"ಸಿನಿಮಾರಂಗದಲ್ಲಿ Jr.NTR ಬೆಳೆಸಲು ಬಾಲಕೃಷ್ಣಗೆ ಇಷ್ಟವಿರಲಿಲ್ಲ": ಪತ್ರಕರ್ತನ ವಿವಾದಾತ್ಮಕ ಕಮೆಂಟ್.. ಏನದು?
ತೆಲುಗು ಚಿತ್ರರಂಗ ಸೂಪರ್‌ಸ್ಟಾರ್‌ಗಳ ಪೈಕಿ ಜೂ.ಎನ್‌ಟಿಆರ್ ಕೂಡ ಒಬ್ಬರು. ಈಗ ಕೇವಲ ದಕ್ಷಿಣ ಭಾರತದಲ್ಲಿ ಅಷ್ಟೇ ಅಲ್ಲ. ವಿಶ್ವದಾದ್ಯಂತ ಈ ನಟನ ಫೇಮಸ್ ಆಗಿದ್ದಾರೆ. RRR ಸಿನಿಮಾ ರಿಲೀಸ್ ಆಗುತ್ತಿದ್ದಂತೆ ಗ್ಲೋಬಲ್ ಸ್ಟಾರ್ ಪಟ್ಟಕ್ಕೇರಿದ್ದಾರೆ.
ಜೂ.ಎನ್‌ಟಿಆರ್ ಟಾಲಿವುಡ್‌ನ ಸಿನಿಮಾ ಕುಟುಂಬದಿಂದಲೇ ಬಂದವರು. ಆದರೆ, ಜೂ.ಎನ್‌ಟಿಆರ್‌ಗೆ ಸಿನಿಮಾರಂಗದಲ್ಲಿ ನೆಲೆ ಕಂಡುಕೊಳ್ಳುವುದು ಆರಂಭದ ದಿನಗಳಲ್ಲಿ ಅಷ್ಟೊಂದು ಸುಲಭ ಆಗಿರಲಿಲ್ಲ. ಕಷ್ಟ ಪಟ್ಟು ಈ ಹಂತಕ್ಕೆ ಬಂದು ನಿಂತಿದ್ದಾರೆ ಎಂದು ಸಿನಿಮಾ ಪತ್ರಕರ್ತ ಚೆಯ್ಯರು ಬಾಲು ಕಮೆಂಟ್ ಮಾಡಿದ್ದಾರೆ.

ತೆಲುಗು ಚಿತ್ರರಂಗದ ದಿಗ್ಗಜ ಎನ್‌ಟಿಆರ್ ಕುಟುಂಬದಿಂದ ಬಂದ ಜೂ.ಎನ್‌ಟಿಆರ್‌ಗೆ ಮುಳುವಾಗಿದ್ದು ಯಾರು? ಸಿನಿಮಾರದಲ್ಲಿ ಜೂ.ಎನ್‌ಟಿಆರ್ ಬೆಳೆಯೋದು ಯಾಕೆ ಇಷ್ಟವಿರಲಿಲ್ಲ? ಅನ್ನೋದನ್ನು ಸಿನಿಮಾ ಪತ್ರಕರ್ತ ರಿವೀಲ್ ಮಾಡಿದ್ದಾರೆ. ಇದು ಸೋಶಿಯಲ್ ಮೀಡಿಯಾಗಳಲ್ಲಿ ಸಿಕ್ಕಾಪಟ್ಟೆ ವೈರಲ್ ಆಗಿವೆ.
ಬಾಲಕೃಷ್ಣವೇ ಇಷ್ಟವಿರಲಿಲ್ಲ
"ಜೂ.ಎನ್‌ಟಿಆರ್ ಟಾಲಿವುಡ್‌ನಲ್ಲಿ ಬೆಳೆಯೋದು ಸ್ವತ: ಬಾಲಕೃಷ್ಣಗೆ ಇಷ್ಟವಿರಲಿಲ್ಲ. ಯಾಕಂದ್ರೆ, ಜೂ.ಎನ್‌ಟಿಆರ್ ತಂದೆ ಹರಿಕೃಷ್ಣ ಕುಟುಂಬದ ವಿರುದ್ಧವಾಗಿ ವಿವಾಹವಾಗಿದ್ದರು. ಇದು ಮನೆಯಲ್ಲಿ ಇಷ್ಟವಿರಲಿಲ್ಲ. ಹೀಗಾಗಿ ಆರಂಭದ ದಿನಗಳಲ್ಲಿ ಕುಟುಂಬದ ಹೆಸರನ್ನು ಬಳಸಬೇಡಿ ಅಂತ ಹೇಳಿದ್ದರು. ಜೂ.ಎನ್‌ಟಿಆರ್ ತಾಯಿಯನ್ನು ಕೆಟ್ಟದಾಗಿ ನಡೆಸಿಕೊಳ್ಳಲಾಯ್ತು." ಎಂದು ಪತ್ರಕರ್ತ ಚೆಯ್ಯರು ಬಾಲು ವಿವಾದಾತ್ಮಕ ಹೇಳಿಕೆ ಕೊಟ್ಟಿದ್ದಾರೆ.

ಎನ್‌ಟಿಆರ್ ಇಮೇಜ್ ಬರುತ್ತಿದ್ದಂತೆ ಆತಂಕ
ಜೂ.ಎನ್‌ಟಿಆರ್‌ಗೆ ಬೆಳೆಯುತ್ತಿದ್ದಂತೆ ತಾತ ಎನ್‌ಟಿಆರ್ ಇಮೇಜ್ ಬರೋಕೆ ಶುರುವಾಗಿತ್ತು. ಬಾಲ್ಯದಲ್ಲಿ ಕೇವಲ ಎರಡು ಸಿನಿಮಾಗಳಲ್ಲಿ ನಟಿಸಿದ್ದರು. ಆಗಲೇ ಜೂ.ಎನ್‌ಟಿಆರ್‌ಗೆ ಕುಟುಂಬದ ಹಿನ್ನೆಲೆ ಅರ್ಥ ಆಗಿತ್ತು. " ಜೂ.ಎನ್‌ಟಿಆರ್ ಸಿನಿಮಾದಲ್ಲಿ ನಟಿಸಲು ತೀರ್ಮಾನ ಮಾಡಿದ್ದರು. ಇಡೀ ಕುಟುಂಬದಲ್ಲಿ ಬೇರೆ ಯಾರಿಗೂ ಎನ್‌ಟಿಆರ್ ಇಮೇಜ್ ಇರಲಿಲ್ಲ. ಸಿನಿಮಾಗೆ ಬಂದ ಬಳಿಕ ಅವರನ್ನೇ ಜೂ.ಎನ್‌ಟಿಆರ್ ಅಂತ ಸಂಭ್ರಮಿಸುವುದಕ್ಕೆ ಶುರು ಮಾಡಿದ್ದರು" ಎಂದು ಹಿರಿಯರ ಪತ್ರಕರ್ತ ಚೆಯ್ಯರು ಬಾಲು ಹೇಳಿದ್ದಾರೆ.
ಎನ್‌ಟಿಆರ್ ಕುಟುಂಬಕ್ಕೆ ಬೇರೆ ವಿಧಿಯಿರಲಿಲ್ಲ
ಜೂ.ಎನ್‌ಟಿಆರ್ ತಾಯಿಗೆ ಹೇಗಾದರೂ ಮಾಡಿ ಮಗನನ್ನು ಸ್ಟಾರ್ ಮಾಡಬೇಕು ಅಂತಿತ್ತು. ಇತ್ತ ಸಿನಿಮಾಗೆ ಎಂಟ್ರಿ ಕೊಡುತ್ತಿದ್ದಂತೆ ಅಭಿಮಾಣಿಗಳೇ ಜೂ.ಎನ್‌ಟಿಆರ್ ಅಂತ ಕರೆಯುವುದಕ್ಕೆ ಶುರು ಮಾಡಿದ್ದರು. " ಅಭಿಮಾನಿಗಳೇ ಜೂ.ಎನ್‌ಟಿಆರ್ ಅಂತ ಕರೆದಿದ್ದರಿಂದ ಬಾಲಕೃಷ್ಣ ಕುಟುಂಬಕ್ಕೆ ಒಪ್ಪಿಕೊಳ್ಳದೆ ಬೇರೆ ವಿಧಿನೇ ಇರಲಿಲ್ಲ. ಈಗ ಎಲ್ಲರೂ ಚೆನ್ನಾಗಿದ್ದಾರೆ" ಎಂದು ಹಿರಿಯ ಪತ್ರಕರ್ತ ರಿವೀಲ್ ಮಾಡಿದ್ದಾರೆ.
ಬಾಲಕೃಷ್ಣ ಏನೇ ಮಾಡಿದ್ರೂ ಫ್ಯಾನ್ಸ್ ಫಿದಾ
ಇಷ್ಟೇ ಅಲ್ಲದೆ ಬಾಲಯ್ಯಗೆ ವಿಶೇಷವಾದ ಅಭಿಮಾನಿಗಳು ಇದ್ದಾರೆ. ಅವರು ಸಿನಿಮಾಗಳಲ್ಲಿ ಏನೇ ಮಾಡಿದ್ದರೂ, ಅದನ್ನು ಅಭಿಮಾನಿಗಳು ಇಷ್ಟ ಪಡುತ್ತಾರೆ. ಬಾಲಯ್ಯ ಶಕ್ತಿ ಅಭಿಮಾನಿಗಳೇ. ಅವರ ಮನಸ್ಸು ಮಗು ಇದ್ದಂತೆ ಟಾಲಿವುಡ್‌ನಲ್ಲಿ ಬಾಲಕೃಷ್ಣ ಕೂಡ ಸೂಪರ್‌ಸ್ಟಾರ್. ಅಲ್ಲದೆ ರಾಜಕೀಯದಲ್ಲೂ ಉತ್ತಮ ಬಾಂಧವ್ಯ ಹೊಂದಿದ್ದಾರೆಂದು ಹೇಳಿದ್ದಾರೆ.


Click it and Unblock the Notifications











