ರಶ್ಮಿಕಾ, ಸಮಂತಾ ಸಹಿತ ದಕ್ಷಿಣ ಭಾರತದ ಟಾಪ್ ನಟಿಯರ ವಿದ್ಯಾರ್ಹತೆ ಏನು?
ದಕ್ಷಿಣ ಭಾರತದ ನಟಿಯರು ವಿಶ್ವದ ಮೂಲೆಯಲ್ಲೂ ತಮ್ಮ ಅಭಿಮಾನಿಗಳನ್ನು ಹೊಂದಿದ್ದಾರೆ. ತಮ್ಮ ಮೆಚ್ಚಿನ ನಟಿಯರ ಯಾವ ಸಿನಿಮಾ ಮಾಡುತ್ತಿದ್ದಾರೆ ಎನ್ನುವುದಷ್ಟೇ ಅಲ್ಲ. ಅವರು ವೈಯಕ್ತಿಕ ಬದುಕಿನ ಬಗ್ಗೆನೂ ಚರ್ಚೆ ಮಾಡುತ್ತಿರುತ್ತಾರೆ. ಅವರ ವಿದ್ಯಾರ್ಹತೆ ಏನು? ಅವರು ವಿದ್ಯಾಭ್ಯಾಸ ಮಾಡಿದ್ದು ಎಲ್ಲಿ? ಎನ್ನುವ ಕುತೂಹಲ ಅವರ ಅಭಿಮಾನಿಗಳಿಲ್ಲಿ ಇದ್ದೇ ಇರುತ್ತೆ. ನಟಿಯರ ಫ್ಯಾನ್ಸ್ ಪ್ರಶ್ನೆಗಳಿಗೆ ಉತ್ತರ ಇಲ್ಲಿದೆ.
ದಕ್ಷಿಣ ಭಾರತದ ನಟಿಯರು ಕೇವಲ ದಕ್ಷಿಣ ಭಾರತಕ್ಕಷ್ಟೇ ಮೀಸಲು ಎನ್ನುವ ಕಾಲವಿತ್ತು. ಈಗ ಹಾಗಿಲ್ಲ. ರಶ್ಮಿಕಾ ಮಂದಣ್ಣ ಮಂದಣ್ಣ, ಸಮಂತಾ, ಅನುಷ್ಕಾ ಶೆಟ್ಟಿ, ಪೂಜಾ ಹೆಗ್ಡೆ, ಕೀರ್ತಿ ಸುರೇಶ್, ನಯನತಾರಾ ಹಾಗೂ ಶ್ರುತಿ ಹಾಸನ್ ಇವರು ದಕ್ಷಿಣ ಭಾರತದ ಅಷ್ಟೇ ಅಲ್ಲ. ಉತ್ತರ ಭಾರತದ ಚಿತ್ರರಂಗಕ್ಕೂ ಪರಿಚಯ. ಇಷ್ಟೊಂದು ಸಾಧನೆ ಮಾಡಿರುವ ಈ ನಟಿಯರ ವಿದ್ಯಾಹರ್ತೆ ಏನು? ಅನ್ನುವುದನ್ನು ತಿಳಿಯಲು ಮುಂದೆ ಓದಿ.

ಸಮಂತಾ
ಸಮಂತಾ ದಕ್ಷಿಣ ಭಾರತದ ಸ್ಟಾರ್ ನಟಿ. ತೆಲುಗು ಹಾಗೂ ತಮಿಳಿನ ಸ್ಟಾರ್ ನಟರೊಂದಿಗೆ ನಟಿಸಿದ್ದಾರೆ. ವೆಬ್ ಸಿರೀಸ್ 'ಫ್ಯಾಮಿಲಿ ಮ್ಯಾನ್ 2' ಹಾಗೂ ವಿಚ್ಛೇದನದ ಬಳಿಕ ರಾಷ್ಟ್ರ ಮಟ್ಟದಲ್ಲಿ ಸುದ್ದಿಯಲ್ಲಿದ್ದಾರೆ. ಅಂದಹಾಗೆ, ಸಮಂತಾ ಚೆನ್ನೈನ ಹೋಲಿ ಎಂಜಲ್ಸ್ ಆಂಗ್ಲೋ ಶಾಲೆಯಲ್ಲಿ ಪ್ರಾಥಮಿಕ ಶಿಕ್ಷಣ ಮುಗಿಸಿದ್ದರು. ಬಳಿಕ ಚೆನ್ನೈನ ಸ್ಟೆಲ್ಲಾ ಮೇರಿಸ್ ಕಾಲೇಜಿನಲ್ಲಿ ವಾಣಿಜ್ಯ ಶಾಸ್ತ್ರದಲ್ಲಿ ಪದವಿ ಪಡೆದಿದ್ದಾರೆ. ಪದವಿ ಮುಗಿಯುತ್ತಿದ್ದಂತೆ ಮಾಡಲಿಂಗ್ ಕ್ಷೇತ್ರಕ್ಕೆ ಕಾಲಿಟ್ಟಿದ್ದರು.

ರಶ್ಮಿಕಾ ಮಂದಣ್ಣ
'ನ್ಯಾಷನಲ್ ಕ್ರಶ್' ರಶ್ಮಿಕಾ ಮಂದಣ್ಣ ಪ್ಯಾನ್ ಇಂಡಿಯಾ ಸಿನಿಮಾ 'ಪುಷ್ಪ ಮೂಲಕ ಇಡೀ ಭಾರತದಾದ್ಯಂತ ಮನೆ ಮಾತಾಗಿದ್ದಾರೆ. ತೆಲುಗು ಹಾಗೂ ಹಿಂದಿ ಸಿನಿಮಾಗಳಲ್ಲಿ ಬ್ಯುಸಿಯಾಗಿರುವ ನಟಿ ಬೋರ್ಡಿಂಗ್ ಸ್ಕೂಲ್‌ನಲ್ಲಿ ಶಿಕ್ಷಣ ಪಡೆದಿದ್ದಾರೆ. ಮೊದಲ ಸಿನಿಮಾ ಕನ್ನಡದ 'ಕಿರಿಕ್ ಪಾರ್ಟಿ'ಯಲ್ಲಿ ನಟಿಸುವುದಕ್ಕೂ ಮುನ್ನ ಪದವಿ ಪಡೆದಿದ್ದರು. ಸೈಕಾಲಜಿ, ಜರ್ನಲಿಸಂ ಹಾಗೂ ಇಂಗ್ಲಿಷ್ ಸಾಹಿತ್ಯದಲ್ಲಿ ಪದವಿ ಪಡೆದುಕೊಂಡಿದ್ದಾರೆ.

ಅನುಷ್ಕಾ ಶೆಟ್ಟಿ
ಅನುಷ್ಕಾ ಶೆಟ್ಟಿ ಅಸಲಿ ಹೆಸರು ಸ್ವೀಟಿ ಶೆಟ್ಟಿ. ಸಿನಿಮಾಗಾಗಿ ಅನುಷ್ಕಾ ತಮ್ಮ ಹೆಸರನ್ನು ಬದಲಾಯಿಸಿಕೊಂಡಿದ್ದರು. ಅನುಷ್ಕಾ ಶೆಟ್ಟಿ ದಕ್ಷಿಣ ಭಾರತದಲ್ಲಿಯೇ ಅತೀ ಹೆಚ್ಚು ಸಂಭಾವನೆ ಪಡೆಯುವ ನಟಿ. ಬೆಂಗಳೂರಿನ ಮೌಂಟ್ ಕಾರ್ಮೆಲ್ ಕಾಲೇಜಿನಲ್ಲಿ ಕಂಪ್ಯೂಟರ್ ಅಪ್ಲಿಕೇಶನ್‌ನಲ್ಲಿ ಪದವಿ ಪಡೆದಿದ್ದಾರೆ. ಸಿನಿಮಾಗೆ ಬರುವುದಕ್ಕೂ ಮುನ್ನ ಯೋಗ ತರಬೇತಿ ಕೂಡ ಪಡೆದಿದ್ದರು.

ನಯನತಾರಾ
ದಕ್ಷಿಣ ಭಾರತದ ಲೇಡಿ ಸೂಪರ್‌ಸ್ಟಾರ್ ನಯನತಾರಾ. ಇವರ ಮೂಲ ಹೆಸರು ಡಯಾನಾ ಮರಿಯಂ ಕುರಿಯನ್. ನಯನತಾರಾ ತಂದೆ ಏರ್ ಫೋರ್ಸ್ ಅಧಿಕಾರಿಯಾಗಿದ್ದರಿಂದ ಭಾರತದ ಹಲವು ಭಾಗಗಳಲ್ಲಿ ಶಿಕ್ಷಣ ಪಡೆದಿದ್ದಾರೆ. ಪ್ರಾಥಮಿಕ ಶಿಕ್ಷಣವನ್ನು ಜಾಮ್‌ನಗರ್, ಗುಜರಾತ್ ಹಾಗೂ ದೆಹಲಿಯಲ್ಲಿ ಪಡೆದಿದ್ದಾರೆ. ಥಿರುವಲ್ಲದ ಮಾರ್ಥೊಮ ಕಾಲೇಜಿನಲ್ಲಿ ಇಂಗ್ಲಿಷ್ ಸಾಹಿತ್ಯದಲ್ಲಿ ನಯನತಾರಾ ಪದವಿ ಪಡೆದಿದ್ದಾರೆ.

ಪೂಜಾ ಹೆಗ್ಡೆ
ಪೂಜಾ ಹೆಗ್ಡೆ ಪೋಷಕರು ಕರ್ನಾಟಕದ ಕರಾವಳಿ ಮೂಲದವರು. ಆದರೆ, ಮುಂಬೈನಲ್ಲಿ ನೆಲೆಸಿದ್ದಾರೆ. ಹೀಗಾಗಿ ಪೂಜಾ ಹೆಗ್ಡೆ ಕೂಡ ಮುಂಬೈನಲ್ಲಿ ಹುಟ್ಟಿ, ಶಿಕ್ಷಣವನ್ನೂ ಅಲ್ಲೇ ಪಡೆದಿದ್ದಾರೆ. ಮುಂಬೈನ ಎಂ ಎಂ ಕೆ ಕಾಲೇಜಿನಲ್ಲಿ ವಾಣಿಜ್ಯಶಾಸ್ತ್ರದಲ್ಲಿ ಸ್ನಾತಕೋತ್ತರ ಪದವಿ ಪಡೆದಿದ್ದಾರೆ. 2010ರ ಭುವನ ಸುಂದರಿ ಸ್ಪರ್ಧೆಯಲ್ಲಿ ರನ್ನರ್ ಅಪ್ ಆಗಿದ್ದರು. 2012ರಲ್ಲಿ ಹೃತಿಕ್ ರೋಷನ್ ನಟಿಸಿದ 'ಮೊಹೆಂಜೋದಾರೋ' ಚಿತ್ರದ ಮೂಲಕ ಚಿತ್ರರಂಗಕ್ಕೆ ಎಂಟ್ರಿ ಕೊಟ್ಟಿದ್ದರು.

ಕೀರ್ತಿ ಸುರೇಶ್
ತಮಿಳುನಾಡಿನ ಚೆನ್ನೈನಲ್ಲಿ ಹುಟ್ಟಿರುವ ಕೀರ್ತಿ ಸುರೇಶ್ ನಾಲ್ಕನೇ ತರಗತಿವರೆಗೂ ಚೆನ್ನೈನಲ್ಲಿ ಶಿಕ್ಷಣ ಪಡೆದಿದ್ದರು. ಕೆಂದ್ರೀಯ ವಿದ್ಯಾಲಯ ಪಾಟ್ಟೊಂನಲ್ಲಿ ಪ್ರಾಥಮಿಕ ಶಿಕ್ಷಣ ಮುಗಿಸಿದ್ದರು. ಪರ್ಲ್ ಅಕಾಡೆಮಿಯಿಂದ ಫ್ಯಾಷನ್ ಡಿಸೈನಿಂಗ್‌ನಲ್ಲಿ ಪದವಿ ಪಡೆದಿದ್ದಾರೆ. ಬಳಿಕ ನಾಲ್ಕು ತಿಂಗಳ ಸ್ಕಾಟ್‌ಲ್ಯಾಂಡ್‌ನಲ್ಲಿ ಹೆಚ್ಚುವರಿ ಶಿಕ್ಷಣವನ್ನು ಪಡೆದು, ಎರಡು ತಿಂಗಳು ಇಂಟರ್ನ್‌ಶಿಪ್ ಪಡೆದಿದ್ದಾರೆ.

ಶ್ರುತಿ ಹಾಸನ್
ಕಮಲ್ ಹಾಸನ್ ಪುತ್ರಿ ಶ್ರುತಿ ಹಾಸನ್ ಚೆನ್ನೈನಲ್ಲಿ ಪ್ರಾಥಮಿಕ ಶಿಕ್ಷಣ ಮುಗಿಸಿದ್ದಾರೆ. ಬಳಿಕ ಸೈಕಾಲಿಜಿ ಓದಲು ಮುಂಬೈನಲ್ಲಿ ಶಿಫ್ಟ್ ಆಗಿದ್ದರು. ಅಲ್ಲಿನ ಸೇಂಟ್ ಆಂಡ್ರ್ಯೂಸ್ ಕಾಲೇಜಿನಲ್ಲಿ ಸೈಕಾಲಜಿ ಸ್ಟಡಿ ಮಾಡಿದ್ದಾರೆ. ಇದರೊಂದಿಗೆ ಸಂಗೀತದಲ್ಲಿ ಆಸಕ್ತಿ ಬೆಳೆಸಿಕೊಂಡ ಶ್ರುತಿ ಕ್ಯಾಮಿಫೋರ್ನಿಯಾದ ಮ್ಯುಸಿಷಿಯನ್ಸ್ ಇನ್‌ಸ್ಟಿಟ್ಯೂಟ್‌ನಲ್ಲಿ ಸಂಗೀತ ಕಲಿತಿದ್ದಾರೆ.


Click it and Unblock the Notifications