ಇಷ್ಟೆಲ್ಲ ಆದ್ಮೇಲೆ ದರ್ಶನ್-ಸುದೀಪ್ ಮತ್ತೆ ಒಂದಾಗ್ತಾರಾ ಇಲ್ವಾ? ಏನಿದೆ ಟ್ಯಾರೋ ಭವಿಷ್ಯ?
ಕನ್ನಡ ಚಿತ್ರರಂಗದ ಕುಚಿಕು ಗೆಳೆಯರು ಬಗ್ಗೆ ಹೇಳುವುದಕ್ಕೆ ಶುರು ಮಾಡಿದರೆ, ಮೊದಲು ಸಿಗೋದು ವಿಷ್ಣುವರ್ಧನ್ ಹಾಗೂ ಅಂಬರೀಶ್. ಆ ನಂತರ ನೆನಪಾಗೋದು ಚಾಲೆಂಜಿಂಗ್ ಸ್ಟಾರ್ ದರ್ಶನ್ ಹಾಗೂ ಕಿಚ್ಚ ಸುದೀಪ್. ಒಂದು ಕಾಲದಲ್ಲಿ ಆತ್ಮೀಯ ಸ್ನೇಹಿತರಾಗಿದ್ದರು ಈಗ ಮುನಿಸಿಕೊಂಡು ಬೇರೆಯಾಗಿರುವು ಗೊತ್ತಿರುವ ವಿಷಯವೇ. ಹಾಗಿದ್ದರೆ, ಕಿಚ್ಚ ಸುದೀಪ್ ಹಾಗೂ ದರ್ಶನ್ ಇಬ್ಬರೂ ಮುಂದೊಂದು ದಿನ ಒಂದಾಗುತ್ತಾರಾ? ಇಲ್ವಾ?
ಕಿಚ್ಚ ಸುದೀಪ್ ಹಾಗೂ ದರ್ಶನ್ ಇಬ್ಬರೂ ಮುನಿಸು ಮರೆತು ಒಂದಾಗಬೇಕು. ಮತ್ತೆ ಸ್ನೇಹಿತರನ್ನು ಒಂದೇ ಫ್ರೇಮ್‌ನಲ್ಲಿ ನೋಡಬೇಕು ಎನ್ನುವುದು ಅದೆಷ್ಟೋ ಮಂದಿಯ ಬಯಕೆ. ಕಿಚ್ಚನ ಅಭಿಮಾನಿಗಳು, ದರ್ಶನ್ ಫ್ಯಾನ್ಸ್ ಇಬ್ಬರೂ ಸೋಶಿಯಲ್ ಮೀಡಿಯಾಗಳಲ್ಲಿ ಕಿತ್ತಾಡಿದರೂ ಒಳಗೊಳಗೆ ಇಬ್ಬರೂ ಒಂದಾಗಬೇಕು ಅಂತ ಬಯಸುತ್ತಿದ್ದಾರೆ. ಆದರೆ, ಅದು ಈಡೇರುತ್ತೋ ಇಲ್ಲವೋ?

ಇತ್ತೀಚೆಗೆ ಟ್ಯಾರೋ ರೀಡಿಂಗ್ ಅನ್ನೋದು ಸಿಕ್ಕಾಪಟ್ಟೆ ಫೇಮಸ್ ಆಗುತ್ತಿದೆ. ಟ್ಯಾರೋ ಕಾರ್ಡ್ ಅನ್ನು ಎತ್ತುವುದರ ಮೂಲಕ ಭವಿಷ್ಯವನ್ನು ಹೇಳಲಾಗುತ್ತೆ. ಇಂತಹದ್ದೇ ಟ್ಯಾರೋ ಕಾರ್ಟ್ ರೀಡರ್ ನೀಲಂ ಫಿಲ್ಮಿಬೀಟ್ ಕನ್ನಡ ಯೂಟ್ಯೂಬ್ ಚಾನೆಲ್‌ಗೆ ಸಂದರ್ಶನ ನೀಡಿದ್ದಾರೆ. ಇದರಲ್ಲಿ ದರ್ಶನ್ ಹಾಗೂ ಸುದೀಪ್ ಅವರ ಸ್ನೇಹಕ್ಕೆ ಸಂಬಂಧಿಸಿದ ಪ್ರಶ್ನೆಗೆ ಕಾರ್ಡ್ ಅನ್ನು ಓದಿ ಉತ್ತರ ಕೊಟ್ಟಿದ್ದಾರೆ. ಟ್ಯಾರೋ ಕಾರ್ಡ್ ಏನು ಹೇಳುತ್ತೆ? ಭವಿಷ್ಯದಲ್ಲಿ ದರ್ಶನ್ ಹಾಗೂ ಸುದೀಪ್ ಮತ್ತೆ ಒಂದಾಗುತ್ತಾರಾ? ಇಲ್ವಾ? ತಿಳಿಯಲು ಮುಂದೆ ಓದಿ.
ಒಂದು ವಿಡಿಯೋ ದರ್ಶನ್ ಹಾಗೂ ಸುದೀಪ್ ಇಬ್ಬರೂ ಬೇರೆ ಮಾಡಿದೆ ಎನ್ನುವುದು ಸದ್ಯಕ್ಕಿರುವ ಮಾಹಿತಿ. ಖಾಸಗಿ ನ್ಯೂಸ್ ಚಾನೆಲ್‌ನಲ್ಲಿ 'ಮೆಜೆಸ್ಟಿಕ್' ಸಿನಿಮಾದಲ್ಲಿ ದರ್ಶನ್‌ಗೆ ಚಾನ್ಸ್ ಕೊಡಿಸಿದ್ದು ತಾನೇ ಎನ್ನುವ ಅರ್ಥದಲ್ಲಿ ಸುದೀಪ್ ಮಾತಾಡಿದ್ದರು. ಅದರಿಂದ ದರ್ಶನ್‌ಗೆ ಬೇಸರವಾಗಿ ಸ್ನೇಹವನ್ನೇ ಕಳೆದುಕೊಂಡಿದ್ದಾರೆ. ಇದೇ ಇಬ್ಬರೂ ಬೇರೆಯಾಗುವುದಕ್ಕೆ ಕಾರಣ ಅಂತ ಬಹಳ ಮಂದಿ ನಂಬಿದ್ದಾರೆ. ಆದರೆ, ಮತ್ತೆ ಕೆಲವರು ಇದನ್ನೂ ಮೀರಿದ ಇನ್ನೊಂದು ಕಾರಣವಿದೆ ಎಂದು ಹೇಳುತ್ತಾರೆ. ದರ್ಶನ್-ಸುದೀಪ್ ಬೇರೆಯಾಗುವುದಕ್ಕೆ ಬೇರೊಂದು ಕಾರಣವಿದೆ. ಅದು ಅವರಿಬ್ಬರಲ್ಲೇ ಇದೆ ಅನ್ನೋದು ಮತ್ತೊಂದು ವಾದ. ಅದೇನೇ ಇದ್ದರೂ ಟ್ಯಾರೋ ಕಾರ್ಡ್‌ನಲ್ಲಿ ಭವಿಷ್ಯ ಏನಿದೆ ಅಂತ ನೋಡುವುದಾದರೇ.
ಟ್ಯಾರೋ ಕಾರ್ಡ್ ರೀಡರ್ ನೀಲಂ ಮೊದಲು ಎರಡು ಕಾರ್ಡ್ ಅನ್ನು ತೆಗೆದುಕೊಂಡು ದರ್ಶನ್ ಕೇಸ್‌ನ ಭವಿಷ್ಯ ಹೇಳಿದ್ದಾರೆ. ದರ್ಶನ್ ಮತ್ತೆ ಜೈಲ್‌ಗೆ ಹೋಗುತ್ತಾರಾ? ಇಲ್ವಾ? ಎನ್ನುವ ಬಗ್ಗೆ ಆ ಕಾರ್ಡ್ ಏನು ಹೇಳುತ್ತೆ? ಎನ್ನುವುದನ್ನು ವಿಸ್ತಾರವಾಗಿ ವಿವರಿಸಿದ್ದಾರೆ.
"7 ನಂಬರ್ ಮತ್ತೆ ಬಂತು. ಇದು ಅವರದ್ದೇ ನಂಬರ್ 16. ಇಲ್ಲಿ ಎರಡು ಮಹಿಳೆಯ ಕಾರ್ಡ್ ಬಂದಿದೆ. ಒಂದರಲ್ಲಿ ಲೂಸ್ ಹೇರ್ ಇದೆ. ಇದು ಏನು ಹೇಳುತ್ತೆ ಅಂದರೆ, ಅರ್ಧಂಬರ್ಧ ಜ್ಞಾನ, ಸಿಟ್ಟು, ಕೋಪ, ಹುಮ್ಮಸ್ಸು, ಸೆಲೆಬ್ರೆಷನ್, ಲಿಮಿಷನ್ ಇಲ್ಲದೆ ಇರುವ ವ್ಯಕ್ತಿ ಎಂದು ಹೇಳುತ್ತೆ. ಇನ್ನೊಂದು ಕಾರ್ಡ್‌ನಲ್ಲಿ ಮಹಿಳೆಯ ಜುಟ್ಟು ಕಟ್ಟಿದ್ದಾರೆ. ಪದ್ಮಾಸನ ಹಾಕಿ ಕೂತಿದ್ದಾರೆ. ಇದೆಲ್ಲ ಪ್ರಾಕ್ಟೀಸ್ ಮಾಡುತ್ತಿದ್ದು, ಆ ವ್ಯಕ್ತಿ ಪಕ್ವ ಆಗುತ್ತಿದ್ದಾರೆ ಎಂದು ಅರ್ಥ. ಆಧ್ಯಾತ್ಮಿಕವಾಗಿ ಬೆಳೆಯುತ್ತಿದ್ದಾರೆ. ಮಾನಸಿಕವಾಗಿ ಸುಧಾರಣೆಯಾಗುತ್ತಿದೆ. ಮತ್ತೆ ಅವರು ಜೈಲ್‌ಗೆ ಹೋಗುವುದಿಲ್ಲ. ಸಿನಿಮಾದಿಂದ ಬ್ರೇಕ್ ತೆಗೆದುಕೊಳ್ಳುತ್ತಾರೆ. ಆದರೆ, ಸಿನಿಮಾವನ್ನು ಮುಂದುವರೆಸುತ್ತಾರೆ." ಎಂದಿದ್ದಾರೆ.
ಇದೇ ವೇಳೆ ಅಭಿಮಾನಿಗಳ ಮಿಲಿಯನ್ ಡಾಲರ್ ಪ್ರಶ್ನೆ. ದರ್ಶನ್ ಹಾಗೂ ಸುದೀಪ್ ಇಬ್ಬರೂ ಮತ್ತೆ ಒಂದಾಗುತ್ತಾರಾ? ಈ ಪ್ರಶ್ನೆಗೆ ಟ್ಯಾರೋ ರೀಡರ್ ನೀಲಂ ಉತ್ತರ ಹೀಗಿದೆ. "ಈ ಕಾರ್ಡ್ ಏನು ಹೇಳುತ್ತೆ ಅಂದರೆ, ಇಲ್ಲಿ ಒಂದು ಕಾಲು ಒಂತರಾ ಇದೆ. ಇನ್ನೊಂದು ಕಾಲ ಇನ್ನೊಂದು ತರ ಇದೆ. ಪ್ರೀತಿ ಇಬ್ಬರ ಮಧ್ಯೆನೂ ಇದೆ. ಕಪ್ಪು ಶರ್ಟ್ ಹಾಕಿದ್ದಾರೆ. ಇಬ್ಬರ ಮಧ್ಯೆ ಒಂದು ಸೀಕ್ರೆಟ್ ಇದೆ. ಇಬ್ಬರೂ ಯಾಕೆ ಬೇರೆಯಾಗಿದ್ದಾರೆ ಅನ್ನೋ ಕಾರಣ ಯಾರಿಗೂ ಗೊತ್ತಿಲ್ಲ. ಒಬ್ಬರ ಬಗ್ಗೆ ಒಬ್ಬರಿಗೆ ಗೌರವವಿದೆ. ಒಬ್ಬರ ಬಗ್ಗೆ ಒಬ್ಬರಿಗೆ ಅಭಿಮಾನವಿದೆ." ಎನ್ನುತ್ತಾರೆ.
ಇನ್ನು ದರ್ಶನ್ ಹಾಗೂ ಸುದೀಪ್ ಮತ್ತೆ ಒಂದಾಗುವುದಿಲ್ಲ. ಇಬ್ಬರೂ ಒಟ್ಟಿಗೆ ಕಾಣಿಸಿಕೊಳ್ಳುವುದಿಲ್ಲ ಎಂದಿದ್ದಾರೆ. "ಈ ಕಾರ್ಡ್‌ನಲ್ಲಿ ಕಾಣಿಸುವ ಕುದುರೆ ಕಾಲು ಎತ್ತಿದೆ. ಹಾಗೇ ಕಾಣಿಸುವ ವ್ಯಕ್ತಿ ಕೂಡ ಒಂಟಿ ಕಾಲಿನಲ್ಲಿ ನಿಂತಿದ್ದಾನೆ. ಹಾಗಾಗಿ ಅವರಿಬ್ಬರೂ ಒಂದಾಗುವುದಿಲ್ಲ. ಹಾಗೇ ಒಬ್ಬರಿಗೊಬ್ಬರು ನೋಡಿಕೊಂಡು ಗೌರವ ಕೊಟ್ಟುಕೊಂಡು ಇರುತ್ತಾರೆ. ಆದರೆ, ಒಂದಾಗುವುದಿಲ್ಲ. ಅಂದರೆ, ಜೊತೆಯಾಗಿ ಒಂದು ಸಿನಿಮಾ ಬರುತ್ತೆ. ಫ್ರೆಂಡ್‌ಶಿಪ್‌ನಲ್ಲಿ ಕೇಕ್ ಕಟ್ ಮಾಡುತ್ತಾರೆ ಅದೆಲ್ಲ ನಡೆಯಲ್ಲ. ಆತರ ಯಾರಾದರೂ ಕಲ್ಪನೆ ಮಾಡಿಕೊಂಡಿದ್ದರೆ. ಅದು ನಡೆಯಲ್ಲ" ಎಂದು ಹೇಳುವ ಮೂಲಕ ಅಭಿಮಾನಿಗಳಿಗೆ ನಿರಾಸೆ ಮಾಡಿದ್ದಾರೆ.


Click it and Unblock the Notifications











