"ಹೊಡೆಯುತ್ತಿದ್ದ.. ಕಾಲ ಮೇಲೆ ಕಾರು ಹತ್ತಿಸಿದ್ದ ಹೀರೊ": ಲೈಂಗಿಕ ಕಿರುಕುಳದ ಬಗ್ಗೆ ಬದುಕಿದ್ದಾಗ ಶ್ರೀದೇವಿ ಹೇಳಿದ್ದೇನು?

ಶ್ರೀದೇವಿ ಯಾರಿಗೆ ಗೊತ್ತಿಲ್ಲ. ಭಾರತೀಯ ಚಿತ್ರರಂಗದಲ್ಲಿ ವಿವಾದಗಳು, ಲವ್, ಅಫೇರ್ ಇಂತಹ ವಿಷಯಗಳನ್ನು ಮೈ ಮೇಲೆ ಎಳೆದುಕೊಳ್ಳದೆ ನಂಬರ್ ಒನ್ ಸ್ಥಾನಕ್ಕೇರಿದ್ದ ನಟಿಯೀಕೆ. ದಕ್ಷಿಣ ಭಾರತದ ನಟಿಯೊಬ್ಬರು ಬಾಲಿವುಡ್‌ನಲ್ಲಿ ನೆಲೆಕಂಡುಕೊಂಡು ಸ್ಟಾರ್ ಪಟ್ಟಕ್ಕೇರಿದ್ದರು. ಸ್ಟಾರ್ ಅಂದರೆ ಬರೀ ಸ್ಟಾರ್ ಅಷ್ಟೇ ಅಲ್ಲ, ಸೂಪರ್‌ಸ್ಟಾರ್. ಬಾಲಿವುಡ್‌ನ ಮೊದಲ ಮಹಿಳಾ ಸೂಪರ್‌ಸ್ಟಾರ್.

ಕೇವಲ ನಾಲ್ಕನೇ ವಯಸ್ಸಿಗೆ ಐತಿಹಾಸಿಕ ಸಿನಿಮಾ ಮೂಲಕ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿದ್ದರು. ಆ ಬಳಿಕ ಶ್ರೀದೇವಿ ಭಾರತೀಯ ಚಿತ್ರರಂಗದ ಹಲವು ಸೂಪರ್‌ಸ್ಟಾರ್‌ಗಳಿಗೆ ನಾಯಕಿಯಾಗಿ ನಟಿಸಿದ್ದಾರೆ. ಅದಕ್ಕೆ ಶ್ರೀದೇವಿ ಅಂದರೆ, ಇಂದಿನ ಜನರೇಷನ್‌ಗೂ ಅಷ್ಟು ಪರಿಚಯ.

Viral late actress Sridevi once revealed that she face sexual abuse in film industry

ಶ್ರೀದೇವಿ ಸುಮಾರು 300ಕ್ಕೂ ಅಧಿಕ ಸಿನಿಮಾಗಳಲ್ಲಿ ನಟಿಸಿದ್ದರು. ಒಂದು ಕಾಲದಲ್ಲಿ ಅತೀ ಹೆಚ್ಚು ಸಂಭಾವನೆ ಪಡೆಯುವ ನಟಿ ಕೂಡ ಈಕೆನೇ ಆಗಿದ್ದರು. ಹೆಚ್ಚು ಕಡಿಮೆ ಹೀರೊಗಳಿಗೆ ಕೊಡುವಷ್ಟೇ ಸಂಭಾವನೆ ಇವರಿಗೂ ಸಿಗುತ್ತಿತ್ತು. ಇಂತಹ ನಟಿ ಚಿತ್ರರಂಗದಲ್ಲಿ ಸಮಸ್ಯೆಗಳನ್ನೇ ಎದುರಿಸದೆ ನಂ 1 ಪಟ್ಟಕ್ಕೇರಿದರು ಅನ್ನೋ ಮಾತುಗಳು ಕೇಳಿದ ಬಂದಿದ್ದವು. ಆಗ ಸ್ವತ: ಶ್ರೀದೇವಿ ತನಗಾದ ಲೈಂಗಿಕ ಕಿರುಕುಳದ ಬಗ್ಗೆ ಮನಬಿಚ್ಚಿ ಮಾತಾಡಿದ್ದರು.

ಕಮ್‌ಬ್ಯಾಕ್ ಮಾಡಿದ ಸಿನಿಮಾನೂ ಹಿಟ್

ಶ್ರೀದೇವಿ ಬಾಲಿವುಡ್‌ನ ಮೊದಲ ಲೇಡಿ ಸೂಪರ್‌ಸ್ಟಾರ್. ಇವರ ಕಾಲ್‌ಶೀಟ್‌ಗಾಗಿ ಸೂಪರ್‌ಸ್ಟಾರ್‌ಗಳೇ ಕಾಯಬೇಕಿದ್ದ ಕಾಲವಿತ್ತು. ತಮ್ಮಗೆ ಶ್ರೀದೇವಿನೇ ನಾಯಕಿಯಾಗಬೇಕು ಅಂತ ಸ್ಟಾರ್‌ ನಟರು ಪಟ್ಟು ಹಿಡಿಯುತ್ತಿದ್ದರು. ಮದುವೆ, ಮಕ್ಕಳು ಬ್ಯುಸಿಯಾಗುತ್ತಿದ್ದಂತೆ ಸಿನಿಮಾದಿಂದ ದೂರವೇ ಉಳಿಸಿದ್ದರು. ಸುಮಾರು 15 ವರ್ಷಗಳ ಬಳಿಕ ಸಿನಿಮಾಗೆ ಕಮ್‌ಬ್ಯಾಕ್ ಮಾಡಿದ್ದರು. ಆ ಸಿನಿಮಾವೇ 'ಇಂಗ್ಲಿಷ್ ವಿಂಗ್ಲಿಷ್'. ಈ ಸಿನಿಮಾ ಕೂಡ ಸೂಪರ್‌ ಹಿಟ್ ಆಗಿತ್ತು. ಇಂತಹ ನಟಿಗೂ ಲೈಂಗಿಕ ಕಿರುಕುಳ ನೀಡಲಾಗಿತ್ತು.

Viral late actress Sridevi once revealed that she face sexual abuse in film industry

ಲೈಂಗಿಕ ಕಿರುಕುಳದ ಬಗ್ಗೆ ಶ್ರೀದೇವಿ ಮಾತು

ಶ್ರೀದೇವಿ ಅಂತಹ ನಟಿಗೆ ಲೈಂಗಿಕ ಕಿರುಕುಳ ನೀಡುವುದು ಅಂದರೇನು? ಆದರೆ, ಇಂತಹ ಘಟನೆಗಳು ತನ್ನ ಸಿನಿಜರ್ನಿಯಲ್ಲೂ ನಡೆದಿವೆ ಎಂದು ಸ್ವತ: ಶ್ರೀದೇವಿನೇ ಹೇಳಿದ್ದರು. ಭಾರತೀಯ ಚಿತ್ರರಂಗದ ಪವರ್‌ಫುಲ್ ನಟಿಯಾಗಿದ್ದರೂ, ಲೈಂಗಿಕ ಕಿರುಕುಳ ಅನ್ನೋದು ತಪ್ಪಿಲ್ಲ. ಅಂದ್ಮೇಲೆ ಹೊಸದಾಗಿ ಚಿತ್ರರಂಗಕ್ಕೆ ಎಂಟ್ರಿ ಕೊಡುತ್ತಿರುವ ನಟಿಯರ ಕಥೆಯೇನು? ಅನ್ನೋದೇ ಪ್ರಶ್ನೆ. " ಜನರು ನನ್ನ ಸಿನಿ ಜರ್ನಿಯಲ್ಲಿ ಏನೂ ಆಗಿಲ್ಲ ಎಂದು ಕೊಳ್ಳುತ್ತಾರೆ. ಆದರೆ, ನಾನೂ ಸಾಕಷ್ಟು ಅನುಭವಿಸಿದ್ದೇನೆ" ಎಂದಿದ್ದರು.

ಶ್ರೀದೇವಿ ಹೇಳಿದ ಘಟನೆ ಏನು?

ಶ್ರೀದೇವಿ ಒಂದು ಸಿನಿಮಾದಲ್ಲಿ ನಟಿಸುತ್ತಿದ್ದರು. ಆ ಸಿನಿಮಾದ ಹೀರೊ ನಿರಂತರವಾಗಿ ಅವರಿಗೆ ಹೊಡೆಯುತ್ತಿದ್ದ. ಪ್ರತಿಬಾರಿ ಆತನ ಸಲಹೆಗಳನ್ನು ಶ್ರೀದೇವಿ ರಿಜೆಕ್ಟ್ ಮಾಡುತ್ತಲೇ ಇದ್ದರು. ಇದರಿಂದ ನಟ ಕೋಪಗೊಂಡಿದ್ದ. ಆ ಸಿನಿಮಾ ಒಂದು ದೃಶ್ಯದಲ್ಲಿ ಶ್ರೀದೇವಿ ನಡೆದುಕೊಂಡು ಹೋಗಬೇಕಿತ್ತು. ಹೀರೊ ಜೀಪ್‌ನಲ್ಲಿ ಫಾಲೋ ಮಾಡಬೇಕಿತ್ತು. ಈ ವೇಳೆ ಬೇಕಂತಲೇ ಆತ ಶ್ರೀದೇವಿ ಕಾಲ ಮೇಲೆ ಕಾರು ಹತ್ತಿಸಿದ್ದಾಗಿ ಶ್ರೀದೇವಿ ಸಂದರ್ಶನವೊಂದರಲ್ಲಿ ಹೇಳಿಕೊಂಡಿದ್ದರು.

ಶ್ರೀದೇವಿ ದುರಂತ ಅಂತ್ಯ

ಭಾರತೀಯ ಚಿತ್ರರಂಗದಲ್ಲಿ ಶ್ರೀದೇವಿ ಸೃಷ್ಟಿಸದಂತಹ ಸಂಚಲನವನ್ನು ಮತ್ಯಾರೂ ಸೃಷ್ಟಿಸಿಲ್ಲ. ತನ್ನ 13ನೇ ವಯಸ್ಸಿನಲ್ಲೇ ರಜನಿಕಾಂತ್ ಮಲತಾಯಿಯಾಗಿ ನಟಿಸಿ ಗೆದ್ದವರು. ಸಿನಿಮಾದಲ್ಲಿ ಅತ್ಯಂತ ಶ್ರದ್ಧೆಯಿಂದ ನಟಿಸುತ್ತಿದ್ದ ನಟಿಯೀಕೆ. ಇಂತಹ ನಟಿ, ಮದುವೆ ಬಳಿಕ ಸಿನಿಮಾದಲ್ಲಿ ನಟಿಸಿದ್ದು ತೀರಾ ವಿರಳ. 2018, ಫೆಬ್ರವರಿ 24ರಂದು ಸಂಬಂಧಿ ಮೋಹಿತ್ ಮಾರ್ವ ಮದುವೆಗೆ ಹೋಗಿದ್ದಾಗ, ಹೋಟೆಲ್ ರೂಮ್‌ನ ಬಾತ್‌ ಟಮ್‌ನಲ್ಲಿ ಮುಳುಗಿ ಸಾವನ್ನಪ್ಪಿದ್ದರು. ಅದು ಅದೆಷ್ಟೋ ಅಭಿಮಾನಿಗಳ ಹೃದಯ ಛಿದ್ರ ಮಾಡಿತ್ತು.

More from Filmibeat

English summary
Viral late actress Sridevi about sexual abuse in film industry.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X