'ಅಂಕಲ್' ಲೋಕನಾಥ್ ಕುಟುಂಬ ಸೀರೆ ವ್ಯಾಪಾರ ಮಾಡುತ್ತಿದ್ದರು ಅನ್ನೋದು ಗೊತ್ತೇ? ಆ ಅಂಗಡಿ ಎಲ್ಲಿ?

ಇವರು ಕನ್ನಡ ಚಿತ್ರರಂಗದಲ್ಲಿ ಅಂಕಲ್ ಲೋಕನಾಥ್, ಉಪ್ಪಿನಕಾಯಿ ಲೋಕನಾಥ್ ಅಂತಲೇ ಚಿರಪರಿಚಿತರು. ಹಾಗಂತ ಇವರು ಉಪ್ಪಿನಕಾಯಿ ವ್ಯಾಪಾರ ಮಾಡುತ್ತಿದ್ದರು ಅಂತಲ್ಲ. 'ಬೂತಯ್ಯನ ಮಗ ಅಯ್ಯು' ಸಿನಿಮಾದಲ್ಲಿ ಇವರ ನಟಿಸಿದ ಉಪ್ಪಿನಕಾಯಿ ದೃಶ್ಯ ನಿಮಗೆ ನೆನಪಿರಬಹುದು. ಆ ಪಾತ್ರದಲ್ಲಿ ನಟಿಸಿದ ಬಳಿಕ ಅವರನ್ನು ಉಪ್ಪಿನಕಾಯಿ ಲೋಕನಾಥ್ ಅಂತಲೇ ಕರೆಯಲಾರಂಭಿಸಿದರು.

ಲೋಕನಾಥ್ ಚಿತ್ರರಂಗಕ್ಕೆ ಎಂಟ್ರಿ ಕೊಟ್ಟಿದ್ದು 41ನೇ ವಯಸ್ಸಿಗೆ. ಅದಾಗಲೇ ಐತಿಹಾಸಿಕ ಸಿನಿಮಾಗಳ ಜಮಾನ ಮುಗಿದು, ಸಾಮಾಜಿಕ ಸಿನಿಮಾಗಳ ಕಾಲ ಶುರುವಾಗಿತ್ತು. ಹೀಗಾಗಿ ಹೆಚ್ಚಾಗಿ ಪೋಷಕ ಪಾತ್ರಗಳಲ್ಲಿ ನಟಿಸುವ ಅವಕಾಶ ಸಿಕ್ಕಿತ್ತು.

Veteran Kannada actor Loknath own saree business in Chickpet Bengaluru before entering film

ಅಂಕಲ್ ಲೋಕನಾಥ್ ವರನಟ ಡಾ.ರಾಜ್‌ಕುಮಾರ್ ಅವರೊಂದಿಗೆ ಸುಮಾರು 10 ಕ್ಕೂ ಹೆಚ್ಚು ಸಿನಿಮಾಗಳಲ್ಲಿ ನಟಿಸಿದ್ದಾರೆ. ಹಾಗೇ ವಿಷ್ಣುವರ್ಧನ್ ಸೇರಿದಂತೆ ಕನ್ನಡದ ದಿಗ್ಗಜರೊಂದಿಗೆ ಸಾಕಷ್ಟು ಸಿನಿಮಾಗಳಲ್ಲಿ ಕಾಣಿಸಿಕೊಂಡಿದ್ದಾರೆ. ಸುಮಾರು 650ಕ್ಕೂ ಅಧಿಕ ಚಿತ್ರಮಂದಿರಗಳಲ್ಲಿ ನಟಿಸಿರುವ ಲೋಕನಾಥ್ ಚಿತ್ರರಂಗಕ್ಕೆ ಕಾಲಿಡುವುದಕ್ಕೂ ಮುನ್ನ ಪ್ರಿನ್ಸಿಪಾಲರಾಗಿ ಕೆಲಸ ಮಾಡುತ್ತಿದ್ದರು. ಆದರೆ, ಲೋಕನಾಥ್‌ ಕುಟುಂಬ ಕುಲ ಕಸುಬು ಸೀರೆ ವ್ಯಾಪಾರ ಆಗಿತ್ತು.

ಲೋಕನಾಥ್ ಅವರ ಕುಟುಂಬ ಬೆಂಗಳೂರಿನ ಚಿಕ್ಕಪೇಟೆಯಲ್ಲಿ ಸೀರೆ ವ್ಯಾಪಾರ ಮಾಡುತ್ತಿತ್ತು. ಆ ವೃತ್ತಿ ಹಾಗೇ 2000 ಇಸವಿಯವರೆಗೂ ಇವರ ಕುಟುಂಬ ಮುಂದುವರೆಸಿಕೊಂಡು ಬಂದಿದ್ದರು. ಲೋಕನಾಥ್ ಅವರಿಗೆ ನಾಟಕಗಳಲ್ಲಿ ಆಸಕ್ತಿ ಬೆಳೆದಿದ್ದರಿಂದ ನಟನೆಯ ಕಡೆ ವಾಲಿದರು. ಹಾಗೇ ಲೋಕನಾಥ್ ಅವರು ಪ್ರಿನ್ಸಿಪಾಲ್‌ ಆಗಿಯೂ ಕೆಲಸ ಮಾಡುತ್ತಿದ್ದರು. ಇವರನ್ನು ಹತ್ತಿರದಿಂದ ನೋಡಿದ ಹಿರಿಯ ಪತ್ರಕರ್ತ ಹರಿಹರಪುರ ಮಂಜುನಾಥ್ ಸಾಕಷ್ಟು ಮಾಹಿತಿಯನ್ನು ಟೋಟಲ್ ಕನ್ನಡ ಯೂಟ್ಯೂಬ್ ಚಾನೆಲ್‌ನಲ್ಲಿ ಹಂಚಿಕೊಂಡಿದ್ದಾರೆ.

Veteran Kannada actor Loknath own saree business in Chickpet Bengaluru before entering film

"ಬೆಂಗಳೂರು ಇನ್‌ಸ್ಟಿಟ್ಯೂಟ್ ಆಫ್ ಕಾಮರ್ಸ್‌ನಲ್ಲಿ ಅವರು ಪ್ರಿನ್ಸಿಪಾಲ್ ಆಗಿದ್ದಾಗ, ಒಂದು ವಾರ್ಷಿಕೋತ್ಸವದಲ್ಲಿ ನಾಟಕವನ್ನು ಪ್ರದರ್ಶನ ಮಾಡುತ್ತಾರೆ. ಅದರಲ್ಲಿ ಅಭಿನಯಿಸಬೇಕು ಅಂತ ಕೆಲವರು ಪಟ್ಟು ಹಿಡಿದಿದ್ದರಿಂದ ರಂಗ ಪ್ರವೇಶವನ್ನು ಮಾಡಬೇಕಾಗುತ್ತೆ. ಇಲ್ಲಿಂದ ಆಸಕ್ತಿ ಬೆಳೆದು ಮುಂದೆ ಅವರು ಅನೇಕ ತಂಡಗಳಲ್ಲಿ ನಾಟಕಗಳನ್ನು ಮಾಡುತ್ತಾ ಹೋಗುತ್ತಾರೆ." ಎನ್ನುತ್ತಾರೆ ಹರಿಹರಪುರ ಮಂಜುನಾಥ್.

1960-70ರ ದಶಕದಲ್ಲಿ ಕನ್ನಡ ಹವ್ಯಾಸಿ ರಂಗಭೂಮಿಗೆ ಸುವರ್ಣಯುಗ. ಈ ಸಮಯದಲ್ಲಿ ಸಾಕಷ್ಟು ನಾಟಕಗಳಲ್ಲಿ ನಟಿಸುತ್ತಾರೆ. ನಾಟಕಗಳಲ್ಲಿ ತೊಡಗಿಸಿಕೊಂಡಿದ್ದರಿಂದ ಗಿರೀಶ್ ಕಾರ್ನಾಡ್ ಅವರಿಂದ 'ಸಂಸ್ಕಾರ' ಸಿನಿಮಾದಲ್ಲಿ ನಟಿಸುವ ಅವಕಾಶ ಸಿಕ್ಕಿತ್ತು. ಇದೇ ಸಮಯದಲ್ಲಿ ಪುಟ್ಟಣ್ಣ ಕಣಗಾಲ್ ಅವರ 'ಗೆಜ್ಜೆಪೂಜೆ' ಚಿತ್ರದಲ್ಲಿಯೂ ಪ್ರಮುಖ ಪಾತ್ರದಲ್ಲಿ ನಟಿಸುತ್ತಾರೆ.

ಲೋಕನಾಥ್ ಸಿನಿಮಾವನ್ನೇ ನಂಬಿಕೊಂಡವರಲ್ಲ. ಇವರ ಕುಟುಂಬ ಜವಳಿ ವ್ಯಾಪಾರ ಮಾಡುತ್ತಿದ್ದರು. ಹಾಗೇ ಲೋಕನಾಥ್ ಅವರೇ ಒಂದು ಉದ್ಯಮವನ್ನು ಕಟ್ಟಿಕೊಂಡಿದ್ದರು. ಉದ್ಯಮದ ಜೊತೆ ಜೊತೆಗೆ ಸಿನಿಮಾದಲ್ಲಿಯೂ ನಟಿಸುತ್ತಿದ್ದರು.

"ಪ್ರಜಾವಾಣಿಗಾಗಿ ವೈಕುಂಠರಾಜು ಅವರು ಲೋಕನಾಥ್ ಸಂದರ್ಶನ ಮಾಡಿದಾಗ ಒಂದು ಪ್ರಶ್ನೆಯನ್ನು ಕೇಳುತ್ತಾರೆ. ಏನು ನೀವು ಎಲ್ಲಾ ಸಿನಿಮಾಗಳಲ್ಲೂ ಮಾವನ ಪಾತ್ರ, ಅಪ್ಪನ ಪಾತ್ರವನ್ನೇ ವಹಿಸುತ್ತೀರ ಅಂತ. ಅದಕ್ಕೆ ಲೋಕನಾಥ್ ಅವರು ಹೇಳುತ್ತಾರೆ. ಆ ರೀತಿ ಏನೂ ಇಲ್ಲ. ನಾನು ಒಂದು ತುಂಬು ಕುಟುಂಬದಿಂದ ಬಂದವನು. ಸುಮಾರು 40 ಜನರು ಇದ್ದಂತಹ ಒಂದು ಕುಟುಂಬ. ನಮ್ಮದು ಸೀರೆ ವ್ಯಾಪಾರ ಮಾಡುತ್ತಿದ್ದ ಕುಟುಂಬ. ನಮ್ಮ ಕುಟುಂಬದ ಜವಳಿ ಅಂಗಡಿ, ಮಾರುತಿ ಹಾಲ್ 2000 ಇಸವಿಯವರೆಗೂ ಚಿಕ್ಕಪೇಟೆಯಲ್ಲಿ ಇತ್ತು. ಅದರ ಪ್ರಸ್ತಾಪವನ್ನು ಅಲ್ಲಿ ಮಾಡುತ್ತಾರೆ" ಎಂದು ಹರಿಹರಪುರ ಮಂಜುನಾಥ್ ಮಾಹಿತಿ ನೀಡುತ್ತಾರೆ.

More from Filmibeat

English summary
Veteran Kannada actor Loknath own saree business in Chickpet Bengaluru before entering film:
Read more about: actor filmibeat news
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X