ಸಿನಿಮಾದಲ್ಲಿ ಸಿಂಡಿಕೇಟ್ ಬ್ಯಾಂಕ್ ಉದ್ಯೋಗಿ; ಅದರಲ್ಲೇ ಕೆಲಸ ಗಿಟ್ಟಿಸಿಕೊಂಡಿದ್ದ ಆ ನಟನ್ಯಾರು ಗೊತ್ತೇ?
ಸಿನಿಮಾಗಳಲ್ಲಿ ನಟಿಸಬೇಕು ಅನ್ನುವ ಗೀಳು ಅದೆಷ್ಟೋ ಮಂದಿಯನ್ನು ಇಂದು ಸ್ಟಾರ್ ಮಾಡಿದೆ. ಬಸ್ ಕಂಡಕ್ಟರ್ ಆಗಿದ್ದ ರಜನಿಕಾಂತ್ ಒಂದು ಸೂಪರ್‌ಸ್ಟಾರ್. ಹೀಗೆ ಬೇರೆ ಬೇರೆ ಕೆಲಸ ಮಾಡಿಕೊಂಡಿದ್ದ ನಟರು ಸಿನಿಮಾರಂಗದಲ್ಲಿ ಸ್ಟಾರ್‌ಗಳಾಗಿ ಮಿಂಚಿದ್ದಾರೆ. ಚಿತ್ರರಂಗದಲ್ಲಿ ಮೊದಲು ಬೇರೊಂದು ಕೆಲಸ ಮಾಡಿ, ಬಳಿಕ ಸಿನಿಮಾರಂಗಕ್ಕೆ ಕಾಲಿಟ್ಟು ಸ್ಟಾರ್ ಆದವರೇ ಹೆಚ್ಚು ಸಿಗುತ್ತಾರೆ.
ಆದರೆ, ಇಲ್ಲೊಬ್ಬ ನಟ ಸಿನಿಮಾದಲ್ಲಿ ನಟಿಸಿದ ಬಳಿಕ ಸಿಂಡಿಕೇಟ್ ಬ್ಯಾಂಕ್‌ನಲ್ಲಿ ಉದ್ಯೋಗ ಗಿಟ್ಟಿಸಿಕೊಂಡಿದ್ದರು. ವಿಶೇಷ ಅಂದರೆ, ಈ ನಟ ತನ್ನ ಮೊದಲ ಸಿನಿಮಾದಲ್ಲೂ ಇದೇ ಸಿಂಡಿಕೇಟ್ ಬ್ಯಾಂಕ್‌ನ ಉದ್ಯೋಗಿಯಾಗಿ ನಟಿಸಿದ್ದರು. ಆ ನಟ ಮತ್ಯಾರೂ ಅಲ್ಲ ತಮಿಳಿ ಚಿತ್ರರಂಗದಲ್ಲಿ ಮಿಂಚುತ್ತಿರುವ ಅಪ್ಪಟ ಕನ್ನಡದ ನಟ ಕೋಕಿಲ ಮೋಹನ್.

ಕನ್ನಡ ನಿರ್ದೇಶಕ ಕಮ್ ಯೂಟ್ಯೂಬರ್ ರಘುರಾಮ್ ತಮ್ಮ ಯೂಟ್ಯೂಬ್ ಚಾನೆಲ್‌ಗಾಗಿ ಕೋಕಿಲ ಮೋಹನ್ ಅವರನ್ನು ಸಂದರ್ಶನ ಮಾಡಿದ್ದಾರೆ. ಈ ವೇಳೆ ಕೋಕಿಲ ಮೋಹನ್ ಈ ಸ್ವಾರಸ್ಯಕರ ಸಂಗತಿಯನ್ನು ರಿವೀಲ್ ಮಾಡಿದ್ದಾರೆ. ಅವರು ಸಿಂಡಿಕೇಟ್ ಬ್ಯಾಂಕ್‌ಗೆ ಹೇಗೆ ಕೆಲಸಕ್ಕೆ ಸೇರಿಕೊಂಡರು ಅನ್ನೋ ಸಂಗತಿಯನ್ನು ಅಷ್ಟೇ ಇಂಟ್ರೆಸ್ಟಿಂಗ್ ಆಗಿ ಹೇಳಿಕೊಂಡಿದ್ದಾರೆ.
ಬೆಂಗಳೂರಿನ ನಾಟಕರಂಗ ಬೆನಕಾ ಜೊತೆ ಮೋಹನ್ ಗುರುತಿಸಿಕೊಂಡಿದ್ದರು. ಅಲ್ಲಿಂದ ಅವರಿಗೆ ಮೊದಲ ಸಿನಿಮಾ ಕೋಕಿಲಾದಲ್ಲಿ ನಟಿಸಲು ಅವಕಾಶ ಸಿಕ್ಕಿತ್ತು. ಈ ಕಾರಣಕ್ಕೆ ಇವರ ಹೆಸರು ಕೋಕಿಲಾ ಮೋಹನ್ ಎಂದೇ ಫೇಮಸ್ ಆಯ್ತು. ಈ ಸಿನಿಮಾದಲ್ಲಿ ಕೋಕಿಲಾ ಮೋಹನ್ ಸಿಂಡಿಕೇಟ್ ಬ್ಯಾಂಕ್‌ನ ಉದ್ಯೋಗಿಯಾಗಿ ನಟಿಸಿದ್ದರು. ಈ ಪಾತ್ರವೇ ಮುಂದೊಂದು ದಿನ ಅದೇ ಬ್ಯಾಂಕ್‌ನ ಉದ್ಯೋಗಿಯನ್ನಾಗಿ ಮಾಡಿತ್ತು.
"ಈ ಸಿನಿಮಾಗಳ ಬಗ್ಗೆ ಮಾತಾಡಿದಾಗ ಸಿಂಡಿಕೇಟ್ ಬ್ಯಾಂಕ್ ಉದ್ಯೋಗಿ ಅಂತ ಹೇಳಿದ್ರಿ. ಅದಕ್ಕೆ ನೆನಪಿಗೆ ಬಂತು. ಕೋಕಿಲಾ ಸಿನಿಮಾದಲ್ಲಿ ನಾನು ಸಿಂಡಿಕೇಟ್ ಬ್ಯಾಂಕ್ ಉದ್ಯೋಗಿ. ಕೋಕಿಲಾ ಸಿನಿಮಾ ಆದ್ಮೇಲೆ, ಒಂದು ಮೂರು ನಾಲ್ಕು ತಿಂಗಳು ಗೀಜಗನ ಗೂಡು, ಅಪರಿಚಿತ ಸಿನಿಮಾ ಆದ್ಮೇಲೆ ಆದ್ಮೇಲೆ ಸಿಂಡಿಕೇಟ್ ಬ್ಯಾಂಕ್‌ನಿಂದಲೇ ಆಫರ್ ಬಂತು." ಎಂದಿದ್ದಾರೆ.

ಎರಡು ಸಿನಿಮಾಗಳಾದ್ಮೇಲೆ ಕೋಕಿಲಾ ಮೋಹನ್‌ಗೆ ಸಿಂಡಿಕೇಟ್ ಬ್ಯಾಂಕ್‌ನ ಮ್ಯಾನೇಜರ್ ಕರೆದು ಕೆಲಸ ಕೊಡುವುದಾಗಿ ಆಫರ್ ಇಟ್ಟಿದ್ದರು. "ಬೆಂಗಳೂರಿನ ಗಾಂಧಿನಗರದಲ್ಲಿ ರಿಜನಲ್ ಡೆವೆಲಪ್‌ಮೆಂಟ್ ಮ್ಯಾನೇಜರ್ ಆಫೀಸ್ ಇದೆ. ಅಲ್ಲಿ ನನಗೆ ಕೆಲಸಕ್ಕೆ ಕರೆ ಬಂತು. ನಾನು ಸೀದಾ ಕೆಲಸ ಹುಡುಕಿಕೊಂಡು ಹೋದೆ. ನಾನು ಅಲ್ಲಿನ ಆರ್‌ಡಿಎಂ ಮ್ಯಾನೇಜರ್ ಹತ್ತಿರ ರಿಕ್ವೆಸ್ಟ್ ಮಾಡಿಕೊಂಡೆ. ನಾನು ದಿಢೀರನೇ ಆಕ್ಟರ್ ಆಗಿಬಿಟ್ಟೆ. ನನ್ನ ಹತ್ತಿರ ಮೂರು ನಾಲ್ಕು ಸಿನಿಮಾವಿದೆ. ನನಗೆ ಲಾಸ್ ಆಫ್ ಪೇನಲ್ಲಿ ಶೂಟಿಂಗ್‌ಗೆ ಪರ್ಮಿಷನ್ ಕೊಡುವುದಾದರೆ, ನಾನು ಕೆಲಸಕ್ಕೆ ಸೇರಿಕೊಳ್ಳುತ್ತೇನೆ. ಅದೇ ನನ್ನ ಮೂಲ ಉದ್ದೇಶ ಅಂದೆ." ಎಂದು ರಘುರಾಮ್ ಯೂಟ್ಯೂಬ್ ಚಾನೆಲ್‌ನಲ್ಲಿ ಹೇಳಿದ್ದಾರೆ.
ಸಿಂಡಿಕೇಟ್ ಬ್ಯಾಂಕ್‌ನಲ್ಲಿ ಕೆಲಸ ಸಿಕ್ಕಿದ ಮೇಲೆ ಸಿನಿಮಾ ಹಾಗೂ ಬ್ಯಾಂಕ್ ಕೆಲಸವನ್ನು ಹೇಗೆ ನಿಭಾಯಿಸುತ್ತಿದ್ದರು ಅನ್ನೋದನ್ನು ರಿವೀಲ್ ಮಾಡಿದ್ದಾರೆ. "ಪ್ರೊಬೆಷನರಿ ಪ್ರಿರಿಯಡ್‌ನಲ್ಲಿ ಲಾಸ್ ಆಫ್ ಪೇನಲ್ಲೇ ನೀವು ಹೋಗಿ ಅಂತ ಬಿಟ್ಟುಕೊಟ್ಟರು. ಒಂದು ತಿಂಗಳಲ್ಲಿ 15 ದಿನ ಶೂಟಿಂಗ್ ಮಾಡಿದರೆ, 15 ದಿನ ಡ್ಯೂಟಿ ಮಾಡುತ್ತಿದ್ದೆ. 20 ದಿನ ಶೂಟಿಂಗ್ ಮಾಡಿದರೆ, 10 ದಿನ ಡ್ಯೂಟಿ ಮಾಡುತ್ತಿದ್ದೆ. ಹೀಗೆ ಆಗಿ ಒಂದು ಸಮಯದಲ್ಲಿ ನಾನು ರಾಜೀನಾಮೆ ಕೊಟ್ಟೆ. ಸಿನಿಮಾ ನಟ ಆದ್ಮೇಲೆ ನಾನು ಇಲ್ಲಿಗೆ ಸೇರಿದ್ದು ಅಂತ ಹೇಳುವುದಕ್ಕೆ ನಾನು ಇಲ್ಲಿ ಇಷ್ಟ ಪಡುತ್ತೇನೆ." ಎಂದಿದ್ದಾರೆ.


Click it and Unblock the Notifications











