'ಪುಷ್ಪ 2' ಕಲೆಕ್ಷನ್ ಮೇಲೆ ಕಣ್ಣು; ಕರ್ನಾಟಕದ ಬಾಕ್ಸಾಫೀಸ್ ದೋಚಿದ ಪರಭಾಷೆ ಸಿನಿಮಾಗಳ್ಯಾವುವು?

ಸಿನಿಮಾ ಒಂದು ಎಮೋಷನ್ ಅನ್ನೋದೆಲ್ಲ ಈಗ ಇಲ್ಲ. ಅದೀಗ ಸಂಪೂರ್ಣವಾಗಿ ವ್ಯಾಪಾರ ಆಗಿ ಹೋಗಿದೆ. ಯಾವುದೇ ಸಿನಿಮಾ ಮಾಡುವ ಮುನ್ನ ಎಲ್ಲೆಲ್ಲಿ ಎಷ್ಟು ಕಲೆಕ್ಷನ್ ಮಾಡಬಹುದು ಅನ್ನುವ ಲೆಕ್ಕಾಚಾರ ಶುರುವಾಗುತ್ತೆ. ಅದರಲ್ಲೂ ಪ್ಯಾನ್ ಇಂಡಿಯಾ ಸಿನಿಮಾ ಆದರೆ, ಸೂಪರ್‌ಸ್ಟಾರ್ ಸ್ಟಾರ್‌ಗಳ ಸಿನಿಮಾ ಆಗಿದ್ದರೆ ದೊಡ್ಡ ಮಟ್ಟದಲ್ಲಿ ವ್ಯವಹಾರ ನಡೆಯುತ್ತೆ.

ದಕ್ಷಿಣ ಭಾರತದ ಎಲ್ಲಾ ಭಾಷೆಯ ಸಿನಿಮಾ ಮಂದಿಗೂ ಕರ್ನಾಟಕ ಹಾಟ್‌ ಸ್ಪಾಟ್ ಇದ್ದಂತೆ. ಯಾವುದೇ ಭಾಷೆಯ ಸಿನಿಮಾ ರಿಲೀಸ್ ಮಾಡಿದರೂ, ಇಲ್ಲಿನ ಜನ ಮುಗಿಬಿದ್ದು ಸಿನಿಮಾ ನೋಡುತ್ತಾರೆ ಅನ್ನೋದು ಅವರಿಗೂ ಗೊತ್ತಿದೆ. ಹೀಗಾಗಿ ಕರ್ನಾಟಕದಲ್ಲಿ ಬ್ಯುಸಿನೆಸ್‌ ಮಾಡುವಾಗ ನಿರ್ಮಾಪಕರು ಒಂದು ಹೆಜ್ಜೆ ಮುಂದಿರುತ್ತಾರೆ. ಇಲ್ಲಿ ಕರ್ನಾಟಕದಲ್ಲಿ ರಿಲೀಸ್ ಆಗಿರುವ ಪರಭಾಷೆಗಳು ಕೋಟಿ ಕೋಟಿ ಲೂಟಿ ಮಾಡಿವೆ. ಇಂತಹ ಟಾಪ್ 10 ಸಿನಿಮಾಗಳ ಪಟ್ಟಿ ಇಲ್ಲಿದೆ.

Top 10 Other Language movies box office collection in Karnataka here is the report

ಶಿವಕಾರ್ತಿಕೇಯನ್ 'ಅಮರನ್'

ಇತ್ತೀಚೆಗಷ್ಟೇ ರಿಲೀಸ್ ಆಗಿದ್ದ 'ಅಮರನ್' ಸಿನಿಮಾ ತಮಿಳುನಾಡಿನ ಬಾಕ್ಸಾಫೀಸ್‌ ಅನ್ನೇ ಲೂಟಿ ಮಾಡಿದೆ. ಅಲ್ಲಿ ಬಿಟ್ಟರೆ, ಕರ್ನಾಟಕದಲ್ಲೂ ಅದ್ಭುತ ಕಲೆಕ್ಷನ್ ಮಾಡಿದೆ. ಮೂಲಗಳ ಪ್ರಕಾರ 'ಅಮರನ್' ಸಿನಿಮಾವನ್ನು 2. 2 ಕೋಟಿ ರೂಪಾಯಿಗೆ ವಿತರಣೆ ಹಕ್ಕನ್ನು ಖರೀದಿ ಮಾಡಲಾಗಿತ್ತು. ಸಿನಿಮಾಗೆ ಉತ್ತಮ ಪ್ರತಿಕ್ರಿಯೆ ಸಿಕ್ಕಿದ್ದರಿಂದ ಈ ಸಿನಿಮಾ ಕೇವಲ ಕರ್ನಾಟಕದಲ್ಲಿಯೇ 8 ಕೋಟಿ ರೂಪಾಯಿಯಷ್ಟು ಗಳಿಸಿದೆ ಎನ್ನಲಾಗಿದೆ.

ಕಮಲ್ ಹಾಸನ್ ವಿಕ್ರಮ್

ಕಮಲ್ ಹಾಸನ್‌ಗೆ ಲೋಕೇಶ್ ಕನಕರಾಜ್ ನಿರ್ದೇಶಿಸಿದ 'ವಿಕ್ರಂ' ಸಿನಿಮಾವನ್ನು ಕರ್ನಾಟಕದ ವಿತರಕರು 6 ಕೋಟಿ ರೂ.ಗೆ ಕೊಂಡುಕೊಂಡಿದ್ದರು. ಅದು ಕರ್ನಾಟಕದಲ್ಲಿ ಕಲೆಕ್ಷನ್ ಮಾಡಿದ್ದು 13 ಕೋಟಿ ರೂಪಾಯಿ. ಹೂಡಿಕೆಗಿಂತ ಡಬಲ್ ಲಾಭ ಬಂದಿತ್ತು.

Top 10 Other Language movies box office collection in Karnataka here is the report

ದಳಪತಿ ವಿಜಯ್ 'ಮಾಸ್ಟರ್'

ದಳಪತಿ ವಿಜಯ್‌ ಸಿನಿಮಾ ಕರ್ನಾಟಕದಲ್ಲು ಉತ್ತಮ ಬ್ಯುಸಿನೆಸ್ ಮಾಡುತ್ತೆ. ಲೋಕೇಶ್ ಕನಕರಾಜ್ ನಿರ್ದೇಶಿಸಿದ ಮಾಸ್ಟರ್ 6.3 ಕೋಟಿ ರೂಪಾಯಿಗೆ ಖರೀದಿ ಮಾಡಲಾಗಿತ್ತು. ಅದು ಕರ್ನಾಟಕದಲ್ಲಿ ಕಲೆಕ್ಷನ್ ಮಾಡಿದ್ದು 11 ಕೋಟಿ ರೂಪಾಯಿ.

ದಳಪತಿ ವಿಜಯ್ 'ಸರ್ಕಾರ್'

ದಳಪತಿ ವಿಜಯ್ ನಟನೆಯ 'ಸರ್ಕಾರ್' ಸಿನಿಮಾವನ್ನು 7.2 ಕೋಟಿ ರೂಪಾಯಿಗೆ ವಿತರಣೆ ಹಕ್ಕನ್ನು ಖರೀದಿ ಮಾಡಲಾಗಿತ್ತು. ಅದು ಬಾಕ್ಸಾಫೀಸ್‌ನಲ್ಲಿ ಗಳಿಸಿದ್ದು 11 ಕೋಟಿ ರೂಪಾಯಿ. ಹೆಚ್ಚು ಕಡಿಮೆ ನಾಲ್ಕುಕೋಟಿ ರೂಪಾಯಿ ಲಾಭ ಆಗಿತ್ತು.

ದಳಪತಿ ವಿಜಯ್ 'ಬಿಗಿಲ್'

ದಳಪತಿ ವಿಜಯ್ ನಟನೆಯ ಮತ್ತೊಂದು ಸಿನಿಮಾ 'ಬಿಗಿಲ್' ಕರ್ನಾಟಕ ವಿತರಣೆ ಹಕ್ಕು ಮಾರಾಟ ಆಗಿದ್ದು 8 ಕೋಟಿ ರೂಪಾಯಿ. ಈ ಸಿನಿಮಾ ಗಳಿಸಿದ್ದು 14 ಕೋಟಿ ರೂಪಾಯಿ ಎಂದು ಹೇಳಲಾಗುತ್ತಿದೆ.

ದಳಪತಿ ವಿಜಯ್ 'ಲಿಯೋ'

ಲೋಕೇಶ್ ಕನಕರಾಜ್ ಹಾಗೂ ದಳಪತಿ ವಿಜಯ್ ಕಾಂಬಿನೇಷನ್‌ನ ಮತ್ತೊಂದು ಸಿನಿಮಾ 'ಲಿಯೋ' 10 ಕೋಟಿ ರೂಪಾಯಿಗೆ ಖರೀದಿ ಮಾಡಲಾಗಿತ್ತು. ಈ ಸಿನಿಮಾ ಕರ್ನಾಟಕದಲ್ಲಿ 17 ಕೋಟಿ ರೂಪಾಯಿ ಕಲೆಕ್ಷನ್ ಮಾಡಿತ್ತು.

ಬಾಕ್ಸಾಫೀಸ್‌ನಲ್ಲಿ ಅಬ್ಬರಿಸಿದ ಸಿನಿಮಾಗಳು

ತೆಲುಗು, ತಮಿಳು ಭಾಷೆಯ ಬಿಗ್ ಬಜೆಟ್ ಸಿನಿಮಾಗಳು ಕರ್ನಾಟಕದಲ್ಲಿ ರಿಲೀಸ್ ಆಗಿವೆ. ಬಾಹುಬಲಿ, ರೋಬೋ 2, ಪುಷ್ಪ ಅಂತಹ ಸಿನಿಮಾಗಳನ್ನು ದೊಡ್ಡ ಮೊತ್ತ ಕೊಟ್ಟು ಖರೀದಿ ಮಾಡಿದ್ದರು. ಆ ಸಿನಿಮಾಗಳು ಬಾಕ್ಸಾಫೀಸ್‌ನಲ್ಲಿ ದೊಡ್ಡ ಮಟ್ಟದಲ್ಲಿ ಕಲೆಕ್ಷನ್ ಮಾಡಿವೆ. ಅವುಗಳ ಪಟ್ಟಿ ಇಲ್ಲಿವೆ.

ಬಿಗ್ ಕಲೆಕ್ಷನ್ ಮಾಡಿದ ಸಿನಿಮಾಗಳ ಪಟ್ಟಿ

ಬಾಹುಬಲಿ 1 18 ಕೋಟಿ ರೂ. (ರೈಟ್ಸ್) 26 ಕೋಟಿ ರೂ. (ಕಲೆಕ್ಷನ್)
ಬಾಹುಬಲಿ 2 36 ಕೋಟಿ ರೂ. (ರೈಟ್ಸ್) 66 ಕೋಟಿ ರೂ. (ಕಲೆಕ್ಷನ್)
ರೋಬೋ 2 30 ಕೋಟಿ ರೂ. (ರೈಟ್ಸ್) 41 ಕೋಟಿ ರೂ. (ಕಲೆಕ್ಷನ್)
ಪುಷ್ಪ 1 16 ಕೋಟಿ ರೂ. (ರೈಟ್ಸ್) 26 ಕೋಟಿ ರೂ. (ಕಲೆಕ್ಷನ್)

'ಪುಷ್ಪ 2' ನಿರೀಕ್ಷೆ ಏನು?

ಅಲ್ಲು ಅರ್ಜುನ್ ಸಿನಿಮಾ 'ಪುಷ್ಪ' ಕರ್ನಾಟಕದ ವಿತರಕರಿಗೆ ದೊಡ್ಡ ಮಟ್ಟದ ಲಾಭ ಸಿಕ್ಕಿತ್ತು. 16 ಕೋಟಿ ರೂ.ಗೆ ಖರೀದಿಸಿದ ಸಿನಿಮಾ 26 ಕೋಟಿ ರೂಪಾಯಿ ಕಲೆಕ್ಷನ್ ಮಾಡಿತ್ತು. ಹೀಗಾಗಿ 'ಪುಷ್ಪ 2' ಸಿನಿಮಾವನ್ನು 34 ಕೋಟಿ ರೂ.ಗೆ ಖರೀದಿ ಮಾಡಿದ್ದಾರೆ ಎನ್ನಲಾಗಿದ್ದು, 70 ರಿಂದ 80 ಕೋಟಿ ರೂ. ಕಲೆಕ್ಷನ್ ಮಾಡುವ ನಿರೀಕ್ಷೆ ಮಾಡಲಾಗಿದೆ.

More from Filmibeat

English summary
Top 10 Other Language movies box office collection in Karnataka here is the report;
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X