ಸೌಂದರ್ಯಾ ಸಾವಿಗೂ ಮುನ್ನ 2 ತಿಂಗಳ ಗರ್ಭಿಣಿ: "ಚಂದ್ರಮುಖಿನೇ ನನ್ನ ಸಿನಿಮಾ" ಎಂದಿದ್ದ ನಟಿ
ಹೆಸರಿಗೆ ತಕ್ಕಂತೆ ಸೌಂದರ್ಯಾದ ಗಣಿಯಾಗಿದ್ದ ನಟಿ ಸೌಂದರ್ಯ. ಇಂದು (ಜುಲೈ 18) ಬದುಕಿದ್ದರೆ ಈ ನಟಿ 51ನೇ ಹುಟ್ಟುಹಬ್ಬವನ್ನು ಆಚರಿಸಿಕೊಳ್ಳುತ್ತಿದ್ದರು. ಆದರೆ, ವಿಧಿ ಆಟದ ಮುಂದೆ ಸೌಂದರ್ಯಾ ಕೂಡ ತಲೆಬಾಗಲೇ ಬೇಕಾಯ್ತು. ಬಹುಭಾಷಾ ನಟಿಯಾಗಿ ದೇಶಾದ್ಯಂತ ಅಭಿಮಾನಿಗಳನ್ನು ಹೊಂದಿದ್ದ ಈ ನಟಿಯನ್ನು ನೆನೆಸಿಕೊಂಡು ಮರುಕ ಪಡುವ ಅಭಿಮಾನಿಗಳು ಇದ್ದಾರೆ.
ಸೌಂದರ್ಯಾ ಅಪಾರ ಅಭಿಮಾನಿಗಳನ್ನು ಅಗಲಿ 19 ವರ್ಷಗಳೇ ಆಗಿವೆ. ಆದರೂ, ಕನ್ನಡದ ನಟಿಯನ್ನು ಜನರು ಮರೆತಿಲ್ಲ. ಕನ್ನಡ ಹಾಡು ತೆಲುಗು ಭಾಷೆಯ ಸಿನಿಮಾಗಳಲ್ಲಿಯೇ ಹೆಚ್ಚಾಗಿ ನಟಿಸಿದ್ದ ಸೌಂದರ್ಯಾ ವೃತ್ತಿ ಬದುಕಿನಲ್ಲಿ ಸೋಲಿಗಿಂತ ಗೆಲುವು ಕಂಡಿದ್ದೇ ಹೆಚ್ಚು.

ಸೌಂದರ್ಯಾ ವೃತ್ತಿ ಬದುಕಿನ ಉತ್ತುಂಗದಲ್ಲಿರುವಾಗಲೇ ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದರು. ವೃತ್ತಿಯಲ್ಲಿ ಸಾಫ್ಟ್‌ವೇರ್ ಇಂಜಿನಿಯರ್ ಆಗಿದ್ದ ಜಿ.ಎಸ್. ರಘು ಅವರನ್ನು ಮದುವೆ ಆಗಿದ್ದರು. 2019ರಲ್ಲಿ ತಮಿಳಿನ ಹಿರಿಯ ನಿರ್ದೇಶಕ ಆರ್ ವಿ ಉದಯ್ ಕುಮಾರ್ ಸಂದರ್ಶನವೊಂದರಲ್ಲಿ ಕೆಲವು ಇಂಟ್ರೆಸ್ಟಿಂಗ್ ವಿಷಯಗಳನ್ನು ರಿವೀಲ್ ಮಾಡಿದ್ದರು. ಅದರ ಡಿಟೈಲ್ಸ್ ಇಲ್ಲಿದೆ.
"ಚಂದ್ರಮುಖಿನೇ ನನ್ನ ಕೊನೆಯ ಸಿನಿಮಾ"
ತಮಿಳಿನ ಹಿರಿಯ ನಿರ್ದೇಶಕ ಆರ್ ವಿ ಉದಯ್ ಕುಮಾರ್ ಸಂದರ್ಶನದಲ್ಲಿ ಕೆಲವು ಆಸಕ್ತಿಕರ ವಿಷಯಗಳನ್ನು ರಿವೀಲ್ ಮಾಡಿದ್ದರು. ಸೌಂದರ್ಯಾ ಸಾವಿಗೂ ಕೆಲವೇ ದಿನಗಳು ಮುನ್ನ ಇವರಿಗೆ ಫೋನ್ ಮಾಡಿದ್ದರು. ಆ ವೇಳೆ ಕೆಲವು ವಿಷಯಗಳನ್ನು ತಮಿಳು ನಿರ್ದೇಶಕರೊಂದಿಗೆ ಚರ್ಚಿಸಿದ್ದಾಗಿ ಹೇಳಿದ್ದರು. ಆ ಸಂಗತಿಗಳು ಅವರ ಅಭಿಮಾನಿಗಳು ದು:ಖವನ್ನು ಇಮ್ಮಡಿಗೊಳಿಸಿತ್ತು.

ಒಂದು ದಿನ ಸೌಂದರ್ಯ ತಮಿಳಿನ ಹಿರಿಯ ನಿರ್ದೇಶಕ ಆರ್ ವಿ ಉದಯ ಕುಮಾರ್‌ಗೆ ಪೋನ್ ಮೂಲಕ "ಚಂದ್ರಮುಖಿ ಸಿನಿಮಾನೇ ನನ್ನ ಕೊನೆಯ ಸಿನಿಮಾ. ಆ ಮೇಲೆ ನಾನು ಸಿನಿಮಾವನ್ನು ಬಿಟ್ಟುಬಿಡುತ್ತೇನೆ" ಎಂದು ಹೇಳಿದ್ದರಂತೆ. ಈ ವಿಷಯವನ್ನು ಹಿರಿಯ ನಿರ್ದೇಶಕ ಸಂದರ್ಶನದಲ್ಲಿ ರಿವೀಲ್ ಮಾಡಿದ್ದರು. ದುರಂತ ಅಂದರೆ, ಆಕೆ ಕರೆ ಮಾಡಿ ಈ ವಿಷಯ ಹೇಳಿದ ಮಾರನೇ ದಿನವೇ ಸೌಂದರ್ಯಾ ವಿಮಾನ ದುರಂತದಲ್ಲಿ ಸಾವನ್ನಪ್ಪಿದರು.
2 ತಿಂಗಳ ಗರ್ಭಿಣಿಯಾಗಿದ್ದ ಸೌಂದರ್ಯಾ
ಸೌಂದರ್ಯಾ ವೃತ್ತಿ ಬದುಕಿನಲ್ಲಿ ಉತ್ತುಂಗದಲ್ಲಿದ್ದರು. ಕನ್ನಡ, ತೆಲುಗು ಹಾಗೂ ತಮಿಳು ಭಾಷೆಯ ಸಿನಿಮಾಗಳಲ್ಲಿ ಅವಕಾಶಗಳನ್ನು ಇವರನ್ನು ಹುಡುಕಿಕೊಂಡು ಬರುತ್ತಿದ್ದವರು. ಇಂತಹ ಸಮಯದಲ್ಲಿ ಸಿನಿಮಾದಿಂದ ದೂರ ಉಳಿಯಲು ನಿರ್ಧರಿಸಿದ್ದರು. ಅದಕ್ಕೆ ಕಾರಣವೇನು ಅನ್ನೋದನ್ನು ಆರ್ ವಿ ಉದಯ್ ಕುಮಾರ್ ರಿವೀಲ್ ಮಾಡಿದ್ದರು.
ನಟಿ ಸೌಂದರ್ಯಾ 'ಚಂದ್ರಮುಖಿ'ಯೇ ಕೊನೆಯ ಸಿನಿಮಾ ಎಂದಿದ್ದಕ್ಕೆ ಕಾರಣವಿದೆ. ಯಾಕಂದ್ರೆ, ಸೌಂದರ್ಯಾ ಆ ವೇಳೆ ಎರಡು ತಿಂಗಳ ಗರ್ಭಿಣಿಯಾಗಿದ್ದರು. ಹೀಗಾಗಿ ಸಿನಿಮಾದಿಂದ ದೂರ ಉಳಿಯುವುದಕ್ಕೆ ನಿರ್ಧರಿಸಿದ್ದರು. ಆದರೆ, ಒಂದು ವೇಳೆ ಬದುಕಿದ್ದರೆ, ರಜನಿಕಾಂತ್ ನಟಿಸಿದ 'ಚಂದ್ರಮುಖಿ' ಸಿನಿಮಾದಲ್ಲಿ ನಟಿಸುತ್ತಿದ್ದರೇ? ಅನ್ನೋ ಪ್ರಶ್ನೆಯಂತು ಇಂದಿಗೂ ಇದ್ದೇ ಇದೆ.
ವಿಮಾನ ದುರಂತದಲ್ಲಿ ಸೌಂದರ್ಯಾ ಸಾವು
ತಮಿಳು ನಿರ್ದೇಶಕ ಆರ್ ವಿ ಉದಯ್ ಕುಮಾರ್ ಹಾಗೂ ಅವರ ಪತ್ನಿಯೊಂದಿಗೆ ಸುಮಾರು ಒಂದು ಗಂಟೆಗಳ ಕಾಲ ಸೌಂದರ್ಯಾ ಮಾತಾಡಿದ್ದರು. ಅದೇ ಕೊನೆ ಮಾರನೇ ದಿನವೇ ವಿಮಾನ ದುರಂತದಲ್ಲಿ ಸಾವನ್ನಪ್ಪಿದ್ದರು. ಇದು ತನಗೆ ದೊಡ್ಡ ಶಾಕ್ ಆಗಿತ್ತು ಎಂದು ತಮಿಳು ನಿರ್ದೇಶಕ ಹೇಳಿಕೊಂಡಿದ್ದರು.
ಸೌಂದರ್ಯಾ ಭಾರತೀಯ ಜನತಾ ಪಾರ್ಟಿಯ ರಾಯಬಾರಿಯಾಗಿ ಪ್ರಚಾರ ಮಾಡುತ್ತಿದ್ದರು. ಹೀಗಾಗಿ ಬೆಂಗಳೂರಿನ ಜಕ್ಕೂರು ವಿಮಾನ ನಿಲ್ದಾಣದಿಂದ ಕರೀಂನಗರಕ್ಕೆ ಪ್ರಚಾರಕ್ಕೆ ತೆರಳಬೇಕಿತ್ತು. ಟೇಕ್ ಆಫ್ ಅದ ಕೆಲವೇ ಕ್ಷಣಗಳಲ್ಲಿ ತಾಂತ್ರಿಕ ದೋಷದಿಂದ ವಿಮಾನ ಅಪಘಾತ ಸಂಭವಿಸಿತ್ತು.


Click it and Unblock the Notifications











