"ನಾನು ಸಲ್ಮಾನ್ ಖಾನ್ ಫ್ಲಾಟ್‌ನಲ್ಲಿ ರೊಮ್ಯಾನ್ಸ್ ಮಾಡುವಾಗ ಸಂಗೀತಾ ಬಿಜಲಾನಿ ಕೈಯಲ್ಲಿ ಸಿಕ್ಕಿ ಬಿದ್ದಿದ್ವಿ": ಸೋಮಿ ಅಲಿ

ಬಾಲಿವುಡ್‌ ಸೂಪರ್‌ಸ್ಟಾರ್ ಸಲ್ಮಾನ್ ಖಾನ್ ಮದುವೆ ಅವರ ಫ್ಯಾನ್ಸ್‌ಗೆ ಮಿಲಿಯನ್ ಡಾಲರ್ ಪ್ರಶ್ನೆಯಾಗಿದೆ. ವಯಸ್ಸು 60 ಆದರೂ ಸಲ್ಮಾನ್ ಖಾನ್ ಇನ್ನೂ ಮದುವೆ ಆಗದೆ ಹಾಗೇ ಉಳಿದು ಬಿಟ್ಟಿದ್ದಾರೆ. ಯಶಸ್ಸು, ಹಣ ಎಲ್ಲವೂ ಇದ್ದರೂ ಸಲ್ಮಾನ್ ಖಾನ್ ಯಾಕಿನ್ನೂ ಮದುವೆ ಆಗಿಲ್ಲ ಅನ್ನೋದಕ್ಕೆ ಅಭಿಮಾನಿಗಳಿಗೆ ಸಮಾಧಾನ ಆಗೋ ರೀತಿ ಉತ್ತರ ಕೊಟ್ಟಿಲ್ಲ. ಹಾಗಾಗಿ ಸಲ್ಮಾನ್ ಮದುವೆ ಮ್ಯಾಟರ್ ಇನ್ನೂ ಕಗ್ಗಂಟಾಗಿಯೇ ಉಳಿದಿದೆ.

ಹಾಗಂತ ಸಲ್ಮಾನ್ ಖಾನ್‌ ಮದುವೆ ಆಗುವುದಕ್ಕೆ ಹುಡುಗಿಯರೇ ಸಿಕ್ಕಿಲ್ಲ ಅಂತಲ್ಲ. ಬಾಲಿವುಡ್‌ನ ನಾಯಕಿಯರು ಹಾಗೂ ಮಾಡಲ್‌ಗಳ ಜೊತೆ ಸಲ್ಮಾನ್ ಖಾನ್ ಲವ್‌ನಲ್ಲಿ ಬಿದ್ದಿದ್ದು ಈಗ ಹೊಸ ವಿಷಯವೇನಲ್ಲ. ಸಲ್ಮಾನ್ ಖಾನ್ ಡೇಟಿಂಗ್ ಮಾಡಿದ ನಾಯಕಿಯರ ಪಟ್ಟಿ ಕೂಡ ಅಷ್ಟೇ ಉದ್ದವಿದೆ. ಆದರೆ, ಆ ಸಂಬಂಧಗಳೆಲ್ಲ ಯಾಕೆ ಮುರಿದು ಬಿತ್ತು? ಅನ್ನೋದು ಒಂದೊಂದಾಗೇ ಈಗ ಹೊರಗೆ ಬರುತ್ತಿದೆ.

Salman Khan s ex-girlfriend Somy Ali reveals Sangeetha Bijlani caught them while romancing in Flat

ಸಲ್ಮಾನ್ ಖಾನ್ 80ರ ದಶಕದಲ್ಲಿ ನಟಿ ಕಮ್ ಮಾಡಲ್ ಆಗಿದ್ದ ಸಂಗೀತಾ ಬಿಜಲಾನಿಯನ್ನು ವಿವಾಹವಾಗಬೇಕಿತ್ತು. ಇಬ್ಬರೂ ಡೀಪ್ ಲವ್‌ನಲ್ಲಿ ಬಿದ್ದಿದ್ದರು. ಮನೆಯಿಂದಲೂ ಒಪ್ಪಿಗೆ ಸಿಕ್ಕಿತ್ತು. ಆಮಂತ್ರಣ ಪತ್ರಿಕೆ ಕೂಡ ರೆಡಿಯಾಗಿತ್ತು. ಇಂತಹ ಸಂದರ್ಭದಲ್ಲಿ ಮದುವೆ ಮುರಿದು ಬಿದ್ದಿತ್ತು. ಅದ್ಯಾಕೆ ಅನ್ನೋದನ್ನು ಸಲ್ಮಾನ್ ಖಾನ್ ಜೊತೆ ಡೇಟಿಂಗ್ ಮಾಡಿದ್ದ ಮಾಜಿ ಪ್ರೇಯಸಿ ರಿವೀಲ್ ಮಾಡಿದ್ದಾರೆ.

ಸಂಗೀತಾ ಬಿಜಲಾನಿ ಬಳಿಕ ಸಲ್ಮಾನ್ ಖಾನ್ ಜೊತೆ ಡೇಟಿಂಗ್ ಮಾಡುತ್ತಿದ್ದ ಸೋಮಿ ಅಲಿ ಕೆಲವು ವಿಷಯಗಳನ್ನು ರಿವೀಲ್ ಮಾಡಿದ್ದಾರೆ. ಸೋಮಿ ಅಲಿ ಬಾಲಿವುಡ್‌ ನಟ ಸಲ್ಮಾನ್ ಖಾನ್ ಬಗ್ಗೆ ಆಗಾಗ ಕೆಲವು ಹೇಳಿಕೆಗಳನ್ನು ನೀಡುತ್ತಲೇ ಇರುತ್ತಾರೆ. ಇತ್ತೀಚೆಗೆ ನೀಡಿದ ಸಂದರ್ಶನದಲ್ಲಿ ಸಲ್ಮಾನ್ ಖಾನ್ ತನ್ನ ಜೊತೆ ಪ್ಲ್ಯಾಟ್‌ನಲ್ಲಿ ರೊಮ್ಯಾನ್ಸ್ ಮಾಡುವಾಗ ಭಾವಿ ಪತ್ನಿಯಾಗಿದ್ದ ಸಂಗೀತಾ ಬಿಜಲಾನಿ ಕೈಗೆ ರೆಡ್ ಹ್ಯಾಂಡ್ ಆಗಿ ಸಿಕ್ಕಿಬಿದ್ದಿದ್ದೆವು ಎಂದು ಹೇಳಿಕೊಂಡಿದ್ದಾರೆ.

"ಸಲ್ಮಾನ್ ಖಾನ್ ಮಾಡೆಲ್ ಕಮ್ ನಟಿ ಸಂಗೀತಾ ಬಿಜಲಾನಿ ಅವರ ಜೊತೆ ಮದುವೆ ಸಿದ್ಧತೆ ನಡೆಸಿದ್ದರು. ಅದೇ ವೇಳೆ ನನ್ನ ಜೊತೆ ಡೇಟಿಂಗ್ ಮಾಡುತ್ತಿದ್ದರು. ನನ್ನ ಪ್ಲ್ಯಾಟ್‌ನಲ್ಲಿ ನಾನು ಮತ್ತು ಸಲ್ಮಾನ್ ಖಾನ್ ರೊಮ್ಯಾನ್ಸ್ ಮಾಡುತ್ತಿದ್ದ ಅಲ್ಲಿಗೆ ಸಂಗೀತಾ ಬಿಜಲಾನಿ ಬಂದಿದ್ದರು. ನನ್ನ ಪ್ಲ್ಯಾಟ್ ಬಾಗಿಲು ತಟ್ಟಿ ಒಳಗೆ ಬಂದಿದ್ದರು. ಆ ವೇಳೆ ನನ್ನ ಜೊತೆ ಸಲ್ಮಾನ್ ಖಾನ್ ಇದ್ದರು. ನಾವಿಬ್ಬರೂ ರೆಡ್ ಹ್ಯಾಂಡ್ ಆಗಿ ಸಂಗೀತಾ ಕೈಯಲ್ಲಿ ಸಿಕ್ಕಿ ಬಿದ್ದಿದ್ದೆವು" ಎಂದು ಸೋಮಿ ಅಲಿ ಸಂದರ್ಶನವೊಂದರಲ್ಲಿ ಹೇಳಿಕೊಂಡಿದ್ದಾರೆ.

Salman Khan s ex-girlfriend Somy Ali reveals Sangeetha Bijlani caught them while romancing in Flat

ಸದ್ಯ ಈ ಸಂದರ್ಶನವೀಗ ಎಲ್ಲಾ ಕಡೆಗಳಲ್ಲಿ ವೈರಲ್ ಆಗುತ್ತಿದೆ. ಸಂಗೀತಾ ಬಿಜಲಾನಿ ಹಾಗೂ ಸಲ್ಮಾನ್ ಖಾನ್ ಮದುವೆ ಮುರಿದು ಬೀಳುವುದಕ್ಕೆ ಇದೇ ಕಾರಣ ಎಂದು ಊಹಿಸಲಾಗುತ್ತಿದೆ. ಸಂಗೀತಾ ಬಿಜಲಾನಿ ಬಳಿಕ ಸಲ್ಮಾನ್ ಖಾನ್ ನಟಿ ಸೋಮಿ ಅಲಿ ಜೊತೆ ಡೇಟಿಂಗ್ ನಡೆಸಿದ್ದರು. ಇದು 1991 ಯಿಂದ 1999ರವರೆಗೂ ಮುಂದುವರೆದಿತ್ತು. ಕೆಲವು ತಿಂಗಳುಗಳ ಹಿಂದೆ ಈಕೆನೇ ಸಲ್ಮಾನ್ ಖಾನ್ ಜೊತೆ ಡೇಟಿಂಗ್ ಮಾಡುತ್ತಿದ್ದಾಗ ದೈಹಿಕವಾಗಿ ಹಲ್ಲೆ ಮಾಡುತ್ತಿದ್ದ ಎಂದು ಆರೋಪಿಸಿದ್ದರು. ಈಗ ಸೋಮಿ ಅಲಿಯ ಮತ್ತೊಂದು ಹೇಳಿಕೆ ಸದ್ದು ಮಾಡುವುದಕ್ಕೆ ಶುರು ಮಾಡಿದೆ.

ಸಲ್ಮಾನ್ ಖಾನ್ ಜೊತೆ ಹಲವು ನಟಿಯರ ಹೆಸರು ತಳುಕು ಹಾಕಿಕೊಂಡಿದೆ. ಸಂಗೀತಾ ಬಿಜಲಾನಿ, ಸೋಮಿ ಅಲಿ ಬಳಿಕ ಮಾಜಿ ವಿಶ್ವ ಸುಂದರಿ ಐಶ್ವರ್ಯಾ ರೈ, ಕತ್ರಿನಾ ಕೈಫ್, ಜಾಕ್ವೆಲಿನ್ ಫರ್ನಾಂಡೀಸ್, ಲೂಲಿಯಾ ವೆಂಥೂರ್ ಅವರ ಹೆಸರುಗಳು ಕೂಡ ತಳುಕು ಹಾಕಿಕೊಂಡಿವೆ. ಆದರೆ, ಯಾರನ್ನೂ ಮದುವೆ ಆಗುವ ಬಗ್ಗೆ ಸಲ್ಮಾನ್ ಖಾನ್ ಯೋಚನೆ ಮಾಡಿಲ್ಲ.

More from Filmibeat

English summary
Salman Khan's ex-girlfriend Somy Ali reveals that Sangeeta Bijlani caught them while romancing in Flat;
Read more about: salman khan girlfriend
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X