"ಓ ನಲ್ಲ.. ಕರಿಮಣಿ ಮಾಲೀಕ.. ಕರಿ Money ಮಾಲೀಕ" ಅಂತ ಟ್ರೋಲ್ ಆಗ್ತಿರೋದ್ಯಾಕೆ?

ರಿಯಲ್ ಸ್ಟಾರ್ ಅಭಿನಯದ 'ಉಪೇಂದ್ರ' ಸಿನಿಮಾ ರಿಲೀಸ್ ಆಗಿ ಹೆಚ್ಚು ಕಡಿಮೆ 25 ವರ್ಷಗಳಾಗಿವೆ. ಈ ಹೊತ್ತಲ್ಲಿ ಅದೇ ಸಿನಿಮಾ "ಏನಿಲ್ಲ ಏನಿಲ್ಲ.." ಅನ್ನೋ ಹಾಡು ಸೋಶಿಯಲ್ ಮೀಡಿಯಾದಲ್ಲಿ ಟ್ರೇಂಡ್ ಆಗುತ್ತಿದೆ. ಕಳೆದ ಕೆಲವು ದಿನಗಳಿಂದ ಈ ಹಾಡಿನ ಬಗ್ಗೆ ಒಂದಲ್ಲ ಒಂದು ವಿಷಯ ಹೊರಬರುತ್ತಲೇ ಇದೆ. ಇಷ್ಟು ದಿನ ಈ ಹಾಡಿನ ಮೇಲೆ ರೀಲ್ಸ್ ಮಾಡಿದ್ರೆ, ಈ ಟ್ರೋಲ್ ಮಾಡೋರ ಜಮಾನ ಶುರುವಾಗಿದೆ.

'ಉಪೇಂದ್ರ' ಸಿನಿಮಾದ "ಓ ನಲ್ಲ.." ಹಾಡು ಇಷ್ಟೊಂದು ಟ್ರೆಂಡಿಂಗ್‌ನಲ್ಲಿ ಇರೋದಕ್ಕೆ ಕಾರಣ ಕಲ್ಯಾಣ ಕರ್ನಾಟಕ ಭಾಗದ ಯುವ ಪ್ರತಿಭೆ ಕನಕ. ಇನ್‌ಸ್ಟಾಗ್ರಾಂನಲ್ಲಿ ಈ ಹಾಡನ್ನು ಇಟ್ಟುಕೊಂಡು ರೀಲ್ ಮಾಡಿ ಹಾಕಿದ್ದೇ ತಡ ಸಿಕ್ಕಾಪಟ್ಟೆ ವೈರಲ್ ಆಗಿದೆ. ಎಷ್ಟೋ ಲಕ್ಷ ಮಂದಿ ಇದೇ ಹಾಡನ್ನು ಇಟ್ಕೊಂಡು ವಿಭಿನ್ನವಾಗಿ ರೀಲ್ಸ್ ಮಾಡಿ ಹಾಕಿದ್ದರು.

Upendra Movie O Nalla song become hot topic for Trolles Do you know why?

ಈಗ ರೀಲ್ಸ್ ಮಾಡಿ ವೈರಲ್ ಆಗುತ್ತಿದ್ದಂತೆ ಟ್ರೋಲಿಗರು ಅಖಾಡಕ್ಕೆ ಇಳಿದಿದ್ದಾರೆ. ಮಜವಾದ ಟ್ರೋಲ್‌ಗಳನ್ನು ಮಾಡುವುದಕ್ಕೆ ಶುರು ಮಾಡಿದ್ದಾರೆ. ತಮ್ಮ ಟ್ಯಾಲೆಂಟ್ ಬಳಿಕ ಸಖತ್ ಆಗಿ ಟ್ರೋಲ್ ಮಾಡುತ್ತಿದ್ದಾರೆ. ಈ ಟ್ರೋಲ್‌ಗಳು ಈಗ ಸೋಶಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ಫೇಮಸ್ ಆಗುತ್ತಿವೆ. ಇವು ಕೂಡ ವೈರಲ್ ಆಗುವುದಕ್ಕೆ ಶುರುವಾಗಿವೆ.

ಇತ್ತೀಚೆಗೆ ಇನ್‌ಸ್ಟಾಗ್ರಾಂನಲ್ಲಿ ಟ್ರೋಲ್‌ ಪೇಜ್‌ಗಳಲ್ಲಿ ಓ.. ನಲ್ಲ ಹಾಡನ್ನು ಬಳಸಿಕೊಂಡು ಕ್ರಿಯೆಟಿವ್ ಆಗಿ ಟ್ರೋಲ್‌ಗಳನ್ನು ಮಾಡುತ್ತಿದ್ದಾರೆ. ಟ್ರೋಲ್‌ ಅಣ್ತಮ್ಮಾಸ್ ಪೇಜ್‌ನಲ್ಲಿ ಇದೇ ಹಾಡನ್ನು ಹೀಗೆ ಟ್ರೋಲ್ ಮಾಡಲಾಗಿದೆ. "ಐಟಿ ರೇಡ್ ಆಗಿ ದುಡ್ಡು ಸಿಕ್ಕಿದಾಗ ಒಂದು ಮಾತು ಹೇಳ್ತಾರೆ ಮಗ.. ಏನ್ ಅಂತಲೇ.. ಓ ನಲ್ಲ.. ನಾನಲ್ಲ.. ಕರಿ Money ಮಾಲೀಕ ನಾನಲ್ಲ" ಎಂದು ಬರೆದು ಟ್ರೋಲ್ ಮಾಡಲಾಗುತ್ತಿದೆ. ಇದು ಪೋಸ್ಟ್ ಆಗುತ್ತಿದ್ದಂತೆ ನೆಟ್ಟಿಗರು ಖುಷಿ ಖುಷಿಯಾಗಿ ಕಮೆಂಟ್ ಮಾಡುತ್ತಿದ್ದಾರೆ.

"ಓ ನಲ್ಲ ಕರಿ Money ಮಾಲೀಕ ನಾನಲ್ಲ" ಅನ್ನೋ ಟ್ರೋಲ್‌ಗೆ ಮೆಚ್ಚುಗೆ ವ್ಯಕ್ತವಾಗುತ್ತಿದೆ. "ಹಿಂಗೂ ಯೋಚಿಸಬಹುದು ಅಂತ, ಮೆಚ್ಚಲೇ ಬೇಕು ನಿಮ್ಮನ್ನ" , "ಕ್ರಿಯೆಟಿವಿಟಿ ಅಧಿಪತಿಗೆ ನೀನೇ ಕಣೋ ನಲ್ಲ" ಅಂತೆಲ್ಲ ಇನ್‌ಸ್ಟಾಗ್ರಾಂ ಪೇಜ್‌ನಲ್ಲಿ ಕಮೆಂಟ್ ಮಾಡುತ್ತಿದ್ದಾರೆ.

Upendra Movie O Nalla song become hot topic for Trolles Do you know why?

'ಉಪೇಂದ್ರ' ಸಿನಿಮಾದ "ಓ ನಲ್ಲ.. ಏನಿಲ್ಲ" ಹಾಡು ಸದ್ಯ ಸೋಶಿಯಲ್ ಮೀಡಿಯಾದಲ್ಲಿ ಟ್ರೆಂಡಿಂಗ್‌ನಲ್ಲಿದೆ. ತಮ್ಮ ಟ್ಯಾಲೆಂಟ್ ಬಳಸಿ ಈ ಹಾಡಿಗೆ ಹೊಸ ಮೆರುಗು ನೀಡುತ್ತಿದ್ದಾರೆ. ಈ ಹಾಡಿಗೆ ಟ್ಯೂನ್ ಹಾಕಿದ ಗುರುಕಿರಣ್ ಕೂಡ 25 ವರ್ಷಗಳ ಬಳಿಕ ಈ ಹಾಡಿಗೆ ಕ್ರೇಜ್ ಹೆಚ್ಚಾಗಿದ್ದರ ಬಗ್ಗೆ ಹರ್ಷ ವ್ಯಕ್ತಪಡಿಸಿದ್ದಾರೆ.

'ಉಪೇಂದ್ರ' ರಿಲೀಸ್ ಆದಾಗ ಈ ಸಿನಿಮಾದ "ಮಸ್ತ್ ಮಸ್ತ್ ಹುಡುಗಿ ಬಂದ್ಲು..", "ಓಳು ಬರೀ ಓಳು.." ಹಾಡು ತುಂಬಾನೇ ಫೇಮಸ್ ಆಗಿದ್ದವು. ಆದ್ರೀಗ ಸಿನಿಮಾ ರಿಲೀಸ್ ಆಗಿ 25 ವರ್ಷಗಳನ್ನು ಪೂರೈಸುತ್ತಿರುವ ಹೊತ್ತಲ್ಲೇ ರೀಲ್ಸ್ ಮೇಲೆ ರೀಲ್ಸ್ ಆಗುತ್ತಿದೆ. ಈಗ ಟ್ರೋಲ್ ಮಾಡೋರು ಕೂಡ ಕರಿಮಣಿ ಮಾಲೀಕನ ಹಿಂದೆ ಬಿದ್ದಿದ್ದಾರೆ.

More from Filmibeat

English summary
Upendra movie O Nalla Song become troll topic;
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X