ಕಿಚ್ಚನ 'ನಂದಿ' ಸಿನಿಮಾ ನಾಯಕಿ ಈಗ ಯಾವ ದೇಶದಲ್ಲಿದ್ದಾರೆ? ಏನು ಮಾಡುತ್ತಿದ್ದಾರೆ?

ಕಿಚ್ಚ ಸುದೀಪ್ ನಟನೆಯ ನಂದಿ ಸಿನಿಮಾ ನಿಮಗೆ ನೆನಪಿರಬೇಕು. ಆ ಸಿನಿಮಾದಲ್ಲಿನ ನಟನೆಗಾಗಿ ಸುದೀಪ್ ಗೆ ಅತ್ಯುತ್ತಮ ನಟ ಫಿಲಂಫೇರ್ ಪ್ರಶಸ್ತಿ ಮತ್ತು ರಾಜ್ಯ ಪ್ರಶಸ್ತಿ ಎರಡೂ ಬಂದಿದ್ದವು. ಡಿ ರಾಜೇಂದ್ರ ಬಾಬು ನಿರ್ದೇಶನದ ಈ ಚಿತ್ರ ಒಳ್ಳೆಯ ಕತೆ ಹೊಂದಿತ್ತು. ನಂದಿ ಸಿನಿಮಾದಲ್ಲಿ ಸುದೀಪ್‌ಗೆ ನಾಯಕಿಯಾಗಿ ನಟಿಸಿದ್ದ ನಟಿ ನಿಮಗೆ ನೆನಪಿದ್ಯಾ? ಆ ಮುದ್ದು ಮುಖದ ಚೆಲುವೆ ಸಿಂಧು ಮೆನನ್.

ಮೂಲತಃ ಕೇರಳದವರಾದ ಸಿಂಧು, ಬೆಳೆದಿದ್ದೆಲ್ಲಾ ಬೆಂಗಳೂರಲ್ಲೇ... ತನ್ನ ನಟನೆಯ ವೃತ್ತಿ ಆರಂಭಿಸಿದ್ದು ಕೂಡಾ ಕನ್ನಡ ಚಿತ್ರರಂಗದ ಮೂಲಕ ಎಂದರೆ ನಿಮಗೆ ಆಶ್ಚರ್ಯ ಆಗಬಹುದು. ಬಾಲನಟಿಯಾಗಿ ಸಿಂಧು ಮೆನನ್ ಕನ್ನಡದ 'ರಶ್ಮಿ' ಚಿತ್ರದ ಮೂಲಕ. ಆಗಿನ್ನೂ ಆಕೆಗೆ 13 ವರ್ಷ ವಯಸ್ಸು.

Sudeep heroine of nandi movie is in which country doing what details here

ಬಳಿಕ ಸಿಂಧು ಮೆನನ್ ತಮಿಳು, ತೆಲುಗು, ಮಲಯಾಳಂ ಚಿತ್ರಗಳಲ್ಲೂ ನಟಿಸಿ ಹೆಸರು ಮಾಡಿದ್ದರು. ಕನ್ನಡದಲ್ಲಿ 'ಹುಲಿಯಾ', 'ಕನಸಲು ನೀನೆ ಮನಸಲು ನೀನೆ', 'ಮಾರಿಕಣ್ಣು ಹೋರಿಮ್ಯಾಗೆ', 'ಮಹಾ ಎಡಬಿಡಂಗಿ', 'ಪ್ರೇಮ ಪ್ರೇಮ ಪ್ರೇಮ', 'ನಂದಿ', 'ವಿಕ್ರಂ', 'ಖುಷಿ', 'ಧರ್ಮ', 'ಜ್ಯೇಷ್ಠ' ಚಿತ್ರಗಳಲ್ಲಿ ನಟಿಸಿದ್ದರು. 'ಯಾರೇ ನೀ ಹುಡುಗಿ' ಸಿಂಧು ಮೆನನ್ ನಟಿಸಿದ ಕೊನೆಯ ಕನ್ನಡ ಚಿತ್ರ.

ಆದರೆ, ಇಷ್ಟೆಲ್ಲಾ ಚಿತ್ರಗಳ ನಡುವೆ ಕಿಚ್ಚ ಸುದೀಪ್ ಜೊತೆ ನಟಿಸಿರುವ 'ನಂದಿ' ಸಿನಿಮಾ ವಿಶಿಷ್ಟವಾಗಿ ನಿಲ್ಲುತ್ತದೆ. 2012ರಲ್ಲಿ ಮಲಯಾಳಂನ 'ಮಂಜಾದಿಕುರು' ಎನ್ನುವ ಸಿನಿಮಾದಲ್ಲಿ ನಟಿಸಿದ್ದೇ ಕೊನೆ, ನಂತರ ಸಿಂಧು ಮೆನನ್ ತೆರೆಯ ಮೇಲೆ ಕಾಣಿಸಿಕೊಳ್ಳಲಿಲ್ಲ.

ಲಂಡನ್‌ನಲ್ಲಿ ನೆಲೆಸಿರುವ ಪ್ರಭು ಎನ್ನುವ ಬ್ಯುಸಿನೆಸ್‌ಮನ್ ಜೊತೆ ಸಿಂಧು ಮದುವೆಯಾಗಿದ್ದಾರೆ. ಮುದ್ದಾದ ಮೂರು ಮಕ್ಕಳ ತಾಯಿಯಾಗಿ ಸುಖ ಸಂಸಾರ ನಡೆಸುತ್ತಿದ್ದಾರೆ. ಒಬ್ಬ ಮಗಳು ಮತ್ತು ಇಬ್ಬರು ಗಂಡು ಮಕ್ಕಳ ಜೊತೆಗಿನ ಫೋಟೊಗಳನ್ನು ಸಿಂಧು ಮೆನನ್ ತಮ್ಮ ಇನ್‌ಸ್ಟಾಗ್ರಾಮ್ ಖಾತೆಯಲ್ಲಿ ಹಂಚಿಕೊಳ್ಳುತ್ತಿರುತ್ತಾರೆ.

Sudeep heroine of nandi movie is in which country doing what details here

ಚಿತ್ರರಂಗದಿಂದ ಸಿಂಧು ಮೆನನ್ ದೂರವಾಗಿದ್ರೂ ಅಭಿಮಾನಿಗಳು ಆಕೆಯನ್ನು ಮರೆತಿಲ್ಲ. ಆಕೆಯ ಚಿತ್ರಗಳಿಗೆ ಅವರೆಲ್ಲಾ ಕೊಡುವ ಆತ್ಮೀಯ ರಿಪ್ಲೈಗಳೇ ಇದಕ್ಕೆ ಸಾಕ್ಷಿಯಾಗಿದೆ. ಸಿಂಧು ತನ್ನ ಗಂಡ ಮಕ್ಕಳ ಜೊತೆ ದೂರದ ಲಂಡನ್‌ನಲ್ಲಿ ಸುಖವಾಗಿ ಜೀವನ ನಡೆಸುತ್ತಿದ್ದಾರೆ ಎನ್ನುವುದನ್ನು ಈ ಚಿತ್ರಗಳೇ ಹೇಳುತ್ತವೆ.

ಮಲಯಾಳಂ ಚಿತ್ರರಸಿಕರು ಸಿಂಧು ಮೆನನ್ ನೆನಪಿಸಿಕೊಳ್ಳುವುದು 2006ರಲ್ಲಿ ಬಿಡುಗಡೆಯಾದ 'ಪುಲಿಜನ್ಮಂ' ಸಿನಿಮಾದ ನಟನೆಗಾಗಿ. 2007ರಲ್ಲಿ ಈ ಚಿತ್ರಕ್ಕೆ ರಾಷ್ಟ್ರಪ್ರಶಸ್ತಿ ಬಂದಿತ್ತು. ಪ್ರಿಯನಂದನನ್ ನಿರ್ದೇಶನದ ಈ ಚಿತ್ರದಲ್ಲಿ ಮುರಳಿ ಮತ್ತು ವಿನೀತ್ ಕುಮಾರ್ ಜೊತೆ ಸಿಂಧು ಮೆನನ್ ಮತ್ತು ಸಂವೃತಾ ಸುನಿಲ್ ಮುಖ್ಯಪಾತ್ರಗಳಲ್ಲಿ ಕಾಣಿಸಿಕೊಂಡಿದ್ದರು. ಒಟ್ನಲ್ಲಿ ಬಹುಭಾಷಾ ತಾರೆ ಚಿತ್ರರಂಗದಿಂದ ದೂರವಿದ್ದರೂ ನಿಜ ಬದುಕಿನಲ್ಲಿ ಖುಷಿಯಾಗಿರುವುದನ್ನು ನೋಡಿ ಅಭಿಮಾನಿಗಳೂ ಸಂತಸಪಟ್ಟಿದ್ದಾರೆ.

More from Filmibeat

English summary
Nandi movie actress Sindhu Menon where in now?
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X