ಶ್ರೀದೇವಿಯನ್ನು ಮದುವೆಯಾಗುವಂತೆ ಕಮಲ್ ಹಾಸನ್‌ಗೆ ಒತ್ತಾಯ ಮಾಡಿದ್ಯಾರು? ಕಮಲ್ ರಿಜೆಕ್ಟ್ ಮಾಡಿದ್ದೇಕೆ?
ಸಕಲಕಲಾವಲ್ಲಭ ಕಮಲ್ ಹಾಸನ್ ಮತ್ತು ಶ್ರೀದೇವಿ ಜೋಡಿ ದಕ್ಷಿಣ ಭಾರತದ ಸೂಪರ್ ಹಿಟ್ ಜೋಡಿಗಳಲ್ಲಿ ಒಂದು. ಸಿನಿಮಾದಲ್ಲಿ ಇಬ್ಬರ ಕೆಮಿಸ್ಟ್ರಿಗೆ ಫಿದಾ ಆಗದ ಪ್ರೇಕ್ಷಕನಿಲ್ಲ. ಸಿನಿಪ್ರಿಯರ ಪ್ರೀತಿಯ ಜೋಡಿಗಳಲ್ಲಿ ಒಂದಾಗಿದ್ದ ಕಮಲ್ ಮತ್ತು ಶ್ರೀದೇವಿ ಸಾಕಷ್ಟು ಸೂಪರ್ ಹಿಟ್ ಸಿನಿಮಾಗಳನ್ನು ನೀಡಿದ್ದಾರೆ.
'ಪದಿನಾರು ವಯತ್ತಿನಿಲೇ', 'ಗುರು', 'ವರಮಯನ್ ನಿರಂ ಸಿವೆಪ್ಪು', 'ಮೂಂಡ್ರಂ ಪಿರೈ', 'ವಾಜೀ ಮಾಯಂ' ಸೇರಿದಂತೆ ಇನ್ನು ಹಲವಾರು ಸಿನಿಮಾಗಳಲ್ಲಿ ಕಮಲ್ ಹಾಸನ್ ಮತ್ತು ಶ್ರೀದೇವಿ ಒಟ್ಟಿಗೆ ನಟಿಸಿದ್ದಾರೆ.
ತೆರೆಮೇಲೆ ಇಬ್ಬರ ಕೆಮಿಸ್ಟ್ರಿ ನೋಡಿದ ಪ್ರೇಕ್ಷಕರು ವಾವ್.. ನಿಜ ಜೀವನದಲ್ಲೂ ಇಬ್ಬರು ಒಂದಾದರೆ ಎಷ್ಟು ಅದ್ಭುತವಾಗಿರುತ್ತೆ ಅಂತ ಅಂದುಕೊಳ್ಳುತ್ತಿದ್ದರು. ಇಬ್ಬರ ಜೋಡಿ ಎಷ್ಟು ಫೇಮಸ್ ಆಗಿತ್ತೆಂದರೆ ಅನ್ಯೋನ್ಯ ದಂಪತಿ ನೋಡಿದ್ರೆ ಕಮಲ್ ಹಾಸನ್-ಶ್ರೀದೇವಿ ತರ ಇದ್ದೀರಾ ಎನ್ನುತ್ತಿದ್ದರು ಅಷ್ಟು ಪ್ರಸಿದ್ಧಿ ಪಡೆದಿತ್ತು ಈ ಜೋಡಿ. ಮುಂದೆ ಓದಿ...

ಕಮಲ್ ಹಾಸನ್-ಶ್ರೀದೇವಿ ಮದುವೆ ಗಾಸಿಪ್
ಇಬ್ಬರೂ ಸಿನಿಮಾ ವಿಚಾರಗಳಿಂದ ಹೊರತಾಗಿಯೂ ಉತ್ತಮ ಸ್ನೇಹಿತರಾಗಿದ್ದರು. ಒಂದೇ ಕುಟುಂಬ ಸದಸ್ಯರ ಹಾಗೆ ಇದ್ದರು. ಇಬ್ಬರ ನಡುವೆ ಇಷ್ಟೆಲ್ಲ ಸ್ನೇಹ ಬಾಂಧವ್ಯವಿದೆ ಅಂದ್ಮೇಲೆ ಗಾಸಿಪ್, ರೂಮರ್ಸ್ ಎಲ್ಲಾ ಇಲ್ಲದೆ ಇರೋಕೆ ಸಾಧ್ಯನಾ?. ಕಮಲ್ ಮತ್ತು ಶ್ರೀದೇವಿ ನಡುವಿನ ಸಂಬಂಧ ಇಂದಿಗೂ ಚರ್ಚೆಯಾಗುತ್ತಿರುತ್ತೆ. ಇಬ್ಬರು ಮದುವೆ ಆಗುತ್ತಾರೆ ಎನ್ನುವ ಮಟ್ಟಕ್ಕೆ ಸುದ್ದಿ ಹಬ್ಬಿತ್ತು. ಆದರೆ ಇವರಿಬ್ಬರು ಇದ್ಯಾವುದಕ್ಕೂ ತಲೆ ಕೆಡಿಸಿಕೊಂಡವರಲ್ಲ.

ಶ್ರೀದೇವಿ ಮದುವೆಯಾಗುವಂತೆ ಕೇಳಿಕೊಂಡಿದ್ದ ತಾಯಿ
ಈ ಜೋಡಿ ಉತ್ತುಂಗದಲ್ಲಿದ್ದ ಸಮಯದಲ್ಲಿ ಕಮಲ್ ಹಾಸನ್ ಬಳಿ ಶ್ರೀದೇವಿಯನ್ನು ಮದುವೆಯಾಗುವಂತೆ ಪ್ರಸ್ತಾಪ ಕೂಡ ಇಡಲಾಗಿತ್ತಂತೆ. ಅಷ್ಟಕ್ಕೂ ಕಮಲ್ ಹಾಸನ್ ಅವರನ್ನು ಕೇಳಿಕೊಂಡಿದ್ದು ಯಾರು? ಮತ್ಯಾರು ಅಲ್ಲ ನಟಿ ಶ್ರೀದೇವಿ ಅವರ ತಾಯಿ ರಾಜೇಶ್ವರಿ. ಶ್ರೀದೇವಿಯನ್ನು ಮದುವೆ ಆಗುವಂತೆ ಸ್ವತಃ ಅವರ ತಾಯಿಯೇ ಒತ್ತಾಯ ಮಾಡುತ್ತಿದ್ದ ಶಾಕಿಂಗ್ ವಿಚಾರವನ್ನು ಕಮಲ್ ಹಾಸನ್ ಅವರೇ ಬಹಿರಂಗ ಪಡಿಸಿದ್ದಾರೆ.

ಮದುವೆ ತಿರಸ್ಕರಿಸಿದ್ದ ಕಮಲ್ ಹಾಸನ್
ಇಬ್ಬರ ನಡುವಿನ ಆಪ್ತತೆ, ಜನರ ಪ್ರೀತಿ ನೋಡಿ ಶ್ರೀದೇವಿ ಅವರ ತಾಯಿ ಕಮಲ್ ಹಾಸನ್ ಬಳಿ, ತನ್ನ ಮಗಳನ್ನು ಮದುವೆಯಾಗುವಂತೆ ಆಗಾಗ ಹೇಳುತ್ತಿದ್ದರಂತೆ. ಶ್ರೀದೇವಿ ತಾಯಿ ಈ ಪ್ರಸ್ತಾಪವನ್ನು ಮುಂದಿಟ್ಟಾಗಲೆಲ್ಲ ಕಮಲ್ ತಿರಸ್ಕರಿಸಿದ್ದರಂತೆ. ಕಾರಣ ಒಂದೇ ಕುಟುಂಬದವರ ಹಾಗೆ ಇದ್ದೀವಿ. ಕುಟುಂಬದ ಸದಸ್ಯರಂತೆ ಪರಿಗಣಿಸುವವರನ್ನು ಮದುವೆಯಾಗಲು ಸಾಧ್ಯವಿಲ್ಲ ಎಂದು ಶ್ರೀದೇವಿಯನ್ನು ಮದುವೆ ಆಗಲು ಕಮಲ್ ಒಪ್ಪಿಗೆ ನೀಡಿಲ್ಲ.

ಶ್ರೀದೇವಿಯನ್ನು ಕಮಲ್ ಮೊದಲು ಭೇಟಿಯಾಗಿದ್ದು ಎಲ್ಲಿ?
ಕಮಲ್ ಹಾಸನ್ ಮೊದಲ ಬಾರಿಗೆ ಶ್ರೀದೇವಿಯನ್ನು ಭೇಟಿಯಾಗಿದ್ದು, 1976ರಲ್ಲಿ. ಆಗಿನ್ನು ಶ್ರೀದೇವಿಗೆ 13 ವರ್ಷ ವಯಸ್ಸು. ತಮಿಳಿನ ಮೂಂಡ್ರು ಮುಡಿಚು ಚಿತ್ರೀಕರಣ ಸೆಟ್‌ನಲ್ಲಿ. ಶ್ರೀದೇವಿ ಆಗತಾನೆ ನಾಯಕಿಯಾಗಿ ಗುರುತಿಸಿಕೊಳ್ಳುತ್ತಿದ್ದರು. ಈ ಚಿತ್ರದಲ್ಲಿ ಕಮಲ್ ಮತ್ತು ರಜನಿಕಾಂತ್ ಇಬ್ಬರು ನಾಯಕರಾಗಿ ಮಿಂಚಿದ್ದಾರೆ. ಅಲ್ಲಿಂದ ಪರಿಚಯವಾದ ಇಬ್ಬರು ಬಳಿಕ ಉತ್ತಮ ಸ್ನೇಹಿತರಾಗಿದ್ದರು.

ಕಮಲ್ ಹಾಸನ್ ಅವರನ್ನು ಶ್ರೀದೇವಿ ಏನೆಂದು ಕರೆಯುತ್ತಿದ್ದರು?
ಶ್ರೀದೇವಿ ಪರಿಚಯವಾಗುವ ಸಮಯದಲ್ಲಿ ಕಮಲ್ ಆಗಲೆ ಸ್ಟಾರ್ ಆಗಿದ್ದರು. ಕಮಲ್ ಹಾಸನ್ ಅವರನ್ನು ಶ್ರೀದೇವಿ ಸರ್ ಅಂತನೆ ಕರೆಯುತ್ತಿದ್ದರು. ಕಮಲ್ ಮೇಲೆ ಅಪಾರ ಗೌರವವನ್ನು ಇಟ್ಟುಕೊಂಡಿದ್ದರು. ಕಮಲ್ ಕೂಡ ಶ್ರೀದೇವಿ ಅವರನ್ನು ಅಷ್ಟೇ ಗೌರವದಿಂದ ಕಾಣುತ್ತಿದ್ದರು. ಇಬ್ಬರ ಸಂಬಂಧದ ಬಗ್ಗೆ ಎಷ್ಟೇ ಸ್ಪಷ್ಟನೆ ನೀಡಿದರೂ ಸಹ ಆಗಾಗ ಪ್ರಶ್ನೆ ಮೂಡಿಬರುತ್ತಲೇ ಇರುತ್ತೆ. ಇಂದು ಶ್ರೀದೇವಿ ಇಲ್ಲ ಆದರೂ ಅವರ ಬಗ್ಗೆ ಸುದ್ದಿ ಮಾತ್ರ ಆಗಾಗ ಹರಿದಾಡುತ್ತಲೇ ಇರುತ್ತೆ.
Recommended Video

ಶ್ರೀದೇವಿ ತಂಗಿ ಇದ್ದಹಾಗೆ ಎಂದಿದ್ದ ಕಮಲ್
ಕಳೆದ ಮೂರು ವರ್ಷಗಳ ಹಿಂದೆ ಇಬ್ಬರ ಸಂಬಂಧದ ಬಗ್ಗೆ ಮತ್ತೆ ಚರ್ಚೆಯಾದಾಗ ಪ್ರತಿಕ್ರಿಯೆ ನೀಡಿದ್ದ ಕಮಲ್, 'ಶ್ರೀದೇವಿ ತನಗೆ ಸಹೋದರಿ ಸಮಾನ, ತನ್ನ ತಂಗಿ. ತಾನು ಅವರ ತಾಯಿ ಬಳಿ ಕೈತುತ್ತು ತಿಂದಿದ್ದೇನೆ. ಸುಮ್ಮನೆ ನಮ್ಮ ಬಗ್ಗೆ ಇಲ್ಲ ಸಲ್ಲದ ವಿಷ್ಯಗಳನ್ನ ಹುಟ್ಟುಹಾಕಬೇಡಿ' ಎಂದು ಬೇಸರ ವ್ಯಕ್ತಪಡಿಸಿದ್ದರು. ಸಮಯ ಸಿಕ್ಕಾಗಲೆಲ್ಲಾ ಕಮಲ್ ತಮ್ಮಿಬ್ಬರ ಸಂಬಂಧ ಎಂತಹದ್ದು ಎಂದು ಸ್ಪಷ್ಟಪಡಿಸುತ್ತಿರುತ್ತಾರೆ.


Click it and Unblock the Notifications











