ನಟಿ ತಮನ್ನಾಗೂ ರಂಭಾ ಪತಿಗೂ ಏನು ಲಿಂಕ್? ಪತಿಯ ವಿರುದ್ಧ ಕ್ರೇಜಿಸ್ಟಾರ್ ನಾಯಕಿ ಕಿಡಿಕಾರಿದ್ದೇಕೆ?

90 ದಶಕದಲ್ಲಿ ತಮ್ಮ ಗ್ಲಾಮರಸ್ ಲುಕ್‌ನಿಂದಲೇ ಸದ್ದು ಮಾಡಿದ್ದ ನಟಿ ರಂಭಾ. ಕನ್ನಡ, ತೆಲುಗು, ತಮಿಳು, ಮಲಯಾಳಂ, ಹಿಂದಿ, ಬೆಂಗಾಲಿ ಹಾಗೂ ಬೋಜ್‌ಪುರಿ ಭಾಷೆಯ ಸಿನಿಮಾಗಳಲ್ಲಿ ಬಹುಬೇಡಿಕೆಯ ನಟಿ ಆಗಿದ್ದರು. ಅದರಲ್ಲೂ ಕನ್ನಡದಲ್ಲಿ ರಂಭಾ ಹೆಚ್ಚಾಗಿ ಹಾಟ್ ಎನಿಸುವಂತಹ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದೇ ಹೆಚ್ಚು.

ಕ್ರೇಜಿಸ್ಟಾರ್ ರವಿಚಂದ್ರನ್ ಸಿನಿಮಾದಲ್ಲಿ ರಂಭಾ ಏನಾದರೂ ನಟಿಸುತ್ತಿದ್ದಾರೆ ಅಂದರೆ, ಸಿನಿಪ್ರಿಯ ಕಣ್ಣುಗಳಿಗೆ ಹಬ್ಬ. ಕಿವಿಗಳಿಗೂ ಹಬ್ಬ. ಆ ಮಟ್ಟಿಗೆ ಈ ಜೋಡಿ ಕ್ರೇಜ್ ಕ್ರಿಯೇಟ್ ಮಾಡಿತ್ತು. 'ಓ ಪ್ರೇಮವೇ', 'ಸಾಹುಕಾರ', 'ಪಾಂಡು ರಂಗ ವಿಠಲ' ದಂತಹ ಸಿನಿಮಾಗಳು ಈ ಜೋಡಿ ಮೇಲಿದ್ದ ಕ್ರೇಜ್‌ಗೆ ಸಾಕ್ಷಿಯಾಗಿ ನಿಲ್ಲುತ್ತವೆ.

South actress Rambha once showed anger at her husband being close to Tamannaah Bhatia

ಸುಮಾರು 10ಕ್ಕೂ ಅಧಿಕ ಕನ್ನಡ ಸಿನಿಮಾಗಳಲ್ಲಿ ನಟಿಸಿ ಕನ್ನಡಿಗರನ್ನು ರಂಜಿಸಿದ್ದ ನಟಿ ರಂಭಾ ಇಂದು (ಜೂನ್ 5) 47ನೇ ಹುಟ್ಟುಹಬ್ಬದ ಸಂಭ್ರಮದಲ್ಲಿ ಇದ್ದಾರೆ. ವಿವಾಹದ ಬಳಿಕ ರಂಭಾ ಚಿತ್ರರಂಗದಿಂದ ದೂರು ಇದ್ದು, ಹೆಚ್ಚಾಗಿ ಕಾಣಿಸಿಕೊಳ್ಳುತ್ತಿಲ್ಲ. ಆದರೆ, ಈ ನಟಿ ಎಂಟ್ರಿ ಕೊಟ್ಟ ಎಲ್ಲಾ ಭಾಷೆಯ ಸಿನಿಮಾಗಳಲ್ಲೂ ಗೆಲುವು ಸಾಧಿಸಿದ ನಟಿ ಎನಿಸಿಕೊಂಡಿದ್ದಾರೆ.

ರಂಭಾ ಅವರ ಸಿನಿಮಾರಂಗದಲ್ಲಿ ಯಶಸ್ಸಿನ ಹಾದಿಯನ್ನೇ ಹಿಡಿದಿದ್ದರು. ಕನ್ನಡ, ತೆಲುಗು, ತಮಿಳು, ಮಲಯಾಳಂ ಭಾಷೆಯ ಸಿನಿಮಾಗಳಲ್ಲಿ ಇವರಿಗೆ ಸಕ್ಸಸ್ ಸಿಕ್ಕಿದೆ. ಆದರೆ, ಇವರ ವಿವಾಹದ ಬದುಕಿನಲ್ಲಿ ಒಮ್ಮೆ ಅಲ್ಲೋಲ ಕಲ್ಲೋಲ ಎದ್ದಿತ್ತು. ಪತಿಯ ವಿರುದ್ಧ ಈ ಬಹುಭಾಷಾ ನಟಿ ರಂಭಾ ಕೋರ್ಟ್ ಮೆಟ್ಟಿಲೇರಿದ್ದರು. ಈ ಸುದ್ದಿ ದೊಡ್ಡ ಮಟ್ಟಕ್ಕೆ ಸದ್ದು ಮಾಡಿತ್ತು.

24 ವರ್ಷಗಳ ಹಿಂದೆ ಅಂದರೆ, 2010ರಲ್ಲಿ ರಂಭಾ ಶ್ರೀಲಂಕಾದ ತಮಿಳಿಗ ಇಂದ್ರಕುಮಾರ್ ಪದ್ಮನಾಥನ್ ಅವರನ್ನು ವಿವಾಹವಾಗಿದ್ದರು. ಇಂದ್ರಕುಮಾರ್ ಪದ್ಮನಾಥನ್ ಕೆನಾಡದಲ್ಲಿ ಉದ್ಯಮವನ್ನು ಹೊಂದಿದ್ದಾರೆ. ಈ ದಂಪತಿಗೆ ಮೂವರು ಮಕ್ಕಳಿದ್ದಾರೆ. ಮದುವೆಯಾದ ಐದಾರು ವರ್ಷಗಳ ಬಳಿಕ ರಂಭಾ ಹಾಗೂ ಇಂದ್ರಕುಮಾರ್ ಸಂಸಾರದಲ್ಲಿ ಬಿರುಕು ಬಿಟ್ಟಿತ್ತು. ರಂಭಾಗೆ ಭಾರತದಲ್ಲಿ ನೆಲೆಯೂರಬೇಕು ಎಂಬ ಆಸೆ. ಅದೇ ಇಂದ್ರಕುಮಾರ್‌ಗೆ ಕೆನಾಡದಲ್ಲಿಯೇ ಉಳಿದುಕೊಳ್ಳಬೇಕು ಎಂಬ ಬಯಕೆ. ಇದರಿಂದ ಇಬ್ಬರ ನಡುವೆ ವೈಮನಸ್ಸು ಮೂಡಿದೆ ಎಂದು ವರದಿಯಾಗಿತ್ತು.

South actress Rambha once showed anger at her husband being close to Tamannaah Bhatia

ಇದರಿಂದ ನಟಿ ರಂಭಾ ತನ್ನ ಪತಿಯಿಂದ ದೂರ ಆಗುವುದಕ್ಕೆ ನಿರ್ಧರಿಸಿದ್ದರು ಎನ್ನಲಾಗಿತ್ತು. ಬಳಿಕ ಸ್ವತ: ರಂಭಾನೇ ತನ್ನ ಸಂಸಾರವನ್ನು ಉಳಿಸಿಕೊಡಿ ಎಂದು ಕೋರ್ಟ್ ಮೆಟ್ಟಿಲೇರಿದ್ದರು. ಇಬ್ಬರೂ ಒಟ್ಟಿಗೆ ಸಂಸಾರ ಮಾಡುವುದಕ್ಕೆ ಅನುವು ಮಾಡಿಕೊಡಿ ತನಗೆ ಪತಿ ಬೇಕು ಎಂದು ಚೆನ್ನೈ ಕೌಟುಂಬಿಕ ನ್ಯಾಯಾಲಯದ ಮೊರೆ ಹೋಗಿದ್ದರು. ಈ ಪತಿ ಹಾಗೂ ಮೂವರು ಮಕ್ಕಳೊಂದಿಗೆ ಆರಾಮಾಗಿದ್ದಾರೆ.

ಹೀಗಿದ್ದರೂ, ಬೇರೊಂದು ಸನ್ನಿವೇಶದಲ್ಲಿ ರಂಭಾ ತನ್ನ ಪತಿಯ ವಿರುದ್ಧ ಮತ್ತೊಂದು ಆರೋಪ ಮಾಡಿದ್ದರು. ತನ್ನ ಪತಿ ಸೋಶಿಯಲ್ ಮೀಡಿಯಾದಲ್ಲಿ ತನ್ನನ್ನೇ ಫಾಲೋ ಮಾಡುತ್ತಿಲ್ಲ. ಆದರೆ, ನಟಿ ತಮನ್ನಾರನ್ನು ಫಾಲೋ ಮಾಡುತ್ತಿದ್ದಾರೆ ಎಂದು ಹೇಳಿಕೊಂಡಿದ್ದರು. ಈ ಹಿನ್ನೆಲೆಯಲ್ಲಿ ಇಬ್ಬರ ನಡುವೆ ಏನೋ ಇದೆ ಎಂದು ಭಾವಿಸಲಾಗಿತ್ತು.

ಮಿಲ್ಕಿ ಬ್ಯೂಟಿ ತಮನ್ನಾ ಜೊತೆ ರಂಭಾ ಪತಿ ಸಲುಗೆಯಿಂದ ಇದ್ದಾರೆ ಎಂಬ ಕಾರಣಕ್ಕೆ ಗರಂ ಆಗಿದ್ದಾರೆಂದು ತಮಿಳು ವೆಬ್‌ಸೈಟ್‌ಗಳು ಸುದ್ದಿ ಮಾಡಿದ್ದವು. ರಂಭಾ ಪತಿ ಅಮೆರಿಕ ಮಾಡ್ಯೂಲರ್ ಇಂಟೀರಿಯರ್ ಬ್ರ್ಯಾಂಡ್ ಮ್ಯಾಜಿಕ್ ಹೋಮ್‌ನ ಮುಖ್ಯಸ್ಥರು. ಕಳೆದ ವರ್ಷ ಅಕ್ಟೋಬರ್‌ನಲ್ಲಿ ಈ ಪ್ರಾಡಕ್ಟ್ ಅನ್ನು ತಮನ್ನಾ ಉದ್ಘಾಟನೆ ಮಾಡಿದ್ದರು. ಆ ವೇಳೆ ತಮನ್ನಾ ಹಾಗೂ ರಂಭಾ ಪತಿ ನಡುವೆ ಆತ್ಮೀಯತೆ ಬೆಳೆದಿದ್ದು, ನಿರಂತರ ಸಂಪರ್ಕದಲ್ಲಿದ್ದಾರೆ ಎನ್ನಲಾಗಿದೆ. ಶ್ರೀಲಂಕಾದ ಜಾಫ್ನಾದಲ್ಲಿ ಸಂಗೀತ ಕಾರ್ಯಕ್ರಮವನ್ನು ನಡೆಸಲು ಇಂದ್ರಕುಮಾರ್ ಮುಂದಾಗಿದ್ದಾಗ ತಮನ್ನಾಗೆ ಆಹ್ವಾನ ನೀಡಿದ್ದರು. ಅದು ರಂಭಾ ಕೋಪಕ್ಕೆ ಕಾರಣ ಆಗಿತ್ತು ಎನ್ನಲಾಗಿತ್ತು.

More from Filmibeat

English summary
Rambha Birthday: Do you know once Rambha went to court against her husband
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X