ಈ ಸ್ಟಾರ್‌ಗಳು ಕಟ್ಟೋ ವಾಚ್ ಬೆಲೆ ಲಕ್ಷ.. ಕೋಟಿ: ಸಿನಿ ದುನಿಯಾ ಬಲು ದುಬಾರಿ!

ದುನಿಯಾ ತುಂಬಾ ದುಬಾರಿ ಅಂತ ಆಗಾಗ ಮಾತಾಡಿಕೊಳ್ತೀವಿ. ಕೈಯಲ್ಲಿ ಒಂದು ಕೋಟಿ ಇದ್ದರೆ, ದುನಿಯಾವನ್ನೇ ಗೆದ್ದಷ್ಟು ಖುಷಿ. ಇದೇ ದುನಿಯಾ ಕೆಲವು ಸೆಲೆಬ್ರೆಟಿಗಳ ಕೈಯಲ್ಲೇ ಇದೆ. ಭಾರತದ ಸ್ಟಾರ್ ನಟರು ಧರಿಸೋ ವಾಚ್ ಬೆಲೆ ಲಕ್ಷ ಹಾಗೂ ಕೋಟಿಗಳೆಲ್ಲೇ ಇದೆ. ಸೆಲೆಬ್ರೆಟಿಗಳು ಅಂದರೇ ಹಾಗೆ, ಅವರು ಧರಿಸೋ ಬಟ್ಟೆ, ವಾಚ್, ಕಾರು ಅಂತ ಸಿಕ್ಕಾಪಟ್ಟೆ ಖರ್ಚು ಮಾಡುತ್ತಾರೆ. ಬ್ರ್ಯಾಂಡೆಡ್ ಐಟಂಗಳನ್ನು ಬಿಟ್ಟು ಬೇರೆ ಕಡೆ ತಿರುಗಿಕೂಡ ನೋಡುವುದಿಲ್ಲ. ಹಾಗಿದ್ದರೆ, ಯಾವ್ಯಾವ ಸ್ಟಾರ್ ದುಬಾರಿ ಬೆಲೆಯ ವಾಚ್ ಕಟ್ಟುತ್ತಾರೆ? ಆ ವಾಚ್‌ನ ಬೆಲೆ ಎಷ್ಟು? ಅನ್ನೋದನ್ನು ತಿಳಿಯಲು ಮುಂದೆ ಓದಿ.

ರಾಮ್ ಚರಣ್ ಬಳಿ ಇರುವ ದುಬಾರಿ ವಾಚ್

'RRR' ಬಳಿಕ ಪ್ಯಾನ್ ವರ್ಲ್ಡ್‌ ಸ್ಟಾರ್ ಎನಿಸಿಕೊಂಡಿರೋ ರಾಮ್ ಚರಣ್ ತೇಜಾ ದುಬಾರಿ ವಾಚ್‌ಗಳ ಸರದಾರ. ಈ ಸ್ಟಾರ್ ನಟನ ದಿನಕ್ಕೊಂದು ಲಕ್ಷ, ಕೋಟಿಗಳಲ್ಲಿ ಬೆಲೆ ಬಾಳುವ ವಾಚ್‌ಗಳನ್ನೇ ಕಟ್ಟುತ್ತಾರೆ. ಕೋಟಿಗಳಲ್ಲಿ ಸಂಭಾವನೆ ಪಡೆಯುವ ನಟನ ಬಳಿ ಇರುವ ದುಬಾರಿ ಮೊತ್ತದ ಹಲವು ವಾಚ್‌ಗಳಿವೆ ರೊಲೆಕ್ಸ್‌ನಿಂದ ಆರಂಭ ಆದರೆ, ಆರ್‌ಎಂ 61, ಪಾಟೆಕ್ ಫಿಲಿಪ್, ಹ್ಯೂಬ್ಲೋಟ್ ಕಿಂಗ್, ರಿಚರ್ಡ್ ಮಿಲ್ಲೆವರೆಗೂ ಇದೆ. ಸುಮಾರು 7 ಕ್ಕೂ ಹೆಚ್ಚು ದುಬಾರಿ ವಾಚ್‌ಗಳು ರಾಮ್ ಚರಣ್‌ ಬಳಿ ಇದೆ.

Sudeep,Ram Charan,Ranbir Kapoor, Ranveer Singh, Aamir Khan, Virat Kohli Has Most Expensive Watches

ರಾಮ್‌ ಚರಣ್ 13 ಲಕ್ಷದ ರೊಲೆಕ್ಸ್ ವಾಚ್ ಇದೆ. ಇದನ್ನು 18 ಕ್ಯಾರೆಟ್‌ನ ಯಲ್ಲೋ ಗೋಲ್ಡ್‌ನಲ್ಲಿ ತಯಾರಿಸಲಾಗಿದೆ. ಹಾಗೇ ಆರ್‌ಎಂ 3 ಕೋಟಿ ರೂ. ಬೆಲೆಯ 61, 68 ಲಕ್ಷದ ಪಾಟೆಕ್ ಫಿಲಿಪ್, 18 ಲಕ್ಷದ ಹ್ಯೂಬ್ಲೋಟ್ ಕಿಂಗ್, 1.5 ಕೋಟಿ ರೂ. ರಿಚರ್ಡ್ ಮಿಲ್ಲೆ, 75 ಲಕ್ಷ ರಾಯಲ್ ಓಕ್, 43 ಲಕ್ಷದ ರಾಯಲ್ ಓಕ್ ಲಿಬ್ರೊನ್, 22 ಲಕ್ಷದ ರಾಯಲ್ ಓಕ್ ಬ್ಲ್ಯೂ ಅಂತ ದುಬಾರಿ ವಾಚ್‌ಗಳಿವೆ ಎಂದು ವರದಿ ಮಾಡಲಾಗಿದೆ.

ಕಿಚ್ಚ ಸುದೀಪ್ ಬಳಿನೂ ಕೋಟಿ ಬೆಲೆಯ ವಾಚ್

ಕಿಚ್ಚ ಸುದೀಪ್ ಹಂಗೆಲ್ಲ ಸುಖಾಸುಮ್ಮನೆ ಖರ್ಚು ಮಾಡೋ ವ್ಯಕ್ತಿನೇ ಅಲ್ಲ. ಆದರೆ, ಕಾರು, ವಾಚ್ ಅಂದರೆ, ಅವರಿಗೆ ಪ್ರೀತಿ ಜಾಸ್ತಿನೇ. ಅದರಲ್ಲೂ ಒಂದಿಷ್ಟು ದಿನ ಸುದೀಪ್ ವಾಚ್ ಬಳಸುತ್ತಿರಲಿಲ್ಲ. ಕೆಲವು ವರ್ಷಗಳಿಂದಷ್ಟೇ ವಾಚ್ ಕಟ್ಟುತ್ತಿದ್ದಾರೆ. ಅದೂ ಬಹುತೇಕ ಮಂದಿ ಎಡಗೈಗೆ ವಾಚ್ ಕಟ್ಟಿದರೆ, ಇವರು ಮಾತ್ರ ಬಲಗೈಗೆ ವಾಚ್ ಕಟ್ಟುತ್ತಾರೆ. ಅದ್ಯಾಕೆ ಅನ್ನೋದನ್ನು ಒಮ್ಮೆ ಹೇಳಿದ್ದರು. ಸದ್ಯ ಕಿಚ್ಚ ಸುದೀಪ್ ಕೆಸಿಸಿ,ಸಿಸಿಎಲ್ ಅಂತ ಕ್ರಿಕೆಟ್ ಆಡುವುದರಲ್ಲಿ ಬ್ಯುಸಿಯಾಗಿದ್ದಾರೆ. ಈ ವೇಳೆ ಅವರ ಧರಿಸಿದ ವಾಚ್ ಬಗ್ಗೆ ಚರ್ಚೆಯಾಗುತ್ತಿದೆ.

Sudeep,Ram Charan,Ranbir Kapoor, Ranveer Singh, Aamir Khan, Virat Kohli Has Most Expensive Watches

ಕಿಚ್ಚ ಸುದೀಪ್ ವಾಚ್ ಬೆಲೆಸ ಬರೋಬ್ಬರಿ 1.5 ಕೋಟಿ ರೂ. ಎಂದು ಹೇಳಲಾಗುತ್ತಿದೆ. ರಾಮ್ ಚರಣ್ ಅಂತೆಯೇ ಕಿಚ್ಚ ಸುದೀಪ್ ಕೂಡ ವಾಚ್ ಪ್ರಿಯನಾಗಿರೋದ್ರಿಂದ ವಿದೇಶಿ ಮೂಲಕ ರಿಚರ್ಡ್ ಮಿಲ್ಲೆ ವಾಚ್‌ ಅನ್ನು ಧರಿಸಿದ್ದಾರೆ. ಇದರ ಬೆಲೆ ಅಂದಾಜು 1.5 ಕೋಟಿ ರೂ.ಗೂ ಅಧಿಕ ಎಂದು ಹೇಳಲಾಗುತ್ತಿದೆ. ರಿಚರ್ಡ್ ಮಿಲ್ಲೆ ಐಷಾರಾಮಿ ವಾಚ್‌ಗಳನ್ನು ತಯಾರಿಸುವುದರಲ್ಲಿ ಹೆಸರುವಾಸಿಯಾಗಿದೆ. ಉದ್ಯಮಿಗಳು, ಸೆಲೆಬ್ರೆಟಿಗಳು, ಕ್ರೀಡಾಪಟುಗಳಂತಹವರೇ ಇವರ ಕಸ್ಟಮರ್ಸ್‌.

ಬೇರೆ ಯಾರ ಬಳಿ ದುಬಾರಿ ವಾಚ್ ಇದೆ?

ಬಾಲಿವುಡ್‌ ಮಾಧ್ಯಮಗಳು ತಮ್ಮ ನಟರ ಬಳಿ ಇರುವ ದುಬಾರಿ ವಾಚ್‌ಗಳು ಹಾಗೂ ಅವುಗಳ ಬೆಲೆಯನ್ನು ಪಟ್ಟಿಮಾಡಿದೆ. ಆ ವರದಿಗಳ ಪ್ರಕಾರ, ಬಾಲಿವುಡ್‌ ನಟ ರಣ್‌ಬೀರ್ ಕಪೂರ್ ದುಬಾರಿ ವಾಚ್‌ಗಳಿವೆ. 14 ಲಕ್ಷದ ಆಡೆಮರ್ಸ್ ಪಿಗುಯೆಟ್ ರೋಯಾ, 14.18 ಲಕ್ಷದ ರೆಸೆನ್ಸ್ ಟೈಪ್ 1, 1.12 ಕೋಟಿ ರೂ. ಬೆಲೆಯ ರಿಚರ್ಡ್ ಮಿಲ್ಲೆ ಆರ್‌ಎಂ 28 ವಾಚ್ ಇದೆ. ಸೈಫ್ ಅಲಿ ಖಾನ್ ಬಳಿಕ 24.93 ಲಕ್ಷದ ಲುಮಿನರ್ ವಾಚ್ ಇದೆ. ಹಾಗೇ ಇದೇ ಬ್ರ್ಯಾಂಡ್‌ನ 14.40 ಲಕ್ಷದ ಗ್ರೇಡ್ ಲಾಂಜ್ 1 ಇದೆ. ಇವರ ಜೊತೆಗೆ ಆಮಿರ್ ಖಾನ್ ಹಾಗೂ ರಣ್‌ವೀರ್ ಸಿಂಗ್ ಬಳಿನೂ ಬಲು ದುಬಾರಿ ವಾಚ್‌ಗಳಿವೆ ಎಂದು ಹೇಳಲಾಗುತ್ತಿದೆ.

Sudeep,Ram Charan,Ranbir Kapoor, Ranveer Singh, Aamir Khan, Virat Kohli Has Most Expensive Watches

ಬಾಲಿವುಡ್‌ ಸೂಪರ್‌ಸ್ಟಾರ್ ಆಮಿರ್ ಖಾನ್ ಬಳಿಕ 37 ವಿಭಿನ್ನ ಟೈ ಜೋನ್‌ಗಳನ್ನು ತೋರಿಸುವ 27.80 ಲಕ್ಷದ ಸ್ವಿಸ್ ದೇಶದ ವಚೆರಾನ್ ಕಾನ್ಸ್ಟಾಂಟಿನ್ ವಾಚ್ ಇದೆ. ಹಾಗೇ ಚಿತ್ರ ವಿಚಿತ್ರ ಕಾಸ್ಟ್ಯೂಮ್ ಧರಿಸೋ ರಣ್‌ವೀರ್ ಸಿಂಗ್ ಬಳಿ ಕೂಡ 40 ಲಕ್ಷದ ವಾಚ್ ಇದೆ. ಅದು ಫ್ರಾಂಕ್ ಮುಲ್ಲರ್ ವಿ 45 ವಂಗಾರ್ಡ್ ವಾಚ್ ಎನ್ನಲಾಗಿದೆ. ಇನ್ನ ಹಲವು ನಟರು ದುಬಾರಿ ವಾಚ್‌ಗಳನ್ನು ಖರೀದಿ ಮಾಡಿದ್ದಾರೆ. ಕೋಟಿಗಳಲ್ಲಿ ಸಂಭಾವನೆ ಪಡೆಯುವ ನಟರಿಗೆ ಇಷ್ಟು ದುಬಾರಿ ವಾಚ್ ಕಟ್ಟುವುದಕ್ಕೆ ಭಾರ ಅಂತ ಅನಿಸೋದಿಲ್ಲ.

More from Filmibeat

English summary
Kichcha Sudeep,Ram Charan,Ranbir Kapoor, Ranveer Singh, Aamir Khan, Virat Kohli Has Most Expensive Watches, Know More.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X