ ಎರಡು ಪಾತ್ರವನ್ನು ವಿಷ್ಣುವರ್ಧನ್ ಅವರು ಮಾಡಿದ್ದರು. ಈ ಚಿತ್ರದ ನಿರ್ದೇಶಕರು ಕೆಎಸ್‌ಆರ್ ದಾಸ್. ಅವರು ಹೃದಯಾಘಾತದಿಂದ ಆಸ್ಪತ್ರೆ ಸೇರಿದ್ದರಿಂದ 15 ದಿನಗಳ ಶೂಟಿಂಗ್ ಅನ್ನು ನಾನು ಮಾಡಿದೆ. ಆ 15 ಶೂಟಿಂಗ್ ಮಾಡಿದ್ದನ್ನು ಗಮನಿಸಿದ ವಿಷ್ಣುವರ್ಧನ್ ಒಂದು ಅವಕಾಶ ಕಲ್ಪಿಸಿದ್ದರು. ನಾನು ಸ್ವತಂತ್ರ್ಯವಾಗಿ ವಿಷ್ಣುದರ್ಧನ್‌ಗೆ ನಿರ್ದೇಶನ ಮಾಡಿದ ಸಿನಿಮಾ ನನ್ನ ರೋಷ ನೂರು ವರುಷ. ಅಲ್ಲಿಂದಾಚೆ ಹಲವಾರು ಸಿನಿಮಾಗಳನ್ನು ನಾನು ಮಾಡಿಕೊಂಡು ಬಂದೆ" ಎನ್ನುತ್ತಾರೆ.
ಇದೇ ವೇದಿಕೆ ಮೇಲೆ 'ಸಾಹಸ ಸಿಂಹ' ಸಿನಿಮಾ ಮಾಡುವುದಕ್ಕೆ ನಿರ್ಮಾಪಕರ ಕಷ್ಟಪಡುತ್ತಿದ್ದರು. ಅದಕ್ಕೆ ವಿಷ್ಣುವರ್ಧನ್ ಹೇಗೆ ಸಹಕಾರ ಕೊಟ್ಟರು. ಈ ಸಿನಿಮಾವನ್ನು ನಿರ್ಮಾಪಕರು ಥಿಯೇಟರ್‌ನಲ್ಲಿ ಕಲೆಕ್ಷನ್ ಆದ ಹಣವನ್ನು ತಂದು ಹೇಗೆ ಮುಗಿಸಿದರು ಅನ್ನೋದನ್ನು ಹೇಳಿದ್ದಾರೆ.
"ಸಾಹಸ ಸಿಂಹ ಮಾಡುವಾಗ ಬಹಳಷ್ಟು ಕಷ್ಟ ಪಟ್ಟರು. ಪ್ರಡ್ಯೂಸರ್ ಹತ್ತಿರ ಕಾಸಿರಲಿಲ್ಲ. ಅವರದ್ದೊಂದು ಥಿಯೇಟರ್ ಇತ್ತು. ಪ್ರತಿದಿನ ಆದ ಕಲೆಕ್ಷನ್ ಎಲ್ಲಾ ತೆಗೆದುಕೊಂಡು ಬಂದು ಚಿತ್ರೀಕರಣ ಮಾಡುತ್ತಿದ್ದರು. ಆ ವೇಳೆ ವಿಷ್ಣುವರ್ಧನ್ ಕಾಸನ್ನು ಪಕ್ಕಕ್ಕಿಟ್ಟು, ಕಥೆಗೆ ಗಮನಕೊಟ್ಟು, ನಿರ್ದೇಶಕನಿಗೆ ನಿರ್ಮಾಪಕನಿಗೆ ಬೆಲೆ ಕೊಟ್ಟು, ಕಷ್ಟಪಟ್ಟು ಬೆವರು ಸುರಿಸಿ ಮಾಡಿದಂತಹ ಸಿನಿಮಾ ಸಾಹಸ ಸಿಂಹ. ಅದಕ್ಕೆ ತಕ್ಕಂತೆ ಅವರಿಗೆ ಸಾಹಸ ಸಿಂಹ ಅಂತ ಬಿರುದು ಕೂಡ ಸಿಕ್ತು." ಎನ್ನುತ್ತಾರೆ ಜೋ ಸೈಮನ್.


Click it and Unblock the Notifications











