ಸಮಂತಾ ತಿರಸ್ಕರಿಸಿದ ಆ 4 ಸಿನಿಮಾಗಳ ಬಾಕ್ಸಾಫೀಸ್‌ ರಿಪೋರ್ಟ್ ಏನು? ಇವುಗಳಲ್ಲಿ ಸ್ಯಾಮ್ ನಟಿಸಬೇಕಿತ್ತು

ಸಮಂತಾ ದಕ್ಷಿಣ ಭಾರತದ ಟ್ಯಾಲೆಂಟೆಡ್ ನಟಿ. ಈಗ ನಿಧಾನವಾಗಿ ಉತ್ತರಕ್ಕೂ ಕಾಲಿಟ್ಟಿದ್ದು, ಅಲ್ಲೂ ಗಟ್ಟಿಯಾಗಿ ನೆಲೆಯೂರಲು ಸಿದ್ಧತೆಗಳನ್ನು ಮಾಡಿಕೊಳ್ಳುತ್ತಿದ್ದಾರೆ. ಇತ್ತೀಚೆಗೆ ಹೆಜ್ಜೆ ಹಾಕಿದ ಐಟಂ ಸಾಂಗ್ 'ಪುಷ್ಪ' ಸಮಂತಾ ಇಮೇಜ್‌ ಅನ್ನು ದುಪ್ಪಟ್ಟು ಹೆಚ್ಚಿಸಿದೆ. ಇದರೊಂದಿಗೆ 'ಫ್ಯಾಮಿಲಿ ಮ್ಯಾನ್ 2' ಸಿನಿಮಾ ವೆಬ್ ಸಿರೀಸ್ ಕೂಡ ಸಮಂತಾ ಕೈ ಹಿಡಿದೆ. ಯಶಸ್ಸಿನ ಅಲೆಯಲ್ಲಿ ತೇಲುತ್ತಿರುವ ಈ ನಟಿ ಕೈಯಲ್ಲೀಗ ಸಾಕಷ್ಟು ಸಿನಿಮಾಗಳಿವೆ. ಆದರೆ, ಕೆಲವು ಸೂಪರ್ ಹಿಟ್ ಸಿನಿಮಾಗಳನ್ನು ಸಮಂತಾ ತಿರಸ್ಕರಿಸಿದ್ದರು ಅನ್ನುವುದು ನಿಮಗೆ ಗೊತ್ತಾ?

ಕಳೆದ ವರ್ಷ ಮನೋಜ್ ಬಾಜಪೇಯಿ ಹಾಗೂ ಪ್ರಿಯಾಮಣಿ ಜೊತೆ ನಟಿಸಿದ 'ಫ್ಯಾಮಿಲಿ ಮ್ಯಾನ್ 2' ವೀಕ್ಷಕರ ಮೆಚ್ಚುಗೆ ಗಳಿಸಿತ್ತು. ಇಲ್ಲಿಂದ ಸಮಂತಾ ವೃತ್ತಿ ಬದುಕಿನ ದಾರಿ ಬದಲಾಗಿದೆ. ಬಾಲಿವುಡ್‌ನಲ್ಲಿ ಸಮಂತಾಗೆ ಆಫರ್‌ಗಳು ಹುಡುಕಿಕೊಂಡು ಬರುತ್ತಿವೆ. ಮೂಲಗಳ ಪ್ರಕಾರ, ತಾಪ್ಸಿ ಪನ್ನು ನಿರ್ಮಾಣ ಮಾಡುತ್ತಿರುವ ಮಹಿಳಾ ಪ್ರಧಾನ ಸಿನಿಮಾದಲ್ಲಿ ನಟಿಸಲು ಸಮಂತಾ ಒಪ್ಪಿಗೆ ನೀಡಿದ್ದಾರೆ. ಇದರ ಜೊತೆ ತೆಲುಗು ಸಿನಿಮಾ 'ಶಾಕುಂತಲಂ' ಹಾಗೂ ತಮಿಳು ಸಿನಿಮಾ 'ಕಾತು ವಾಕುಲ ರೆಂಡು ಕಾದಲ್' ಬಿಡುಗಡೆಯಾಗಬೇಕಿದೆ. ಹಲವು ಹಿಟ್ ಸಿನಿಮಾಗಳನ್ನು ನೀಡಿರುವ ಸಮಂತಾ ನಾಲ್ಕು ಸಿನಿಮಾಗಳನ್ನು ರಿಜೆಕ್ಟ್ ಮಾಡಿದ್ದರು. ಸಮಂತಾ ಕೈ ಬಿಟ್ಟ ಆ 4 ಸಿನಿಮಾಗಳು ಯಾವುವು ಅನ್ನುವುದನ್ನು ತಿಳಿಯಲು ಮುಂದೆ ಓದಿ.

 ರಾಮ್ ಚರಣ್ ಸಿನಿಮಾ 'ಯವಡು' ರಿಜೆಕ್ಟ್

ರಾಮ್ ಚರಣ್ ಸಿನಿಮಾ 'ಯವಡು' ರಿಜೆಕ್ಟ್

ರಾಮ್ ಚರಣ್ ಹಾಗೂ ಅಲ್ಲು ಅರ್ಜುನ್ ಅಭಿನಯದ 'ಯವಡು' ಸಿನಿಮಾಗೆ ಮೊದಲ ಸಮಂತಾ ಆಗಿದ್ದರು. ಆದರೆ, ಕೊನೆಯ ಕ್ಷಣದಲ್ಲಿ ರಾಮ್ ಚರಣ್ ಸಿನಿಮಾದಿಂದ ಸಮಂತಾ ಹೊರಬಂದಿದ್ದರು. ಆ ಬಳಿಕ ಶೃತಿ ಹಾಸನ್‌ರನ್ನು ಆಯ್ಕೆ ಮಾಡಲಾಯ್ತು. ಇನ್ನೊಂದು ಪಾತ್ರಕ್ಕೆ ಕನ್ನಡ ಸಿನಿಮಾ 'ದಿ ವಿಲನ್'ನಲ್ಲಿ ನಟಿಸಿದ್ದ ಆಮಿ ಜಾಕ್ಷನ್ ಆಯ್ಕೆ ಮಾಡಿಕೊಳ್ಳಲಾಗಿತ್ತು. ವಂಶಿ ನಿರ್ದೇಶಿಸಿದ್ಧ ಈ ಸಿನಿಮಾ ಬಾಕ್ಸಾಫೀಸ್‌ನಲ್ಲಿ ಉತ್ತಮ ಗಳಿಕೆ ಕಂಡಿತ್ತು. 30 ಕೋಟಿ ಸಿನಿಮಾ 60ಗೂ ಅಧಿಕ ಗಳಿಸಿತ್ತು.

 'ಪುಷ್ಪ'ದಲ್ಲಿ ಶ್ರೀವಲ್ಲಿ ಆಗಬೇಕಿತ್ತು ಸಮಂತಾ

'ಪುಷ್ಪ'ದಲ್ಲಿ ಶ್ರೀವಲ್ಲಿ ಆಗಬೇಕಿತ್ತು ಸಮಂತಾ

2021ರಲ್ಲಿ ಅತೀ ಹೆಚ್ಚು ಗಳಿಕೆ ಕಂಡ ಸಿನಿಮಾ 'ಪುಷ್ಪ' ಈ ಚಿತ್ರದಲ್ಲೂ ಶ್ರೀವಲ್ಲಿಯಾಗಿ ರಶ್ಮಿಕಾ ಮಂದಣ್ಣ ನಟಿಸಿದ್ದ ಪಾತ್ರದಲ್ಲಿ ಸಮಂತಾ ಕಾಣಿಸಿಕೊಳ್ಳಬೇಕಿತ್ತು. ಆದರೆ, ಸಮಂತಾ ಶ್ರೀವಲ್ಲಿ ಪಾತ್ರದಲ್ಲಿ ನಟಿಸಲು ಹಿಂದೇಟು ಹಾಕಿದ್ದರು. ಆ ಬಳಿಕ ಸಮಂತಾ ಬದಲಿಗೆ ರಶ್ಮಿಕಾ ಮಂದಣ್ಣಗೆ ಆಫರ್ ನೀಡಲಾಗಿತ್ತು. 'ಪುಷ್ಪ' ಬಾಕ್ಸಾಫೀಸ್‌ನಲ್ಲಿ 300 ಕೋಟಿಗೂ ಅಧಿಕ ಮೊತ್ತವನ್ನು ಕಲೆಹಾಕಿ, 2021ರಲ್ಲಿ ಅತೀ ಹೆಚ್ಚು ಗಳಿಕೆ ಕಂಡ ಸಿನಿಮಾ ಎಂದು ಸಾಬೀತಾಯಿತು.

 'ಐ' ಚಿತ್ರಕ್ಕೆ ನೋ ಎಂದಿದ್ದ ಸಮಂತಾ

'ಐ' ಚಿತ್ರಕ್ಕೆ ನೋ ಎಂದಿದ್ದ ಸಮಂತಾ

ದಕ್ಷಿಣ ಭಾರತದ ಸ್ಟಾರ್ ನಿರ್ದೇಶಕ ಶಂಕರ್ 'ಐ' ಸಿನಿಮಾವನ್ನೂ ಸಮಂತಾ ರಿಜೆಕ್ಟ್ ಮಾಡಿದ್ದರು. 'ರೋಬೊ', 'ಅನ್ನಿಯನ್', 'ಇಂಡಿಯನ್' ಅಂತಹ ರೆಕಾರ್ಡ್ ಬ್ರೇಕಿಂಗ್ ಸಿನಿಮಾಗಳನ್ನು ನೀಡಿದ್ದ ನಿರ್ದೇಶಕ ಶಂಕರ್ ಒಂದು ಕಡೆ, ಇನ್ನೊಂದು ಕಡೆ ತಮಿಳು ನಟ ವಿಕ್ರಮ್. ಇಬ್ಬರು ದಿಗ್ಗಜರ ಸಿನಿಮಾದಲ್ಲಿ ನಟಿಸುವಂತೆ ಸಮಂತಾಗೆ ಆಫರ್ ನೀಡಲಾಗಿತ್ತು. ಆದರೆ, ಸಮಂತಾ ಈ ಸಿನಿಮಾದಲ್ಲಿ ನಟಿಸಲು ಹಿಂದೇಟು ಹಾಕಿದ್ದರು. ಸಮಂತಾ ಬದಲು ಆಮಿ ಜಾಕ್ಸನ್‌ಗೆ ಅವಕಾಶ ನೀಡಲಾಗಿತ್ತು.

 ನಾನಿ ಸಿನಿಮಾವನ್ನೂ ಕೈ ಬಿಟ್ಟಿದ್ದ ಸ್ಯಾಮ್

ನಾನಿ ಸಿನಿಮಾವನ್ನೂ ಕೈ ಬಿಟ್ಟಿದ್ದ ಸ್ಯಾಮ್

ನಾನಿ ಹಾಗೂ ಸಮಂತಾ ಜೋಡಿ ಈ ಹಿಂದೆ ಮೋಡಿ ಮಾಡಿತ್ತು. ರಾಜಮೌಳಿ ನಿರ್ದೇಶಿಸಿದ 'ಈಗ' ಚಿತ್ರದಲ್ಲಿ ಸಮಂತಾ ಹಾಗೂ ನಾನಿ ಕಾಂಬಿನೇಷನ್‌ ಅನ್ನು ಜನರು ಮೆಚ್ಚಿದ್ದರು. ಹೀಗಾಗಿ ನಾನಿ ನಟಿಸುತ್ತಿದ್ದ 'ನಿನ್ನು ಕೋರಿ' ಸಿನಿಮಾಗೆ ಸಮಂತಾಗೆ ಆಫರ್ ನೀಡಲಾಗಿತ್ತು. ಆದರೆ, ಸಮಂತಾ ಈ ಸಿನಿಮಾವನ್ನು ಕೈ ಬಿಟ್ಟರು. ಬಳಿಕ ಸಮಂತಾ ಬದಲಿಗೆ ನಿವೆತಾ ಥಾಮಸ್ ರನ್ನು ಆಯ್ಕೆ ಮಾಡಲಾಗಿತ್ತು.

More from Filmibeat

English summary
Samantha rejected 4 movies that is Pushpa Yavadu I Ninnu Kori. Samantha was offered many movies but she rejected. All those movies became super hit in boxoffice.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X