ಧರ್ಮದ ಹೆಸರಲ್ಲಿ ಭಿಕ್ಷೆ ಬೇಡಿದ್ದ ಡಾ.ಬ್ರೋ: ಯಾಕೆ ಹೀಗೆ ಮಾಡಿದ್ರು? ಅಸಲಿ ಕಥೆಯೇನು?
ಸೋಶಿಯಲ್ ಮೀಡಿಯಾ ಬಳಸುವವರಿಗೆ ಡಾ.ಬ್ರೋ ಬಗ್ಗೆ ಗೊತ್ತಿಲ್ಲ ಹೇಗೆ ಹೇಳಿ. ಅದರಲ್ಲೂ ಟ್ರಾವೆಲ್ ಬ್ಲಾಗ್‌ಗಳನ್ನು ಇಷ್ಟ ಪಡುವವರಿಗಂತೂ ಡಾ.ಬ್ರೋ ಅಚ್ಚು ಮೆಚ್ಚು. "ನಮಸ್ಕಾರ ದೇವ್ರು.." ಅಂತ ದೇಶ, ವಿದೇಶ ಸುತ್ತಿ ತಮ್ಮದೇ ಸ್ಟೈಲ್‌ನಲ್ಲಿ ಆ ಊರಿನ ಬಗ್ಗೆ ವಿವರಿಸುತ್ತಾ ಡಾ.ಬ್ರೋ ಗಮನ ಸೆಳೆಯುತ್ತಿದ್ದಾರೆ.
ಡಾ. ಬ್ರೋಗೆ ಕರ್ನಾಟಕದಲ್ಲಿರುವ ಕನ್ನಡಿಗರಷ್ಟೇ ಅಲ್ಲ. ವಿದೇಶದಲ್ಲಿರುವ ಕನ್ನಡಿಗರು ಕೂಡ ಇಷ್ಟ ಪಡುತ್ತಾರೆ. ಇತ್ತೀಚೆಗೆ ಸ್ವಲ್ಪ ಸೈಲೆಂಟ್ ಆಗಿದ್ದ ಡಾ. ಬ್ರೋ ಉರ್ಫ್ ಗಗನ್ ಶ್ರೀನಿವಾಸ್ ಮತ್ತೆ ಯೂಟ್ಯೂನ್‌ನಲ್ಲಿ ಟ್ರಾವೆಲ್ ವಿಡಿಯೋಗಳನ್ನು ಮಾಡುತ್ತಿದ್ದಾರೆ. ಯೂಟ್ಯೂಬ್, ಇನ್‌ಸ್ಟಾಗ್ರಾಂಗಳಲ್ಲಿ ಸದಾ ಆಕ್ಟಿವ್ ಆಗಿರುವ ಡಾ.ಬ್ರೋ ಇತ್ತೀಚೆಗೆ ಭಿಕ್ಷೆ ಬೇಡುತ್ತಿರುವ ಫೋಟೊಗಳನ್ನು ಶೇರ್ ಮಾಡಿದ್ದಾರೆ.

ಡಾ.ಬ್ರೋ ಹಂಚಿಕೊಂಡ ಫೋಟೊಗಳು ಸೋಶಿಯಲ್ ಮೀಡಿಯಾಗಳಲ್ಲಿ ವೈರಲ್ ಆಗುತ್ತಿವೆ. ಅಷ್ಟಕ್ಕೂ ಡಾ.ಬ್ರೋ ಭಿಕ್ಷೆ ಬೇಡುತ್ತಿರುವ ಫೋಟೊಗಳನ್ನು ಶೇರ್ ಮಾಡಿಕೊಂಡಿದ್ದೇಕೆ? ಆ ಫೋಟೊಗಳ ಹಿಂದಿನ ಉದ್ದೇಶವೇನು? ಈ ಫೋಟೊಗಳಿಗೆ ನೆಟ್ಟಿಗರ ಪ್ರತಿಕ್ರಿಯೆ ಏನು? ಅನ್ನೋದನ್ನು ತಿಳಿಯಲು ಮುಂದೆ ಓದಿ.
ಡಾ.ಬ್ರೋ ಯೂಟ್ಯೂಬ್‌ನಲ್ಲಿ ಅಯೋಧ್ಯೆ ಕುರಿತು ಸೀರಿಸ್ ಲೆಕ್ಕದಲ್ಲಿ ವಿಡಿಯೋಗಳನ್ನು ಮಾಡಿದ್ದರು. ಬಳಿಕ ಒಂದಿಷ್ಟು ದಿನ ಬ್ರೇಕ್ ತೆಗೆದುಕೊಂಡಿದ್ದ ಡಾ.ಬ್ರೋ ಎರಡು ವಾರಗಳ ಹಿಂದೆ ಇಂಡೋನೇಷ್ಯಾದ ಜ್ವಾಲಾಮುಖಿಯ ಸ್ಟೋಟದ ಬಗ್ಗೆ ವಿಡಿಯೋವನ್ನು ಪೋಸ್ಟ್ ಮಾಡಿದ್ದರು. ಈಗ ಇನ್‌ಸ್ಟಾಗ್ರಾಂನಲ್ಲಿ ಕೆಲವು ಫೋಟೊಗಳನ್ನು ಶೇರ್ ಮಾಡಿಕೊಂಡಿದ್ದಾರೆ. ಆ ಫೋಟೊಗಳು ಚರ್ಚೆಯಾಗುತ್ತಿದೆ.
ಅಷ್ಟಕ್ಕೂ ಡಾ.ಬ್ರೋ ಭಿಕ್ಷೆ ಬೇಡುತ್ತಿರುವ ಮೂರು ಫೋಟೊಗಳನ್ನು ಹಂಚಿಕೊಂಡಿದ್ದಾರೆ. ಈ ಫೋಟೊಗಳಲ್ಲಿ " ಯಾವ ಧರ್ಮ ಭಿಕ್ಷುಕರನ್ನು ಅತಿಯಾಗಿ ಕೇರ್ ಮಾಡುತ್ತೆ" ಎಂದು ಬೋರ್ಡ್ ಹಿಡಿದ ಭಿಕ್ಷೆ ಬೇಡುವುದಕ್ಕೆ ಕೂತಿದ್ದರು. ಅದರಲ್ಲಿ ಮೂರು ಪ್ರಮುಖ ಧರ್ಮಗಳ ಹೆಸರನ್ನು ಕಾಣಬಹುದಾಗಿದೆ. ಹಿಂದೂ, ಕ್ರಿಶ್ಚಿಯನ್, ಮುಸ್ಲಿಂ ಮೂರು ಧರ್ಮ ಹೆಸರನ್ನು ಬರೆದು, ಅದರ ಮುಂದೆ ಭಿಕ್ಷೆ ಹಾಕುವುದಕ್ಕೆ ಪಾತ್ರೆಯನ್ನು ಇಡಲಾಗಿದೆ.

ಅಂದ್ಹಾಗೆ, ಡಾ.ಬ್ರೋ ಧರ್ಮದ ಹೆಸರಿನಲ್ಲಿ ಭಿಕ್ಷೆ ಬೇಡಿದ್ರಾ? ಭಿಕ್ಷೆ ಬೇಡಿದ್ದರ ಹಿನ್ನೆಲೆಯೇನು? ಅಂದರೆ, ಇದು 2019ರ ಫೋಟೊಗಳು ಅಂತ ಅವರೇ ಹಾಕಿಕೊಂಡಿದ್ದಾರೆ. ಇದು ಒಂದು ಸೋಶಿಯಲ್ ಎಕ್ಸ್‌ಪೆರಿಮೆಂಟ್ ಅಂತ ಕಾಣಿಸುತ್ತಿದೆ. ಈ ಮೂಲಕ ಸಮಾಜದಲ್ಲಿ ಯಾವ ರೀತಿಯ ಮನಸ್ಥಿತಿಯಿದೆ ಅನ್ನೋದನ್ನು ತಿಳಿದುಕೊಳ್ಳಲು 5 ವರ್ಷಗಳ ಹಿಂದೆ ಇಂತಹದ್ದೊಂದು ಪ್ರಯತ್ನಕ್ಕೆ ಮುಂದಾಗಿದ್ದರು ಎಂದು ತೋರುತ್ತಿದೆ.
ಡಾ. ಬ್ರೋ ಈ ಬಗ್ಗೆ ಹೆಚ್ಚಿನ ಮಾಹಿತಿಯನ್ನೇನು ಹಂಚಿಕೊಂಡಿಲ್ಲ. ಆದರೆ, 2019ರ ಫೋಟೊ ಅನ್ನೋದನ್ನು ಇನ್‌ಸ್ಟಾಗ್ರಾಂನಲ್ಲಿ ಹಂಚಿಕೊಂಡಿದ್ದಾರೆ. ಸದ್ಯಕ್ಕೆ ಕನ್ನಡದ ಈ ಸೋಶಿಯಲ್ ಮೀಡಿಯಾ ಸ್ಟಾರ್ ಮತ್ತೆ ಸುದ್ದಿಯಲ್ಲಿದ್ದಾರೆ. ಈ ಫೋಟೊಗಳನ್ನು ನೋಡಿ, "ಮಾನವೀಯತೆ ಮುಖ್ಯ", ಇನ್ನು ಕೆಲವರು "ಡಿಫ್ರೆಂಟ್ ಆಗಿ ದುಡ್ಡು ಮಾಡುವ ವಿಧಾನ" ಎಂದೆಲ್ಲ ಕಾಮೆಂಟ್ ಮಾಡಿದ್ದಾರ.


Click it and Unblock the Notifications











