ಶಿವಣ್ಣನ 'ಸಂತ' ಸಿನಿಮಾದ ನಾಯಕಿ ನೆನಪಿದೆಯೇ? ಚಿತ್ರರಂಗದಿಂದಲೇ ಕಣ್ಮರೆಯಾಗಿದ್ದೇಕೆ?
ಒಂದು ಕಾಲದಲ್ಲಿ ಹಿಂದಿ, ತೆಲುಗು, ಕನ್ನಡ ಸಿನಿಮಾಗಳಲ್ಲಿ ನಟಿ ಬಹುಬೇಡಿಕೆಯ ನಟಿ ಎನಿಸಿಕೊಂಡಿದ್ದರು. 20 ವರ್ಷಗಳ ಹಿಂದೆನೇ ಈ ನಟಿ ಗ್ಲಾಮರ್‌ಗೆ ಪಡ್ಡೆ ಹುಡುಗರು ಕ್ಲೀನ್ ಬೌಲ್ಡ್ ಆಗಿದ್ದರು. ಹೀಗಾಗಿ ಇಂದಿಗೂ ಬಾಲಿವುಡ್ ಸೇರಿದಂತೆ ತೆಲುಗು, ಕನ್ನಡ ಚಿತ್ರರಂಗದಲ್ಲಿಯೂ ಈಕೆ ಚಿರಪರಿಚಿತ. ಆಕೆ ಮತ್ಯಾರೂ ಅಲ್ಲ ಆರತಿ ಛಾಬ್ರಿಯಾ.
ಈ ಹೆಸರನ್ನು ಈಗ ಮರೆತಿರಬಹುದು. ಆದರೆ, ಕನ್ನಡದಲ್ಲಿ ನಟಿಸಿದ ಸಿನಿಮಾಗಳ ಹೆಸರನ್ನು ಹೇಳಿದರೆ, ಮತ್ತೆ ಕಣ್ಮುಂದೆ ಬರೋದು ಗ್ಯಾರಂಟಿ. ರವಿಚಂದ್ರನ್ ಸಹೋದರ ಬಾಲಾಜಿ ಚಿತ್ರರಂಗಕ್ಕೆ ಎಂಟ್ರಿ ಕೊಟ್ಟಿದ್ದ ಸಿನಿಮಾ 'ಅಹಂ ಬ್ರಹ್ಮಾಸ್ಮಿ' ಆರತಿ ಛಾಬ್ರಿಯಾ ನಟಿಸಿದ ಮೊದಲ ಕನ್ನಡ ಸಿನಿಮಾ. ಈ ಸಿನಿಮಾ ಬಳಿಕ ಶಿವಣ್ಣ ನಟಿಸಿದ 'ಸಂತ' ಸಿನಿಮಾದಲ್ಲೂ ಗಮನ ಸೆಳೆದಿದ್ದರು.

2009ರಲ್ಲಿ 'ರಜನಿ' ಸಿನಿಮಾದಲ್ಲಿ ನಟಿಸಿದ್ದೇ ಕೊನೆ. ಮತ್ತೆ ಕನ್ನಡ ಚಿತ್ರಗಳಲ್ಲಿ ನಟಿಸಲಿಲ್ಲ. ಬಳಿಕ ಮೂರು ಹಿಂದಿ ಸಿನಿಮಾಗಳಲ್ಲಿ ನಟಿಸಿದ್ದಷ್ಟೇ ಆರತಿ ಛಾಬ್ರಿಯಾ ಚಿತ್ರರಂಗದಿಂದಲೇ ಗಾಯಬ್ ಆಗಿಬಿಟ್ಟರು. ಮ್ಯೂಸಿಕ್ ಅಲ್ಬಮ್, ಜಾಹೀರಾತು ಮೂಲಕ ಗಮನ ಸೆಳೆದಿದ್ದ ನಟಿಗೆ ಸಿನಿಮಾ ಅಷ್ಟಾಗಿ ಕೈ ಹಿಡಿಯಲಿಲ್ಲ. ಆರತಿ ಚಿತ್ರರಂಗದಲ್ಲಿ ಇದ್ದಿದ್ದು ಕೇವಲ 10 ವರ್ಷ ಮಾತ್ರ. ಅಷ್ಟಕ್ಕೂ ಚಿತ್ರರಂಗದಿಂದ ದೂರ ಸರಿದಿದ್ದೇಕೆ? ಈಗ ಹೇಗಿದ್ದಾರೆ? ತಿಳಿಯುವುದಕ್ಕೆ ಮುಂದೆ ಓದಿ.
ಆರತಿ ಛಾಬ್ರಿಯಾಗೆ ಬಾಲ್ಯದಿಂದಲೇ ಅವರಿಗೆ ನಟನೆಯ ಬಗ್ಗೆ ಒಲವಿತ್ತು. ಇವರಿಗೆ ಮೂರು ವರ್ಷವಿದ್ದಾಗಲೇ ಜಾಹೀರಾತುಗಳಲ್ಲಿ ಜಾಹೀರಾತುಗಳಲ್ಲಿ ನಟಿಸುವುದಕ್ಕೆ ಶುರು ಮಾಡಿದ್ದರು. ಬಳಿಕ ಹಲವು ಜನಪ್ರಿಯ ಜಾಹೀರಾತುಗಳಲ್ಲಿ ನಟಿಸಿದರು. ಮಾಡಲಿಂಗ್ ಮಾಡುವ ಮೂಲಕ ವೃತ್ತಿ ಬದುಕು ಆರಂಭ ಆಗಿತ್ತು. ಹಾಗೇ ಮಿಸ್ ಇಂಡಿಯಾ ವರ್ಲ್ಡ್ ಪ್ರಶಸ್ತಿ ಕೂಡ ಗೆದ್ದರು. ಇದು ಚಿತ್ರರಂಗದ ಕಡೆ ಮುಖ ಮಾಡುವುದಕ್ಕೆ ಅನುಕೂಲ ಮಾಡಿಕೊಟ್ಟಿತ್ತು.
ಬಾಲಿವುಡ್ ಗಾಯಕರಾದ ಸುಖ್ವಿಂದರ್ ಸಿಂಗ್, ಅದ್ನಾನ್ ಸಾಮಿ, ಹ್ಯಾರಿ ಆನಂದ್ ಮ್ಯೂಸಿಕ್ ವೀಡಿಯೊಗಳಲ್ಲಿ ನಟಿಸಿದರು. ಇಲ್ಲಿಂದ ಸಿನಿಮಾ ಕ್ಷೇತ್ರದಲ್ಲಿ ಜನಪ್ರಿಯತೆಗೆ ಬಂದ ಆರತಿ ಛಾಬ್ರಿಯಾ 2001ರಲ್ಲಿ 'ಲಜ್ಜಾ' ಸಿನಿಮಾದ ಮೂಲಕ ಬಾಲಿವುಡ್‌ಗೆ ಎಂಟ್ರಿ ಕೊಟ್ಟರು. 'ತುಮ್ಸೆ ಅಚ್ಚಾ ಕೌನ್ ಹೈ' ಸಿನಿಮಾ ಮೂಲಕ ನಾಯಕಿಯಾದರು. ಇಲ್ಲಿಂದ ಯಶಸ್ವಿ ಪಯಣ ಮುಂದುವರೆದಿತ್ತು.
ಆರತಿ ಛಾಬ್ರಿಯಾ ಸುಮಾರು 10 ವರ್ಷಗಳ ಕಾಲ ಚಿತ್ರರಂಗದಲ್ಲಿ ಬ್ಯುಸಿಯಾಗಿದ್ದರು. 2010ರ ನಂತ್ರರ ಸಿನಿಮಾದಿಂದ ದೂರ ಉಳಿದರು. ಹಾಗಂತ ಆ ಸಮಯದಲ್ಲಿ ಮದುವೆ ಆಗಿರಲಿಲ್ಲ. 2011ರಲ್ಲಿ 'ಖತರೋಂ ಕೆ ಖಿಲಾಡಿ ಸೀಸನ್ 4', 2013ರಲ್ಲಿ 'ಝಲಕ್ ದಿಕ್ಲಾಜ 6' ರಿಯಾಲಿಟಿ ಶೋನಲ್ಲಿ ಕಾಣಿಸಿಕೊಂಡಿದ್ದಷ್ಟೇ. ಆಮೇಲೆ ಕಣ್ಮರೆಯಾದರು. 2019ರಲ್ಲಿ ಚಾರ್ಟರ್ಡ್ ಅಕೌಂಟೆಂಟ್ ವಿಶಾರದ್ ಬಿದಾಸಿ ಅವರನ್ನು ವಿವಾಹವಾದರು. ಸದ್ಯ ಸಿನಿಮಾಗಳಲ್ಲಿ ನಟಿಸುತ್ತಿಲ್ಲ. ಆದರೆ, ಸೋಶಿಯಲ್ ಮೀಡಿಯಾದಲ್ಲಿ ಆಕ್ಟಿವ್ ಆಗಿದ್ದಾರೆ.
ಆರತಿ ಛಾಬ್ರಿಯಾ 'ಅವಾರಾ ಪಾಗಲ್ ದೀವಾನಾ', 'ಶಾದಿ ನಂಬರ್ 1', 'ರಾಜಾ ಭಯ್ಯ', 'ತೀಸ್ರಿ ಆಂಖ್', 'ಅಬ್ ತುಮ್ಹಾರೆ ಹವಾಲೆ ವತನ್ ಸಾಥಿಯೋಂ', 'ಶೂಟ್‌ಔಟ್ ಅಟ್ ಲೋಖಂಡವಾಲಾ', 'ಹೇ ಬೇಬಿ', 'ಮಿಲೆಂಗೇ ಮಿಲೆಂಗೇ' ಮತ್ತು 'ಡ್ಯಾಡಿ ಕೂಲ್' ಅಂತಹ ಸಿನಿಮಾಗಳಲ್ಲಿ ನಟಿಸಿದ್ದಾರೆ. ಜೊತೆಗೆ ದಕ್ಷಿಣ ಭಾರತದ ಸಿನಿಮಾಗಳಲ್ಲಿಯೂ ನಟಿಸಿ ಸೈ ಎನಿಸಿಕೊಂಡಿದ್ದಾರೆ. ಮುಂದಿನ ದಿನಗಳಲ್ಲಿ ಮತ್ತೆ ಕನ್ನಡ ಸಿನಿಮಾಗೆ ಕಮ್ ಬ್ಯಾಕ್ ಮಾಡುತ್ತಾರಾ? ಅನ್ನೋದು ನೋಡಬೇಕಿದೆ.


Click it and Unblock the Notifications











