ಸರೋಜಾ ದೇವಿ ಕನ್ನಡದ ನಂ 1 ಶ್ರೀಮಂತ ನಟಿ? ಇವರ ಬಳಿ ಇದ್ದ ಆಸ್ತಿ ಮೌಲ್ಯ ಎಷ್ಟು ಗೊತ್ತೇ?

ಸರೋಜಾ ದೇವಿ ಕನ್ನಡ ಚಿತ್ರರಂಗದ ಹೆಮ್ಮೆ. ಕನ್ನಡಿಗರಾಗಿಯೂ ಪರಭಾಷೆಯಲ್ಲೂ ಮಿಂಚಿದ ನಟಿಯೀಕೆ. 70ರ ದಶಕದಲ್ಲಿಯೇ ಸೂಪರ್‌ಸ್ಟಾರ್ ಪಟ್ಟಕ್ಕೇರಿದ ನಟಿಯೀಕೆ. ಸರೋಜಾ ದೇವಿಯವರಿಗೆ ಆರಂಭದಲ್ಲಿ ಸಿನಿಮಾದಲ್ಲಿ ನಟಿಸುವುದಕ್ಕೆ ಇಷ್ಟವಿರಲಿಲ್ಲ. ಆಗಿನ್ನೂ ಇವರಿಗೆ ಚಿಕ್ಕ ವಯಸ್ಸು. ಸಿನಿಮಾ ಬಗ್ಗೆ ಅಷ್ಟೊಂದು ಜ್ಞಾನವೂ ಇರಲಿಲ್ಲ. ಆದರೆ, ಆ ಸಮಯದಲ್ಲಿ ಇವರ ಬೆನ್ನೆಲುಬಾಗಿ ನಿಂತಿದ್ದು ಇವರ ಅಮ್ಮ.

ಮಗಳಿಗೆ ಸಿನಿಮಾದಲ್ಲಿ ಅವಕಾಶಗಳು ಹುಡುಕಿಕೊಂಡು ಬರುತ್ತಿತ್ತು. ಹೀಗಾಗಿ ಸರೋಜಾ ದೇವಿಯವರಿಗೆ ಸಿನಿಮಾದಲ್ಲಿ ನಟಿಸಲು ಪ್ರೋತ್ಸಾಹ ನೀಡಿದ್ದರು. ಅಂದು ಸಂಭಾವನೆ ಕಮ್ಮಿ ಸಿಕ್ಕರೂ ಅದರನ್ನು ಸಮಯೋಚಿತವಾಗಿ ಹೂಡಿಕೆ ಮಾಡಿದ್ದರು. ದುಡಿದ ಹಣವನ್ನೆಲ್ಲಾ ಚಿನ್ನ ಅಥವಾ ಪ್ರಾಪರ್ಟಿ ಮೇಲೆ ಹಾಕಿದ್ದರು. ಅದೇ ಈಗ ಕೋಟಿಗಳ ಲೆಕ್ಕದಲ್ಲಿ ಬೆಲೆಬಾಳುತ್ತಿದೆ.

Veteran Saroja Devi was most richest actress in Kannada film industry and her property worth is Rs 500 Crore

ಸರೋಜಾ ದೇವಿಯವರನ್ನು ಹತ್ತಿರದಿಂದ ನೋಡಿರುವ ಹಿರಿಯ ಪತ್ರಕರ್ತ ಕೆ ಜೆ ಕುಮಾರ್ ಅವರೂ ಇದೇ ಮಾತನ್ನು ಫಿಲ್ಮಿಬೀಟ್ ಕನ್ನಡದ ಜೊತೆನೂ ಹಂಚಿಕೊಂಡಿದ್ದಾರೆ. ಸುಮಾರು ಐದು ದಶಕಗಳಿಂದ ಪತ್ರಿಕೋದ್ಯಮದಲ್ಲಿರುವ ಕೆ ಜೆ ಕುಮಾರ್ ಅವರು ಸರೋಜಾ ದೇವಿಯವರ ಪ್ರಾಪರ್ಟಿ ಬಗ್ಗೆ ಕೆಲವು ಇಂಟ್ರೆಸ್ಟಿಂಗ್ ವಿಷಯಗಳನ್ನು ಹಂಚಿಕೊಂಡಿದ್ದಾರೆ.

"ಸರೋಜಾ ದೇವಿಯವರನ್ನು ಇಂಡಸ್ಟ್ರಿಗೆ ಕಾಳಿದಾಸ ಎನ್ನುವ ಸಿನಿಮಾದ ಮೂಲಕ ಪರಿಚಯ ಮಾಡಿಸಿದವರು ಹೊನ್ನಪ್ಪ ಭಾಗವತರ್. ಅವರ ಅಮ್ಮ ರುದ್ರಮ್ಮ ಅಷ್ಟೊತ್ತಿಗಾಗಲೇ ಮದ್ರಾಸ್‌ಗೆ ಕರೆದುಕೊಂಡು ಹೋದರು. ಹೇಗೋ ಅವರಿಗೆ ಎಂ.ಜಿ.ರಾಮಚಂದ್ರನ್ ಅವರ ಸಂಪರ್ಕ ಸಿಕ್ಕಿತು. ಎಂ.ಜಿ.ರಾಮಚಂದ್ರನ್ ಸಿನಿಮಾದಲ್ಲಿ ಬಹಳ ದೊಡ್ಡ ಮಟ್ಟಕ್ಕೆ ಬೆಳೆದರು. ಆಗಿನ ಕಾಲಕ್ಕೆ ಅವರ ಅಮ್ಮನಿಗೆ ಬಹಳ ಮುಂದಾಲೋಚನೆ ಇತ್ತು. ಸಿನಿಮಾದಲ್ಲಿ ಎಲ್ಲವನ್ನೂ ಕಳೆದುಕೊಳ್ಳುತ್ತಾರೆ ಎಂದು ಅವರ ಸಂಪಾದನೆಯನ್ನ ಚಿನ್ನ ಹಾಗೂ ಆಸ್ತಿಯ ಮೇಲೆ ಹಾಕಿದರು. ಅಲ್ಲಿ ಹೂಡಿಕೆ ಮಾಡಿದರು." ಎನ್ನುತ್ತಾರೆ ಹಿರಿಯ ಪತ್ರಕರ್ತ ಕೆ ಜೆ ಕುಮಾರ್

Veteran Saroja Devi was most richest actress in Kannada film industry and her property worth is Rs 500 Crore

ಕೆ ಜೆ ಕುಮಾರ್ ಅವರ ಪ್ರಕಾರ, ಸರೋಜಾ ದೇವಿಯವರ ಮುಂದಾಲೋಚನೆ ಅವರನ್ನು ಶ್ರೀಮಂತ ನಟಿಯನ್ನಾಗಿ ಮಾಡಿತ್ತು. ಸರೋಜಾ ದೇವಿಯರ ಮುಂದೆ ಕನ್ನಡದ ಯಾವ ಹೀರೋನೂ ಇಲ್ಲಾ ಎನ್ನುತ್ತಾರೆ. "ಅವರಿಗೆ ರಾಮನಗರ ಜಿಲ್ಲೆಯಲ್ಲಿ 70 ಎಕರೆ ಜಮೀನು ಇದೆ. ಒಂದು ಎಕರೆ, ಇವತ್ತಿಗೆ ಕಮ್ಮಿ ಅಂದರೂ ಮೂರು ಕೋಟಿ ಆಗುತ್ತೆ. ಸದಾಶಿವನಗರದಲ್ಲಿ ಭವ್ಯವಾದ ಮನೆಯಿದೆ. ಮಲ್ಲೇಶ್ವರಂನಲ್ಲಿ ಭವ್ಯವಾದ ಮನೆಯಿದೆ. ನೆಲಮಂಗಲ ರಸ್ತೆಯಲ್ಲಿ ಮತ್ತೆ ಆಸ್ತಿಯಿದೆ. ಚಿನ್ನವನ್ನು ಒಂದು ಪೆಟ್ಟಿಗೆ ಹಾಕಿದರೂ ಖಾಲಿ ಆಗುವುದಿಲ್ಲ. ಅದು ಯಾವ ಮಟ್ಟಿಗೆ ಇತ್ತು ಅಂದರೆ, ಕಂಡವರ ಮಕ್ಕಳಿಗೆ ಚಿನ್ನವನ್ನು ಹಾಕಿ ಖುಷಿ ಪಡುತ್ತಿದ್ದರು. ಅದರಲ್ಲಿ ವಿಜಯಲಕ್ಷ್ಮಿ ಸಿಂಗ್ ಕೂಡ ಒಬ್ಬರು. ಇದು ಸತ್ಯ ನಾನೇ ನೋಡಿದ್ದೇನೆ." ಎನ್ನುತ್ತಾರೆ.

ಇನ್ನು ಹೆಚ್ಚು ಕಡಿಮೆ ಸರೋಜಾ ದೇವಿಯರ ಬಳಿ ಒಟ್ಟು ಆಸ್ತಿಯನ್ನು ಅಂದಾಜು ಹಾಕಿದ್ದಾರೆ. ಅಲ್ಲದೆ ಅವರು ಶಿಸ್ತಿನ ನಟಿ. ಸೀರೆ, ಒಡವೆ ಬಿಟ್ಟರೆ ಬೇರೆ ಆಸೆಯೇ ಇರಲಿಲ್ಲ ಎನ್ನುತ್ತಾರೆ ಹಿರಿಯ ಪತ್ರಕರ್ತ ಕೆ ಜೆ ಕುಮಾರ್. "500 ಕೋಟಿ ಆಸ್ತಿ ಅಂದರೆ ಎಲ್ಲರಿಗೂ ಆಶ್ಚರ್ಯ ಆಗಬಹುದು. ಆದರೆ, ಅವರನ್ನು ಹತ್ತಿರದಿಂದ ನೋಡಿದವರಿಗೆ 500 ಕೋಟಿ ಆಸ್ತಿ ಕಾಣಿಸುತ್ತೆ. ಇವರೊಬ್ಬರೇ ಇಷ್ಟೊಂದು ಆಸ್ತಿ ಇಟ್ಟುಕೊಂಡಿರುವುದು. ಯಾರೂ ಇಷ್ಟೊಂದನ್ನು ಇಟ್ಟುಕೊಂಡಿಲ್ಲ. ಆಗಿನ ಕಾಲದಲ್ಲಿ ಹೂಡಿಕೆ ಮಾಡಿ, ಇವತ್ತಿಗೆ ಶ್ರೀಮಂತೆಯಾಗಿದ್ದಾರೆ. ಸರೋಜಾ ದೇವಿಯರಿಗೆ ಸೀರೆ, ಒಡವೆ ಬಿಟ್ಟರೆ ಯಾವುದೇ ಹವ್ಯಾಸವಿಲ್ಲ."

ಆಗಿನ ಕಾಲಕ್ಕೆ ಸರೋಜಾದೇವಿಗೆ ಅವರ ಅಮ್ಮನೇ ಬೌನ್ಸರ್. ಈಗಿನವರ ಹಾಗೆ 10 ರಿಂದ 20 ಜನ ಬೌನ್ಸರ್‌ಗಳು ಇರುತ್ತಿರಲಿಲ್ಲ. ಬಿ.ಸರೋಜಾ ದೇವಿ ಪಕ್ಕದಲ್ಲಿ ಅವರ ಅಮ್ಮ ಇದ್ದಾರೆ ಅಂದರೆ, ಹತ್ತಿರವೂ ಯಾರೂ ಸುಳಿಯುತ್ತಿರಲಿಲ್ಲ. ಇವರೇ ಬೌನ್ಸರ್ ಆಗಿದ್ದರು. "ಆಗಿನ ಕಾಲಕ್ಕೆ ಬೌನ್ಸರ್ ಅನ್ನೋದು ಗೊತ್ತಿರಲಿಲ್ಲ. ಅದಕ್ಕೆ ಏನ್ರಿ ಪೈಲ್ವಾನ್ ತರ ಬರುತ್ತೀರಾ ಎಂದು ಹೇಳುತ್ತಿದ್ದೆ. ಸರೋಜಾದೇವಿಯವರ ಅಮ್ಮ ಮಗಳನ್ನು ಮದುವೆ ಮಾಡಬೇಕು ಅಂತ ಬಹಳ ಒದ್ದಾಡಿದರು. ಅದಾದ್ಮೇಲೆ ಶ್ರೀಹರ್ಷ ಎಂಬುವವರನ್ನು ಮದುವೆ ಮಾಡಿದರು. ಮದುವೆ ಮಾಡಿದ ಮೇಲೆ ಅವರನ್ನು ಅತೀಯಾಗಿ ಪ್ರೀತಿಸಿದರು. ಪತಿ ಕೂಡ ಸರೋಜಾ ದೇವಿಯವರ ಹಿನ್ನೆಲೆ, ಬದುಕನ್ನು ಪ್ರಶ್ನೆನೇ ಮಾಡಲಿಲ್ಲ. ಹಾಗಾಗಿ ಬಹಳ ಪ್ರೀತಿ ಮಾಡಿದರು. ಅವರ ಪತಿ ಮನೆಯಲ್ಲಿಯೇ ಸರೋಜಾದೇವಿಯವರ ಕೈಯಲ್ಲೇ ಪ್ರಾಣ ಬಿಟ್ಟರು." ಎಂದು ಹಿರಿಯ ನಟಿಯನ್ನು ನೆನಪಿಸಿಕೊಂಡಿದ್ದಾರೆ.

More from Filmibeat

English summary
Veteran Saroja Devi was most richest actress in Kannada film industry and her property worth is Rs.500 Crore;
Read more about: actress
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X