ಐಶ್ವರ್ಯಾ ರೈ ಮದುವೆ ಬಗ್ಗೆ ಸಲ್ಮಾನ್ ಖಾನ್ ಕಮೆಂಟ್; ವಿಚ್ಚೇದನ ಸುದ್ದಿಯ ಬೆನ್ನಲ್ಲೇ ವಿಡಿಯೋ ವೈರಲ್
ಕಳೆದ ಕೆಲವು ದಿನಗಳಿಂದ ಮಾಜಿ ವಿಶ್ವ ಸುಂದರಿ ಐಶ್ವರ್ಯಾ ರೈ ಹಾಗೂ ಅಭಿಷೇಕ್ ಬಚ್ಚನ್ ವಿಚ್ಛೇದನದ ಸುದ್ದಿ ಹರಿದಾಡುತ್ತಿದೆ. ಅದೆಷ್ಟೋ ಬಾರಿ ಈ ಜೋಡಿ ಒಟ್ಟಿಗೆ ಕಾಣಿಸಿಕೊಂಡು ಗಾಳಿ ಸುದ್ದಿಗೆ ಬ್ರೇಕ್ ಹಾಕುವ ಪ್ರಯತ್ನ ಮಾಡಿದ್ದರು. ಆದರೂ, ಒಂದಲ್ಲ ಒಂದು ಕಾರಣಕ್ಕೆ ಮತ್ತೆ ಈ ವಿಚ್ಚೇದನದ ಮ್ಯಾಟರ್ ಮುನ್ನೆಲೆಗೆ ಬಂದು ಬಿಡುತ್ತೆ.
ಇತ್ತೀಚೆಗೆ ಅಭಿಷೇಕ್ ಬಚ್ಚನ್ ತನ್ನ ಇನ್‌ಸ್ಟಾಗ್ರಾಂ ಸ್ಟೋರಿಯಲ್ಲಿ ಪೋಸ್ಟ್ ಮಾಡಿದ್ದರು. ಆ ಪೋಸ್ಟ್ ಮತ್ತೆ ಅಭಿಷೇಕ್ ಹಾಗೂ ಐಶ್ವರ್ಯಾ ರೈ ಡಿವೋರ್ಸ್ ಬಗ್ಗೆ ಮತ್ತೆ ಕಿಡಿ ಹಚ್ಚಿದೆ. ಇದೇ ಪೋಸ್ಟ್ ಇಟ್ಟುಕೊಂಡು ಈ ಜೋಡಿಯ ವಿಚ್ಚೇದನದ ಬಗ್ಗೆ ಸುದ್ದಿಗಳು ಹರಿದಾಡುವುದಕ್ಕೆ ಶುರುವಾಗಿದೆ. ಈ ಪೋಸ್ಟ್‌ನಲ್ಲಿ ಅಭಿಷೇಕ್ ಬಚ್ಚನ್ ಬದುಕಿನ ಕಂಡ ಸೋಲುಗಳ ಬಗ್ಗೆ ಮಾತಾಡಿದ್ದರು.

"ಸೋಲುತ್ತೇನೆ ಅನ್ನುವ ಭಯ ನಿಮ್ಮ ಕನಸುಗಳನ್ನು ನಾಶ ಮಾಡಿಬಿಡುತ್ತೆ. ಸೋಲಿನಿಂದ ಕಲಿಯುವುದು ನಿಮ್ಮ ಕನಸನ್ನು ಕಟ್ಟಿಕೊಡುತ್ತೆ" ಎಂದು ಅಭಿಷೇಕ್ ಬಚ್ಚನ್ ತನ್ನ ಇನ್‌ಸ್ಟಾಗ್ರಾಂ ಸ್ಟೋರಿಯಲ್ಲಿ ಬರೆದುಕೊಂಡಿದ್ದರು. ಈ ಪೋಸ್ಟ್ ಅನ್ನೇ ಇಟ್ಟುಕೊಂಡು ಬಾಲಿವುಡ್‌ನಲ್ಲಿ ಮತ್ತೆ ಐಶ್ವರ್ಯಾ ರೈ ಬಚ್ಚನ್ ಹಾಗೂ ಅಭಿಷೇಕ್ ಬಚ್ಚನ್ ವಿಚ್ಛೇದನದ ಬಗ್ಗೆ ಗಾಳಿ ಸುದ್ದಿ ಹಬ್ಬಿದೆ.
ಅದ್ಯಾವಾಗ ಮತ್ತೆ ಐಶ್ವರ್ಯಾ ರೈ ಬಚ್ಚನ್ ಹಾಗೂ ಅಭಿಷೇಕ್ ಬಚ್ಚನ್ ವಿಚ್ಛೇದನದ ಸುದ್ದಿ ಮತ್ತೆ ಸದ್ದು ಮಾಡಲಾರಂಭಿಸಿತೋ? ಇದೇ ವೇಳೆ ಸಲ್ಮಾನ್ ಖಾನ್ ತಮ್ಮ ಮಾಜಿ ಗೆಳತಿ ಐಶ್ವರ್ಯಾ ರೈ ಬಚ್ಚನ್ ಮದುವೆ ಬಗ್ಗೆ ಕಮೆಂಟ್ ಮಾಡಿರುವ ವಿಡಿಯೋ ವೈರಲ್ ಆಗುತ್ತಿದೆ. ಸೋಶಿಯಲ್ ಮೀಡಿಯಾದಲ್ಲಿ ಈ ವಿಡಿಯೋ ಬಗ್ಗೆ ಚರ್ಚೆಯಾಗುತ್ತಿದೆ.

ಹೌದು, ಸಲ್ಮಾನ್ ಖಾನ್ 2010ರಲ್ಲಿ ಸಂದರ್ಶನ ನೀಡಿದ್ದರು. ಹಿಂದಿಯ ಜನಪ್ರಿಯ ಶೋ 'ಅಪ್ ಕಿ ಅದಾಲತ್'ನಲ್ಲಿ ಐಶ್ವರ್ಯಾ ರೈ ಮದುವೆ ಬಗ್ಗೆ ಪ್ರಶ್ನೆ ಮಾಡಲಾಗಿತ್ತು. ಈ ವೇಳೆ ಸಲ್ಮಾನ್ ಖಾನ್ ತನ್ನ ಮಾಜಿ ಗೆಳತಿಯ ಬಗ್ಗೆ ಮನಬಿಚ್ಚಿ ಮಾತಾಡಿದ್ದರು. ಅಭಿಷೇಕ್ ಬಚ್ಚನ್ ಅನ್ನು ಐಶ್ವರ್ಯಾ ರೈ ವಿವಾಹವಾಗುತ್ತಿರುವ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ್ದರು.
ಅಪ್ ಕಿ ಅದಾಲತ್ ಶೋನಲ್ಲಿ "ಅಭಿಷೇಕ್ ಜೊತೆ ಐಶ್ವರ್ಯಾ ರೈ ಮದುವೆ ಆಗುತ್ತಿರುವುದರಿಂದ ನನಗೆ ಖುಷಿಯಾಗಿದೆ. ಅಭಿಷೇಕ್ ಬಚ್ಚನ್ ಒಬ್ಬ ಉತ್ತಮ ವ್ಯಕ್ತಿ." ಎಂದು ಹೇಳಿದ್ದರು. ಈ ಸಂದರ್ಶನದ ವಿಡಿಯೋವನ್ನು ಸೋಶಿಯಲ್ ಮೀಡಿಯಾದಲ್ಲಿ ಹರಿಬಿಡಲಾಗಿದೆ. ಈಗ ಐಶ್ ಹಾಗೂ ಅಭಿಷೇಕ್ ಡಿವೋರ್ಸ್ ಸುದ್ದಿ ಓಡಾಡುತ್ತಿರುವಾಗಲೇ ಸೋಶಿಯಲ್ ಮೀಡಿಯಾದಲ್ಲಿ ಚರ್ಚೆಯಾಗುತ್ತಿದೆ.
2007ರಲ್ಲಿ ಐಶ್ವರ್ಯಾ ರೈ ಹಾಗೂ ಅಭಿಷೇಕ್ ಬಚ್ಚನ್ ಮುಂಬೈನಲ್ಲಿ ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದರು. 17 ವರ್ಷಗಳ ಸಾಂಸಾರಿಕ ಜೀವನದಲ್ಲಿ ಇದೇ ಮೊದಲ ಬಾರಿಗೆ ಇಬ್ಬರ ನಡುವೆ ಬಿರುಕು ಬಿಟ್ಟಿರುವ ಸುದ್ದಿ ಇಷ್ಟೊಂದು ಸದ್ದು ಮಾಡುತ್ತಿದೆ. ಅದೆಷ್ಟೋ ಬಾರಿಗೆ ಐಶ್ ಹಾಗೂ ಅಭಿಷೇಕ್ ಇಬ್ಬರೂ ಒಟ್ಟಿಗೆ ಸಾರ್ವಜನಿಕವಾಗಿ ಕಾಣಿಸಿಕೊಂಡಿದ್ದರು. ಆದರೂ, ಈ ಗಾಳಿಸುದ್ದಿಗೆ ತೆರೆಬಿದ್ದಿಲ್ಲ.


Click it and Unblock the Notifications











