ಶಾಕುಂತಲಂ, ರುಧ್ರನ್, ಶಿವಾಜಿ ಸುರತ್ಕಲ್ 2 ಬಾಕ್ಸಾಫೀಸ್‌ನಲ್ಲಿ ಗೆದ್ದಿದ್ಯಾವುದು? ಏನಿದೆ ರಿಪೋರ್ಟ್?

ಆಗತಾನೇ ರಿಲೀಸ್ ಆದ ಸಿನಿಮಾಗೆ ಪಾಸಿಟಿವ್ ರೆಸ್ಪಾನ್ಸ್ ಸಿಗುತ್ತೋ? ನೆಗೆಟಿವ್ ರೆಸ್ಪಾನ್ಸ್ ಸಿಗುತ್ತೋ ಬೇರೆ ಮಾತು. ಸಿನಿಮಾ ನಿಜವಾಗಲೂ ಗೆದ್ದಿದ್ದೇಯಾ ಅಂತ ನಿರ್ಧಾರ ಮಾಡೋದು ಬಾಕ್ಸಾಫೀಸ್ ಕಲೆಕ್ಷನ್‌ನಿಂದಾನೇ. ಗಳಿಕೆಯಲ್ಲಿ ಯಾವ ಸಿನಿಮಾ ಮುಂದಿದೆಯೋ ಆ ಸಿನಿಮಾ ಗೆದ್ದಂತೆ.

ಈ ವಾರ ಸಮಂತಾ ರುಥ್ ಪ್ರಭು ಅಭಿನಯದ ಪ್ಯಾನ್ ಇಂಡಿಯಾ ಸಿನಿಮಾ 'ಶಾಕುಂತಲಂ', ರಾಘವ ಲಾರೆನ್ಸ್ ನಟನೆಯ 'ರುಧ್ರನ್' ಹಾಗೂ ರಮೇಶ್ ಅರವಿಂದ್ ನಟನೆಯ ಸೀಕ್ವೆಲ್ 'ಶಿವಾಜಿ ಸುರತ್ಕಲ್ 2' ರಿಲೀಸ್ ಆಗಿತ್ತು. ಈ ಮೂರೂ ಸಿನಿಮಾಗಳ ಬಾಕ್ಸಾಫೀಸ್ ರೆಸ್ಪಾನ್ಸ್ ಹೇಗಿದೆ? ಅನ್ನೋ ಲೆಕ್ಕಾಚಾರ ಶುರುವಾಗಿದೆ.

Shakuntalam, Rudhran,shivaji Surathkal 2 Movie Box office Collection Report

'ಶಾಕುಂತಲಂ' ಪ್ಯಾನ್ ಇಂಡಿಯಾ ಸಿನಿಮಾ, ಜೊತೆ ಬಿಗ್ ಬಜೆಟ್‌ನಲ್ಲಿ ನಿರ್ಮಾಣ ಮಾಡಲಾಗಿದೆ. ಇನ್ನೊಂದ್ಕಡೆ 'ರುಧ್ರನ್' ತೆಲುಗು ಹಾಗೂ ತಮಿಳಿನಲ್ಲಿ ರಿಲೀಸ್ ಆಗಿದೆ. ಹಾಗೇ 'ಶಿವಾಜಿ ಸುರತ್ಕಲ್ 2' ರಮೇಶ್ ಅರವಿಂದ್ ಅವರ ಪತ್ತೇದಾರಿ ಕಥೆ. ಟ್ರೇಡ್ ಅನಲಿಸ್ಟ್‌ಗಳು ಈ ಮೂರು ಸಿನಿಮಾ ಬಾಕ್ಸಾಫೀಸ್ ಲೆಕ್ಕಾಚಾರ ಹಾಕುತ್ತಿದ್ದಾರೆ.

'ಶಾಕುಂತಲಂ' ಕಲೆಕ್ಷನ್ ಏನು?

'ಶಾಕುಂತಲಂ' ತೆಲುಗಿನ ಮೋಸ್ಟ್ ಎಕ್ಸ್‌ಪೆಕ್ಟೆಡ್ ಪ್ಯಾನ್ ಇಂಡಿಯಾ ಸಿನಿಮಾ. ಸಮಂತಾ ರುಥ್ ಪ್ರಭು ಈ ಸಿನಿಮಾದಲ್ಲಿ 'ಶಾಕುಂತಲೆ' ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಈ ಸಿನಿಮಾ ಬಾಕ್ಸಾಫೀಸ್‌ನಲ್ಲಿ ದೊಡ್ಡ ಮಟ್ಟಕ್ಕೆ ಸದ್ದು ಮಾಡುತ್ತೆ ಎಂದು ನಿರೀಕ್ಷೆ ಮಾಡಲಾಗಿತ್ತು. ಆದರೆ, ಎರಡು ದಿನಗಳಿಂದ ಈ ಸಿನಿಮಾ 5.75 ಕೋಟಿ ರೂಪಾಯಿ ಕಲೆಕ್ಷನ್ ಮಾಡಿದೆ.

ಸಿನಿಮಾ ರಿಲೀಸ್ ಆದ ದಿನವೇ ನೆಗೆಟಿವ್ ರೆಸ್ಪಾನ್ಸ್ ಸಿಕ್ಕಿತ್ತು. ಸಿನಿಮಾದ ಗ್ರಾಫಿಕ್ಸ್ ಬಗ್ಗೆ ಪ್ರೇಕ್ಷಕರು ಬೇಸರ ವ್ಯಕ್ತಪಡಿಸಿದ್ದರು. ಹೀಗಾಗಿ ಮೊದಲ ದಿನ 3.55 ಕೋಟಿ ರೂಪಾಯಿ. ಹಾಗೂ ಎರಡನೇ ದಿನ 2.2 ಕೋಟಿ ರೂಪಾಯಿ ಕಲೆಕ್ಷನ್ ಆಗಿದೆ ಎಂದು ವರದಿಯಾಗಿದೆ. ಹೀಗಾಗಿ ಈ ವಾರ ತೆರೆಕಂಡ ಬಿಗ್ ಬಜೆಟ್ ಸಿನಿಮಾ ಬಾಕ್ಸಾಫೀಸ್‌ನಲ್ಲಿ ಸೋತಿದೆ. ಈ ಸಿನಿಮಾ ಲೈಫ್‌ ಟೈಮ್ ಕಲೆಕ್ಷನ್ 15 ಕೋಟಿ ರೂ. ದಾಟಿದರೆ ಎಂದು ಟ್ರೇಡ್ ಅನಲಿಸ್ಟ್‌ಗಳು ಅಂದಾಜು ಹಾಕಿದ್ದಾರೆ.

Shakuntalam, Rudhran,shivaji Surathkal 2 Movie Box office Collection Report

ರಾಘವ ಲಾರೆನ್ಸ್ 'ರುಧ್ರನ್'

'ಶಾಕುಂತಲಂ' ಜೊತೆನೇ ತಮಿಳಿನ ಸ್ಟಾರ್ ನಟ ರಾಘವ ಲಾರೆನ್ಸ್ ಅಭಿನಯದ 'ರುಧ್ರನ್' ಕೂಡ ರಿಲೀಸ್ ಆಗಿತ್ತು. ತೆಲುಗು ಹಾಗೂ ತಮಿಳು ಎರಡು ಭಾಷೆಗಳಲ್ಲಿ ಬಿಡುಗಡೆಯಾಗಿದ್ದ ಸಿನಿಮಾ ಎರಡು ಭಾಷೆಯನ್ನೂ ಅದ್ಭುತ ಕಲೆಕ್ಷನ್ ಮಾಡಿಲ್ಲ. ಮೊದಲ ದಿನ 3.65 ಕೋಟಿ ರೂ. ಹಾಗೂ ಎರಡನೇ ದಿನ 2.55 ಕೋಟಿ ರೂ. ಗಳಿಸಿದ್ದು, ಒಟ್ಟು ಎರಡು ದಿನಗಳ ಕಲೆಕ್ಷನ್ 6.2 ಕೋಟಿ ಎಂದು ಅಂದಾಜಿಸಲಾಗಿದೆ.

ಇದೇ ಸಿನಿಮಾ ತೆಲುಗಿನಲ್ಲಿ 'ರುಧ್ರುಡು' ಹೆಸರಿನಲ್ಲಿ ರಿಲೀಸ್ ಆಗಿತ್ತು. ತಮಿಳಿನಲ್ಲೇ ಕಲೆಕ್ಷನ್ ಡ್ರಾಪ್ ಆಗಿರಬೇಕಾದರೆ, ತೆಲುಗಿನಲ್ಲಿ ಈ ಸಿನಿಮಾ ನಿರ್ಮಾಪಕ ಖುಷಿ ಕೊಟ್ಟಿಲ್ಲ. ಹೀಗಾಗಿ ತಮಿಳಿನ ಸ್ಟಾರ್ ಸಿನಿಮಾ ಕೂಡ ಬಾಕ್ಸಾಫೀಸ್ ಮಕಾಡೆ ಮಲಗಿದೆ.

'ಶಿವಾಜಿ ಸುರತ್ಕಲ್ 2' ಕೆಲಕ್ಷನ್ ಹೇಗಿದೆ?

ರಮೇಶ್ ಅರವಿಂದ್, ರಾಧಿಕಾ ಹಾಗೂ ಮೇಘನಾ ಗಾಂವ್ಕರ್ ನಟಿಸಿರೋ 'ಶಿವಾಜಿ ಸುರತ್ಕಲ್ 2' ಕೂಡ ಏಪ್ರಿಲ್ 14ರಂದು ರಿಲೀಸ್ ಆಗಿದೆ. ಮೊದಲ ಚಾಪ್ಟರ್‌ಗೆ ಉತ್ತಮ ಪ್ರತಿಕ್ರಿಯೆ ಕಂಡಿತ್ತು. ಅದರಂತೆ ಪಾರ್ಟ್‌ಗೂ ಉತ್ತಮ ಪ್ರತಿಕ್ರಿಯೆ ಸಿಕ್ಕಿದೆ. ಆದರೆ, ಇದು ಬಾಕ್ಸಾಫೀಸ್‌ನಲ್ಲಿ ದೊಡ್ಡ ಮಟ್ಟಕ್ಕೆ ಸಹಕಾರಿಯಾಗಿಲ್ಲ. ಎಂದಿನಂತೆ ರಮೇಶ್ ಅರವಿಂದ್ ನಟನೆ ಬಗ್ಗೆ ದುಸ್ರಾ ಮಾತಿಲ್ಲ. ಮತ್ತೊಂದು ಪ್ರಕರಣವನ್ನು ಬೇಧಿಸುವಲ್ಲಿ ಯಶಸ್ವಿಯಾಗಿದ್ದು, ಪ್ರೇಕ್ಷಕರನ್ನು ನಿಧಾನವಾಗಿ ಚಿತ್ರಮಂದಿರದ ವರೆಗೆ ಸೆಳೆಯುತ್ತಿದೆ.

ಸದ್ಯ ಎರಡು ದಿನದ ಬಾಕ್ಸಾಫೀಸ್ ಕಲೆಕ್ಷನ್ ಬಗ್ಗೆ ಇನ್ನೂ ಚಿತ್ರತಂಡ ಅಧಿಕೃತ ಮಾಹಿತಿ ನೀಡಿಲ್ಲ. ಹೀಗಾಗಿ ಎರಡು ದಿನಗಳಲ್ಲಿ 'ಶಿವಾಜಿ ಸುರತ್ಕಲ್ 2' ಒಂದು ಕೋಟಿ ಓಳಗೆ ಕಲೆಕ್ಷನ್ ಆಗಿರಬಹುದು ಎಂದು ಟ್ರೇಡ್ ಎಕ್ಸ್‌ಪರ್ಟ್ ಅಂದಾಜಿಸುತ್ತಿದ್ದಾರೆ. ಇನ್ನು ವೀಕೆಂಡ್‌ನಲ್ಲಿ ಎಷ್ಟು ಕಲೆಕ್ಷನ್ ಆಗಿದೆ ಅನ್ನೋದು ರಿಪೋರ್ಟ್ ಬರಬೇಕಿದೆ. ಮೂಲಗಳ ಪ್ರಕಾರ, ಭಾನುವಾರ ಕಲೆಕ್ಷನ್‌ನಲ್ಲಿ ಏರಿಕೆ ಆಗಬಹುದು ಎಂದು ನಿರೀಕ್ಷೆ ಮಾಡಲಾಗಿದೆ.

More from Filmibeat

English summary
Shakuntalam, Rudhran,shivaji Surathkal 2 Movie Box office Collection Report. All Three Movie Down At The Box Office,Know More.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X