ಕೆಜಿಎಫ್ ಅಧೀರಗೂ ಮುನ್ನ ಬಾಹುಬಲಿ 'ಕಟ್ಟಪ್ಪ' ಆಗಬೇಕಿತ್ತು ಸಂಜಯ್ ದತ್: ಮಿಸ್ ಆಗಿದ್ದೇಗೆ?
ದಕ್ಷಿಣ ಭಾರತೀಯ ಚಿತ್ರರಂಗದ ದಿಕ್ಕನೇ ಬದಲಿಸಿದ ಸಿನಿಮಾ 'ಬಾಹುಬಲಿ'. ಎರಡೂ ಪಾರ್ಟ್‌ಗಳು ವಿಶ್ವದಾದ್ಯಂತ ಜನಪ್ರಿಯವಾಗಿದ್ದವು. ಬಾಕ್ಸಾಫೀಸ್‌ನಲ್ಲೂ ಸಾವಿರಾರು ಕೋಟಿ ರೂ. ಲೂಟಿ ಮಾಡಿ ಹೊಸ ದಾಖಲೆಯನ್ನು ಬರೆದಿತ್ತು. ರಾಜಮೌಳಿ, ಪ್ರಭಾಸ್, ರಾಣಾ, ಸತ್ಯರಾಜ್, ಅನುಷ್ಕಾ ಶೆಟ್ಟಿಯನ್ನು ಇಡೀ ದೇಶವೇ ಹೊಗಳಿಕೊಂಡಾಡಿದ್ದರು.
ಕೇವಲ ಬಾಕ್ಸಾಫೀಸ್‌ನಲ್ಲಿ ಅಷ್ಟೇ ಅಲ್ಲ. ಬಾಹುಬಲಿಯ ಪಾತ್ರಗಳೂ ಅಷ್ಟೇ ಫೇಮಸ್ ಆಗಿದ್ದವು. ಬಾಹುಬಲಿ, ಬಲ್ಲಾಳದೇವ, ಕಟ್ಟಪ್ಪ, ದೇವಸೇನಾ, ಶಿವಗಾಮಿ ಅಂತ ಪಾತ್ರಗಳು ಇನ್ನೂ ಅಭಿಮಾನಿಗಳ ಕಣ್ಮುಂದೆ ಇವೆ. ಈ ಸಿನಿಮಾದ ಪ್ರತಿಯೊಂದು ಪಾತ್ರವನ್ನು ನಿರ್ವಹಿಸಿದ ತಾರೆಯರ ಆಯ್ಕೆ ಕೂಡ ಅಷ್ಟೇ ಪರ್ಫೆಕ್ಟ್ ಅಂತ ಪ್ರೇಕ್ಷಕರು ಅಭಿಪ್ರಾಯ ಪಟ್ಟಿದ್ದರು.
ಮಲ್ಟಿಸ್ಟಾರರ್ ಸಿನಿಮಾ ಪ್ಯಾನ್ ಇಂಡಿಯಾ ಲೆವೆಲ್‌ನಲ್ಲಿ ಸದ್ದು ಮಾಡಿ, ಹುಬ್ಬೇಸಿದ್ದು ಗೊತ್ತೇ ಇದೆ. ಆದರೆ, ಬಾಲಿವುಡ್ ನಟ ಸಂಜಯ್ ದತ್ ಈ ಸಿನಿಮಾದ ಕಟ್ಟಪ್ಪ ಮಾಡಿದ್ದರೆ ಹೇಗಿರುತ್ತಿತ್ತು? ಅಧೀರನಾಗಿ ಗೆದ್ದಿರೋ ಸಂಜಯ್ ದತ್ ಕಟ್ಟಪ್ಪ ಪಾತ್ರದಲ್ಲಿ ಯಾಕೆ ನಟಿಸಿಲ್ಲ? ಸಂಜಯ್ ದತ್ ಮಿಸ್ ಮಾಡಿಕೊಂಡ್ರಾ? ಇದೆಲ್ಲಾ ಪ್ರಶ್ನೆಗೂ ಉತ್ತರ ಇಲ್ಲಿದೆ.

ಕಟ್ಟಪ್ಪ ಪಾತ್ರದಲ್ಲಿ ನಟಿಸಬೇಕಿತ್ತು ಸಂಜಯ್ ದತ್
ಹೌದು.. ಕಟ್ಟಪ್ಪ ಪಾತ್ರಕ್ಕೆ ರಾಜಮೌಳಿಯ ಮೊದಲ ಆಯ್ಕೆ ಸಂಜಯ್ ದತ್ ಆಗಿತ್ತು. ಈಗ ಸಿನಿಮಾ ರಿಲೀಸ್ ಆಗಿದೆ. ಪಾತ್ರಗಳೆಲ್ಲವೂ ಕಣ್ಣಂಚಿನಲ್ಲೇ ಇದೆ. ಈಗ ಕಟ್ಟಪ್ಪನ ಪಾತ್ರದಲ್ಲಿ ಸಂಜಯ್ ದತ್ ಅನ್ನು ಊಹಿಸಿಕೊಳ್ಳಲೂ ಸಾಧ್ಯವಿಲ್ಲ. ಆದರೆ, ಹೆಚ್ಚು ಕಡಿಮೆ ಆಗಿದ್ದರೆ, ಸಂಜಯ್ ದತ್ ಕಟ್ಟಪ್ಪನ ಅವತಾರದಲ್ಲಿ ಕಾಣಿಸಿಕೊಳ್ಳಬೇಕಿತ್ತು. ಪ್ರೇಕ್ಷಕರು ಸಂಜಯ್ ದತ್‌ಗೆ ಬಾಹುಬಲಿಯನ್ನು ಕೊಂದಿದ್ದೇಕೆ? ಅಂತ ಪ್ರಶ್ನೆ ಮಾಡಬೇಕಿತ್ತು.
ರಾಜಮೌಳಿ ತಂದೆ ವಿಜಯೇಂದ್ರ ಪ್ರಸಾದ್ 'ಬಾಹುಬಲಿ'ಗೆ ಕಥೆ ಬರೆದಿದ್ದರು. ಆಗಲೇ ಸಂಜಯ್ ದತ್ ಅನ್ನೇ ಗಮನದಲ್ಲಿಟ್ಟುಕೊಂಡು ಕಟ್ಟಪ್ಪ ಪಾತ್ರವನ್ನು ಬರೆದಿದ್ದರು. ಆ ವೇಳೆ ಸಂಜಯ್ ದತ್ ಇನ್ನೂ ಶಿಕ್ಷೆಯನ್ನು ಅನುಭವಿಸುತ್ತಿದ್ದರು. ಹೀಗಾಗಿ ಸಂಜಯ್ ದತ್ ಆ ವೇಳೆ ಕಟ್ಟಪ್ಪ ಪಾತ್ರದಲ್ಲಿ ನಟಿಸಲು ಸಾಧ್ಯವಾಗಿರಲಿಲ್ಲ. ಈ ಕಾರಣಕ್ಕೆ ಸಂಜಯ್ ದತ್ ಬದಲು ಸತ್ಯಜಿತ್ ಅವರನ್ನು ಕರೆದುಕೊಂಡು ಬರಲಾಯ್ತು ಎಂದು ವರದಿಯಾಗಿತ್ತು.
ಬಲ್ಲಾಳದೇವ, ಶಿವಗಾಮಿ ಪಾತ್ರ ಮೊದಲ ಆಯ್ಕೆ ಇವರಲ್ಲ
ಕಟ್ಟಪ್ಪ ಪಾತ್ರ ಒಂದೇ ಅಲ್ಲ. ಈ ಸಿನಿಮಾದ ಕೆಲವು ಪಾತ್ರಗಳಿಗೆ ಆಯ್ಕೆ ಬೇರೆ ನಟರನ್ನು ಆಯ್ಕೆ ಮಾಡಿದ್ದರು. ಕಟ್ಟಪ್ಪ ಪಾತ್ರದ ಜೊತೆ ಬಲ್ಲಾಳದೇವ, ಶಿವಗಾಮಿ ಪಾತ್ರಕ್ಕೂ ಈ ಮೊದಲು ಬೇರೆ ನಟರನ್ನು ಆಯ್ಕೆ ಮಾಡಿದ್ದರು. ಇಷ್ಟೇ ಅಲ್ಲದೆ, ಅನುಷ್ಕಾ ಶೆಟ್ಟಿ ಬದಲು ನಯನತಾರಾ ನಟಿಸಬೇಕಿತ್ತು ಅಂತನೂ ಗಾಳಿ ಸುದ್ದಿ ಹಬ್ಬಿತ್ತು.
ಬಲ್ಲಾಳ ದೇವ ಪಾತ್ರದಲ್ಲಿ ರಾಣಾ ದಗ್ಗುಬಾಟಿ ನಟಿಸಿದ್ದರು. ಆದರೆ, ಈ ಪಾತ್ರಕ್ಕೆ ಹಾಲಿವುಡ್ ನಟನನ್ನು ಕರೆದುಕೊಂಡು ಬರಲಾಗಿತ್ತು. ಇನ್ನೊಂದು ಕಡೆ ಶಿವಗಾಮಿ ಪಾತ್ರದಲ್ಲಿ ರಮ್ಯಾ ಕೃಷ್ಣ ನಟಿಸಿದ್ದರು. ಈ ಪಾತ್ರಕ್ಕೆ ಮೊದಲ ಆಯ್ಕೆ ಶ್ರೀದೇವಿ ಆಗಿತ್ತು. ಆದರೆ, ಶ್ರೀದೇವಿ ಒಪ್ಪಿಕೊಳ್ಳದೆ ಇದ್ದಿದ್ದರಿಂದ ರಮ್ಯಾ ಕೃಷ್ಣರನ್ನು ಆಯ್ಕೆ ಮಾಡಲಾಗಿತ್ತು.
ಕಟ್ಟಪ್ಪ ಪಾತ್ರದಲ್ಲಿ ನಟಿಸಿದರೆ ಅಧೀರ ಕಥೆಯೇನು?
'ಬಾಹುಬಲಿ' ಸಿನಿಮಾದಲ್ಲಿ ಕಟ್ಟಪ್ಪ ಪಾತ್ರದಲ್ಲಿ ನಟಿಸಬೇಕಿದ್ದ ಸಂಜಯ್ ದತ್ 'ಕೆಜಿಎಫ್' ಮೂಲಕ ದಕ್ಷಿಣ ಭಾರತಕ್ಕೆ ಎಂಟ್ರಿ ಕೊಟ್ಟಿದ್ದಾರೆ. ಕನ್ನಡದಲ್ಲಿ ಯಶ್ ಹಾಗೂ ಪ್ರಶಾಂತ್ ನೀಲ್ ಕಾಂಬಿನೇಷನ್ ಸಿನಿಮಾ 'ಕೆಜಿಎಫ್ 2' ಮೂಲಕ ಅಧೀರನಾಗಿ ಎಂಟ್ರಿ ಕೊಟ್ಟು ಗೆದ್ದಿದ್ದಾರೆ.

ಒಂದ್ವೇಳೆ ಕಟ್ಟಪ್ಪ ಪಾತ್ರದಲ್ಲಿ ಸಂಜಯ್ ದತ್ ನಟಿಸಿದ್ದರೆ, 'ಕೆಜಿಎಫ್ 2'ಗೆ ಸಂಜಯ್ ಬರುತ್ತಿದ್ರಾ? ಅನ್ನೋ ಅನುಮಾನ ಈಗ ಮೂಡಿದೆ. ಕಟ್ಟಪ್ಪ ಪಾತ್ರದಲ್ಲಿ ನಟಿಸಿದ್ದರೆ, ಪ್ರಶಾಂತ್ ನೀಲ್ ಆಯ್ಕೆ ಮಾಡುತ್ತಿದ್ದರೇ ಅನ್ನೋದು ಕೂಡ ದೊಡ್ಡ ಪ್ರಶ್ನೆನೇ..


Click it and Unblock the Notifications











