IMDb Movies List: 2025ರಲ್ಲಿ ಭಾರೀ ಜನಪ್ರಿಯತೆ ಗಿಟ್ಟಿಸಿಕೊಂಡ ಭಾರತದ ಸಿನಿಮಾಗಳಿವು;'ಕಾಂತಾರ 1'ಗೆ ಎಷ್ಟನೇ ಸ್ಥಾನ?
2025 ಕೆಲವು ಚಿತ್ರರಂಗಕ್ಕೆ ಜಾಕ್‌ಪಾಟ್. ಇನ್ನು ಕೆಲವು ಚಿತ್ರರಂಗ ಸಂಕಷ್ಟ. ವರ್ಷದ ಕೊನೆಯಲ್ಲಿ ಸಪ್ಪೆಯಾಗಿದ್ದು, ಕೊನೆಯಲ್ಲಿ ಮೆಗಾ ಬ್ಲಾಕ್‌ಬಸ್ಟರ್ ಸಿನಿಮಾಗಳನ್ನು ಕೊಟ್ಟ ಚಿತ್ರರಂಗ ಕೂಡ ಇದೆ. ಇಂತಹ ಸಿನಿಮಾ ಇಂಡಸ್ಟ್ರಿಯಲ್ಲಿ ಸ್ಯಾಂಡಲ್‌ವುಡ್ ಕೂಡ ಒಂದು. ಸಿನಿಮಾಗಳು, ಸೆಲೆಬ್ರೆಟಿಗಳು, ಟಿವಿ ಶೋಗಳ ಬಗ್ಗೆ ಮಾಹಿತಿಯನ್ನು ನೀಡುತ್ತಿರುವ ವಿಶ್ವದ ಜನಪ್ರಿಯ ತಾಣ IMDb (www.imdb.com) 2025ರಲ್ಲಿ ಅತೀ ಹೆಚ್ಚು ಜನಪ್ರಿಯತೆಯನ್ನು ಗಿಟ್ಟಿಸಿಕೊಂಡ ಸಿನಿಮಾಗಳ ಪಟ್ಟಿಯನ್ನು ರಿಲೀಸ್ ಮಾಡಿದೆ.
ವಿಶ್ವದ ಮೂಲೆ ಮೂಲೆಯಿಂದ ಒಂದು ತಿಂಗಳಿಗೆ IMDb ತಾಣಕ್ಕೆ ಸುಮಾರು 250 ಮಿಲಿಯನ್ ಮಂದಿ ವಿಸಿಟ್ ಹಾಕುತ್ತಾರೆ. ಇವರು ಯಾವ ಸಿನಿಮಾಗಳ ಬಗ್ಗೆ ಹೆಚ್ಚು ಆಸಕ್ತಿ ತೋರಿದ್ದಾರೆ ಅನ್ನೋದನ್ನು ಗಮನದಲ್ಲಿ ಇಟ್ಟುಕೊಂಡು ಭಾರತದಲ್ಲಿ 2025ರಲ್ಲಿ ಅತೀ ಜನಪ್ರಿಯತೆ ಪಡೆದ ಸಿನಿಮಾಗಳನ್ನು ಪಟ್ಟಿಯನ್ನು ಸಿದ್ಧಪಡಿಸಿದೆ.

ಈ ಟಾಪ್ 10 ಸಿನಿಮಾಗಳ ಪಟ್ಟಿಯ ಬಗ್ಗೆ IMDbಯ ಇಂಡಿಯಾದ ಮುಖ್ಯಸ್ಥೆ ಯಾಮಿನಿ ಮಾಹಿತಿಯನ್ನು ಹಂಚಿಕೊಂಡಿದ್ದಾರೆ. "2025ರ ಅತ್ಯಂತ ಜನಪ್ರಿಯ ಭಾರತೀಯ ಸಿನಿಮಾಗಳ ಪಟ್ಟು ಭಾರತದ ನಿರ್ಮಾಪಕರ ಧೈರ್ಯ ಮತ್ತು ಹೊಸತನವನ್ನು ಎತ್ತಿ ಹಿಡಿಯುತ್ತಿದೆ" ಎಂದು ಹೇಳಿದ್ದಾರೆ. ಹಾಗೇ "ರೊಮ್ಯಾನ್ಸ್‌ನಿಂದ ಹಿಡಿದು ಅನಿಮೇಷನ್‌ವರೆಗೆ, ಸೂಪರ್ ಹೀರೋ ಸಿನಿಮಾಗಳಿಂದ ಹಿಡಿದು ವಿಡಂಬನಾತ್ಮಕ ಸಿನಿಮಾಗಳವರೆಗೆ ವೈವಿಧ್ಯಮಯ ಕಥೆ ಹೇಳುವ ಶೈಲಿ ಉದ್ಯಮದ ಉತ್ಸಾಹವನ್ನು ತೋರಿಸುತ್ತದೆ." ಎಂದಿದ್ದಾರೆ.
ಇನ್ನು IMDb ಮೋಸ್ಟ್ ಪಾಪುಲರ್ ಸಿನಿಮಾಗಳ ಪಟ್ಟಿಯಲ್ಲಿ ಯಶ್ ರಾಜ್ ಫಿಲ್ಮ್ಸ್ ನಿರ್ಮಿಸಿದ 'ಸೈಯಾರಾ' ಇದೆ. ಈ ಬಗ್ಗೆ ಯಶ್ ರಾಜ್ ಫಿಲ್ಮ್ಸ್ ಸಿಇಓ ಅಕ್ಷಯ್ ವಿಧನಿ ಪ್ರತಿಕ್ರಿಯೆ ನೀಡಿದ್ದಾರೆ. "IMDb 2025ರ ಪಟ್ಟಿಯಲ್ಲಿ ಸೈಯಾರಾ ಅತ್ಯಂತ ಜನಪ್ರಿಯ ಭಾರತೀಯ ಸಿನಿಮಾವಾಗಿದ್ದು YRFನಲ್ಲಿರುವ ನಮಗೆಲ್ಲರಿಗೂ ಹೆಮ್ಮೆ. ಈ ಸಿನಿಮಾ ಹೊಸ ಮಾನದಂಡಗಳು, ಭೌಗೋಳಿಕತೆ, ವಯಸ್ಸು ಹಾಗೂ ಸಂಸ್ಕೃತಿಯನ್ನೂ ಮೀರಿ ವಿಶ್ವದಾದ್ಯಂತ ಪ್ರೇಕ್ಷಕರ ಜೊತೆ ಸಂಪರ್ಕ ಸಾಧಿಸಿದೆ." ಎಂದಿದ್ದಾರೆ.
IMDb 2025ರ ಟಾಪ್ 10 ಭಾರತದ ಸಿನಿಮಾಗಳು
1 ಸೈಯಾರಾ
2 ಮಹಾವತಾರ್ ನರಸಿಂಹ
3 ಛಾವಾ
4 ಕಾಂತಾರ: ಎ ಲೆಜೆಂಡ್ - ಚಾಪ್ಟರ್ 1
5 ಕೂಲಿ
6 ಡ್ರಾಗನ್
7 ಸಿತಾರೆ ಜಮೀನ್ ಪರ್
8 ದೇವಾ
9 ರೈಡ್ 2
10 ಲೋಕಾಃ ಚಾಪ್ಟರ್ 1: ಚಂದ್ರ

IMDb ಟಾಪ್ 10 ಪಟ್ಟಿಯನ್ನು 2025ರ ಜನವರಿ 1 ರಿಂದ ಹಿಡಿದು ನವೆಂಬರ್ 30ರ ನಡುವಿನ ಅಂಕಿ-ಅಂಶಗಳನ್ನು ತೆಗೆದುಕೊಂಡಿದೆ. ಈ ಅವಧಿಯಲ್ಲಿ ಭಾರತದಲ್ಲಿ ಬಿಡುಗಡೆಯಾದ ಸಿನಿಮಾಗಳ ಬಗ್ಗೆ IMDbಯಲ್ಲಿ ವೀಕ್ಷಕರು ಹುಡುಕಾಡಿದ ಅಂಶಗಳನ್ನು ತೆಗೆದುಕೊಂಡಿದ್ದಾರೆ. ಈ ಪೈಕಿ 6 ಅಥವಾ ಅದಕ್ಕಿಂತ ಹೆಚ್ಚು ಅಂಕಗಳಿರುವ ಸಿನಿಮಾಗಳಲ್ಲಿ ಅತೀ ಹೆಚ್ಚು ವೀಕ್ಷಿಸಿದ ಸಿನಿಮಾಗಳಲ್ಲಿ ಟಾಪ್ 10 ಅನ್ನು ಆಯ್ಕೆ ಮಾಡಲಾಗಿದೆ.
IMDb 2025 ರ ಅತ್ಯಂತ ಜನಪ್ರಿಯ ಭಾರತದ ಸಿನಿಮಾಗಳ ಪಟ್ಟಿಯಲ್ಲಿ ಐದು ಹಿಂದಿ ಸಿನಿಮಾಗಳಿವೆ. ಇದರ ಹಿಂದೆನೇ ಎರಡು ತಮಿಳು ಸಿನಿಮಾಗಳು ಹಾಗೂ ಕನ್ನಡ ಮತ್ತು ಮಲಯಾಳಂನಿಂದ ತಲಾ ಒಂದೊಂದು ಸಿನಿಮಾವಿದೆ. ಮಹಾವತಾರ್ ನರಸಿಂಹ ಏಕಕಾಲದಲ್ಲಿ ಐದು ಭಾಷೆಗಳಲ್ಲಿ ಬಿಡುಗಡೆಯಾಗಿದ್ದು, ಮಹಾವತಾರ್ ನರಸಿಂಹ IMDb ವರ್ಷಾಂತ್ಯದ ಭಾರತೀಯ ಪಟ್ಟಿಯಲ್ಲಿ ಸ್ಥಾನ ಪಡೆದ ಮೊದಲ ಅನಿಮೇಟೆಡ್ ಸಿನಿಮಾವಾಗಿದೆ.


Click it and Unblock the Notifications











