16 ವರ್ಷ ಸಂಸಾರ.. ವಿಚ್ಛೇದನದ ಬಳಿಕ ತಾಯಿಯಾಗುವ ಬಯಕೆ; 40ರ ಬಳಿಕ ಆಸೆ ಈಡೇರಿದ್ದೇಗೆ?
'ನಿಶ್ಯಬ್ಧ', 'ಇದು ಸಾಧ್ಯ' ಈ ಎರಡು ಕನ್ನಡ ಸಿನಿಮಾಗಳ ನೋಡಿದ ಕನ್ನಡಿಗರಿಗೆ ರೇವತಿ ಬಗ್ಗೆ ಪರಿಚಯವಿದ್ದೇ ಇರುತ್ತೆ. ಇನ್ನು ಎಲ್ಲಾ ಭಾಷೆಯ ಸಿನಿಮಾ ಇಷ್ಟ ಪಡುವವರಿಗೆ ನಟಿ ರೇವತಿ ಬಗ್ಗೆ ಇಂಟ್ರುಡಕ್ಷನ್ ಕೊಡುವ ಅವಶ್ಯಕತೆನೇ ಇಲ್ಲ. ಕನ್ನಡ, ಮಲಯಾಳಂ, ತೆಲುಗು, ತಮಿಳು ಹಾಗೂ ಹಿಂದಿ ಭಾಷೆಗಳಲ್ಲಿ ನಟಿಸಿರುವ ಪ್ಯಾನ್ ಇಂಡಿಯಾ ಸ್ಟಾರ್. 'ಮನ್ ವಸನೈ', 'ಮೌನ ರಾಗಂ', ' ಅಂಜಲಿ', 'ತೇವರ್ ಮಗನ್' ಅಂತಹ ಜನಪ್ರಿಯ ಸಿನಿಮಾಗಳ ಮೂಲಕ ಸಿನಿಪ್ರಿಯ ಮನಸ್ಸು ಗೆದ್ದ ನಟಿ.
ರೇವತಿ ವೃತ್ತಿ ಜೀವನದಲ್ಲಿ ಯಶಸ್ಸನ್ನು ಕಂಡಿದ್ದರು. ಈ ನಟಿ ಕಾಲಿಟ್ಟ ಚಿತ್ರರಂಗದಲ್ಲೆಲ್ಲ ಸಕ್ಸಸ್ ಕಂಡು ಹಿಂತಿರುಗಿದವರೇ. ಆದರೆ, ಕೌಟುಂಬಿಕ ಬದುಕು ಮಾತ್ರ ಅಂದುಕೊಂಡಂತೆ ಇರಲಿಲ್ಲ. ರೇವತಿ ಯಶಸ್ಸಿನ ಉತ್ತುಂಗದಲ್ಲಿ ಇರುವಾಗಲೇ ಮಲಯಾಳಂ ಹಾಗೂ ತಮಿಳಿ ಚಿತ್ರರಂಗ ಕ್ಯಾಮರಾಮ್ಯಾನ್ ಹಾಗೂ ನಟ ಸುರೇಶ್ ಚಂದ್ರ ಮೆನನ್ ಅವರನ್ನು ಪ್ರೀತಿಸಿ ವಿವಾಹವಾಗಿದ್ದರು. 1986ರಲ್ಲಿ ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದ ಈ ಜೋಡಿಯ ವೈವಾಹಿಕ ಜೀವನದಲ್ಲಿ ಕಿರಿಕಿರಿಗಳು ಆರಂಭ ಆಗಿದ್ದವು.

ವಿವಾಹವಾಗಿ 16 ವರ್ಷಗಳ ಬಳಿಕ ರೇವತಿ ಹಾಗೂ ಸುರೇಶ್ ಚಂದ್ರ ಮೆನನ್ ಪ್ರತ್ಯೇಕವಾಗಿ ವಾಸಿಸುವುದಕ್ಕೆ ಶುರು ಮಾಡಿದ್ದರು. ಇಬ್ಬರೂ ಭಿನ್ನಾಭಿಪ್ರಾಯವನ್ನು ಮರೆತು ಮತ್ತೆ ಒಂದಾಗುವ ಲಕ್ಷಣಗಳು ಕಾಣಿಸಲಿಲ್ಲ. ಕೊನೆಗೂ 2013ರಲ್ಲಿ ಪತಿಯಿಂದ ವಿಚ್ಚೇದನ ಪಡೆದರು. 16 ವರ್ಷ ಸಂಸಾರ ಮಾಡಿದ್ದರೂ, ಇಬ್ಬರಿಗೆ ಮಕ್ಕಳು ಇರಲಿಲ್ಲ. ಹಾಗಂತ ಇಬ್ಬರ ವಿಚ್ಛೇದನಕ್ಕೆ ಇದೇ ಕಾರಣವಾಯ್ತಾ? ಈ ಬಗ್ಗೆ ಇಬ್ಬರೂ ಸ್ಪಷ್ಟನೆ ನೀಡಿಲ್ಲ. ಆದರೆ, ಈ ಜೋಡಿಗೆ 2013ರಲ್ಲಿ ಅಧಿಕೃತವಾಗಿ ವಿಚ್ಛೇದನ ಸಿಕ್ಕಿತ್ತು. ಡಿವೋರ್ಸ್ ಬಳಿಕ ರೇವತಿ ಬದುಕಿನ ಮಹಾದಾಸೆಯನ್ನು ಈಡೇರಿಸಿಕೊಳ್ಳುವತ್ತ ಹೆಜ್ಜೆ ಇಟ್ಟಿದ್ದರು.
ತಾಯಿಯಾಗಲು ಬಯಸಿದ್ದ ರೇವತಿ: ಸುರೇಶ್ ಚಂದ್ರ ಮೆನನ್‌ರಿಂದ ದೂರವಾದ ಬಳಿಕ ನಟಿ ರೇವತಿ ಮಗುವನ್ನು ದತ್ತು ಪಡೆಯುವುದಕ್ಕೆ ಮುಂದಾಗಿದ್ದರು. ಒಂಟಿಯಾಗಿದ್ದ ಬದುಕಿಗೆ ಮಗು ಬೇಕು ಎಂದು ಬಯಸಿದ್ದರು. ಆದರೆ, ಆ ಸಮಯದಲ್ಲಿ ದತ್ತು ಪಡೆಯಲು ಮಗು ಸಿಗಲಿಲ್ಲ. ವಿಚ್ಚೇದನದ ಬಳಿಕ ರೇವತಿ ತಾಯಿ ಆಗುವುದಕ್ಕೆ ಬಯಸಿದ್ದರು. ಹೀಗಾಗಿ ಬಹುಭಾಷಾ ನಟಿ ವೈದ್ಯಕೀಯ ನೆರವಿನ ಮೂಲಕ ಮಗವನ್ನು ಪಡೆಯುವುದಕ್ಕೆ ಮುಂದಾಗಿದ್ದರು. ಆಗಲೇ IVF ಮೊರೆ ಹೋಗಿದ್ದರು.
IVF ಮೂಲಕ ಮಗು ಪಡೆಯಲು ಚಿಂತನೆ: ಆಗತಾನೇ ವೈದ್ಯಕೀಯ ಕ್ಷೇತ್ರದಲ್ಲಿ IVF ಮೂಲಕ ಮಗು ಪಡೆದುಕೊಳ್ಳುವುದಕ್ಕೆ ಜನರು ಮುಂದಾಗುತ್ತಿದ್ದರು. ನಟಿ ರೇವತಿ ಕೂಡ ತಾಯಿ ಆಗಬೇಕು ಎಂಬ ತನ್ನ ಆಸೆಯನ್ನು ಇದೇ ವೈದ್ಯಕೀಯ ನೆರವಿನ ಮೂಲಕ ಪಡೆದುಕೊಳ್ಳುವುದಕ್ಕೆ ಮುಂದಾದರು. 2018ರಲ್ಲಿ ನಟಿ ರೇವತಿ ತನ್ನ ಅಭಿಮಾನಿಗಳಿಗೆ ತನಗೆ ಐದು ಮಗಳು ಇದ್ದಾಳೆಂದು ರಿವೀಲ್ ಮಾಡಿದ್ದರು. ಆಗ ಒಂದಿಷ್ಟು ಮಂದಿ ರೇವತಿ ಮಾತುಗಳನ್ನು ಒಪ್ಪಿಕೊಳ್ಳುವುದಕ್ಕೆ ರೆಡಿಯಿರಲಿಲ್ಲ.

ಕೆಲವು ದಿನ ಸಿನಿಮಾಗಳಲ್ಲಿ ಕಾಣಿಸಿಕೊಂಡಿರಲಿಲ್ಲ: ತಾಯಿ ಆಗಬೇಕು ಎಂಬ ಕನಸು ಕಂಡಿದ್ದ ರೇವತಿ ಕೆಲವು ತಿಂಗಳು ಸಿನಿಮಾಗಳಲ್ಲಿ ಕಾಣಿಸಿಕೊಂಡಿರಲಿಲ್ಲ. ಆ ವೇಳೆ ಅಭಿಮಾನಿಗಳು ಆತಂಕ ವ್ಯಕ್ತಪಡಿಸುವುದಕ್ಕೆ ಶುರು ಮಾಡಿದ್ದರು. ಇದೇ ವೇಳೆ ರೇವತಿ ತನ್ನ ಅಭಿಮಾನಿಗಳಿಗೆ ಐದು ವರ್ಷದ ಪುತ್ರಿ ಮಾಹೀಯ ಬಗ್ಗೆ ಮಾಹಿತಿಯನ್ನು ಹಂಚಿಕೊಂಡಿದ್ದರು ಎಂದು ಬಾಲಿವುಡ್ ಶಾದೀಸ್.ಕಾಮ್ ಸೇರಿದಂತೆ ಹಲವು ವೆಬ್ ಸೈಟ್‌ಗಳಲ್ಲಿ ವರದಿ ಮಾಡಲಾಗಿದೆ.
ಬಾಲಿವುಡ್ ಶಾದೀಸ್.ಕಾಮ್ ವರದಿಯಂತೆ ನಟಿ ರೇವತಿ ಸೋಶಿಯಲ್ ಮೀಡಿಯಾದಲ್ಲಿ ಮಗಳ ಬಗ್ಗೆ ಮಾಹಿತಿಯನ್ನು ಹಂಚಿಕೊಂಡು ಪೋಸ್ಟ್ ಮಾಡಿದ್ದರು. " ನಾನು ಕೆಲವು ವರ್ಷಗಳಿಂದ ಕಾಣೆಯಾಗಿದ್ದರು ಕಾರಣವನ್ನು ಹಂಚಿಕೊಳ್ಳಬೇಕಿದೆ. ನನ್ನ ಮಗಳು ಮಾಹೀ ನನ್ನ ಬದುಕನ್ನು ಸಂಪೂರ್ಣವಾಗಿ ಬದಲಾಯಿಸಿದ್ದಾಳೆ. ಸುಂದರ ಕ್ಷಣಗಳನ್ನು ತುಂಬಿದ್ದಾಳೆ. ಈ ವಿಷಯವನ್ನು ನನ್ನ ಬೆಂಬಲಕ್ಕೆ ನಿಂತಿರುವವರಿಗೆಲ್ಲರಿಗೂ ಹೇಳಬೇಕಿದೆ." ಎಂದು ನಟಿ ರೇವತಿ ಬರೆದು ಪೋಸ್ಟ್ ಮಾಡಿದ್ದರು. ಈಗ ರೇವತಿ ಪುತ್ರಿ ಮಾಹೀ ಸೋಶಿಯಲ್ ಮೀಡಿಯಾದಲ್ಲಿ ಆಕ್ಟಿವ್ ಆಗಿದ್ದಾರೆಂದು ವರದಿಗಳಾಗಿವೆ.


Click it and Unblock the Notifications











