Year Ender 2025: ಈ ವರ್ಷ ಗೂಗಲ್‌ನಲ್ಲಿ ಅತೀ ಹೆಚ್ಚು ಹುಡುಕಲ್ಪಟ್ಟ ಟಾಪ್ 10 ಸಿನಿಮಾಗಳ್ಯಾವುವು? ಯಾವುದು ನಂ 1?

2025 ಮುಗಿಯುವುದಕ್ಕೆ ಕೆಲವೇ ದಿನಗಳು ಬಾಕಿಯಿವೆ. ಪ್ರೇಕ್ಷಕರು ಹೊಸ ವರ್ಷದ ಆಗಮನಕ್ಕೆ ಸಜ್ಜಾಗಿ ನಿಂತಿದ್ದಾರೆ. ಕೆಲವು ಚಿತ್ರರಂಗಕ್ಕೆ 2025 ಆಶಾದಾಯಕ ಎನಿಸಿದರೆ, ಇನ್ನು ಕೆಲವರಿಗೆ ನಿರಾಶೆಯನ್ನುಂಟು ಮಾಡಿದೆ. ಇನ್ನು ಕೆಲವು ಚಿತ್ರರಂಗ ಸಾಧಾರಣ ಫಲಿತಾಂಶ ಸಿಕ್ಕಿದೆ. ಸ್ಯಾಂಡಲ್‌ವುಡ್ ಮೊದಲ ಆರು ತಿಂಗಳು ಒಂದೇ ಒಂದು ಸೂಪರ್ ಹಿಟ್ ಸಿನಿಮಾ ಕೊಡುವುದಕ್ಕೂ ಆಗ ಸೋತಿತ್ತು.

ಆದರೆ, 2025ರ ದ್ವಿತೀಯಾರ್ಧ ಕನ್ನಡ ಚಿತ್ರರಂಗ ಸೆಂಚುರಿ ಮೇಲೆ ಸೆಂಚುರಿ ಬಾರಿಸಿದೆ. ಬ್ಯಾಕ್ ಟು ಬ್ಯಾಕ್ ಸೂಪರ್‌ ಹಿಟ್ ಸಿನಿಮಾಗಳು ರಿಲೀಸ್ ಆಗಿವೆ. ಹಾಗಿದ್ದರೆ, 2025ರಲ್ಲಿ ಗೂಗಲ್‌ನಲ್ಲಿ ಅತೀ ಹೆಚ್ಚು ಹುಡುಕಲ್ಪಟ್ಟ ಟಾಪ್‌ ಸಿನಿಮಾಗಳು ಯಾವುವು? ಯಾವ್ಯಾವ ಸಿನಿಮಾ ಯಾವ್ಯಾವ ಸ್ಥಾನದಲ್ಲಿದೆ? ಅನ್ನೋದನ್ನು ತಿಳಿಯೋಣ ಬನ್ನಿ.

Saiyaara Kantara Chapter 1 to Mahavatar Narsimha Google Top10 most searched movies in 2025 in India
ಟಾಪ್‌ 10- ಮಹಾವೀರ್ ನರಸಿಂಹ

ಈ ವರ್ಷ ಹೊಂಬಾಳೆ ಫಿಲ್ಮ್ಸ್ ಜಾಕ್‌ಪಾಟ್ ಅಂತಲೇ ಹೇಳಬೇಕು. ಈ ನಿರ್ಮಾಣ ಸಂಸ್ಥೆಯಲ್ಲಿ ನಿರ್ಮಿಸಲ್ಪಟ್ಟ ಎರಡು ಸಿನಿಮಾಗಳು ಬಾಕ್ಸಾಫೀಸ್‌ನಲ್ಲಿ ಧೂಳೆಬ್ಬಿಸಿವೆ. ಅದರಲ್ಲೊಂದು ಆನಿಮೆಟೆಡ್ ಸಿನಿಮಾ 'ಮಹಾವೀರ್ ನರಸಿಂಹ'. ಹಿಂದೂ ಪೌರಾಣಿಕ ಕಥೆಗೆ ಆನಿಮೇಷನ್ ಟಚ್ ಕೊಟ್ಟಿದ್ದ ಸಿನಿಮಾ ಬಾಕ್ಸಾಫೀಸ್‌ನಲ್ಲಿ ₹350 ಕೋಟಿಗೂ ಅಧಿಕ ಕಲೆಕ್ಷನ್ ಮಾಡಿತ್ತು.

ಟಾಪ್ 9- Mrs.

ಈ ವರ್ಷ ಗೂಗಲ್‌ನಲ್ಲಿ ಅತೀ ಬಾರಿ ಹುಡುಕಲ್ಪಟ್ಟ ಸಿನಿಮಾಗಳಲ್ಲಿ 9ನೇ ಸ್ಥಾನದಲ್ಲಿ ಇರೋದು 'Mrs'. ಇದು 2021ರಲ್ಲಿ ತೆರೆಕಂಡಿದ್ದ 'ದಿ ಗ್ರೇಟ್ ಇಂಡಿಯನ್ ಕಿಚನ್' ಸಿನಿಮಾದ ಬಾಲಿವುಡ್ ರಿಮೇಕ್. ಸಾನ್ಯಾ ಮಲ್ಹೋತ್ರಾ ನಟಿಸಿರುವ ಈ ಸಿನಿಮಾವನ್ನು ನೇರವಾಗಿ ಜೀ 5 ಓಟಿಟಿ ವೇದಿಕೆಯಲ್ಲಿ ರಿಲೀಸ್ ಮಾಡಲಾಗಿತ್ತು.

ಟಾಪ್ 8- ಗೇಮ್ ಚೇಂಜರ್

ಗೂಗಲ್‌ನಲ್ಲಿ ಅತೀ ಸರ್ಚ್ ಆದ ಸಿನಿಮಾಗಳಲ್ಲಿ ಸರ್ಪ್ರೈಸ್ ಎಂಟ್ರಿ ಅಂದರೆ, ಅದು ಶಂಕರ್ ನಿರ್ದೇಶಿಸಿದ ಸಿನಿಮಾ 'ಗೇಮ್ ಚೇಂಜರ್'. ರಾಮ್ ಚರಣ್ ಪ್ರಮುಖ ಪಾತ್ರದಲ್ಲಿ ನಟಿಸಿದ ಈ ಸಿನಿಮಾ ಬಾಕ್ಸಾಫೀಸ್‌ನಲ್ಲಿ ಹೀನಾಯವಾಗಿ ಸೋತಿತ್ತು. ಸುಮಾರು ₹450 ಕೋಟಿ ವೆಚ್ಚದಲ್ಲಿ ನಿರ್ಮಾಣಗೊಂಡಿದ್ದ ಈ ಸಿನಿಮಾ ರಾಮ್ ಚರಣ್ ಹಾಗೂ ಶಂಕರ್ ಇಬ್ಬರ ಕರಿಯರ್‌ನಲ್ಲೂ ಅತೀ ದೊಡ್ಡ ಪ್ಲಾಪ್ ಎಂದು ಸಾಬೀತಾಗಿತ್ತು. ಆದರೂ, ಗೂಗಲ್‌ನಲ್ಲಿ 8ನೇ ಸ್ಥಾನದಲ್ಲಿದೆ.

ಟಾಪ್ 7- ಹೌಸ್‌ಫುಲ್ 5

ಗೂಗಲ್‌ನಲ್ಲಿ ಟಾಪ್ 7ನೇ ಸ್ಥಾನದಲ್ಲಿರುವ ಸಿನಿಮಾ 'ಹೌಸ್‌ಫುಲ್ 5'. ಇದು ಹೌಸ್‌ಫುಲ್ ಸೀರಿಸ್‌ನ ಐದನೇ ಚಾಪ್ಟರ್ ಆಗಿತ್ತು. ಹೀಗಾಗಿ ನಿರೀಕ್ಷೆಗಳು ಹೆಚ್ಚಿದ್ದವು. ಅಕ್ಷಯ್ ಕುಮಾರ್, ಚುಂಕಿ ಪಾಂಡೇ, ಜಾನಿ ಲಿವರ್ ಅಂತ ಖ್ಯಾತ ನಟರು ಈ ಸಿನಿಮಾದಲ್ಲಿ ನಟಿಸಿದ್ದರು. ಆದರೆ, ಬಾಕ್ಸಾಫೀಸ್‌ನಲ್ಲಿ ಮಕಾಡೆ ಮಲಗಿತ್ತು.

Saiyaara Kantara Chapter 1 to Mahavatar Narsimha Google Top10 most searched movies in 2025 in India


ಟಾಪ್ 6- 'ಮಾರ್ಕೋ'

ಉನ್ನಿ ಕೃಷ್ಣನನ್ ಪ್ರಮುಖ ಪಾತ್ರದಲ್ಲಿ ನಟಿಸಿರುವ ಮಲಯಾಳಂ ಸಿನಿಮಾ 'ಮಾರ್ಕೋ' 6ನೇ ಸ್ಥಾನದಲ್ಲಿದೆ. ಕೇವಲ ₹25 ಕೋಟಿ ಬಜೆಟ್‌ನಲ್ಲಿ ನಿರ್ಮಾಣ ಆಗಿದ್ದ ಈ ಸಿನಿಮಾ ಬಾಕ್ಸಾಫೀಸ್‌ನಲ್ಲಿ ವಿಶ್ವದಾದ್ಯಂತ ₹100 ಕೋಟಿಗೂ ಅಧಿಕ ಕಲೆಕ್ಷನ್ ಮಾಡಿತ್ತು.

ಟಾಪ್ 5- ಸನಮ್ ತೇರಿ ಕಸಮ್

2016ರಲ್ಲಿ ತೆರೆಕಂಡಿದ್ದ ಸಿನಿಮಾ 'ಸನಮ್ ತೇರಿ ಕಸಮ್' ರೀ-ರಿಲೀಸ್ ಮಾಡಲಾಗಿತ್ತು. ಬಾಕ್ಸಾಫೀಸ್‌ನಲ್ಲಿ ನಿರೀಕ್ಷೆಗೂ ಮೀರಿದ ಗಳಿಕೆ ಮಾಡಿದೆ. ಭಾರತೀಯ ಚಿತ್ರರಂಗದ ಇತಿಹಾಸದಲ್ಲಿ ರೀ-ರಿಲೀಸ್ ಆದ ಸಿನಿಮಾ ₹50 ಕೋಟಿ ರೂಪಾಯಿ ಕಲೆಕ್ಷನ್ ಮಾಡಿತ್ತು. ಇದು ಗೂಗಲ್‌ನಲ್ಲಿ ಸರ್ಚ್ ಆದ ಟಾಪ್ 5 ಸಿನಿಮಾ ಎನಿಸಿಕೊಂಡಿದೆ.

ಟಾಪ್ 4- ವಾರ್ 2

ಯಶ್‌ ರಾಜ್ ಫಿಲ್ಮ್ಸ್ ನಿರ್ಮಾಣದ ಮತ್ತೊಂದು ದುಬಾರಿ ಸಿನಿಮಾ 'ವಾರ್ 2'. ಹೃತಿಕ್ ರೋಷನ್ ಹಾಗೂ ಜೂ.ಎನ್‌ಟಿಆರ್ ಪ್ರಮುಖ ಪಾತ್ರದಲ್ಲಿ ನಟಿಸಿರುವ ಈ ಸಿನಿಮಾ ಬಾಕ್ಸಾಫೀಸ್‌ನಲ್ಲಿ ದೊಡ್ಡ ಮಟ್ಟಕ್ಕೆ ಸದ್ದು ಮಾಡಲಿಲ್ಲ. ಆದರೂ ಗೂಗಲ್‌ನಲ್ಲಿ ಅತೀ ಹುಡುಕಲ್ಪಟ್ಟ ಸಿನಿಮಾಗಳ ಪೈಕಿ 4ನೇ ಸ್ಥಾನದಲ್ಲಿದೆ.

ಟಾಪ್ 3- ಕೂಲಿ

ಸೂಪರ್‌ಸ್ಟಾರ್ ರಜನಿಕಾಂತ್ ಹಾಗೂ ನಿರ್ದೇಶಕ ಲೋಕೇಶ್ ಕನಕರಾಜ್ ಕಾಂಬಿನೇಷನ್ ಸಿನಿಮಾ 'ಕೂಲಿ'. ಈ ಸಿನಿಮಾ ಮೇಲೂ ಸಿಕ್ಕಾಪಟ್ಟೆ ನಿರೀಕ್ಷೆಯಿತ್ತು. ಆದರೆ, ಈ ಕಾಂಬಿನೇಷನ್‌ ಕೂಡ ಮೋಡಿ ಮಾಡುವಲ್ಲಿ ಸೋತಿತ್ತು. ಆದರೂ, ಗೂಗಲ್‌ನಲ್ಲಿ ಅತೀ ಹೆಚ್ಚು ಸರ್ಚ್ ಮಾಡಿದ ಭಾರತ ಸಿನಿಮಾಗಳ ಪೈಕಿ ಟಾಪ್ 3 ಸ್ಥಾನದಲ್ಲಿದೆ.

ಟಾಪ್ 2- ಕಾಂತಾರ ಚಾಪ್ಟರ್ 1

ಕನ್ನಡ ಸಿನಿಮಾ 'ಕಾಂತಾರ ಚಾಪ್ಟರ್ 1' ಈ ವರ್ಷ ಗೂಗಲ್‌ನಲ್ಲೂ ಮಿಂಚಿದೆ. ರಿಷಬ್ ಶೆಟ್ಟಿ ನಿರ್ದೇಶಿಸಿದ ಈ ಸಿನಿಮಾ ಬಾಕ್ಸಾಫೀಸ್‌ನಲ್ಲಿ ಹೆಚ್ಚು ಕಡಿಮೆ ₹900 ಕೋಟಿ ಕಲೆಕ್ಷನ್ ಮಾಡಿತ್ತು. ಇದು ಗೂಗಲ್‌ನ ಟಾಪ್ 2 ಸ್ಥಾನದಲ್ಲಿದೆ.

ಟಾಪ್ 1- ಸೈಯ್ಯಾರಾ

ಈ ವರ್ಷ ಹೊಸ ಪ್ರತಿಭೆಗಳು ಬಾಲಿವುಡ್‌ನ ಸೂಪರ್‌ಸ್ಟಾರ್‌ಗಳನ್ನೂ ಮೀರಿಸಿದ್ದಾರೆ. ಮೋಹಿತ್ ಸೂರಿ ನಿರ್ದೇಶಿಸಿದ 'ಸೈಯ್ಯಾರಾ' ಎಲ್ಲರ ಪ್ರಿಡಿಕ್ಷನ್‌ ಅನ್ನು ತಲೆ ಕೆಳಗೆ ಮಾಡಿತ್ತು. ಅಹಾನ್ ಪಾಂಡೆ ಹಾಗೂ ಅನೀತ್ ಪಡ್ಡ ಇಬ್ಬರ ನಟರು ಬಾಲಿವುಡ್‌ನಲ್ಲಿ ಹೊಸ ಪ್ರತಿಭೆಗಳಾಗಿ ಮಿಂಚಿದ್ದಾರೆ. ಈ ಸಿನಿಮಾ ಬಾಕ್ಸಾಫೀಸ್‌ನಲ್ಲಿ ₹550 ಕೋಟಿಗೂ ಅಧಿಕ ಕಲೆಕ್ಷನ್ ಮಾಡಿದೆ.

More from Filmibeat

English summary
Saiyaara, Kantara Chapter 1 to Mahavatar Narsimha Google Top10 most searched movies in 2025 in India.
Read more about: google movies year ender 2025
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X