ಉಮಾಶ್ರೀ to ಹರಿಪ್ರಿಯಾ: ಸಿನಿಮಾದಿಂದ ಕಿರುತೆರೆಯಲ್ಲಿ ಮಿಂಚುತ್ತಿರುವ ನಟಿಯರು ಇವರೇ!
ಕಿರುತೆರೆಯಿಂದ ಹಿರಿತೆರೆಗೆ ಬಂದ ನಟಿಯರ ದೊಡ್ಡ ಬಳಗವೇ ಇದೆ. ಹಿರಿಯ ನಟಿ ಉಮಾಶ್ರೀಯಿಂದ ಹಿಡಿದು ನಟಿ ಹರಿಪ್ರಿಯಾವರೆಗೂ ದೊಡ್ಡ ನಟಿಯರ ಬಳಗವೇ ಇದೆ. ಸಿನಿಮಾಗಳಲ್ಲಿ ಮಿಂಚಿರೋ ಈ ನಟಿಯರು ಕಿರುತೆರೆ ವೀಕ್ಷಕರ ಗಮನ ಸೆಳೆಯುತ್ತಿದ್ದಾರೆ. ಅಂತಹ ನಟಿಯರ ದೊಡ್ಡ ಪಟ್ಟಿಯೇ ಇದೆ.

ನಟಿ ಉಮಾಶ್ರೀ
ಕನ್ನಡ ಹಿರಿತೆರೆಯ ಮೇರು ನಟಿ ಉಮಾಶ್ರೀ ಅವರು ಇದೀಗ ಕಿರುತೆರೆಯಲ್ಲಿ ಬಹಳಷ್ಟು ಪಾಪ್ಯುಲಾರಿಟಿಯನ್ನು ಪಡೆಯುತ್ತಿದ್ದಾರೆ. 'ಪುಟ್ಟಕ್ಕನ ಮಕ್ಕಳು' ಎಂಬ ಧಾರಾವಾಹಿ ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿದ್ದು, ನಟಿ ಉಮಾಶ್ರೀ ಅವರು ಪುಟ್ಟಕ್ಕ ಎಂಬ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಈಕೆ 400ಕ್ಕೂ ಹೆಚ್ಚು ಕನ್ನಡ ಸಿನಿಮಾಗಳಲ್ಲಿ ನಟಿಸಿದ್ದು ಇದೀಗ ಕಿರುತೆರೆಗೆ ಬಂದಿರುವುದು ಕಿರುತೆರೆ ಪ್ರೇಕ್ಷಕರಿಗಂತು ಬಹಳ ಸಂತಸದ ವಿಚಾರವಾಗಿದೆ.

ನಟಿ ವಿನಯ ಪ್ರಸಾದ್
ಕಿರುತೆರೆಯ ಸೂಪರ್ ಹಿಟ್ ನಟಿಯರಲ್ಲಿ ಒಬ್ಬರಾದ ನಟಿ ವಿನಯ ಪ್ರಸಾದ್ ಅವರು ಕನ್ನಡ ತೆಲುಗು ತಮಿಳು ಮಲಯಾಳಂ ಸೇರಿದಂತೆ ಹಲವು ಭಾಷೆಗಳಲ್ಲಿ ನಟಿಸಿ ಬಹುಭಾಷಾ ತಾರೆ ಎನಿಸಿಕೊಂಡವರು. 'ಪಾರು' ಎಂಬ ಧಾರವಾಹಿ ಮೂಲಕ ಕಿರುತೆರೆಯಲ್ಲಿ ಜನಪ್ರಿಯತೆ ಗಿಟ್ಟಿಸಿಕೊಂಡಿರುವ ಈಕೆ ತಮ್ಮ ನಟನೆ ಹಾಗೂ ಗಾಂಭೀರ್ಯದ ಮೂಲಕ ಕಿರುತೆರೆ ಪ್ರೇಕ್ಷಕರ ಮನಗೆದ್ದರು.

ನಟಿ ಶ್ವೇತಾ
ಮೂಲತಃ ತಮಿಳನಾಡಿನ ನಟಿಯಾದ ಹಲವು ಕನ್ನಡ ಸಿನಿಮಾಗಳಲ್ಲಿ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ. ಲಕ್ಷ್ಮಿ ಮಹಾಲಕ್ಷ್ಮಿ ಸಿನಿಮಾ ಸೇರಿದಂತೆ ಕನ್ನಡದ ನಾಲ್ಕೈದು ಚಿತ್ರಗಳಲ್ಲಿ ನಾಯಕ ನಟಿಯಾಗಿ ನಟಿಸಿರುವ ಶ್ವೇತಾ, ನಂತರ ವೈಯಕ್ತಿಕ ಜೀವನದಲ್ಲಿ ಬಿಸಿಯಾಗಿದ್ದರು. ಇದೀಗ 'ಲಕ್ಷ್ಮಿ ನಿವಾಸ' ಎಂಬ ಧಾರಾವಾಹಿಯ ಮೂಲಕ ಮತ್ತೆ ನಟನೆಗೆ ವಾಪಸ್ ಆಗಿದ್ದು, ಕಿರುತೆರೆಯಲ್ಲಿ ಕಾಣಿಸಿಕೊಂಡಿದ್ದಾರೆ. ಲಕ್ಷ್ಮಿ ಎಂಬ ಇವರ ಪಾತ್ರ ಬಹಳಷ್ಟು ಪಾಪ್ಯುಲಾರಿಟಿ ಗಳಿಸಿದ್ದು ಜನಮನ ಗೆದ್ದಿದೆ.

ನಟಿ ಹೇಮಾ ಪ್ರಭಾತ್
ನಟಿ ಹೇಮಾ ಪ್ರಭಾತ್ ಅವರು 'ಅಮೆರಿಕ ಅಮೆರಿಕ' ಸಿನಿಮಾ ಮೂಲಕ ಸಿನಿಪ್ರಿಯರಿಗೆ ಚೆನ್ನಾಗಿ ಪರಿಚಯ. ಹೇಮಾ ಪಂಚಮುಖಿ ಎಂದೇ ಹೆಸರಿರುವ ಈಕೆ 'ಬಂಗಾರದ ಮನೆ' ಎಂಬ ಸಿನಿಮಾದಲ್ಲೂ ಕಾಣಿಸಿಕೊಂಡ ಈಕೆ ನಂತರ ಹೆಚ್ಚಾಗಿ ಯಾವುದೇ ಸಿನಿಮಾದಲ್ಲೂ ಕಂಡು ಬರಲಿಲ್ಲ. ಇದೀಗ ಮತ್ತೆ ನಟನೆಗೆ ವಾಪಸ್ ಆಗಿರುವ ನಟಿ ಹೇಮಾ ಪ್ರಭಾತ್ 'ಕರಿಮಣಿ' ಎಂಬ ಧಾರಾವಾಹಿ ಮೂಲಕ ಪ್ರಮುಖ ಪಾತ್ರ ಒಂದರಲ್ಲಿ ಕಾಣಿಸಿಕೊಂಡಿದ್ದಾರೆ.

ನಟಿ ಹರಿಪ್ರಿಯ
'ಉಗ್ರಂ' ಸಿನಿಮಾ ಮೂಲಕ ಜನಪ್ರಿಯತೆ ಹೆಚ್ಚಿಸಿಕೊಂಡ ನಟಿ ಹರಿಪ್ರಿಯ ನಟಿಯಾಗಿ ಕನ್ನಡ ಹಿರಿತೆರೆಯಲ್ಲಿ ಬಹಳಷ್ಟು ಕಾಲ ಮಿಂಚಿದವರು. 'ಬೆಲ್ ಬಾಟಮ್', 'ಪೆಟ್ರೋಮ್ಯಾಕ್ಸ್', 'ನೀರ್ ದೋಸೆ', 'ಭರ್ಜರಿ' ಸೇರಿದಂತೆ ಹಲವು ಸಿನಿಮಾಗಳಲ್ಲಿ ನಟಿಸಿರುವ ಈಕೆ ಕನ್ನಡ ಹಾಗೂ ತೆಲುಗು ಚಿತ್ರರಂಗದಲ್ಲಿ ಬಹಳಷ್ಟು ಖ್ಯಾತಿಯನ್ನು ಪಡೆದಿದ್ದಾರೆ. ಇತ್ತೀಚೆಗಷ್ಟೇ ನಟ ವಸಿಷ್ಟ ಸಿಂಹ ಅವರನ್ನು ಮದುವೆಯಾದ ಈಕೆ ಅತಿಥಿ ಪಾತ್ರದ ಮೂಲಕ ಕಿರುತೆರೆಗೆ ಕಾಲಿಟ್ಟಿರುವುದು ಅಚ್ಚರಿಯ ವಿಚಾರ.


Click it and Unblock the Notifications











