ಅಮಿತಾಭ್‌ಗೆ ₹4 ಕೋಟಿ ಐಷಾರಾಮಿ ಕಾರು ಕೊಟ್ಟಿದ್ದ ನಿರ್ದೇಶಕ: ವಿಷಯ ತಿಳಿದು ಅಮ್ಮ ಕೆನ್ನೆಗೆ ಬಾರಿಸಿದ್ದೇಕೆ?

ಬಾಲಿವುಡ್‌ನಲ್ಲಿ ಸೂಪರ್‌ ಹಿಟ್ ಸಿನಿಮಾಗಳನ್ನು ಕೊಟ್ಟ ಫಿಲ್ಮ್ ಮೇಕರ್ ವಿಧು ವಿನೋದ್ ಚೋಪ್ರಾ. ಹಿಂದಿ ಚಿತ್ರರಂಗದ ಸ್ಟಾರ್ ನಟರೊಂದಿಗೆ ವಿಧು ವಿನೋದ್ ಚೋಪ್ರಾ ಕೆಲಸ ಮಾಡಿದ್ದಾರೆ. ಇದೇ ಜನಪ್ರಿಯ ನಿರ್ದೇಶಕ ಬಾಲಿವುಡ್ ಲೆಜೆಂಡ್ ಅಮಿತಾಭ್ ಬಚ್ಚನ್‌ಗೆ ದುಬಾರಿ ಕಾರನ್ನು ಗಿಫ್ಟ್ ಮಾಡಿದ್ದರು. ಈ ವಿಷಯ ತಿಳಿದ ನಿರ್ದೇಶಕನ ಅಮ್ಮ ಕೆನ್ನೆಗೆ ಬಾರಿಸಿದ್ದರು.

ಅಮಿತಾಭ್ ಬಚ್ಚನ್ ಅಂತಹ ಮೇರು ನಟನಿಗೆ ಐಷಾರಾಮಿ ಕಾರನ್ನು ನೀಡಿದ್ದಕ್ಕೆ ವಿಧು ವಿನೋದ್ ಚೋಪ್ರಾ ಅವರ ತಾಯಿ ಕೋಪಗೊಂಡಿದ್ದರು. ಅಲ್ಲದೆ ಮಗನ ಕೆನ್ನೆಗೂ ಬಾರಿಸಿದ್ದರು. ಅಷ್ಟಕ್ಕೂ ಅಮಿತಾಭ್ ಬಚ್ಚನ್, ವಿಧು ವಿನೋದ್ ಚೋಪ್ರಾ ಹಾಗೂ ಅವರ ತಾಯಿ ನಡುವೆ ನಡೆದ ಆ ಘಟನೆ ಏನು? ಅನ್ನುವುದನ್ನು ತಿಳಿಯಲು ಮುಂದೆ ಓದಿ.

Vidhu Vinod Chopra mother slapped him for gifting Rs 4 crore car to Amitabh Bachchan

2007ರಲ್ಲಿ ಅಮಿತಾಭ್ ಬಚ್ಚನ್ ನಟಿಸಿದ 'ಏಕಲವ್ಯ' ಸಿನಿಮಾ ನಿರ್ಮಾಣದ ಜೊತೆಗೆ ನಿರ್ದೇಶನವನ್ನು ಮಾಡಿದ್ದರು. ಈ ಸಿನಿಮಾ ಮುಗಿದ ಬಳಿಕ ವಿಧು ವಿನೋದ್ ಚೋಪ್ರಾ ಐಷಾರಾಮಿ ರೋಲ್ಸ್ ರಾಯ್ಸ್ ಫಾಂಟಮ್ ಕಾರನ್ನು ಉಡುಗೊರೆಯಾಗಿ ಕೊಟ್ಟಿದ್ದರು. ಈ ಕಾರಿನ ಬೆಲೆ ಸುಮಾರು ನಾಲ್ಕು ಕೋಟಿ ರೂಪಾಯಿ ಆಗಿತ್ತು. ಈ ಬಗ್ಗೆ ಸಿದ್ಧಾರ್ಥ್ ಕನನ್ ಜೊತೆಗಿನ ಸಂದರ್ಶನದಲ್ಲಿ ವಿಧು ವಿನೋದ್ ಚೋಪ್ರಾ ಇಂಟ್ರೆಸ್ಟಿಂಗ್ ಸಂಗತಿಯನ್ನು ರಿವೀಲ್ ಮಾಡಿದ್ದಾರೆ.

ವಿಧು ವಿನೋದ್ ಚೋಪ್ರಾ ಇತ್ತೀಚೆಗೆ '12th ಫೇಲ್' ಅನ್ನುವ ಸಿನಿಮಾವನ್ನು ನಿರ್ದೇಶಿಸಿದ್ದಾರೆ. ಈ ಸಿನಿಮಾ ಕೂಡ ಬಾಕ್ಸಾಫೀಸ್‌ನಲ್ಲಿ ಸದ್ದು ಮಾಡಿತ್ತು. ಬಾಲಿವುಡ್‌ನಲ್ಲಿ ವಿಧು ವಿನೋದ್ ಚೋಪ್ರಾ ನಿರ್ದೇಶಿಸಿದ ಬಹುತೇಕ ಸಿನಿಮಾಗಳು ಗೆದ್ದಿವೆ. ಇಲ್ಲವೇ, ವಿಮರ್ಶಕರಿಂದ ಉತ್ತಮ ಪ್ರತಿಕ್ರಿಯೆಯನ್ನು ಪಡೆದುಕೊಂಡಿವೆ. ಇಂತಹ ಸಿನಿಮಾಗಳಲ್ಲಿ 2007ರಲ್ಲಿ ತೆರೆಕಂಡ 'ಏಕಲವ್ಯ' ಕೂಡ ಒಂದು.

ಇತ್ತೀಚೆಗೆ ಇದೇ ಸಿನಿಮಾದ ಚಿತ್ರೀಕರಣದ ವೇಳೆ ನಡೆದ ಘಟನೆಗಳನ್ನು ಹಂಚಿಕೊಂಡಿದ್ದಾರೆ. 'ಏಕಲವ್ಯ' ಸಿನಿಮಾವನ್ನು ಒಪ್ಪಿಕೊಳ್ಳುವುದಕ್ಕೂ ಮುನ್ನ ಅಮಿತಾಭ್ ಬಚ್ಚನ್‌ಗೆ ಪತ್ನಿ ಜಯಾ ಬಚ್ಚನ್ ಎಚ್ಚರಿಕೆ ನೀಡಿದ್ದರಂತೆ. ವಿಧು ವಿನೋದ್ ಚೋಪ್ರಾ ಕಾಟವನ್ನು ತಡೆದುಕೊಳ್ಳುವುದಕ್ಕೆ ಆಗುವುದಿಲ್ಲ ಎಂದಿದ್ದರು. ಅದರ ಹೊರತಾಗಿಯೂ ಅಮಿತಾಭ್ ಬಚ್ಚನ್ ಈ ಸಿನಿಮಾದಲ್ಲಿ ನಟಿಸುವುದಕ್ಕೆ ಒಪ್ಪಿದ್ದರು. ಹಾಗೂ ಹೀಗೂ ನಿರ್ದೇಶಕರ ಕಾಟವನ್ನು ತಡೆದುಕೊಂಡು ಸಿನಿಮಾವನ್ನು ಮುಗಿಸಿದ್ದರು.

Vidhu Vinod Chopra mother slapped him for gifting Rs 4 crore car to Amitabh Bachchan

ಅಮಿತಾಭ್ ಬಚ್ಚನ್ ಈ ಸಿನಿಮಾದಲ್ಲಿ ನಟಿಸಿದ್ದಕ್ಕಾಗಿ ಫಿಲ್ಮ್‌ ಮೇಕರ್ ವಿಧು ವಿನೋದ್ ಚೋಪ್ರಾ ಉಡುಗೊರೆಯಾಗಿ ರೋಲ್ಸ್ ರಾಯ್ಸ್ ಐಷಾರಾಮಿ ಕಾರನ್ನು ನೀಡಿದ್ದರು. ಈ ದುಬಾರಿ ಉಡುಗೊರೆಯನ್ನು ಅಮಿತಾಭ್ ಬಚ್ಚನ್‌ಗೆ ಕೊಡುವುದಕ್ಕೆ ಅಮ್ಮನೊಂದಿಗೆ ತೆರಳಿದ್ದರು. ಆದರೆ, ವಿಧು ವಿನೋದ್ ಚೋಪ್ರಾ ಅಮ್ಮನಿಗೆ ಆ ಕಾರಿನ ಬೆಲೆ ಕೋಟಿಗಳಲ್ಲಿದೆ ಅನ್ನೋದು ಗೊತ್ತಿರಲಿಲ್ಲ.

"ಅಮಿತಾಭ್ ಬಚ್ಚನ್‌ಗೆ ಕಾರನ್ನು ಉಡುಗೊರೆಯಾಗಿ ಕೊಟ್ಟಿದ್ದೀಯ. ನೀನು ಯಾಕೆ ಹೊಸ ಕಾರನ್ನು ತೆಗೆದುಕೊಳ್ಳುವುದಿಲ್ಲ" ಎಂದು ಕೇಳಿದ್ದರು. "ಅದಕ್ಕೆ ಇನ್ನೂ ಸಮಯವಿದೆ" ಎಂದು ವಿಧು ವಿನೋದ್ ಚೋಪ್ರಾ ಪ್ರತಿಕ್ರಿಯೆ ನೀಡಿದ್ದರು. ಆಗ ಅವರ ಅಮ್ಮ ಬೆಲೆ ಕಮ್ಮಿ ಅಂದರೂ 11 ಲಕ್ಷ ರೂಪಾಯಿ ಇರಬೇಕು ಎಂದು ಹೇಳಿದ್ದರು. ಇದೇ ಸಮಯದಲ್ಲಿ ಬಿಗ್‌ ಬಿಗೆ ಕೊಟ್ಟ ಕಾರಿನ ಬೆಲೆ 4.5 ಕೋಟಿ ರೂಪಾಯಿ ಎಂದು ಹೇಳಿದಾಗ ಮಗನ ಕೆನ್ನೆಗೆ ಅಮ್ಮ ಬಾರಿದ್ದರಂತೆ. ಈ ತಮಾಷೆ ವಿಷಯವನ್ನು ವಿಧು ವಿನೋದ್ ಚೋಪ್ರಾ ಸಂದರ್ಶನದಲ್ಲಿ ರಿವೀಲ್ ಮಾಡಿದ್ದಾರೆ.

More from Filmibeat

English summary
Vidhu Vinod Chopra about gifting Rolls-Royce Phantom car to Amitabh Bachchan:
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X