Coolie Vs War 2: ರಜನಿ ಮುಂದೆ ಮಂಡಿಯೂರಿದ್ದ ಯಶ್‌ ರಾಜ್‌ ಫಿಲ್ಮ್ 18 ವರ್ಷಗಳ ಬಳಿಕ ಗೆಲ್ಲುತ್ತಾ?

ಸೂಪರ್‌ಸ್ಟಾರ್ ರಜನಿಕಾಂತ್ ಸಿನಿಮಾ 'ಕೂಲಿ' ರಿಲೀಸ್ ಡೇಟ್ ಅನೌನ್ಸ್ ಮಾಡಿದೆ. ಇನ್ನೊಂದು ಕಡೆ ಯಶ್ ರಾಜ್ ಫಿಲ್ಮ್ಸ್ ನಿರ್ಮಿಸಿರುವ 'ವಾರ್ 2' ಕೂಡ ಬಿಡುಗಡೆ ದಿನ ಘೋಷಣೆ ಮಾಡಿದೆ. ಹೃತಿಕ್ ರೋಷನ್ ಹಾಗೂ ಜೂ.ಎನ್‌ಟಿಆರ್ ಇದೇ ಮೊದಲ ಬಾರಿಗೆ ನಟಿಸಿರುವ ಸಿನಿಮಾ ನಿರೀಕ್ಷೆಗಳನ್ನು ದುಪ್ಪಟ್ಟು ಮಾಡಿದೆ. ಅದೇ ರಜನಿಗೆ ಲೋಕೇಶ್ ಕನಗರಾಜ್ ಆಕ್ಷನ್ ಕಟ್ ಹೇಳಿದ್ದು, ಕ್ರೇಜ್ ಬೇರೆ ಲೆವೆಲ್‌ನಲ್ಲಿದೆ.

'ಕೂಲಿ' ಹಾಗೂ 'ವಾರ್ 2' ಎರಡೂ ಸಿನಿಮಾಗಳು ಒಂದೇ ದಿನ ಬಿಡುಗಡೆಯಾಗುತ್ತಿವೆ. ಆಗಸ್ಟ್ 14ಕ್ಕೆ ರಿಲೀಸ್ ಮಾಡುವುದಾಗಿ ರಿಲೀಸ್ ಡೇಟ್ ಅನ್ನು ಅನೌನ್ಸ್ ಮಾಡಿವೆ. ಹೀಗಾಗಿ ಬಾಕ್ಸಾಫೀಸ್‌ ಪಂಡಿತರು ಈಗಾಗಲೇ ಲೆಕ್ಕಾಚಾರವನ್ನು ಶುರು ಮಾಡಿದ್ದಾರೆ. ಎರಡೂ ಸಿನಿಮಾಗಳು ಬಾಕ್ಸಾಫೀಸ್ ಕ್ಲಾಶ್ ಆಗುವ ಬೆನ್ನಲ್ಲೇ 1000 ಕೋಟಿ ಕ್ಲಬ್ ಮಿಸ್ ಮಾಡಿಕೊಳ್ಳಲಿವೆ ಎನ್ನುತ್ತಿದ್ದಾರೆ.

Sivaji Vs Jhum Barabar Jhum will Yash Films win against Rajinikanth after 18 years Coolie Vs War 2

ಅದೇ ಇನ್ನೊಂದು ಕಡೆ ಸೂಪರ್‌ಸ್ಟಾರ್ ರಜನಿಕಾಂತ್ ವಿರುದ್ಧ ಸೋತಿದ್ದ ಯಶ್ ರಾಜ್ ಫಿಲ್ಮ್ಸ್ 18 ವರ್ಷಗಳ ಬಳಿಕ ಗೆಲ್ಲಲೇಬೇಕು ಅಂತ ಪಣ ತೊಟ್ಟಿದೆ ಎನ್ನಲಾಗುತ್ತಿದೆ. ಹೌದು, 18 ವರ್ಷಗಳ ಹಿಂದೆ ರಜನಿ ಸಿನಿಮಾ ಹಾಗೂ ಯಶ್‌ ರಾಜ್‌ ಫಿಲ್ಮ್ಸ್ ನಿರ್ಮಿಸಿದ ಸಿನಿಮಾ ಒಟ್ಟಿಗೆ ರಿಲೀಸ್ ಆಗಿತ್ತು. ಆದರೆ, ರಜನಿ ಮುಂದೆ ಆ ಸಿನಿಮಾ ಹೀನಾಯವಾಗಿ ನೆಲಕ್ಕಚ್ಚಿತ್ತು. ಯಶ್‌ ರಾಜ್‌ ಫಿಲ್ಮ್ಸ್‌ಗೆ ಸಿಕ್ಕಾಪಟ್ಟೆ ನಷ್ಟ ಆಗಿತ್ತು. ಹೀಗಾಗಿ ಈ ಬಾರಿ ಗೆಲ್ಲಲೇ ಬೇಕು ಅಂತ ಪಣ ತೊಟ್ಟಿರುವ ಹಾಗಿದೆ. ಹಾಗಿದ್ದರೆ, 18 ವರ್ಷ ಹಿಂದೆ ರಜನಿ ಮುಂದೆ ಸೋತಿದ್ದ ಆ ಸಿನಿಮಾ ಯಾವುದು? ಬಾಕ್ಸಾಫೀಸ್ ಕ್ಲ್ಯಾಶ್ ಹೇಗಿತ್ತು? ತಿಳಿಯಲು ಮುಂದೆ ಓದಿ.

ಶಿವಾಜಿ Vs ಜೂಮ್ ಬರಾಬರ್ ಜೂಮ್

2007ರಲ್ಲಿ ಎರಡು ಬಿಗ್ ಬಜೆಟ್ ಸಿನಿಮಾಗಳು ರಿಲೀಸ್ ಆಗಿದ್ದವು. ತಲೈವಾ ರಜನಿ ನಟಿಸಿದ್ದ 'ಶಿವಾಜಿ' ಹಾಗೂ ಯಶ್ ರಾಜ್ ಫಿಲ್ಮ್ಸ್ ನಿರ್ಮಿಸಿದ್ದ 'ಜೂಮ್ ಬರಾಬರ್ ಜೂಮ್'. ಎರಡೂ ಬಿಗ್ ಬಜೆಟ್ ಸಿನಿಮಾಗಳೇ ಆಗಿದ್ದವು. 'ಶಿವಾಜಿ' ಸಿನಿಮಾವನ್ನು ಶಂಕರ್ ನಿರ್ದೇಶಿಸಿದ್ದರು. ಈ ಸಿನಿಮಾ ಬಾಕ್ಸಾಫೀಸ್‌ನಲ್ಲಿ ಧೂಳೆಬ್ಬಿಸಿತ್ತು. ರಜನಿ ಮ್ಯಾನರಿಸಂಗೆ ಫ್ಯಾನ್ಸ್ ಕಳೆದು ಹೋಗಿದ್ದರು. 60 ಕೋಟಿ ರೂಪಾಯಿ ಬಜೆಟ್‌ನಲ್ಲಿ ನಿರ್ಮಿಸಿದ್ದ ಸಿನಿಮಾ 150 ಕೋಟಿ ರೂಪಾಯಿ ಕಲೆಕ್ಷನ್ ಮಾಡಿತ್ತು.

ಇತ್ತ 'ಜೂಮ್ ಬರಾಬರ್ ಜೂಮ್' ಸ್ಟಾರ್ ಕಾಸ್ಟ್ ಏನು ಕಮ್ಮಿಯಿರಲಿಲ್ಲ. ಅಭಿಷೇಕ್ ಬಚ್ಚನ್, ಪ್ರೀತಿ ಜಿಂಟಾ, ಬಾಬಿ ಡಿಯೋಲ್, ಲಾರಾ ದತ್ತಾ ಜೊತೆಗೆ ಬಾಲಿವುಡ್ ಮೆಗಾ ಸ್ಟಾರ್ ಅಮಿತಾಬ್ ಬಚ್ಚನ್ ನಟಿಸಿದ್ದರು. ಇಷ್ಟು ದೊಡ್ಡ ತಾರಾಗಣದ ಸಿನಿಮಾ ಬಾಕ್ಸಾಫೀಸ್‌ನಲ್ಲಿ ನೆಲಕ್ಕಚ್ಚಿತ್ತು. 'ಶಿವಾಜಿ' ಕ್ರೇಜ್‌ಗೆ 'ಜೂಮ್ ಬರಾಬರ್ ಜೂಮ್' ದಕ್ಷಿಣ ಭಾರತದಲ್ಲಿ ಹೇಳ ಹೆಸರಿಲ್ಲದಂತೆ ಕಾಣೆಯಾಗಿತ್ತು. ಇದರಿಂದ ಯಶ್‌ ರಾಜ್‌ ಫಿಲ್ಮ್ಸ್‌ಗೆ ಸಿಕ್ಕಾಪಟ್ಟೆ ನಷ್ಟ ಆಗಿತ್ತು. ಈಗ ಮತ್ತೆ ರಜನಿ ಸಿನಿಮಾ ಮುಂದೆ ಯಶ್‌ ರಾಜ್ ಫಿಲ್ಮ್ಸ್ ನಿರ್ಮಾಣದ ಸಿನಿಮಾ ರಿಲೀಸ್ ಆಗುತ್ತಿದೆ.

Sivaji Vs Jhum Barabar Jhum will Yash Films win against Rajinikanth after 18 years Coolie Vs War 2

'ಕೂಲಿ' Vs 'ವಾರ್ 2'

'ಜೈಲರ್' ಬಳಿಕ ರಜನಿಕಾಂತ್ ಮತ್ತೆ ಟ್ರ್ಯಾಕ್‌ಗೆ ಮರಳಿದ್ದಾರೆ. ಅದರಲ್ಲೂ ಲೋಕೇಶ್ ಕನಗರಾಜ್ ಆಕ್ಷನ್ ಕಟ್ ಹೇಳಿದ್ದರಿಂದ ಸಿನಿಮಾ ಮೇಲೆ ನಿರೀಕ್ಷೆ ಏನೂ ಕಮ್ಮಿಯಿಲ್ಲ. ರಜನಿ ಜೊತೆ ನಾಗಾರ್ಜುನ, ಉಪೇಂದ್ರ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಇವರೊಂದಿಗೆ ಬಾಲಿವುಡ್ ಸೂಪರ್‌ಸ್ಟಾರ್ ಆಮಿರ್ ಖಾನ್ ಕೂಡ ವಿಶೇಷ ಪಾತ್ರದಲ್ಲಿ ನಟಿಸಿದ್ದಾರೆ. ಈ ಕಾರಣಕ್ಕೆ 'ಕೂಲಿ' ಪ್ಯಾನ್ ಇಂಡಿಯಾ ಲೆವೆಲ್‌ನಲ್ಲಿ ಸದ್ದು ಮಾಡೋದು ಗ್ಯಾರಂಟಿ ಎನ್ನಲಾಗಿದೆ.

ಇತ್ತ ಯಶ್ ರಾಜ್‌ ಫಿಲ್ಮ್ಸ್ 'ವಾರ್ 2'ಗೂ ಕ್ರೇಜ್ ಏನು ಕಮ್ಮಿಯಿಲ್ಲ. ಬಾಲಿವುಡ್‌ನ ಹ್ಯಾಂಡ್‌ಸಮ್ ಹೀರೋ ಹೃತಿಕ್ ರೋಷನ್, ಟಾಲಿವುಡ್‌ನ ಯಂಗ್ ಟೈಗರ್ ಜೂನಿಯರ್ ಎನ್‌ಟಿಆರ್ ಇದೇ ಮೊದಲ ಬಾರಿಗೆ ತೆರೆಮೇಲೆ ಕಾಣಿಸಿಕೊಳ್ಳುತ್ತಿದ್ದಾರೆ. ಇಬ್ಬರು ಸೂಪರ್‌ ಸ್ಟಾರ್‌ಗಳ ಪವರ್‌ಫುಲ್ ಪರ್ಫಾಮೆನ್ಸ್ ನೋಡುವುದಕ್ಕೆ ಫ್ಯಾನ್ಸ್ ತುದಿಗಾಲಲ್ಲಿ ನಿಂತಿದ್ದಾರೆ. ಎರಡೂ ಸಿನಿಮಾಗಳು ಕೂಡ ಅದೇ ಕ್ರೇಜ್ ಇದೆ. 18 ವರ್ಷಗಳ ಬಳಿಕ ಮತ್ತೆ ಬಿಗ್ ಕ್ಲ್ಯಾಶ್‌ಗೆ ಸಜ್ಜಾಗಿರುವ ಈ ಎರಡೂ ಸಿನಿಮಾಗಳಲ್ಲಿ ಬಾಕ್ಸಾಫೀಸ್‌ನ ಅಧಿಪತಿಯಾಗೋದು ಯಾರು? ಅನ್ನೋದು ಆಗಸ್ಟ್ 14ರ ನಂತರ ಗೊತ್ತಾಗುತ್ತೆ.

More from Filmibeat

English summary
Sivaji Vs Jhum Barabar Jhum will Yash Films win against Rajinikanth after 18 years? Coolie Vs War 2
Read more about: rajinikanth hrithik roshan ntr
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X