ನಾಯಕನಷ್ಟೇ ಅದ್ಭುತವಾಗಿ ಖಳನಾಗಿಯೂ ನಟಿಸಿ ಗೆದ್ದ ದಕ್ಷಿಣದ ಸೂಪರ್‌ ಸ್ಟಾರ್‌ಗಳು ಇವರೇ!

ಹೀರೋ ಅಂದ್ರೆ ಅವನು ತಪ್ಪು ಮಾಡೋಕೆ ಸಾಧ್ಯವೇ ಇಲ್ಲದವನು. ಸದಾ ಎಲ್ಲರನ್ನು ರಕ್ಷಿಸುವವನು. ಆದರ್ಶ ವ್ಯಕ್ತಿ ಅನ್ನೋ ಇಮೇಜ್ ಸರ್ವೇಸಾಮಾನ್ಯ. ಅದ್ರಲ್ಲೂ ಸೂಪರ್‌ಸ್ಟಾರ್‌ಗಳು ಹೀರೋಗಳಾಗಿ ಜನರ ನಡುವೆ ಶಾಶ್ವತವಾಗಿ ಉಳಿದುಹೋಗಿರುತ್ತಾರೆ. ಆದರೆ, ಅದೇ ಹೀರೋ ನೆಗೆಟಿವ್ ಶೇಡ್‌ನಲ್ಲಿ ಖಳನಟನ ಪಾತ್ರ ಮಾಡಿದಾಗ ಅವರ ಫ್ಯಾನ್ಸ್‌ಗೆ ಒಂದು ರೀತಿಯ ಸರ್ಪ್ರೈಸ್ ಆಗುತ್ತೆ. ಆದರೆ, ಕಲಾವಿದರಾಗಿ ಅದು ಅವರಿಗೊಂದು ಚಾಲೆಂಟ್ ರೀತಿ ಇರುತ್ತೆ. ತಾವು ನೆಗೆಟಿವ್ ಶೇಡ್‌ನ ಪಾತ್ರಗಳನ್ನೇ ಮಾಡಿದ್ರೂ ಅದಕ್ಕೂ ಅದ್ಭುತವಾಗಿ ನ್ಯಾಯ ಕೊಡಿಸುವ ಅಪರೂಪದ ನಾಯಕರು ದಕ್ಷಿಣ ಭಾರತ ಚಿತ್ರರಂಗದಲ್ಲಿ ಅನೇಕರಿದ್ದಾರೆ.

ಇತ್ತೀಚೆಗಷ್ಟೇ ಮಲಯಾಳಂ ಸೂಪರ್‌ಸ್ಟಾರ್‌ ಮಮ್ಮುಟ್ಟಿ 'ಬ್ರಹ್ಮಯುಗಂ' ಚಿತ್ರದಲ್ಲಿ ನೆಗೆಟಿವ್ ರೋಲ್‌ನಲ್ಲಿ ಕಾಣಿಸಿಕೊಂಡು ಗಮನಸೆಳೆದಿದ್ದರು. ಅವರ ಈ ಪಾತ್ರ ನಿಜಕ್ಕೂ ಸಿನಿರಸಿಕರ ಹುಬ್ಬೇರಿಸುವಂತೆ ಮಾಡೋದು ಹೌದಾದರೂ, ದಕ್ಷಿಣ ಭಾರತದ ಸೂಪರ್‌ಸ್ಟಾರ್‌ಗಳು ನೆಗೆಟಿವ್ ಪಾತ್ರಗಳಲ್ಲಿ ಕಾಣಿಸಿಕೊಂಡಿರೋದು ಇದೇ ಮೊದಲೇನಲ್ಲ. ಈ ಹಿಂದೆ ತಲೈವಾ ರಜನಿಕಾಂತ್‌ನಿಂದ ಹಿಡಿದು ತಲಾ ಅಜಿತ್, ವಿಜಯ್, ಕಮಲ್ ಹಾಸನ್, ವಿಜಯ್ ಸೇತುಪತಿ ಸೇರಿದಂತೆ ನಾನಾ ತಾರೆಯರು ಯಶಸ್ವಿ ವಿಲನ್ ಪಾತ್ರಗಳಲ್ಲಿ ಮಿಂಚಿ ಗೆದ್ದಿದ್ದಾರೆ. ವಿಲನ್‌ಗಳಾಗಿ ತೆರೆ ಮೇಲೆ ವಿಜೃಂಭಿಸಿದ ದಕ್ಷಿಣದ ಟಾಪ್ 8 ತಾರೆಯರ ಪಟ್ಟಿ ಇಲ್ಲಿದೆ ನೋಡಿ.

Top south superstars who won in negative shade and proved themselves

'ಈಗ'-ಕಿಚ್ಚ ಸುದೀಪ್ (2012)

ಸೂಪರ್‌ಸ್ಟಾರ್ ಆಗಿದ್ದೂ ಕೊಂಡು ವಿಲನ್ ರೋಲ್‌ನಲ್ಲಿ ಗೆದ್ದವರಲ್ಲಿ ಪ್ರಮುಖರು ಕಿಚ್ಚ ಸುದೀಪ್. ಮೂವೀ ಮಾಂತ್ರಿಕ ರಾಜಮೌಳಿ ನಿರ್ದೇಶಿಸಿದ 'ಈಗ' ಸಿನಿಮಾದಲ್ಲಿ ಕಿಚ್ಚ ಸುದೀಪ್ ನೆಗೆಟಿವ್ ಶೇಡ್‌ಗಳಲ್ಲಿ ಕಾಣಿಸಿಕೊಂಡಿದ್ದರು. ಕಿಚ್ಚನದ್ದು ವಿಲನ್ ರೋಲ್ ಆಗಿದ್ದರೂ, ಅದೇ ಪ್ರಮುಖ ಪಾತ್ರವೆನಿಸಿಕೊಂಡಿತ್ತು. ಆ ಮಟ್ಟಿಗೆ ಕಿಚ್ಚ ನಟಿಸಿ ಗೆದ್ದಿದ್ದರು.

'ವಿಕ್ರಂ' - ಸೂರ್ಯ (2022)

'ವಿಕ್ರಂ' ಸಿನಿಮಾದಲ್ಲಿ ಕಮಲ್ ಹಾಸನ್, ಫಾಹದ್ ಫಾಸಿಲ್, ಸೂರ್ಯ, ವಿಜಯ್ ಸೇತುಪತಿ ಮುಂತಾದ ಘಟಾನುಘಟಿಗಳ ಬೃಹತ್ ಸಂಗಮ ಮಾಡಿದ್ರು ನಿರ್ದೇಶಕ ಲೋಕೇಶ್ ಕನಕರಾಜ್. 'ವಿಕ್ರಂ' ಸಿನಿಮಾದಲ್ಲಿ ಸೂರ್ಯರದ್ದು ಒಂದು ಅತಿಥಿ ಪಾತ್ರವಷ್ಟೇ. ರೋಲೆಕ್ಸ್ ಎನ್ನುವ ಗ್ಯಾಂಗ್‌ಸ್ಟರ್ ಪಾತ್ರ ನಿರ್ವಹಿಸಿದ್ದ ಸೂರ್ಯ ತೆರೆ ಮೇಲೆ ಕಾಣಿಸಿಕೊಳ್ತಿದ್ದಂತೆ ಅಭಿಮಾನಿಗಳು ಥಿಯೇಟರ್‌ನಲ್ಲಿ ಶಿಳ್ಳೆ ಚಪ್ಪಾಳೆಗಳ ಸುರಿಮಳೆಯನ್ನೇ ಸುರಿಸಿದ್ದರು. ವಿಕ್ರಂ ಮುಂದಿನ ಭಾಗದಲ್ಲಿ ರೋಲೆಕ್ಸ್ ಪಾತ್ರದಲ್ಲಿ ಸೂರ್ಯ ನಟನೆಯನ್ನು ಇನ್ನಷ್ಟು ಡೀಟೆಲ್ಡ್ ಆಗಿ ನೋಡೋಕೆ ಅಭಿಮಾನಿಗಳು ಕಾತರದಿಂದ ಕಾಯ್ತಿದ್ದಾರೆ.

'ಜೋಜಿ' (2021), 'ಪುಷ್ಪ'-ಫಾಹದ್ ಫಾಸಿಲ್

ದಿನೇಶ್ ಪೋತನ್ ನಿರ್ದೇಶನದ 2021ರ ಈ ಸಿನಿಮಾ ಗಮನ ಸೆಳೆದಿದ್ದು ಫಾಹದ್ ಫಾಸಿಲ್ ಅಭಿನಯದಿಂದಲೇ ಅನ್ನೋದು ಎಲ್ಲರೂ ಒಪ್ಪುವಂಥಾ ವಿಚಾರವೇ. ಬಾಬುರಾಜ್, ಶಮ್ಮಿ ತಿಲಕನ್, ಉನ್ನಿಮಯ ಪ್ರಸಾದ್, ಬೇಸಿಲ್ ಜೋಸೆಫ್ ಮುಂತಾದ ಅತ್ಯುತ್ತಮ ಕಲಾವಿದರು ನಟಿಸಿರುವ ಈ ಸಿನಿಮಾವನ್ನು ಈಗ ನೀವು ಅಮೆಜಾನ್ ಪ್ರೈಮ್ ವಿಡಿಯೋದಲ್ಲಿ ನೋಡಬಹುದು. ಕೋವಿಡ್ ಸಂದರ್ಭದಲ್ಲಿ ನೇರವಾಗಿ ಒಟಿಟಿಗೆ ಬಿಡುಗಡೆಯಾದ ಈ ಸಿನಿಮಾ ಅಷ್ಟೆಲ್ಲಾ ಯಶಸ್ಸು ಗಳಿಸಬಹುದು ಎಂದು ಯಾರೂ ಭಾವಿಸಿರಲಿಲ್ಲ. ಶೇಕ್‌ಸ್ಪೀಯರ್‌ನ ಮ್ಯಾಕ್ಬೆತ್ ನಾಟಕವನ್ನು ಆಧರಿಸಿದ ಸೈಕಲಾಜಿಕಲ್ ಡ್ರಾಮಾ ಕಥಾಹಂದರ ಈ ಸಿನಿಮಾದ್ದು. ಇದರಲ್ಲಿ ಫಾಹದ್ ಫಾಸಿಲ್‌ರದ್ದು ನೆಗೆಟಿವ್ ಶೇಡ್‌ನ ಪಾತ್ರ. ತನ್ನ ಕೀಳರಿಮೆ ಹೋಗಲಾಡಿಸಲು ಏನು ಬೇಕಾದರೂ ಮಾಡಲು ತಯಾರಾಗುವ ವ್ಯಕ್ತಿಯ ಪಾತ್ರದಲ್ಲಿ ಫಾಹದ್ ನಿಜಕ್ಕೂ ಸೈ ಎನಿಸಿಕೊಂಡಿದ್ರು. ಕೋವಿಡ್ ಸಂದರ್ಭದಲ್ಲಿ ಬಿಡುಗಡೆಯಾದ ಬೆಸ್ಟ್ ಚಿತ್ರಗಳಲ್ಲಿ ಇದೂ ಒಂದು ಎಂದು ಹೇಳಲಾಗ್ತಿದೆ. ಹಾಗೇ ಪ್ಯಾನ್ ಇಂಡಿಯಾ ಸಿನಿಮಾ 'ಪುಷ್ಪ' ಸಿನಿಮಾದಲ್ಲೂ ನೆಗೆಟಿವ್ ಶೇಡ್‌ನಲ್ಲಿ ಕಾಣಿಸಿಕೊಂಡಿದ್ದರು.

Top south superstars who won in negative shade and proved themselves

'ವಿಕ್ರಂ ವೇದ' (2017)- ವಿಜಯ್ ಸೇತುಪತಿ

ಎರಡೂವರೆ ಗಂಟೆಯ ಸಖತ್ ಸಸ್ಪೆನ್ಸ್ ಥ್ರಿಲ್ಲರ್ ಸಿನಿಮಾ 'ವಿಕ್ರಂ-ವೇದ'. ಈ ತಮಿಳು ಸಿನಿಮಾ ಎಲ್ಲಾ ಕಡೆ ಅದ್ಯಾವ ಪರಿ ಸೂಪರ್‌ ಹಿಟ್ ಆಗಿತ್ತು ಅಂದ್ರೆ, ಸ್ವಲ್ಪವೂ ತಡಮಾಡದೇ ಹಿಂದಿ ರೀಮೆಕ್ ರೈಟ್ಸ್ ಸೇಲ್ ಆಗಿ ಹೋಯ್ತು. ಕಳ್ಳ-ಪೊಲೀಸ್ ಆಟದ ಹಿನ್ನೆಲೆಯಲ್ಲೇ ಸರಿ-ತಪ್ಪುಗಳ ವಿಶ್ಲೇಷಣೆ ಸಿನಿಮಾದ ಮೂಲ ಕಥಾವಸ್ತು. ಆರ್. ಮಾಧವನ್, ವಿಜಯ್ ಸೇತುಪತಿ ಜೊತೆ ಕನ್ನಡತಿ ಶ್ರದ್ಧಾ ಶ್ರೀನಾಥ್, ವರಲಕ್ಷ್ಮಿ ಶರತ್‌ ಕುಮಾರ್ ಕೂಡಾ ಈ ಚಿತ್ರದ ಪ್ರಮುಖ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದರು. ಸದ್ಯ ಡಿಸ್ನಿ + ಹಾಟ್‌ಸ್ಟಾರ್‌ನಲ್ಲಿ ನೋಡಬಹುದಾದ ಈ ಚಿತ್ರ ಕ್ರಿಮಿನಲ್ ಹಿನ್ನೆಲೆಯಲ್ಲಿ ಬದುಕಿನ ಕಥೆಯನ್ನು ಸುಂದರವಾಗಿ ಹೇಳಿಕೊಂಡು ಹೋಗಿದೆ.

'ಇರು ಮುಗನ್' (2016)-ಚಿಯಾನ್ ವಿಕ್ರಂ

ಆನಂದ್ ಶಂಕರ್ ನಿರ್ದೇಶನದ ಈ ಚಿತ್ರದಲ್ಲಿ ನಯನತಾರಾ, ನಿತ್ಯಾ ಮೆನನ್, ನಾಸಿರ್ ಜೊತೆ ಚಿಯಾನ್ ವಿಕ್ರಂ ನೆಗೆಟಿವ್ ಶೇಡ್‌ನಲ್ಲಿ ಅದ್ಭುತವಾಗಿ ಕಾಣಿಸಿಕೊಂಡಿದ್ದಾರೆ. ವಿಕ್ರಂ ದ್ವಿಪಾತ್ರದಲ್ಲಿ ಕಾಣಿಸಿಕೊಂಡಿದ್ದು ಅದರಲ್ಲಿ ಒಂದು ಪಾತ್ರ ಹೀರೋ, ಮತ್ತೊಂದು ವಿಲನ್. 2016ರಲ್ಲಿ ಬಿಡುಗಡೆಯಾದ ಈ ಚಿತ್ರ ಒಂದು ಮಾಸ್ ಎಂಟರ್‌ಟೈನರ್ ಆಗಿ ಗೆದ್ದಿತ್ತು. ರಾ ಏಜೆಂಟ್ ಆಗಿ ಒಂದು ಪಾತ್ರ, ತೃತೀಯ ಲಿಂಗಿಯಾಗಿ ಮತ್ತೊಂದು ಪಾತ್ರದಲ್ಲಿ ವಿಕ್ರಂ ಅದ್ಭುತ ಪರ್ಫಾರ್ಮೆನ್ಸ್ ನೀಡಿದ್ರು.

'ಪಲೇರಿ ಮಾಣಿಕ್ಯಂ'-ಮಮ್ಮುಟ್ಟಿ

2009ರಲ್ಲಿ ಬಿಡುಗಡೆಯಾದ ರಂಜಿ ನಿರ್ದೇಶನದ ಈ ಚಿತ್ರ ಒಂದು ಮಿಸ್ಟರಿ ಕ್ರೈಮ್ ಕಥೆಯ ಹಿನ್ನೆಲೆ ಹೊಂದಿದೆ. ಮೈಥಿಲಿ, ಶ್ವೇತಾ ಮೆನನ್, ಶ್ರೀನಿವಾಸನ್ ನಟಿಸಿರುವ ಈ ಸಿನಿಮಾ ಸದ್ಯ ಸನ್ ನೆಕ್ಸ್ಟ್‌ನಲ್ಲಿ ನೋಡಬಹುದಾಗಿದೆ. ದೆಹಲಿಯ ಒಬ್ಬ ಪ್ರೈವೇಟ್ ಡಿಟೆಕ್ಟಿವ್ ತನ್ನೂರಿಗೆ ಒಂದು ಮರ್ಡರ್ ಇನ್ವೆಸ್ಟಿಗೇಶನ್ ಮಾಡಲು ಬರುವ ಕತೆ ಇದು. ಜಮೀನ್ದಾರನ ಪಾತ್ರದಲ್ಲಿ ಮಮ್ಮುಟ್ಟಿ ನೆಗೆಟಿವ್ ಶೇಡ್‌ಗಳಲ್ಲಿ ಸಮರ್ಥವಾಗಿ ನಿರ್ವಹಿಸಿದ್ರು.

Top south superstars who won in negative shade and proved themselves

'ಅಳಗಿಯ ತಮಿಳ್ ಮಗನ್' (2007)-ವಿಜಯ್

ಶ್ರೀಯಾ ಶರಣ್ ಮತ್ತು ನಮಿತಾ ಇಬ್ಬರು ನಾಯಕಿಯರ ಜೊತೆ ದಳಪತಿ ವಿಜಯ್ ಡಬಲ್ ರೋಲ್‌ನಲ್ಲಿ ಕಾಣಿಸಿಕೊಂಡ ಚಿತ್ರ 'ಅಳಗಿಯ ತಮಿಳ್ ಮಗನ್'. ಈ ಚಿತ್ರದಲ್ಲಿ ಹೀರೋ ಮತ್ತು ವಿಲನ್ ಎರಡೂ ಪಾತ್ರಗಳನ್ನು ಅಚ್ಚುಕಟ್ಟಾಗಿ ನಿರ್ವಹಿಸಿದ್ದ ವಿಜಯ್, ಅಭಿಮಾನಿಗಳಿಗೆ ಸಖತ್ ಎಂಟರ್‌ಟೈನಿಂಗ್ ಚಿತ್ರ ಕೊಟ್ಟಿದ್ದಂತೂ ಸತ್ಯ. ಚಿತ್ರದ ಕಮರ್ಷಿಯಲ್ ಯಶಸ್ಸಿನ ಜೊತೆಗೆ ವಿಜಯ್ ನಟನೆ ಸಾಕಷ್ಟು ಮೆಚ್ಚುಗೆ ಪಡೆದಿತ್ತು.

'ಆಳಾದವನ್' (2001)-ಕಮಲ್ ಹಾಸನ್

ಸುರೇಶ್ ಕೃಷ್ಣ ನಿರ್ದೇಶನದ ಈ ಚಿತ್ರದ ಕತೆಯನ್ನೂ ಖುದ್ದು ಕಮಲ್ ಹಾಸನ್ ಬರೆದಿದ್ರು. ಬಾಲಿವುಡ್ ಬೆಡಗಿಯರಾದ ಮನೀಶಾ ಕೊಯಿರಾಲ ಮತ್ತು ರವೀನಾ ಟಂಡನ್ ಕಮಲ್‌ಗೆ ಸಾಥ್ ಕೊಟ್ಟ ಸಿನಿಮಾ ಇದು. ಅಮೆಜಾನ್ ಪ್ರೈಮ್ ವಿಡಿಯೋದಲ್ಲಿ ಈಗಲೂ ನೋಡಬಹುದಾದ ಈ ಚಿತ್ರ ಒಂದು ಸೈಕಾಲಾಜಿಕಲ್ ಆಕ್ಷನ್ ಥ್ರಿಲ್ಲರ್. ಹುಚ್ಚಾಸ್ಪತ್ರೆಯಿಂದ ತಪ್ಪಿಸಿಕೊಂಡ ಒಬ್ಬ ಮಾನಸಿಕ ಸಮಸ್ಯೆಯಿರುವ ವ್ಯಕ್ತಿಯ ಕತೆ ಈ ಚಿತ್ರದ ಮೂಲವಸ್ತು. ಕಮಲ್ ದ್ವಿಪಾತ್ರದಲ್ಲಿ ನಟಿಸಿರುವ ಈ ಚಿತ್ರದಲ್ಲಿ ಅವರ ಹೀರೋ ರೋಲ್ಗಿಂತ ವಿಲನ್ ರೋಲ್‌ಗೆ ಅಭಿಮಾನಿಗಳು ಹೆಚ್ಚು ಫಿದಾ ಆಗಿದ್ರು.

'ವಾಲಿ'- ಅಜಿತ್ ಕುಮಾರ್ (1999)

ವಾಲಿ ಎನ್ನುವ ಹೆಸರಲ್ಲೇ ಈ ಸಿನಿಮಾ ಕನ್ನಡದಲ್ಲೂ ರೀಮೆಕ್ ಆಗಿದ್ದು ನಿಮಗೆ ನೆನಪಿರಬಹುದು. ತಲಾ ಅಜಿತ್ ದ್ವಿಪಾತ್ರದಲ್ಲಿ ನಟಿಸಿರುವ ಈ ಚಿತ್ರದಲ್ಲಿ ನಾಯಕ ಎಷ್ಟು ಹ್ಯಾಂಡ್ಸಮ್ ಎನಿಸ್ತಾನೋ ಖಳನಟ ಅಜಿತ್ ಅಷ್ಟೇ ಕುತಂತ್ರಿ ಎನಿಸಿ ರೋಷ ಹುಟ್ಟಿಸುತ್ತಾನೆ. ಆ ವರ್ಷ ಅನೇಕ ಪ್ರಶಸ್ತಿ ಪುರಸ್ಕಾರಗಳನ್ನು ಈ ಚಿತ್ರ ಬಾಚಿಕೊಂಡಿತ್ತು.

Top south superstars who won in negative shade and proved themselves

ಇವರಿಷ್ಟೇ ಅಲ್ಲದೇ ಇನ್ನೂ ಅನೇಕ ದಕ್ಷಿಣ ಭಾರತದ ಸ್ಟಾರ್ ನಟರು ನೆಗೆಟಿವ್ ಶೇಡ್‌ಗಳಲ್ಲಿ ಗಮನ ಸೆಳೆಯುವ ಪಾತ್ರಗಳನ್ನು ನಿರ್ವಹಿಸಿ ಗೆದ್ದಿದ್ದಾರೆ. ತಮ್ಮ ನಟನಾ ಕೌಶಲ್ಯವನ್ನು ಒರೆಗೆ ಹಚ್ಚುವಂಥಾ ಪಾತ್ರಗಳಲ್ಲಿ ಕಾಣಿಸಿಕೊಂಡು ಸೈ ಎನಿಸಿಕೊಂಡಿದ್ದಾರೆ.

More from Filmibeat

English summary
Top 9 south superstars negative roles:
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X