'ರೀಲ್ಸ್ ಸ್ಪಾಟ್' ಆಯ್ತಾ ದೆಹಲಿ ಮೆಟ್ರೋ? ಸೋಶಿಯಲ್ ಮೀಡಿಯಾ ಸ್ಟಾರ್ ವಿಡಿಯೋ ನೆಟ್ಟಿಗರು ಕಿಡಿ!

ಈಗ ಜನರು ಸೋಶಿಯಲ್ ಮೀಡಿಯಾದಲ್ಲಿಯೇ ಹೆಚ್ಚು ಸಮಯ ಕಳೆಯುತ್ತಾರೆ. ಹಾಗೇ ಜನರನ್ನು ಎಂಗೇಜ್ ಮಾಡುವುದಕ್ಕೆ ಪ್ರತಿಭೆಗಳು ನಾನಾ ರೀತಿಯ ಕಂಟೆಂಟ್‌ಗಳನ್ನು ಪ್ರಡ್ಯೂಸ್ ಮಾಡುತ್ತಲೇ ಇರುತ್ತವೆ. ಸೋಶಿಯಲ್ ಮೀಡಿಯಾ ಇತ್ತೀಚೆಗೆ ಪವರ್‌ಫುಲ್ ಮಾಧ್ಯಮವಾಗಿ ಹೊರಹೊಮ್ಮಿದೆ.

ಅಷ್ಟೇ ಯಾಕೆ ಯುವಕ-ಯುವತಿಯರು ತಮ್ಮ ಬದುಕನ್ನು ಸೋಶಿಯಲ್ ಮೀಡಿಯಾದಿಂದಲೇ ಕಟ್ಟಿಕೊಳ್ಳುತ್ತಿದ್ದಾರೆ. ರೀಲ್ಸ್, ವಿಡಿಯೋ, ಪೋಸ್ಟ್‌ಗಳಿಗೆ ಲಕ್ಷ ಲಕ್ಷ ವೀವ್ಸ್ ಪಡೆದು ಸೋಶಿಯಲ್ ಮೀಡಿಯಾ ಸ್ಟಾರ್ ಆಗಿ ಹೊರ ಹೊಮ್ಮಿದ್ದಾರೆ. ಇವರ ರೀಲ್ಸ್‌ಗಳಿಗೆ ಅವರದ್ದೇ ಫ್ಯಾನ್ ಫಾಲೋವಿಂಗ್ ಇದೆ. ಇದಕ್ಕಾಗಿ ಇನ್ನಿಲ್ಲದ ಕಸರತ್ತು ಮಾಡುತ್ತಾರೆ. ಅದು ಕೆಲವೊಮ್ಮೆ ಬೇರೆಯವರಿಗೆ ಇರಿಸು ಮುರಿಸಾಗುವಂತೆ ಮಾಡುತ್ತಿದೆ.

Social media influencer dancing in the Delhi Metro sparking discussions about metro s new role

ಇತ್ತೀಚೆಗೆ ಸೋಶಿಯಲ್ ಮೀಡಿಯಾ ಸ್ಟಾರ್ ಒಬ್ಬರು ದೆಹಲಿ ಮೆಟ್ರೋದಲ್ಲಿ ಡ್ಯಾನ್ಸ್ ಮಾಡಿದ್ದಾರೆ. ಈ ವಿಡಿಯೋ ಈಗ ಅದೇ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ. ಈ ವಿಡಿಯೋ ನೋಡಿ ನೆಟ್ಟಿಗರು ಆಕ್ರೋಶ ಹೊರಹಾಕಿತ್ತಿದ್ದಾರೆ. ದೆಹಲಿ ಮೆಟ್ರೋ "ರೀಲ್ಸ್ ಸ್ಫಾಟ್ ಆಗಿದೆ" ಅಂತ ಕಿಡಿಕಾರುತ್ತಿದ್ದಾರೆ.

ದೆಹಲಿ ಮೆಟ್ರೋದಲ್ಲಿ ಆಗಾಗ ಸೋಶಿಯಲ್ ಮೀಡಿಯಾ ಸ್ಟಾರ್‌ಗಳಿ ಏನಾದರೂ ಮಾಡುತ್ತಲೇ ಇರುತ್ತಾರೆ. ಈ ಹಿಂದೆ ಕೂಡ ಇಂತಹದ್ದೇ ಹಲವು ಬಾರಿ ಸುದ್ದಿಗಳಾಗಿವೆ. ಈ ಯುವತಿಯೊಬ್ಬಳು ಪ್ರಯಾಣಿಕರ ಮುಂದೆ ರೀಲ್ಸ್‌ಗಾಗಿ ಡ್ಯಾನ್ಸ್ ಮಾಡಿದ್ದು, ದೊಡ್ಡ ಮಟ್ಟಕ್ಕೆ ಚರ್ಚೆಯಾಗುತ್ತಿದೆ. ಅಸಲಿಗೆ ಆ ವಿಡಿಯೋದಲ್ಲಿ ಏನಿದೆ? ಅಂತಹದ್ದೇನಾಯ್ತು ತಿಳಿಯಲು ಮುಂದೆ ಓದಿ..

ಯುವತಿಯೊಬ್ಬಳು ದೆಹಲಿ ಮೆಟ್ರೋ ರೈಲಿನಲ್ಲಿ ರೀಲ್ಸ್ ಮಾಡಿದ್ದಾಳೆ. ಈ ರೀಲ್ಸ್‌ನಲ್ಲಿ ಆ ಯುವತಿ ಬೆಲ್ಲಿ ಡ್ಯಾನ್ಸ್ ಮಾಡಿದ್ದು ವಿಡಿಯೋದಲ್ಲಿ ಸೆರೆಯಾಗಿದೆ. ಆದರೆ, ಸೋಶಿಯಲ್ ಮೀಡಿಯಾ ಸ್ಟಾರ್ ಬೆಲ್ಲಿ ಡ್ಯಾನ್ಸ್ ಮಾಡುವಾಗ ಹಿಂದೆ ಮಹಿಳೆಯೊಬ್ಬರು ತಾಳ್ಮೆಯಿಂದ ಇದನ್ನೆಲ್ಲ ನೋಡುತ್ತಾ ನಿಂತಿದ್ದಾರೆ. ಈ ವಿಡಿಯೋ ನೋಡಿ ನೆಟ್ಟಿಗರ ಕಣ್ಣುಗಳು ಕೆಂಪಾಗಿವೆ.

ನೆಟ್ಟಿಗರು ಡಿಸೂನ್ ಡಿಸೈನ್ ಆಗಿ ಕಾಮೆಂಟ್‌ಗಳನ್ನು ಮಾಡುತ್ತಿದ್ದಾರೆ. ಒಬ್ಬರು "ದೆಹಲಿ ಮೆಟ್ರೋ ರೀಲ್ಸ್ ಮಾಡುವ ಸ್ಪಾಟ್ ಆಗಿಬಿಟ್ಟಿದೆ" ಎಂದು ಕಾಮೆಂಟ್ ಮಾಡಿದ್ದಾರೆ. ಅದೇ ಇನ್ನೊಬ್ಬರು " ಸಾರ್ವಜನಿಕರಿಗೆ ರಕ್ಷಣೆ ನೀಡುವುದು CISF ಜವಾಬ್ದಾರಿ. ಆದರೆ, ಅದು ಸಾಮಾನ್ಯ ಜನರಿಗೆ ರಕ್ಷಣೆ ನೀಡುತ್ತಿಲ್ಲ" ಎಂದಿದ್ದಾರೆ.

ಮತ್ತೊಬ್ಬ ನೆಟ್ಟಿಗರು "ದೆಹಲಿ ಮೆಟ್ರೋ ಮ್ಯಾನೇಜ್ಮೆಂಟ್ ಈ ಬಗ್ಗೆ ಸೂಕ್ತ ಕ್ರಮವನ್ನು ತೆಗೆದುಕೊಳ್ಳಬೇಕು" ಎಂದು ಹೇಳಿದ್ದಾರೆ. ದೆಹಲಿ ಮೆಟ್ರೋದಲ್ಲಿ ರೀಲ್ಸ್ ಆಗುವುದು ಇದೇ ಮೊದಲೇನಲ್ಲ. ಈ ಹಿಂದೆ ಕೂಡ ಹಲವು ಬಾರಿ ಹೀಗೆ ರೀಲ್ಸ್ ಮಾಡಲಾಗಿದೆ. ಆಗಲೂ ಈಗ ಆಕ್ಷೇಪ ವ್ಯಕ್ತವಾಗಿತ್ತು. ಈಗ ಯುವತಿಯ ವಿಡಿಯೋ ವೈರಲ್ ಆಗುತ್ತಿದ್ದಂತೆ ಮತ್ತೆ ದೆಹಲಿ ಮೆಟ್ರೋ ಪ್ರಯಾಣಿಕರು ಕಿಡಿಕಾರುತ್ತಿದ್ದಾರೆ.

More from Filmibeat

English summary
A recent video of an influencer dancing inside the Delhi Metro has captivated netizens, turning the public space into a trending topic and a so-called 'Reels Spot'.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X