Sankranthi 2026; 7 ಸಿನಿಮಾಗಳು.. ಕ್ರೇಜ್ ಇರೋದ್ಯಾವುದು? ಅಡ್ವಾನ್ಸ್ ಬುಕಿಂಗ್, ಬಾಕ್ಸಾಫೀಸ್ ಲೆಕ್ಕಾಚಾರವೇನು?

ಸಂಕ್ರಾಂತಿ ಬಂತು ಅಂದರೆ, ದಕ್ಷಿಣ ಭಾರತದ ಎರಡು ಚಿತ್ರರಂಗಗಳು ಅಲರ್ಟ್ ಆಗಿಬಿಡುತ್ತವೆ. ತೆಲುಗು ಚಿತ್ರರಂಗದಲ್ಲಿ ಸಿನಿಮಾಗಳು ಕಾಂಪಿಟೇಷನ್‌ನಲ್ಲಿ ಬಿಡುಗಡೆಯಾಗುತ್ತವೆ. ಹಾಗೇ ಈ ಚಿತ್ರರಂಗಕ್ಕೆ ಕಾಂಪಿಟೇಷನ್ ಕೊಡೋದು ತಮಿಳು ಚಿತ್ರರಂಗ. ತಮಿಳು ಚಿತ್ರರಂಗದಲ್ಲಿಯೂ ಸೂಪರ್‌ಸ್ಟಾರ್‌ಗಳು ಸಿನಿಮಾ ರಿಲೀಸ್ ಮಾಡುವುದಕ್ಕೆ ತುದಿಗಾಲಲ್ಲಿ ನಿಂತಿರುತ್ತಾರೆ. ಈ ಎರಡು ಚಿತ್ರರಂಗದಲ್ಲಿ ಈ ವರ್ಷ ಕೂಡ ಬಿಗ್ ಸಿನಿಮಾಗಳು ಬಿಡುಗಡೆ ಸಜ್ಜಾಗಿವೆ.

ಸಂಕ್ರಾಂತಿ ಹಬ್ಬದ ಸಂಭ್ರಮದಲ್ಲಿ ಸೂಪರ್‌ಸ್ಟಾರ್‌ಗಳು ಅಖಾಡಕ್ಕೆ ಇಳಿಯುತ್ತವೆ. ಸಿನಿಮಾ ಮಂದಿರಗಳು ತುಂಬಿ ತುಳುಕುತ್ತವೆ. ಕೆಲವು ಸಿನಿಮಾಗಳು ಕಾಂಪಿಟೇಷನ್‌ನಲ್ಲಿ ಗೆದ್ದರೆ, ಮತ್ತೆ ಕೆಲವು ಸೋತು ಸುಣ್ಣವಾಗುತ್ತವೆ. 2026 ಸಂಕ್ರಾಂತಿಯಲ್ಲಿ ಒಟ್ಟು ಆರು ಬಿಗ್ ಸಿನಿಮಾಗಳು ರಿಲೀಸ್ ಆಗಲಿವೆ. ಈಗಾಗಲೇ ಕೆಲವು ಅಡ್ವಾನ್ಸ್ ಬುಕಿಂಗ್ ಅನ್ನು ಓಪನ್ ಮಾಡಿವೆ. ಈ ಆರು ಸಿನಿಮಾಗಳ ಅಡ್ವಾನ್ಸ್ ಬುಕಿಂಗ್, ಬಾಕ್ಸಾಫೀಸ್ ಕಲೆಕ್ಷನ್ ಪ್ರಿಡಿಕ್ಷನ್ ಇಲ್ಲಿದೆ.

Sankranthi 2026 releases 7 films list Advance Booking Status and box office predictions

ಪ್ರಭಾಸ್-'ದಿ ರಾಜಾ ಸಾಬ್'

ಡಾರ್ಲಿಂಗ್ ಪ್ರಭಾಸ್ ಸಿನಿಮಾ ಸಂಕ್ರಾಂತಿಗೆ ರಿಲೀಸ್ ಆಗುತ್ತಿದೆ. ಮಾರುತಿ ನಿರ್ದೇಶನದ ಈ ಹಾರರ್ ಕಾಮಿಡಿ ಜಾನರ್ ಸಿನಿಮಾ ಈಗಾಗಲೇ ಹಾಡುಗಳು ಹಾಗೂ ಟ್ರೈಲರ್‌ನಿಂದ ಸದ್ದು ಮಾಡುತ್ತಿದೆ. 'ದಿ ರಾಜಾ ಸಾಬ್' ಈ ವರ್ಷದ ಮೊದಲ ಮೋಸ್ಟ್ ಎಕ್ಸ್‌ಪೆಕ್ಟೆಡ್ ಸಿನಿಮಾ. ಬಹಳ ದಿನಗಳ ಬಳಿಕ ಪ್ಯಾನ್‌ ಇಂಡಿಯಾ ಇಮೇಜ್‌ನಿಂದ ಪ್ರಭಾಸ್ ಹೊರ ಬಂದು ಸಿನಿಮಾ ಮಾಡಿದ್ದಾರೆ. ಈಗಾಗಲೇ ಉತ್ತರ ಅಮೆರಿಕದಲ್ಲಿ ಈ ಸಿನಿಮಾದ ಅಡ್ವಾನ್ಸ್ ಬುಕಿಂಗ್ ಓಪನ್ ಮಾಡಲಾಗಿದೆ. ಡಿಸೆಂಬರ್ 2ರ ಹೊತ್ತಿಗೆ ₹3.15 ಕೋಟಿಯಷ್ಟು ($350K) ಬ್ಯುಸಿನೆಸ್ ಮಾಡಿದೆ. ಇನ್ನೂ ಒಂದು ವಾರ ಬಾಕಿಯಿದ್ದು, ಅಡ್ವಾನ್ಸ್ ಬುಕಿಂಗ್‌ನಿಂದಲೇ ಮತ್ತಷ್ಟು ಬ್ಯುಸಿನೆಸ್ ಆಗುವ ಸಾಧ್ಯತೆಯಿದೆ.

ದಳಪತಿ ವಿಜಯ್- 'ಜನ ನಾಯಗನ್'

ರಾಜಕೀಯಕ್ಕೆ ಧುಮುಕಿರುವ ದಳಪತಿ ವಿಜಯ್ ಸಿನಿಮಾಗೆ ಗುಡ್ ಬೈ ಹೇಳುತ್ತಿದ್ದಾರೆ. ಹೀಗಾಗಿ ವಿಜಯ್ ನಟನೆಯ ಕೊನೆಯ ಸಿನಿಮಾ 'ಜನ ನಾಯಗನ್' ಬಗ್ಗೆ ನಿರೀಕ್ಷೆಗಳು ಹೆಚ್ಚಾಗಿವೆ. ಕೊನೆಯ ಸಿನಿಮಾವನ್ನು ಕಣ್ತುಂಬಿ ಕೊಳ್ಳುವುದಕ್ಕೆ ವಿಜಯ್ ಅಭಿಮಾನಿಗಳು ತುದಿಗಾಲಲ್ಲಿ ನಿಂತಿದ್ದಾರೆ. ಹೀಗಾಗಿ ಮಲೇಷ್ಯಾದಲ್ಲಿ ಅದ್ಧೂರಿಯಾಗಿ ಆಡಿಯೋ ಲಾಂಚ್ ಮಾಡಲಾಗಿತ್ತು. ಕೆವಿಎನ್ ಪ್ರೊಡಕ್ಷನ್ಸ್ ನಿರ್ಮಾಣದ ಈ ಸಿನಿಮಾಗೆ ತಮಿಳುನಾಡು ಅಷ್ಟೇ ಅಲ್ಲ, ಕರ್ನಾಟಕ, ಕೇರಳ ಹಾಗೂ ವಿದೇಶಗಳಲ್ಲಿ ಬೇಡಿಕೆಯಿದೆ. ಕರ್ನಾಟಕ ಹಾಗೂ ಕೇರಳದಲ್ಲಿ ಅಡ್ವಾನ್ಸ್ ಬುಕಿಂಗ್ ಓಪನ್ ಆಗಿದ್ದು, ₹3 ಕೋಟಿ ಬ್ಯುಸಿನೆಸ್ ಆಗಿದೆಯೆಂದು ಮಿಂಟ್‌ನಲ್ಲಿ ವರದಿಯಾಗಿದೆ. ಇಲ್ಲಿವರೆಗೂ ವಿಶ್ವದಾದ್ಯಂತ ₹15 ಕೋಟಿ ಬ್ಯುಸಿನೆಸ್ ಆಗಿದೆಯೆಂದು ಸ್ಯಾಕ್ನಿಲ್ಕ್ ವರದಿಯಲ್ಲಿ ಹೇಳಿದೆ. ಉತ್ತರ ಅಮೆರಿಕ, ಯುಕೆ ಹಾಗೂ ಆಸ್ಟ್ರೇಲಿಯಾದಲ್ಲಿ ಉತ್ತಮ ಪ್ರತಿಕ್ರಿಯೆ ಸಿಕ್ಕಿದೆ ಎನ್ನಲಾಗಿದೆ.

ಚಿರಂಜೀವಿ- 'ಮನಶಂಕರ ವರಪ್ರಸಾದ್‌ ಗಾರು'

ಸಂಕ್ರಾಂತಿಗೆ ರಿಲೀಸ್ ಆಗುತ್ತಿರುವ ಮತ್ತೊಂದು ಬಿಗ್ ಬಜೆಟ್ ಸಿನಿಮಾ 'ಮನಶಂಕರ ವರಪ್ರಸಾದ್ ಗಾರು'. ಮೆಗಾಸ್ಟಾರ್ ಚಿರಂಜೀವಿ, ನಯನ್‌ತಾರಾ ಪ್ರಮುಖ ಪಾತ್ರದಲ್ಲಿ ನಟಿಸಿದ್ದಾರೆ. ಅನಿಲ್ ರವಿಪುಡಿ ನಿರ್ದೇಶನದ ಈ ಸಿನಿಮಾ ಪಕ್ಕಾ ಕಾಮಿಡಿ ಎಂಟರ್‌ಟೈನರ್. ಈ ಸಿನಿಮಾ ಜನವರಿ 11ರಂದು ವಿಶ್ವದಾದ್ಯಂತ ರಿಲೀಸ್ ಆಗುತ್ತಿದೆ. ಅಡ್ವಾನ್ಸ್ ಬುಕಿಂಗ್‌ನಿಂದ ಈಗಾಗಲೇ 1 ಕೋಟಿಗೂ ಅಧಿಕ ಕಲೆಕ್ಷನ್ ಮಾಡಿದೆ ಎನ್ನಲಾಗಿದೆ.

Sankranthi 2026 releases 7 films list Advance Booking Status and box office predictions

ಉಳಿದ 4 ಸಿನಿಮಾಗಳ್ಯಾವುವು?

'ಪರಾಸಕ್ತಿ'- ಶಿವಕಾರ್ತಿಕೇಯನ್ ಪ್ರಮುಖ ಪಾತ್ರದಲ್ಲಿ ನಟಿಸಿರುವ ಈ ಸಿನಿಮಾ ಜನವರಿ 14ರಂದು ರಿಲೀಸ್ ಆಗುತ್ತಿದೆ. ಸುಧಾ ಕೊಂಗರ ಈ ಸಿನಿಮಾವನ್ನು ನಿರ್ದೇಶನ ಮಾಡಿದ್ದಾರೆ. ಶಿವಕಾರ್ತಿಕೇಯನ್ ಜೊತೆ ಅಥರ್ವ ಮುರಳಿ, ಶ್ರೀಲೀಲಾ ಪ್ರಮುಖ ಪಾತ್ರದಲ್ಲಿ ನಟಿಸಿದ್ದಾರೆ.

'ಅನಗನಗ ಒಕ ರಾಜು'- ನವೀನ್ ಪೊಲಿಶೆಟ್ಟಿ ಪ್ರಮುಖ ಪಾತ್ರದಲ್ಲಿ ನಟಿಸಿರುವ ಸಿನಿಮಾವಿದು. ಚೊಚ್ಚಲ ಬಾರಿಗೆ ಮಾರಿ ನಿರ್ದೇಶನ ಮಾಡಿರುವ ಈ ಸಿನಿಮಾ ಪಕ್ಕಾ ಫ್ಯಾಮಿಲಿ ಎಂಟರ್‌ಟೈನರ್.

'ಭರತ್ ಮಹಾಸಯುಲು ವಿದ್ಯಾಪತಿ'- ರವಿತೇಜಾ, ಡಿಂಪಲ್ ಹಯಾತಿ ಹಾಗೂ ಆಶಿಕಾ ರಂಗನಾಥ್ ನಟಿಸಿರುವ ಈ ಸಿನಿಮಾ ಮೇಲೆ ನಿರೀಕ್ಷೆಯಿದೆ. ಪಕ್ಕಾ ಫ್ಯಾಮಿಲಿ, ಕಾಮಿಡಿ ಡ್ರಾಮ್ ಆಗಿರುವುದರಿಂದ ಸಂಕ್ರಾಂತಿ ಹಬ್ಬಕ್ಕೆ ಪರ್ಫೆಕ್ಟ್ ರಿಲೀಸ್ ಎನ್ನಲಾಗಿದೆ.

'ನರಿ ನರಿ ನಡುಮ ಮುರಾರಿ'- ತೆಲುಗು ಮತ್ತೊಂದು ಸ್ಟಾರ್ ನಟ ಶರ್ವಾನಂದ್ ಪ್ರಮುಖ ಪಾತ್ರದಲ್ಲಿ ನಟಿಸಿರುವ ಸಿನಿಮಾವಿದು. ಈ ಸಿನಿಮಾ ಜನವರಿ 15ರಂದು ರಿಲೀಸ್ ಆಗುತ್ತಿದ್ದು, ಫ್ಯಾಮಿಲಿ ಆಡಿಯನ್ಸ್‌ ಇಷ್ಟ ಆಗುತ್ತೆ ಎಂಬ ನಿರೀಕ್ಷೆಯಲ್ಲಿ ಚಿತ್ರರಂಗವಿದೆ.

More from Filmibeat

English summary
Sankranthi 2026 releases 7 films list, Advance Booking Status and box office predictions.
Read more about: prabhas vijay chiranjeevi
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X