ಏನಿಲ್ಲ.. ಏನಿಲ್ಲ..? ಅಂತಲೇ ಕರಿಮಣಿ ಮಾಲೀಕನನ್ನು ಹುಡುಕಿದ ವಿಕ್ಕಿಪೀಡಿಯಾ- ಬೆಳ್ಳುಳ್ಳಿ ಕಬಾಬ್ ಚಂದ್ರು!

ಸೋಶಿಯಲ್ ಮೀಡಿಯಾ ಜಮಾನದಲ್ಲಿ ದಿನಕ್ಕೆ ಒಬ್ಬ ಹೊಸ ಪ್ರತಿಭೆ ಹುಟ್ಟಿಕೊಳ್ಳುತ್ತಿದ್ದಾರೆ. ತಮ್ಮ ಪ್ರತಿಭೆಯಿಂದ ರಾತ್ರೋ ರಾತ್ರಿ ಫೇಮಸ್ ಆಗುತ್ತಿದ್ದಾರೆ. ಮಿಲಿಯನ್‌ ಗಟ್ಟಲೆ ಫಾಲೋವರ್ಸ್ ಇವರನ್ನು ಸೋಶಿಯಲ್ ಮೀಡಿಯಾಗಳಲ್ಲಿ ಅನುಸರಿಸುತ್ತಾರೆ. ಸದ್ಯಕ್ಕೀಗ ಸೋಶಿಯಲ್ ಮೀಡಿಯಾದಲ್ಲಿ ಉಪೇಂದ್ರ ಸಿನಿಮಾದ 'ಕರಿಮಣಿ ಮಾಲಿಕ ನೀನಲ್ಲ' ಹಾಡು ಟ್ರೆಂಡಿಂಗ್‌ನಲ್ಲಿದೆ.

ಸಾಮಾಜಿಕ ಮಾಧ್ಯಮದಲ್ಲಿ ಈ ಹಾಡನ್ನು ಇಟ್ಕೊಂಡು ಅದಕ್ಕೆ ಹೊಸ ರೂಪ ಕೊಟ್ಟು ಹೊಸ ಹೊಸ ವಿಡಿಯೋ ಅಪ್‌ಲೋಡ್ ಮಾಡುತ್ತಿದ್ದಾರೆ. ಇನ್‌ಸ್ಟಾಗ್ರಾಂ, ಟ್ವಿಟರ್ ಎಲ್ಲಾ ಕಡೆ ಸದ್ಯಕ್ಕೀಗ "ಕರಿಮಣಿ ಮಾಲೀಕ ನೀನಲ್ಲ.." ಹಾಡಿಗೆ ಮಾಡಿದ ರೀಲ್ಸ್ ಟ್ರೆಂಡಿಂಗ್‌ನಲ್ಲಿದೆ. ಸದ್ಯಕ್ಕೀಗ ಸೋಶಿಯಲ್ ಮೀಡಿಯಾ ಸ್ಟಾರ್‌ಗಳು ಕೂಡ ಇದೇ ಹಾಡಿನ ಹಿಂದೆ ಬಿದ್ದಿದ್ದಾರೆ.

Upendra Movie viral song vickypedia chandru found rahulla is Karimani Maalila

ಕನ್ನಡದ ಸೋಶಿಯಲ್ ಮೀಡಿಯಾ ಸ್ಟಾರ್ ವಿಕ್ಕಿಪೀಡಿಯಾ ಹಾಗೂ ಬೆಳ್ಳುಳ್ಳಿ ಕಬಾಬ್ ಖ್ಯಾತಿಯ ಚಂದ್ರು ಒಟ್ಟಿಗೆ ಸೇರಿಕೊಂಡಿದ್ದಾರೆ. ಇದೇ ಉಪೇಂದ್ರ ಸಿನಿಮಾದ "ಏನಿಲ್ಲ.. ಏನಿಲ್ಲ.. ಕರಿಮಣಿ ಮಾಲೀಕ" ನೀನಲ್ಲ ಹಾಡಿಗೆ ಹೊಸ ರೀಲ್ಸ್ ಮಾಡಿದ್ದಾರೆ. ಈ ರೀಲ್ಸ್ ಕೂಡ ಮಜವಾಗಿದ್ದು, ಇಬ್ಬರೂ ಸೇರಿಕೊಂಡು ಕರಿಮಣಿ ಮಾಲೀಕ ಯಾರು ಅಂತ ಹುಡುಕಿ ತೆಗಿದಿದ್ದಾರೆ.

ಇತ್ತೀಚೆಗೆ ಸೋಶಿಯಲ್‌ ಮೀಡಿಯಾದಲ್ಲಿ ಮೂವರು ಟ್ರೆಂಡಿಂಗ್‌ನಲ್ಲಿದ್ದಾರೆ. ಒಬ್ಬರು "ಏನಿಲ್ಲ.. ಏನಿಲ್ಲ" ಹಾಡಿಗೆ ರೀಲ್ಸ್ ಮಾಡಿದ ಕನಕ, ಇನ್ನೊಬ್ಬರು "ನಾನು ನಂದಿನಿ.." ಖ್ಯಾತಿಯ ವಿಕ್ಕಿಪೀಡಿಯಾ, ಮತ್ತೊಬ್ಬರು ಬೆಳ್ಳುಳ್ಳಿ ಕಬಾಬ್ ಚಂದ್ರು ಮತ್ತು ಅವರ ಸಹಾಯಕ ರಾಹುಲ್ಲಾ. ಇಷ್ಟೂ ಮಂದಿ ಸೇರಿ ಮತ್ತೊಂದು ವಿಡಿಯೋ ಮಾಡಿದ್ದು, ಅದರಲ್ಲಿ ಕರಿಮಣಿ ಮಾಲೀಕನನ್ನು ಯಾರ ಅನ್ನೋದನ್ನು ರಿವೀಲ್ ಮಾಡಿದ್ದಾರೆ.

ವಿಕ್ಕಿಪೀಡಿಯಾ ಹಾಗೂ ಬೆಳ್ಳಿ ಕಬಾಬ್ ಖ್ಯಾತಿಯ ಚಂದ್ರು ಒಟ್ಟಿಗೆ ಒಂದೇ ವಿಡಿಯೋದಲ್ಲಿ ಬಂದಿದ್ದು ನೆಟ್ಟಿಗರಿಗೆ ಕಿಕ್ ಕೊಟ್ಟಿದೆ. ಇವರಿಬ್ಬರೂ ಸೇರಿ ಮಾಡಿದ ರೀಲ್ಸ್ ಮಸ್ತ್ ಮಜಾ ಕೊಟ್ಟಿದೆ. ಇವರಿಬ್ಬರೂ ಕಂಟೆಂಟ್ ಕ್ರಿಯೇಟರ್‌ಗಳು ಒಟ್ಟಿಗೆ ಸೇರಿ ಮಾಡಿದ ವಿಡಿಯೋಗೆ ನೆಟ್ಟಿಗರಿಂದ ಮೆಚ್ಚುಗೆ ವ್ಯಕ್ತವಾಗುತ್ತಿದೆ. ಇಷ್ಟು ದಿನ "ಕರಿಮಣಿ ಮಾಲೀಕ ನೀನಲ್ಲ ಅಂತಲೇ ಕಂಟೆಂಟ್ ಕ್ರಿಯೇಟರ್‌ಗಳು ವಿಡಿಯೋ ಮಾಡುತ್ತಿದ್ದರು. ಆದ್ರೀಗ ಇವರಿಬ್ಬರೂ ಸೇರಿ ಕರಿಮಣಿ ಮಾಲೀಕ ಯಾರು ಅಂತ ಹುಡುಕಿ ತೆಗೆದಿದ್ದಾರೆ.

ಬೆಳ್ಳುಳ್ಳಿ ಕಬಾಬ್ ಚಂದ್ರು ಕರಿಮಣಿ ಮಾಲೀಕ ಯಾರು ಅಂತ ವಿಕ್ಕಿಪೀಡಿಯಾಗೆ ಕೇಳಿದಾಗ, ವಿಕ್ಕಿಪೀಡಿಯಾ ರಾಹುಲ್ಲ ಕಡೆಗೆ ಬೊಟ್ಟು ಮಾಡಿ ತೋರಿಸುತ್ತಾರೆ. ಬೆಳ್ಳುಳ್ಳಿ ಕಬಾಬ್ ಚಂದ್ರು ಸಹಾಯಕ ರಾಹುಲ್ಲಾ ಕೂಲಿಂಗ್ ಗ್ಲಾಸ್ ತೊಟ್ಟು ಕೂಲ್ ಆಗಿ ಹೆಜ್ಜೆ ಹಾಕುವ ವಿಡಿಯೋಗೆ ನೆಟ್ಟಿಗರು ನಕ್ಕು ನಕ್ಕು ಸುಸ್ತಾಗಿದ್ದಾರೆ. ಈ ಕ್ರಿಯೇಟಿವಿಟಿಗೆ ತಲೆದೂಗಿದ್ದಾರೆ.

"ಏನಿಲ್ಲ.. ಏನಿಲ್ಲ.." ಹಾಡು ವೈರಲ್ ಆದಲ್ಲಿಂದ ಹಲವು ಮಂದಿ ತಮ್ಮದೇ ಶೈಲಿಯಲ್ಲಿ ಕಂಟೆಂಟ್ ಕ್ರಿಯೇಟ್ ಮಾಡಿದ್ದಾರೆ. ಈ ವಿಡಿಯೋ ಕೂಡ ನೆಟ್ಟಿಗರ ಮೆಚ್ಚಿಗೆಗೆ ಪಾತ್ರವಾಗಿದ್ದು, "ಕೊನೆಗೂ ಕರಿಮಣಿ ಮಾಲೀಕ ಸಿಕ್ಕೇಬಿಟ್ಟ" ಅಂತ ನೆಟ್ಟಿಗರೊಬ್ಬರು ಕಮೆಂಟ್ ಮಾಡುತ್ತಿದ್ದಾರೆ. ಇನ್ನು ಕೆಲವರು ವಿಕ್ಕಿಪೀಡಿಯಾ ಕ್ರಿಯೇಟಿವಿಗೆ ಮೆಚ್ಚುಗೆ ಸೂಚಿಸಿದ್ದಾರೆ. ಒಟ್ಟಿನಲ್ಲಿ ಇನ್ನೇನಿಲ್ಲ ಅಂದುಕೊಳ್ಳುವಾಗಲೇ "ಕರಿಮಣಿ ಮಾಲೀಕ"ನ ಮತ್ತೊಂದು ವರ್ಷನ್ ವೈರಲ್ ಆಗುತ್ತಿದೆ.

More from Filmibeat

English summary
Vickypedia and Chandru says in viral video that Karimani Malika is Rahulla.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X